Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಉತ್ತಮ ಆಹಾರ
ದಿನನಿತ್ಯದ ಜೀವನದಲ್ಲಿ ಸೇವಿಸುವ ಆಹಾರಗಳೆಲ್ಲವೂ ಆರೋಗ್ಯಯುಕ್ತವಾಗಿದ್ದರೆ ಮಾತ್ರ ನಾವು ದಿನವೂ ನಮ್ಮ ಜೀವನಕ್ರಮದಿಂದ ಉಂಟಾಗುವ ಹಲವು ರೋಗಗಳಿಂದ ದೂರವಿರಬಹುದು. ಆದ್ದರಿಂದ ನೀವು ಸೇವಿಸುವ ದಿನನಿತ್ಯದ ಆಹಾರ ನಿಮ್ಮ ಉತ್ತಮ ಆಯ್ಕೆಯಾಗಿರಲಿ ಹಾಗೂ ಆರೋಗ್ಯಕರವಾಗಿರಲಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಐದು ಮುಖ್ಯ ಆಹಾರ
ಸಲ್ಮಾನ್ ಮೀನಿನ ಊಟ, ನಟ್ಸ್ ಗಳ ಸೇವನೆ, ಆಲೀವ್ ಎಣ್ಣೆಯನ್ನು ಸೇರಿಸಿದ ಆಹಾರ ಇವೆಲ್ಲವೂ ಇನ್ನುಮುಂದೆ ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮನ್ನು ಕೊಲೆಸ್ಟ್ರಾಲ್ ಮುಕ್ತ ಜೀವನವನ್ನು ನಡೆಸಲು ಸಾಕಷ್ಟು ಸಹಾಯ ಮಾಡುತ್ತದೆ. ಅಮೇರಿಕಾದ ಹೃದಯ ಅಸೋಸಿಯೇಶನ್/ ಹಾರ್ಟ್ ಅಸೋಸಿಯೇಶನ್ ಪ್ರಕಾರ, ಆರೋಗ್ಯಕರ ಆಹಾರ ಸೇವನೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಸೇರುವುದನ್ನು ತಪ್ಪಿಸಬಹುದು. ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ನ್ನು ನೀಗಿಸುವ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ.
ಓಟ್ಸ್: ನಿಮ್ಮ ಬೆಳಗ್ನ ಉಪಹಾರಕ್ಕೆ ಓಟ್ಸ್ ನ್ನು ಸೇವಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ನ್ನು ಕಡಿಮೆಗೊಳಿಸಬಹುದು.ಓಟ್ಸ್ ದಿನದಲ್ಲಿ ಎರಡು ಬಾರಿ ಸೇವಿಸಿದರೆ ಕೇವಲ 6 ವಾರಗಳಲ್ಲಿ 5.3 % ದಷ್ಟು ಕೊಲೆಸ್ಟ್ರಾಲ್ ಕಡಿಮೆಯಾಗುವುದನ್ನು ನೀವೇ ಗಮನಿಸಬಹುದು. ಮೂಲಭೂತವಾಗಿ , ಓಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳುವ ಬೀಟ ಗ್ಲುಕನ್ ಎಂಬ ವಸ್ತುವನ್ನು ಹೊಂದಿರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖರ್ಜೂರ ಸೇವನೆಯ ಆರೋಗ್ಯಕರ ಪ್ರಯೋಜನಗಳು

ರೆಡ್ ವೈನ್:
ನಿಮ್ಮ ಆರೋಗ್ಯಕ್ಕೆ ಪ್ರಮುಖವಾದದ್ದು ರೆಡ್ ವೈನ್, ದ್ರಾಕ್ಷಿಯಿಂದ ತಯಾರಿಸಲಾಗುತ್ತಿದ್ದು ವಾರದಲ್ಲಿ ಎರಡು ಲೋಟ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

ಸಾಲ್ಮನ್ ಮತ್ತು ಫ್ಯಾಟಿ ಮೀನು:
ನೈಸರ್ಗಿಕವಾಗಿ ಒಮೆಗಾ-3 ಆಮ್ಲವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಸಾಲ್ಮನ್ ಮೀನು ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಅಲ್ಲದೇ ವಾತ, ಅತಿಯಾದ ಕೊಲೆಸ್ಟ್ರಾಲ್ ಕೂಡ ನಿಮ್ಮ ಬಳಿ ಬರಲಾರದು. ಸಾಲ್ಮನ್, ಸಾರ್ಡಿನ್ಸ್, ಹೆರ್ರಿಂಗ್ ಮೀನುಗಳು ಶೇ 4 ರಷ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತವೆ.

ನಟ್ಸ್:
ಏಕಪರ್ಯಾಪ್ತ ಕೊಬ್ಬುಗಳಲ್ಲಿ (ಬೀಜಗಳು, ಧಾನ್ಯಗಳು ಇತ್ಯಾದಿ) ಅತೀ ಕಡಿಮೆ ಕೊಬ್ಬಿನ ಅಂಶದ ಆಸಿಡ್ ಕಣಗಳಿರುತ್ತವೆ. ಹಾಗೂ ಅವುಗಳು ಮೂರು ಕೊಬ್ಬಿನ ಅಂಶಗಳಾದ ಬಹುಅಪರ್ಯಾಪ್ತ ಕೊಬ್ಬಿನ ಅಂಶಗಳು, ಪರ್ಯಾಪ್ತ ಕೊಬ್ಬಿನ ಅಂಶಗಳು ಮತ್ತು ಮತ್ತು ಏಕ ಪರ್ಯಾಪ್ತ ಕೊಬ್ಬಿನ ಅಂಶಗಳಲ್ಲಿ ಬಹಳ ಉತ್ತಮವಾದ ಕೊಬ್ಬಿನ ಅಂಶಗಳಾಗಿವೆ. ಬೀಜಗಳು ಈ ಅಗತ್ಯ ಕೊಬ್ಬಿನ ಅಂಶಗಳನ್ನು ನಿಮ್ಮ ದೇಹಕ್ಕೆ ಸೇರಿಸುವ ಅತ್ಯುತ್ತಮವಾದ ಆಹಾರ ಪದಾರ್ಥಗಳಾಗಿವೆ. ಇವುಗಳು ನೈಸರ್ಗಿಕವಾಗಿದ್ದು ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳು ಅವುಗಳಲ್ಲಿ ಮಿಶ್ರಣವಾಗಿರುವುದು. ಇವುಗಳು ನಮ್ಮ ಹೃದಯವನ್ನು ಆರೋಗ್ಯವಂತವನ್ನಾಗಿ ಮಾಡುತ್ತವೆ.

ಬೀನ್ಸ್:
ನಿಮ್ಮ ನಿತ್ಯದ ಆಹಾರದಲ್ಲಿ ಅರ್ಧ ಕಪ್ ನಷ್ಟು ಬೀನ್ಸ್ ನ್ನು ಸೇರಿಸುವುದರಿಂದ ಶೇ 8 ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಕಪ್ಪು, ಪಿಂಟೋ ಬೀನ್ಸ್ ಗಳು ನಾರಿನ ಅಂಶವನ್ನು ಹೊಂದಿದ್ದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

ಚಹ:
ಚಹವು ಉತ್ಕರ್ಷಣ ವಿರೋಧಿ (antioxidants) ಮತ್ತು ಕಾಫಿಗಿಂತ ಕಡಿಮೆ ಪ್ರಮಾಣದ ಕೆಫೇನ್‌ನ್ನು ಹೊಂದಿರುತ್ತದೆ. ಒಂದು ಲೋಟ ಕಾಫಿ ಸೇವಿಸಿದರೆ 135 ಮಿ.ಗ್ರಾಂ ಕೆಫೇನ್ ದೇಹವನ್ನು ಸೇರುತ್ತದೆ. ಆದರೆ ಚಹ ಕೇವಲ 30-40 ಮಿ.ಗ್ರಾಂ ಅಂಶವನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯತ್ರಿಸಲು ಸಹಾಯಮಾಡುತ್ತದೆ.

ಚಾಕಲೇಟ್‌ಗಳು:
ಚಾಕೋಲೇಟುಗಳಲ್ಲೂ ಆಂಟಿ ಆಕ್ಸಿಡೆಂಟ್ ಗಳು ಮತ್ತು ಕೊಲೆಸ್ಟ್ರರಾಲ್ ಕಡಿಮೆ ಮಾಡುವ ಅಂಶಗಳು ಇರುವ ಕಾರಣ ಆರೋಗ್ಯಕ್ಕೆ ಉತ್ತಮ. 2010 ರ ಜೂನ್ ನಲ್ಲಿ 'ಜರ್ನಲ್ ಆಫ್ ಹೆಪಾಟೊಲೊಜಿ' ಯಲ್ಲಿ ಪ್ರಕಟಿಸಲಾದ ಒಂದ ಅಧ್ಯಯನದ ಪ್ರಕಾರ ಡಾರ್ಕ್ ಚಾಕೋಲೇಟ್‌ಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಇದು ನಮ್ಮ ರಕ್ತ ನಾಳಗಳ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ವೈದ್ಯಕೀಯ ಪರಿಣಿತರು ಹೇಳುವ ಪ್ರಕಾರ ದಿನಕ್ಕೆ 100 ಗ್ರಾಂ ಚಾಕೋಲೇಟ್ ಗಳನ್ನು ಸೇವಿಸಿದರೆ ಹೃದಯ ಸಂಬಂಧಿ ದುರ್ಘಟನೆಗಳ ಸಂಭವ 21 ಶೇಕಡಾ ಕಡಿಮೆಯಾಗುತ್ತದೆ.

ಪಾಲಾಕ್:
ಹಸಿರು ಎಲೆಗಳ ತರಕಾರಿಗಳು ಸಕಲ ರೋಗಗಳಿಗೂ ರಾಮಬಾಣ.

ಪಾಲಾಕ್ ಸೊಪ್ಪು,
ಕ್ಯಾನ್ಸರ್ , ಹೃದ್ರೋಗ ಹಾಗೂ ಆಸ್ಟಿಯೊಪೊರೋಸಿಸ್‌ನ್ನು ದೂರವಿಡುವ ಸುಮಾರು 13 ಸುಮಾರು ಫ್ಲೇವನಾಯ್ಡ್ ಸಂಯುಕ್ತಗಳನ್ನು ಹೊಂದಿದೆ ಎಂದು ನಂಬಲಾಗಿದೆ .ದಿನದಲ್ಲಿ ಸೇವಿಸುವ ಅರ್ಧ ಕಪ್ ಈ ಲ್ಯೂಟೀನ್ ಭರಿತ ಆಹಾರಹೃದಯಾಘಾತ ವಿರುದ್ಧ ನಮಗೆ ಕಾವಲಾಗಿ ನಿಲ್ಲುತ್ತದೆ.

ಆಲಿವ್ ಎಣ್ಣೆ :
ಈ ತೈಲ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ . ಇದು ಉತ್ತಮ ಕೊಲೆಸ್ಟ್ರಾರಾಲ್ ಮಟ್ಟವನ್ನು ಕಡಿಮೆ ಮಾಡದೆ,ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (triglycerides) ಗಳನ್ನು ಕಡಿಮೆ ಮಾಡುವ ಮೊನೊ ಬಹು ಅಪರ್ಯಾಪ್ತ ಮೇದಸ್ಸಿನ ಆಮ್ಲಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಅಡಿಗೆಯಲ್ಲಿ ಬೇರೆ ಎಣ್ಣೆಗಳ ಬದಲಿಗೆ ಆಲೀವ್ ಎಣ್ಣೆಯನ್ನೇ ಬಳಸುವುದು ಉತ್ತಮ.



Click it and Unblock the Notifications











