Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹಣ್ಣುಗಳಲ್ಲಿರುವ ಮಿಟಮಿನ್‌ನ ಸತ್ಯಾಂಶಗಳೇನು?
ಹಣ್ಣುಗಳನ್ನು ತಿಂದು ರೋಗವನ್ನು ದೂರವಿರಿಸಿ ಎಂಬ ನಾಣ್ಣುಡಿ ನಮಗೆಲ್ಲಾ ತಿಳಿದಿರುವಂಥದ್ದು. ಪ್ರತಿಯೊಂದು ಹಣ್ಣೂ ಕೂಡ ಅತ್ಯಧಿಕ ಪೋಷಕಾಂಶಗಳು ನ್ಯೂಟ್ರಿನ್‌ಗಳನ್ನು ತನ್ನಲ್ಲಿ ಯಥೇಚ್ಛವಾಗಿ ತುಂಬಿಕೊಂಡಿವೆ. ಊಟದ ನಂತರ ಅಥವಾ ಮೊದಲು ಹಣ್ಣನ್ನು ತಿನ್ನುವುದು ಒಳ್ಳೆಯದು ಎಂಬ ಪ್ರತೀತಿ ಆರೋಗ್ಯಕಾರಿ ದೇಹಕ್ಕೆ ಹೇಳಿ ಮಾಡಿಸಿದಂತಹುದು.
ಅದರಲ್ಲೂ ಹಣ್ಣುಗಳು ದೇಹದ ಹೆಚ್ಚಿನ ಕೊಬ್ಬನ್ನು ಇಳಿಸುವಲ್ಲಿ ಸಹಾಯಕವಾಗಿವೆ. ನಿಮಗೆಷ್ಟು ಸಾಧ್ಯವೋ ಅಷ್ಟು ಹಣ್ಣನ್ನು ಸೇವಿಸಿ ನಿಮ್ಮ ಪರಿಪೂರ್ಣ ತೂಕವನ್ನು ತಲುಪಬಹುದೆಂದು ಯಾವಾಗಲೂ ಜನರು ಸೂಚಿಸುತ್ತಾರೆ. ಆದರೆ, ದೇಹಕ್ಕೆ ಆರೋಗ್ಯಕರವಲ್ಲದ ಹಣ್ಣುಗಳನ್ನು ಸೇವಿಸುವುದು ಕೂಡ ಒಳ್ಳೇದಕ್ಕಿಂತ ಹೆಚ್ಚು ಅಪಾಯಕಾರಿ. ಅಂದರೆ ಹೆಚ್ಚಿನ ಸಕ್ಕರೆ ಅಂಶವು ಮಧುಮೇಹಕ್ಕೆ ಕಾರಣವಾಗುತ್ತದೆ, ನಿಸ್ತೇಜವಾಗಿ ಕಾಣುವ ತ್ವಚೆ ಮತ್ತು ನೀವು ದಪ್ಪ ಕೂಡ ಕಾಣಬಹುದು!

ಕಡಿಮೆ ಸಕ್ಕರೆ ಪ್ರಮಾಣ ಇರುವ ಹಣ್ಣುಗಳನ್ನು ಸೇವಿಸಿ.
1 ಸೇಬುಹಣ್ಣುಗಳು:
ಇವುಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಸಕ್ಕರೆ ಅಂಶ ಕಡಿಮೆ ಇರುವ ಹೊರತಾಗಿಯೂ, ಸೇಬು ತನ್ನಲ್ಲಿ ವಿಟಮಿನ್ ಸಿ ಮತ್ತು ಜೀವಾಣುಗಳನ್ನು ವರ್ಜಿಸುವ ನಾರಿನಂಶ ಮತ್ತು ಕೊಲೆಸ್ಟ್ರಾಲ್
ನಿರ್ವಹಣೆಗೆ ಸಹಾಯ ಮಾಡುತ್ತದೆ
2.ಏಪ್ರಿಕೋಟ್ ಹಣ್ಣುಗಳು:
ಏಪ್ರಿಕೋಟ್ ಸುವಾಸಿತ ಸಿಹಿಯುಳ್ಳ ಹಣ್ಣು ಇದಾಗಿದ್ದು ಬಣ್ಣದಲ್ಲಿ ಬಂಗಾರ ಕಿತ್ತಳೆ ಬಣ್ಣದಲ್ಲಿದೆ! ವಿಟಮಿನ್ ಎ ಮತ್ತು ವಿಟಮಿನ್ ಬಿ ಅಂತೆಯೇ ಐರನ್, ಪೊಟಾಶಿಯಂ ಮತ್ತು ಕ್ಯಾಲ್ಶಿಯಂ ಹೇರಳವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಣ್ಣು v/s ಹಣ್ಣಿನ ಜ್ಯೂಸ್ ಇದರಲ್ಲಿ ಯಾವುದು ಆರೋಗ್ಯಕರ?
3 ಬೆರ್ರಿಗಳು :
ಸ್ಟ್ರಾಬೆರ್ರಿ ಬ್ಲಾಕ್ ಬೆರ್ರಿ ಮತ್ತು ಬ್ಲ್ಯು ಬೆರ್ರಿ ಕಡಿಮೆ ಕಾರ್ಬೋ ಹೈಡ್ರೇಟ್ಸ್‌ಗಳನ್ನು ಹೊಂದಿವೆ. ಕ್ಯಾನ್ಸರ್‌ನ ಕೆಲವೊಂದು ವಿಧಗಳ ಅಪಾಯಗಳನ್ನು ಕಡಿಮೆ ಮಾಡುವ ಆಂಟಿಯೋಕ್ಸಿಡೆಂಟ್‌ಗಳನ್ನು ಸಹ ಬ್ಲಾಕ್‌ಬೆರ್ರಿ ಮತ್ತು ಬ್ಲ್ಯು ಬೆರ್ರಿ ಒಳಗೊಂಡಿದೆ
4 ಗುವಾ:
ಲಿಂಬೆಯ ಆಕಾರದಲ್ಲಿರುವ ಹಣ್ಣು ಇದಾಗಿದ್ದು ಸ್ಟ್ರಾಬೆರ್ರಿ ಮತ್ತು ಪೇರಲೆ ಹಣ್ಣಿನ ಮಿಶ್ರ ರುಚಿಯನ್ನು ಹೊಂದಿದೆ. ಕಡಿಮೆ ಕ್ಯಾಲೋರಿಗಳಿಗೆ ಜೊತೆಯಾಗಿ, ಗುವಾ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ನಾರಿನಂಶಿದ ಪಥ್ಯ ಯಥೇಚ್ಛವಾಗಿದೆ.
5 ದ್ರಾಕ್ಷಿ ಹಣ್ಣು:
ಸಿಟ್ರಸ್ ಅಂಶವುಳ್ಳ ಹಣ್ಣುಗಳಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುತ್ತವೆ!. ಕ್ಯಾನ್ಸರ್ ಕೋಶಗಳನ್ನು ನಿರ್ಬಂಧಿಸುವ ಆಂಟಿಆಕ್ಸಿಡೆಂಟ್ಸ್‌ಗಳನ್ನು ಇದು ಒಳಗೊಂಡಿದೆ ಹಾಗೂ ಶೀತ ಹಾಗೂ ಸೋಂಕಿನ ವಿರುದ್ಧ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸುತ್ತವೆ.
6. ಕಿವಿ ಹಣ್ಣು:
ಮೊಟ್ಟೆ ಗಾತ್ರದ ಹಣ್ಣಾಗಿರುವ ಕಿವಿ ಹೊರಗೆ ಕಂದು ಹಾಗೂ ಒಳಗೆ ಹಸಿರು ಬಣ್ಣವನ್ನು ಹೊಂದಿದೆ. ವಿಟಮಿನ್ ಸಿ ಯನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುತ್ತದೆ ಮತ್ತು ಆಹಾರದಲ್ಲಿನ ಪೋಷಕಾಂಶಗಳನ್ನು ಹೊರತೆಗೆಯುವಲ್ಲಿ ಸಹಾಯ ಮಾಡುವಂತಹ ಒಂದು ಕಿಣ್ವ ಪ್ರಕಾರ ಕೂಡ ಹೌದು.
7 ಪೀಚ್‌ಗಳು:
ಫ್ರುಟ್ ಸಲಾಡ್ ಅಥವಾ ಪೈ ಯಲ್ಲಿ ಬಳಸಲಾಗುವ ಮೆಚ್ಚಿನ ಸಾಮಾಗ್ರಿ ಪೀಚ್ ಹಣ್ಣುಗಳಾಗಿವೆ. ವರ್ಷ ಪೂರ್ತಿ ಈ ಹಣ್ಣು ಕಂಡುಬರುತ್ತದೆ. ಪೀಚಸ್‌ಗಳಲ್ಲಿ ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಹೇರಳವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಕ್ತದ ಶುದ್ಧತೆಗೆ ದಿನಾ ಕ್ಯಾರೆಟ್‌ನ್ನು ಸೇವಿಸಿ!
8 ಪೇರಳೆ:
ಹಸಿರು ಬಣ್ಣದಲ್ಲಿ ಈ ಹಣ್ಣು ಹೆಚ್ಚಾಗಿ ಕಂಡುಬರುತ್ತದೆ ಮತ್ತು ಮಾಗಿದಾಗ ಸಿಹಿ ಅಂಶ ಪೇರಳೆಯಲ್ಲಿದೆ. ಪೇರಳೆಗಳು ಸೇಬುಹಣ್ಣಿನಂತೆ ನಾರಿನಂಶ ಮತ್ತು ಯಥೇಚ್ಛ ವಿಟಮಿನ್ ಸಿ ಯನ್ನು ಹೊಂದಿವೆ.
9 ಪ್ಲಮ್:
ವಿಟಮಿನ್ ಎ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಕಬ್ಬಿಣದ ಅಂಶವನ್ನು ವರ್ಧಿಸುವಲ್ಲಿ ಇದು ಸಹಕಾರಿ. ತಾಜಾ, ಒಣಗಿಸಿ ಅಥವಾ ಪೇಸ್ಟ್ರಿಗಳಲ್ಲಿ ಬೇಕ್ ಮಾಡಿ ಪ್ಲಮ್ ಅನ್ನು ತಿನ್ನಬಹುದು.
10 ಪಪ್ಪಾಯಿ:
ಪಪ್ಪಾಯಿ ಹಸಿ ಇದ್ದಾಗ ತರಕಾರಿಯಂತೆ ಮಾಗಿದಾಗ ಹಣ್ಣಿನಂತೆ ಬಳಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ವರ್ಧಿಸುವ ಕಿಣ್ವಗಳ ಒಂದು ಪ್ರಕಾರವನ್ನು ಪಪ್ಪಾಯಿ ಒಳಗೊಂಡಿದೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
