Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಆಲ್ಕೋಹಾಲ್ ಸೇವನೆಗೆ ಮೊದಲು ತಿನ್ನಬೇಕಾದ ಆಹಾರಗಳು
ಇಂದಿನ ಆಧುನಿಕ ಯುಗದಲ್ಲಿ ಯುವಕರು ಮದ್ಯಪಾನದ ಬಗ್ಗೆ ತಿಳಿಯುವ ಮೊದಲೇ ಅಮಲೇರಿಸಿಕೊಳ್ಳುತ್ತಾರೆ. ಯುವಕರು ಖಾಲಿ ಹೊಟ್ಟೆಯಲ್ಲೇ ಆಲ್ಕೋಹಾಲ್ ಸೇವನೆ ಮಾಡುವುದರಿಂದಾಗಿ ಬೇಗನೆ ಅಮಲೇರಿಸಿಕೊಳ್ಳುತ್ತಾರೆ. ಹೊಟ್ಟೆಯಲ್ಲಿ ಯಾವುದೇ ರೀತಿಯ ಆಹಾರವಿಲ್ಲದಿದ್ದಾಗ ಆಲ್ಕೋಹಾಲ್ ಸೇವಿಸಿದರೆ ಅದು ನಿಮ್ಮ ಖಾಲಿ ಹೊಟ್ಟೆಯಲ್ಲಿ ಬೇಗನೆ ಪ್ರತಿಕ್ರಿಯಿಸಿ ನಿಮಗೆ ಅಮಲೇರುವಂತೆ ಮಾಡುತ್ತದೆ.
ಇದರಿಂದಾಗಿ ತಜ್ಞರ ಪ್ರಕಾರ ಆಲ್ಕೋಹಾಲ್ ಗ್ಲಾಸ್ ನ್ನು ಕೈಯಲ್ಲಿ ಇಟ್ಟುಕೊಳ್ಳುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ಆಲ್ಕೋಹಾಲ್ ಸೇವನೆಗೆ ಮೊದಲು ತಿನ್ನಬೇಕಾದ ಕೆಲವೊಂದು ಆರೋಗ್ಯಕರ ಆಹಾರಗಳ ಬಗ್ಗೆ ಇಂದು ಬೋಲ್ಡ್ ಸ್ಕೈ ನಿಮಗೆ ವಿವರ ನೀಡಲಿದೆ.
ಈ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ತೆಳುವಾದ ಪದರವನ್ನು ಉಂಟುಮಾಡಿ ಆಲ್ಕೋಹಾಲ್ ಸುಲಭವಾಗಿ ಜೀರ್ಣ ಮಾಡಿ ನಿಮ್ಮನ್ನು ಅಮಲೇರದಂತೆ ಮಾಡುತ್ತದೆ. ಈ ಆರೋಗ್ಯಕರ ಆಹಾರಗಳು ನಿಮ್ಮನ್ನು ಮದ್ಯಪಾನ ಮಾಡಿದ ಮರುದಿನ ಹ್ಯಾಂಗ್ ಓವರ್ ಆಗದಂತೆ ಮಾಡುತ್ತದೆ. ಇಲ್ಲಿ ಪಟ್ಟಿ ಮಾಡಿರುವಂತಹ ಆಹಾರಳನ್ನು ನೀವು ಸೇವಿಸಿದರೆ ಆಗ ನೀವು ತುಂಬಾ ಆರೋಗ್ಯಕರವಾಗಿರುವ ಭಾವನೆ ಉಂಟು ಮಾಡಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್ ವಿಧಗಳು
ಆರೋಗ್ಯಕರ ಆಹಾರ ಸೇವನೆ ಮಾಡಿದರೆ ನೀವು ಆಗ ಹೆಚ್ಚಿಗೆ ಕುಡಿಯಬಹುದು. ಹಸಿದಿರುವುದಕ್ಕಿಂತ ನಿಮ್ಮ ಹೊಟ್ಟೆ ಆರೋಗ್ಯಕರ ಆಹಾರ ತಿಂದು ತುಂಬಿದ್ದರೆ ಆಗ ಆಲ್ಕೋಹಾಲ್ ಸೇವನೆ ಮಾಡುವುದು ತುಂಬಾ ಸುರಕ್ಷಿತ. ಮದ್ಯಪಾನ ಸೇವಿಸುವ ಮೊದಲು ಈ ಆರೋಗ್ಯಕರ ಆಹಾರ ಸೇವನೆಯಿಂದ ನಿಮ್ಮ ಹೊಟ್ಟೆಯನ್ನು ಇದು ರಕ್ಷಿಸುತ್ತದೆ ಮತ್ತು ಆಲ್ಕೋಹಾಲ್ ನಿಂದ ನಿಮ್ಮ ಕರುಳಿನ ಪದರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತಡೆಯುತ್ತದೆ. ನೀವು ಕುಡಿಯುವುದನ್ನು ತುಂಬಾ ಇಷ್ಟಪಡುತ್ತಿದ್ದರೆ ಆಲ್ಕೋಹಾಲ್ ಕುಡಿಯುವ ಮೊದಲು ನೀವು ಕೆಲವೊಂದು ಆರೋಗ್ಯಕರ ಆಹಾರ ಸೇವನೆ ಮಾಡಿ. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಉಪ್ಪಿನಕಾಯಿ
ಆಲ್ಕೋಹಾಲ್ ಸೇವನೆಗೆ ಮೊದಲು ನೀವು ತಿನ್ನಬಹುದಾದ ಆರೋಗ್ಯಕರ ಆಹಾರವೆಂದರೆ ಉಪ್ಪಿನಕಾಯಿ. ಇದರಲ್ಲಿರುವ ಎಲೆಕ್ಟ್ರೋಲೈಟ್ ಮತ್ತು ಉಪ್ಪಿನಾಂಶವು ಹ್ಯಾಂಗ್ ಓವರ್ ನ್ನು ತಡೆಗಟ್ಟುತ್ತದೆ.

ಬಾದಾಮಿ
ಬಿಯರ್ ಅಥವಾ ಇನ್ಯಾವುದೇ ಆಲ್ಕೋಹಾಲ್ ಸೇವನೆಗೆ ಮೊದಲು ಅತ್ಯುತ್ತಮ ಮತ್ತು ಅತ್ಯಂತ ಆರೋಗ್ಯಕರ ಆಹಾರವೆಂದರೆ ಬಾದಾಮಿ. ಇದರಲ್ಲಿರುವ ವಿಟಮಿನ್ ಹೊಟ್ಟೆಗೆ ಹೋಗಿ ಅಮಲೇರದಂತೆ ಮಾಡುತ್ತದೆ.

ಕಳ್ಳಿ
ಪಾಪಾಸು ಕಳ್ಳಿಯ ಮಿಶ್ರಣವಿರುವ ಜ್ಯೂಸ್ ನಿಮ್ಮ ಹೊಟ್ಟೆಯಲ್ಲಿ ಆಲ್ಕೋಹಾಲ್ ನಿಂದ ಯಾವುದೇ ಹಾನಿಯಾಗದಂತೆ ಒಂದು ಪದರವನ್ನು ರಚಿಸುತ್ತದೆ. ಆಲ್ಕೋಹಾಲ್ ಸೇವನೆಗೆ ಮೊದಲು ನೀವು ಅರ್ಧ ಗ್ಲಾಸ್ ನಷ್ಟು ಪಾಪಾಸು ಕಳ್ಳಿ ಜ್ಯೂಸ್ ಸೇವಿಸಿ.

ಹಮ್ಮುಸ್
ನೀವು ಆಲ್ಕೋಹಾಲ್ ಸೇವನೆ ಮಾಡಿದಾಗ ನಿಮ್ಮ ದೇಹದಲ್ಲಿರುವ ವಿಟಮಿನ್ ಬಿ ನಾಶವಾಗುತ್ತದೆ. ಅದರಿಂದ ತಜ್ಞರ ಪ್ರಕಾರ ಹಮ್ಮುಸ್ ಆಲ್ಕೋಹಾಲ್ ಸೇವನೆಗೆ ಮೊದಲು ಸೇವಿಸಬಹುದಾದ ಆರೋಗ್ಯಕರ ಆಹಾರವೆಂದು ಹೇಳುತ್ತಾರೆ.

ಬೆಣ್ಣೆ ಹಣ್ಣು
ಇದು ನೈಸರ್ಗಿಕವಾಗಿ ಕ್ರೀಮ್ ಹೊಂದಿರುವ ಕಾರಣ ಹೆಚ್ಚಿನವರು ಈ ಹಣ್ಣನ್ನು ಇಷ್ಟಪಡುವುದಿಲ್ಲ. ಆಲ್ಕೋಹಾಲ್ ಸೇವನೆಗೆ ಮೊದಲು ನೀವು ಈ ಹಣ್ಣನ್ನು ತಿನ್ನಬಹುದು.

ಚೀಸ್
ಆಲ್ಕೋಹಾಲ್ ಸೇವನೆಗೆ ಮೊದಲು ನೀವು ಸೇವಿಸಬಹುದಾದ ಆರೋಗ್ಯಕರ ಆಹಾರವೆಂದರೆ ಅದು ಚೀಸ್. ನೀವು ಎಷ್ಟೇ ಕುಡಿದರೂ ಹ್ಯಾಂಗ್ ಓವರ್ ಆಗದಂತೆ ಅದು ನಿಮ್ಮನ್ನು ತಡೆಯುತ್ತದೆ.

ಶತಾವರಿ
ಅಮಿನೋ ಆಮ್ಲವನ್ನು ಹೊಂದಿರುವ ಶತಾವರಿ ಆರೋಗ್ಯಕರ ಆಹಾರ. ಈ ಆಮ್ಲವು ಆಲ್ಕೋಹಾಲ್ ನ್ನು ಜೀರ್ಣೀಸಲು ನೆರವಾಗುತ್ತದೆ ಮತ್ತು ನೀವು ಮದ್ಯಪಾನ ಮಾಡಿದಾಗ ಅದು ಯಕೃತ್ತಿನ ಜೀವಕೋಶಗಳನ್ನು ಕಾಪಾಡುತ್ತದೆ. ಈ ರೆಸಿಪಿ ಪ್ರಯತ್ನಿಸಿ.

ಆಲಿವ್ ಎಣ್ಣೆ
ಒಂದು ಚಮಚ ಆಲಿವ್ ಎಣ್ಣೆ ನಿಮ್ಮನ್ನು ಹ್ಯಾಂಗ್ ಓವರ್ ನಿಂದ ಕಾಪಾಡುತ್ತದೆ. ಆಲಿವ್ ಎಣ್ಣೆಯು ನಿಮ್ಮ ಜೀರ್ಣಾಂಗ ವ್ಯೂಹದಲ್ಲಿ ತೆಳುವಾದ ಪದರವನ್ನು ರಚಿಸಿ ಆಲ್ಕೋಹಾಲ್ ನಿಮ್ಮ ಹೊಟ್ಟೆ ಸುಡುವುದನ್ನು ತಡೆಯುತ್ತದೆ.

ಹಾಲು
ಒಂದು ಗ್ಲಾಸ್ ಹಾಲು ಅಥವಾ ಅರ್ಧ ಗ್ಲಾಸಿನಷ್ಟು ತಾಜಾ ತಂಪಾದ ಹಾಲು ಅದ್ಭುತ ಮಾಡಬಹುದು. ಆಲ್ಕೋಹಾಲ್ ಸೇವನೆಗೆ ಮೊದಲು ಸೇವಿಸಬಹುದಾದ ಅತ್ಯಂತ ಆರೋಗ್ಯಕರ ಆಹಾರ ಇದಾಗಿದೆ.

ಹಣ್ಣುಗಳು
ವಿಟಮಿನ್ ಮತ್ತು ಮಿನರಲ್ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿರುವಂತಹ ಹಣ್ಣುಗಳು ನಿಮ್ಮ ದೇಹದ ನೀರನಾಂಶವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರಿಂದ ನೀವು ಆಲ್ಕೋಹಾಲ್ ಸೇವನೆಯ ಹ್ಯಾಂಗ್ ಓವರ್ ತಪ್ಪಿಸಬಹುದು.



Click it and Unblock the Notifications











