Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಎದೆಯುರಿಗೆ ತಂಪು ನೀರು ನೈಸರ್ಗಿಕ ಪರಿಹಾರ ಹೇಗೆ?
ಎದೆ ಮತ್ತು ಗಂಟಲಲ್ಲಿ ಅಜೀರ್ಣದಿಂದ ಉಂಟಾಗುವ ಉರಿಯ ಅನುಭವವೇ ಎದೆಯುರಿಯಾಗಿದೆ. ಗ್ಯಾಸ್ಟ್ರಿಕ್ ಜ್ಯೂಸ್‌ಗಳ ಹೆಚ್ಚುವರಿ ಉತ್ಪಾದನೆ ಇದಕ್ಕೆ ಕಾರಣವಾಗಿದೆ. ಹೊಟ್ಟೆಯಿಂದ ಗ್ಯಾಸ್ಟ್ರಿಕ್ ಜ್ಯೂಸ್‌ಗಳು ಅನ್ನನಾಳಕ್ಕೆ ಬರುತ್ತವೆ ಮತ್ತು ಗ್ಯಾಸ್ಟ್ರಿಕ್ ಜ್ಯೂಸ್‌ನಲ್ಲಿರುವ ಏಸಿಡಿಕ್ ಸ್ವಭಾವವು ಉರಿತದ ಅನುಭವವನ್ನು ಉಂಟುಮಾಡುತ್ತದೆ. ಈ ಎದೆಯುರಿಯನ್ನು ನೈಸರ್ಗಿಕ ಪರಿಹಾರಗಳ ಮೂಲಕ ಗುಣಪಡಿಸಬಹುದು.
ಎದೆಯುರಿಯನ್ನು ಸಾಮಾನ್ಯವಾಗಿ ಹೆಚ್ಚಿನವರು ಅನುಭವಿಸುತ್ತಾರೆ. ಅತಿಯಾಗಿ ತಿನ್ನುವುದು, ಎಣ್ಣೆ ಅಂಶದ ಆಹಾರ ವಸ್ತುಗಳ ಅಧಿಕ ಸೇವನೆ, ಸಾಕಷ್ಟು ದೈಹಿಕ ಪರಿಶ್ರಮ ಮಾಡದಿರುವುದು ಅನಾರೋಗ್ಯಕರ ಜೀವನ ಕ್ರಮ ಎದೆಯುರಿಯನ್ನುಂಟು ಮಾಡುವ ಮೂಲ ಕಾರಣಗಳು. ಇಂದಿನ ಲೇಖನದಲ್ಲಿ ಎದೆಯುರಿಯನ್ನು ಉಪಚರಿಸುವ ಕೆಲವೊಂದು ಮನೆಮದ್ದುಗಳ ಬಗ್ಗೆ ಚರ್ಚಿಸೋಣ
ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

1.ತಂಪು ನೀರು
ಎದೆಯುರಿಯನ್ನು ಉಪಚರಿಸುವಲ್ಲಿ ತಂಪು ನೀರಿನ ಪಾತ್ರ ಹಿರಿದು. ಒಂದು ಲೋಟದಷ್ಟು ಶೀತಲ ನೀರು ದೇಹದ ದ್ರವಗಳನ್ನು ಸ್ಥಿರ ಅಥವಾ ತಟಸ್ಥಗೊಳಿಸುತ್ತವೆ. ಗಂಟಲು ಮತ್ತು ಎದೆಯ ಉರಿಯನ್ನು ತಂಪು ನೀರು ಶಮನಗೊಳಿಸುತ್ತದೆ. ಆದ್ದರಿಂದ ನಿಮಗೆ ಎದೆಯುರಿ ಉಂಟಾದಾಗ ಒಂದು ಲೋಟದಷ್ಟು ತಂಪು ನೀರನ್ನು ಕುಡಿಯಿರಿ ಮತ್ತು ಸಣ್ಣ ವಾಕ್ ಮಾಡಿ. ನಿಮ್ಮ ಗಂಟಲಿನೆಡೆಗೆ ನುಗ್ಗಿ ಬರುವ ಏಸಿಡ್‌ನ ವೇಗ ನಿಧಾನಗೊಳ್ಳುತ್ತದೆ. ತುಂಬಾ ತಂಪಾಗಿರುವ ನೀರನ್ನು ಕುಡಿಯಬೇಡಿ ಎಂಬುದರ ಬಗ್ಗೆಯೂ ಕಾಳಜಿ ಇರಲಿ.
2.ಸೋಡಾ ಬೆರೆತ ತಂಪು ನೀರು
ಎದೆಯುರಿಗೆ ಇದು ಇನ್ನೊಂದು ನೂಸರ್ಗಿಕ ಉಪಶಮನವಾಗಿದೆ. ನೀವು ಸಾಕಷ್ಟು ಏಸಿಡಿಟಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ನೀವು ತಂಪು ನೀರಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ ಕುಡಿಯಲೇಬೇಕು. ಸೋಡಾ ಏಸಿಡ್ ಹಿಮ್ಮುಖವಾಗಿ ಹರಿಯುವುದನ್ನು ತಡೆಗಟ್ಟಿ ಉರಿತದ ಅನುಭವದಿಂದ ದೇಹಕ್ಕೆ ಬಿಡುಗಡೆ ನೀಡುತ್ತದೆ. ರಕ್ತದೊತ್ತಡದ ಸಮಸ್ಯೆ ಉಳ್ಳವರು ಮತ್ತು ಗರ್ಭಿಣಿಯರು ಸೋಡಾವನ್ನು ಉಪಯೋಗಿಸಬಾರದು. ರಕ್ತದೊತ್ತಡದ ಸಮಸ್ಯೆ ಮತ್ತು ಗರ್ಭಿಣಿಯರಿಗೆ ಆರೋಗ್ಯಕರವಾಗಿಲ್ಲದ ದೇಹದಲ್ಲಿ ನೀರನ್ನು ಉಳಿಸಿಕೊಳ್ಳುವ ಸಮಸ್ಯೆಯನ್ನು ಸೋಡಾವು ಉಂಟುಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ
3.ದಿನದಲ್ಲಿ ಅಂತಿಮವಾಗಿ ಸೇವಿಸುವುದು
ಇದು ಎದೆಯರಿಯನ್ನು ನಿವಾರಿಸುವ ಇನ್ನೊಂದು ಮನೆಮದ್ದಾಗಿದೆ. ಎದೆಯುರಿಯನ್ನು ಉಪಚರಿಸಲು, ಮಲಗುವ ಮುಂಚೆ ತಂಪು ನೀರನ್ನು ಕೊನೆಯದಾಗಿ ತೆಗೆದುಕೊಳ್ಳಬೇಕು. ಯಾವುದೇ ಅನಾರೋಗ್ಯಕರ ಆಹಾರ ಸೇವಿಸಿ ರಾತ್ರಿ ಉಂಟಾಗುವ ಎದೆಯುರಿಯನ್ನು ತಂಪು ನೀರು ನಿಲ್ಲಿಸುತ್ತದೆ. ರಾತ್ರಿಯಲ್ಲಿ ಉಂಟಾಗುವ ಎದೆಯುರಿಯನ್ನು ನಿವಾರಿಸಲು ಸ್ವಲ್ಪ ತಣ್ಣಗಿರುವ ನೀರನ್ನು ಸೇವಿಸಿ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹಗುರಗೊಳಿಸಿ ಏಸಿಡ್‌ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು
4.ಏಸಿಡಿಕ್ ಆಹಾರವನ್ನು ತಪ್ಪಿಸಿ
ಶೀತಲ ಅಥವಾ ತಂಪು ನೀರನ್ನು ಕುಡಿದಂತೆ ಎದೆಯುರಿ ನಿಯಂತ್ರಗೊಳ್ಳುತ್ತದೆ ಮತ್ತು ಇದರೊಂದಿಗೆ ನಾವು ಕೂಡ ಸೂಕ್ತವಾದ ಆಹಾರ ನಿಯಮಗಳನ್ನು ಪಾಲಿಸಬೇಕು. ನೀವು ತಿನ್ನುವುದರತ್ತ ಮೊದಲು ಗಮನ ಹರಿಸಿ. ತುಂಬಾ ಏಸಿಡಿಕ್ ಆಗಿರುವ ಖಾರವುಳ್ಳ ಮತ್ತು ಎಣ್ಣೆಯಿರುವ ಆಹಾರಗಳನ್ನು ಸೇವಿಸದಿರಿ. ಇದು ಏಸಿಡಿಕ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದೇ ರೀತಿ ರಾತ್ರಿ ಸಮಯದಲ್ಲಿ ಹಾಲು ಅಥವಾ ತಂಪು ಪಾನೀಯಗಳನ್ನು ಸೇವಿಸದಿರಿ. ಪಾನೀಯದಲ್ಲಿರುವ ಕೊಬ್ಬಿನ ಅಂಶ ಎದೆಯ ಉರಿಯನ್ನು ವರ್ಧಿಸುತ್ತದೆ. ತಂಪು ಹಾಲು ನಿಮಗೆ ಸ್ವಲ್ಪ ಸಮಯದವರೆಗೆ ಎದೆಯುರಿಯನ್ನು ಕಡಿಮೆ ಮಾಡಬಹುದು. ತಂಪು ಹಾಲಿನಲ್ಲಿರುವ ಕೊಬ್ಬು ದೇಹದಲ್ಲಿ ಏಸಿಡ್ ಉತ್ಪಾದನೆಯನ್ನು ಏರಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications