Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಕ್ಯಾನ್ಸರ್ ಕೋಶಗಳೊಂದಿಗೆ ಹೋರಾಡುವ ಆಹಾರ
ನಿಮ್ಮ ಕುಟುಂಬದಲ್ಲಿ ಕ್ಯಾನ್ಸರ್ ರೋಗವಿರುವ ಸದಸ್ಯರಿದ್ದು ಅಥವಾ ನೀವೇ ಈ ರೋಗದಿಂದ ಬಳಲುತ್ತಿರುವವರಾಗಿರುವಿರಾ? ನಿಮ್ಮ ಜೀವನಶೈಲಿಯ ಆಯ್ಕೆಗಳನ್ನು ಆಧರಿಸಿ ಹೆಚ್ಚಿನ ಪ್ರಮಾಣದ ಕ್ಯಾನ್ಸರ್ - ಸಂಬಂಧಿತ ಸಾವುಗಳು ಸಂಭವಿಸುತ್ತವೆ. ಆರೋಗ್ಯಪೂರ್ಣ ಜೀವನಶೈಲಿ, ಸೂಕ್ತ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಕ್ಯಾನ್ಸರ್‌ನ ಅಪಾಯವನ್ನು ದೂರಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?
ಕ್ಯಾನ್ಸರ್ ಅನ್ನು ಹೊಡೆದೋಡಿಸುವಲ್ಲಿ ಹಲವಾರು ಆಹಾರಗಳು ಲಭ್ಯವಿವೆ. ಯಾವುದೇ ಕಾಯಿಲೆ ಅಥವಾ ಕ್ಯಾನ್ಸರ್‌ನಂತಹ ಭಯಾನಕ ರೋಗವನ್ನು ಗುಣಪಡಿಸುವಲ್ಲಿ ಆರೋಗ್ಯಪೂರ್ಣ ಆಹಾರ ಸಹಕಾರಿಯಾಗಲಿದೆ.
ನಿಮಗೆ ತಿಳಿದಂತೆ, ಧೂಮಪಾನ ಮತ್ತು ಮದ್ಯಪಾನ ಕೂಡ ಈ ರೋಗವನ್ನು ಗಣನೀಯವಾಗಿ ಏರಿಸಿದೆ ಆದರೆ ಪೋಷಕಾಂಶವುಳ್ಳ ಆಹಾರ ಪದ್ಧತಿ ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದು ನಿಮಗೆ ತಿಳಿದಿರಬೇಕು.
ನೀವು ಏನನ್ನು ತಿನ್ನಬೇಕು ಮತ್ತು ತಿನ್ನಬಾರದು ಎಂಬುದು ಕ್ಯಾನ್ಸರ್‌ನ ಕೋಶಗಳನ್ನು ಇಳಿಸುವಲ್ಲಿ ಕಾರಣವಾಗುತ್ತದೆ. ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದರ ಮೂಲಕ ಅಂದರೆ ಕೆಲವೊಂದು ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸುವುದರಿಂದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಆ ಆಹಾರ ಅಂಶಗಳು ಯಾವುವು ಎಂಬುದನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರುಳನ್ನು ಹಣ್ಣುಗಳಿಂದ ಸ್ವಚ್ಛಗೊಳಿಸಬಹುದೇ ?

1.ಬ್ರಕೋಲಿ
ಬ್ರಕೋಲಿಯನ್ನು ಸೇವಿಸಿ ಸ್ತನ ಕ್ಯಾನ್ಸರ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಇದರಲ್ಲಿನ ಕೆಮಿಕಲ್ ಅಂಶವು ಇಂಡೋಲ್ 3-ಕಾರ್ಬಿನೋಲ್‌ಗೆ ಮಾರ್ಪಟ್ಟಿದ್ದು ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಉಪಕಾರಿ. ಕರುಳು ಮತ್ತು ಗುದನಾಳದ ಕ್ಯಾನ್ಸರ್ ಕೂಡ ಇದರಿಂದ ದೂರಾಗುತ್ತದೆ.

2.ಬೆಳ್ಳುಳ್ಳಿ
ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಬೆಳ್ಳುಳ್ಳಿ ಸಹಕಾರಿಯಾಗಿದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಇದರಲ್ಲಿರುವ ನಿರೋಧಕ ಕೋಶಗಳು ನಿರೋಧಕ ಅಂಶವನ್ನು ಹೆಚ್ಚುಗೊಳಿಸಿ ಕ್ಯಾನ್ಸರ್ ಅನ್ನು ದೂರಮಾಡುವುದಲ್ಲದೆ ಅದನ್ನು ಉಂಟು ಮಾಡುವ ಅಂಶಗಳನ್ನು ನಾಶಮಾಡುತ್ತದೆ.

3.ಕ್ಯಾರೆಟ್
ಕ್ಯಾರೆಟ್ ಅನ್ನು ದಿನವೂ ಸೇವಿಸುವುದು ಶ್ವಾಸಕೋಶ, ಹೊಟ್ಟೆ, ಕರುಳು ಮೂತ್ರಕೋಶ ಮತ್ತು ಗ್ರಂಥಿಯ ಕ್ಯಾನ್ಸರ್ ಅನ್ನು ತೊಡೆದುಹಾಕುತ್ತದೆ.

4.ಅಣಬೆ
ಅಣಬೆಯು ದೇಹವನ್ನು ಸುದೃಢಗೊಳಿಸಿ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಪ್ರೋಟೀನ್ ಲೆಕ್ಟೀನ್, ಕ್ಯಾನ್ಸರ್ ಉಂಟು ಮಾಡುವ ಕೋಶಗಳ ವಿರುದ್ಧ ಹೋರಾಡಿ ದೇಹದ ಇತರ ಭಾಗಗಳಿಗೆ ರೋಗ ಹರಡುವುದನ್ನು ತಪ್ಪಿಸುತ್ತದೆ.

5.ನಟ್ಸ್
ಇದರಲ್ಲಿನ ಉತ್ಕರ್ಷಣ ನಿರೋಧಿ ಅಂಶಗಳಾದ ಕ್ವೆರಿಸಿಟೀನ್ ಮತ್ತು ಕೇಂಫರೋಲ್ ರೋಗದ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.

6.ಪಪ್ಪಾಯಿ
ನೈಸರ್ಗಿಕ ಆಹಾರವಾದ ಪಪ್ಪಾಯಿ ಕೂಡ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಝಂಕ್ ಫುಡ್ ಮತ್ತು ಪೂರ್ವಸಿದ್ಧ ಆಹಾರದಿಂದ ಕ್ಯಾನ್ಸರ್ ಉಂಟಾಗುವ ಲಕ್ಷಣಗಳನ್ನು ಪಪ್ಪಾಯಿ ತೊಡೆದುಹಾಕುತ್ತದೆ.

7.ಅವೊಕಾಡೊ
ಕ್ಯಾನ್ಸರ್‌ಗೆ ಕಾರಣವಾಗುವ ಕೊಬ್ಬಿನ ಅಂಶಗಳನ್ನು ಹೀರುವ ಶಕ್ತಿ ಅವೊಕಾಡೊಗಿದೆ ಎಂಬುದು ನಿಮಗೆ ತಿಳಿದಿದೆಯೇ? ಬಾಳೆಹಣ್ಣಿಗಿಂತಲೂ ಅಧಿಕ ಪೊಟ್ಯಾಶಿಯಂ ಅನ್ನು ಅವೊಕಾಡೊ ನೀಡುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

8.ದ್ರಾಕ್ಷಿ
ಸ್ತನ ಕ್ಯಾನ್ಸರ್ ಮತ್ತು ಸಂಬಂಧಿತ ಇತರ ಕೋಶಗಳನ್ನು ದೇಹದಿಂದ ಹೊರದೂಡುವಲ್ಲಿ ದ್ರಾಕ್ಷಿ ಉಪಯೋಗಕಾರಿಯಾಗಿದೆ. ವಿಟಮಿನ್ ಸಿ ಮತ್ತು ಫೋಲಿಕ್ ಏಸಿಡ್ ದ್ರಾಕ್ಷಿಯಲ್ಲಿದೆ.

9.ಟೊಮೇಟೊ
ಸೆಲ್ಯುಲರ್ ಹಾನಿಯಿಂದ ಉಂಟಾಗುವ ಕ್ಯಾನ್ಸರ್ ಅನ್ನು ತಡೆಗಟ್ಟಲು ಟೊಮೇಟೊದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಬಾಯಿಯ ಕ್ಯಾನ್ಸರ್ ಕಣಗಳನ್ನು ಕೊಲ್ಲವ ಶಕ್ತಿಯಿರುವ ಲೈಕೋಪಿನ್ ಅನ್ನು ಟೊಮೇಟೊ ಒಳಗೊಂಡಿದೆ.

10.ರೆಡ್ ವೈನ್
ರೆಡ್ ವೈನ್‌ನಲ್ಲಿರುವ ಫೋಲಿಫಿನೋಲ್ಸ್ ನಿಮ್ಮ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳೊಂದಿಗೆ ಹೋರಾಡುತ್ತದೆ. ಮದ್ಯಕ್ಕಿಂತ ರೆಡ್ ವೈನ್ ಅನ್ನು ಸೇವಿಸುವುದು ಆರೋಗ್ಯಪೂರ್ಣವಾಗಿದೆ.



Click it and Unblock the Notifications