Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ?
ಅಸ್ತಮಾ ತಡೆಗೆ ನಿರ್ಲಕ್ಷಿಸಲೇಬೇಕಾದ ಅಂಶಗಳು
ಗುಣವಾಗದ ಕಾಯಿಲೆ ಅಂದರೆ ಅಸ್ತಮವಾಗಿದೆ. ನಿಮ್ಮ ಜೀವನದಲ್ಲಿ ನಿಯಂತ್ರಣವನ್ನು ಪಡೆದುಕೊಳ್ಳುವುದರ ಮೂಲಕ ಈ ರೋಗದ ತೀಕ್ಷ್ಣತೆಯನ್ನು ತಪ್ಪಿಸಬಹುದು. ಅಸ್ತಮಾ ರೋಗಿಗಳನ್ನುನೋಡಿಕೊಳ್ಳಲು ಇಂದು ಹಲವಾರು ಅಸ್ತಮಾ ಕೇಂದ್ರಗಳಿವೆ.
ಅವುಗಳು ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಅವರನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಚಿಕಿತ್ಸೆಗಳು ಸಾಕಷ್ಟಿದ್ದರೂ ಇದಕ್ಕೆ ನಾವು ತೆಗೆದುಕೊಳ್ಳಬೇಕಾದ ಕೆಲವು ಪರಿಹಾರಗಳನ್ನು ಅನುಸರಿಸಲೇಬೇಕು. ಉಸಿರಾಟ ಸಮಸ್ಯೆಯನ್ನು ಉಂಟು ಮಾಡುವ ಕೆಲವು ವಸ್ತುಗಳಿಂದ ಅಸ್ತಮಾ ರೋಗಿ ದೂರವಿರಲೇಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಉಪಹಾರಕ್ಕೆ ಅತ್ಯಂತ ಕೆಟ್ಟ ಆಹಾರಗಳು
ಹಾಗಾಗಿ ಇಂದು ಬೋಲ್ಡ್ ಸ್ಕೈ ಅಸ್ತಮಾ ರೋಗಿಗಳು ದೂರವಿರಿಸಲೇಬೇಕಾದ ಕೆಲವು ಅಂಶಗಳ ಪಟ್ಟಿಯನ್ನು ಕೆಳಗೆ ನೀಡುತ್ತಿದೆ. ಅದರ ಪ್ರಯೋಜನವನ್ನು ಪಡೆದುಕೊಂಡು ರೋಗದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಿ. ಕೆಳಗೆ ನೀಡಿರುವ ಅಸ್ತಮಾ ಉಂಟು ಮಾಡುವ ಕೆಲವು ವಸ್ತುಗಳನ್ನು ನೀವು ಸುಲಭವಾಗಿ ನಿವಾರಿಸಬಹುದು. ಈ ವಸ್ತುಗಳನ್ನು ಆಘ್ರಾಣಿಸುವುದರಿಂದ ಸಹ ಅಸ್ತಮಾ ರೋಗಿ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾನೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಲೋವೆರಾ ಜ್ಯೂಸ್ ನ ಆರೋಗ್ಯ ಲಾಭಗಳು

ಹೂವುಗಳು
ಹೂಗಳ ಪರಿಮಳ ಕೂಡ ಉಸಿರಾಟ ಸಮಸ್ಯೆಯನ್ನು ತಂದೊಡ್ಡುತ್ತವೆ. ಗಾಳಿಯಲ್ಲಿರುವ ಪರಾಗವನ್ನು ಮಾನವ ಹೀರಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಕುಟುಂಬ ಸದಸ್ಯರು ಈ ರೋಗದಿಂದ ಬಳಲುತ್ತಿದ್ದರೆ ಒಳಾಂಗಣ ಅಲಂಕಾರಿಕ ಹೂಗಳನ್ನು ಬಳಸದಿರಿ.

ಜಿರಳೆಗಳು
ಸತ್ತ ಜಿರಳೆ ಅಥವಾ ಅದರ ದೇಹದ ಯಾವುದೇ ಅಂಗ ಅಸ್ತಮಾಕ್ಕೆ ಇಂಬು ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅಸ್ತಮಾ ರೋಗಿಗಳಿಗೆ ತೊಂದರೆಯನ್ನುಂಟು ಮಾಡುವ ಹೆಚ್ಚಿನ ಕೀಟಾಣುಗಳನ್ನು ಜಿರಳೆಗಳು ಹೊತ್ತು ತರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಸಾಕುಪ್ರಾಣಿಗಳು
ಸಾಕುಪ್ರಾಣಿಗಳು ಅಸ್ತಮಾದ ತೀವ್ರತೆಯನ್ನು ಹೆಚ್ಚಾಗಿ ಉಂಟು ಮಾಡುತ್ತವೆ. ಅದರಲ್ಲೂ ಬೆಕ್ಕುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತ್ವಚೆಯ ಹೊಟ್ಟು ಅಥವಾ ಅದರ ಜೊಲ್ಲು ನಿಮ್ಮ ಉಸಿರಾಟವನ್ನು ನಿರ್ಬಂಧಿಸಬಹುದು.

ಹೊಗೆ
ಅಸ್ತಮಾವನ್ನು ತೀಕ್ಷ್ಣಗೊಳಿಸುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಹೊಗೆಯಾಗಿದೆ. ನೀವು ಅಸ್ತಮಾ ರೋಗಿಯಾಗಿದ್ದರೆ, ಪ್ರತೀ ಸಲ ಮನೆಯಿಂದ ಹೊರಹೊರಟಾಗ ನಿಮ್ಮ ಮೂಗನ್ನು ಕವರ್
ಮಾಡಿಕೊಳ್ಳಿ. ಅಸ್ತಮಾ ದಾಳಿಯನ್ನು ತೆಗಟ್ಟಬಹುದಾದ ಒಂದು ವಿಧಾನ ಇದಾಗಿದೆ.

ಸಿಗರೇಟ್‌ಗಳು
ಅಸ್ತಮಾ ತೀವ್ರತೆಯನ್ನು ನಿವಾರಿಸಲು ತ್ಯಜಿಸಲೇಬೇಕಾದ ಅಂಶ ಸಿಗರೇಟ್ ಆಗಿದೆ. ರೋಗಿಯ ಉಸಿರಾಟ ನಾಳಗಳನ್ನು ಸಿಗರೇಟ್‌ನ ಹೊಗೆ ನಿರ್ಬಂಧಿಸಿ ರೋಗಿಯಲ್ಲಿ ಉಸಿರಾಟ ಸಮಸ್ಯೆಯನ್ನು ತಂದೊಡ್ಡುತ್ತದೆ.

ಹವಾಮಾನ
ಹವಾಮಾನದ ಬದಲಾವಣೆಯನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅಸ್ತಮಾದ ದಾಳಿಯನ್ನು ತಡೆಯಲು ಮುಂಚಿತ ಕ್ರಮಗಳನ್ನು ನಮಗೆ ತೆಗೆದುಕೊಳ್ಳಬಹುದು. ನೀವು ಹೊರಗೆ ಹೋಗುವ ಸಂದರ್ಭದಲ್ಲಿ ನಿಮ್ಮ ಕುತ್ತಿಗೆ, ಮೂಗು ಹಾಗೂ ಬಾಯಿಯನ್ನು ಕವರ್ ಮಾಡಿಕೊಳ್ಳಿ. ತಿಕ್ಷ್ಣ ಹವಾಮಾನ ವೈಪರೀತ್ಯ ಸಮಯಗಳಲ್ಲಿ ಸುರಕ್ಷಿತರಾಗಿರಿ.

ಆಹಾರ ಅಲರ್ಜಿಗಳು
ಕೆಲವೊಂದು ಆಹಾರಗಳಾದ ಸೋಯಾ, ಕಡಲೆಬೀಜಗಳು ಮತ್ತು ಸಿಗಡಿ ಅಸ್ತಮಾವನ್ನು ಉಲ್ಭಣಿಸುತ್ತವೆ. ಈ ಆಹಾರಗಳನ್ನು ಸೇವಿಸಿದ ನಂತರ ನಿಮಗೆ ಅಸ್ತಮಾ ತೀವ್ರಗೊಂಡಿದ್ದರೆ, ಅದನ್ನು ನಿರ್ಲಕ್ಷಿಸುವುದು ಉತ್ತಮ.

ಭಾವನೆಗಳು
ಹೌದು. ಅಸ್ತಮಾದ ತೀವ್ರತೆಯಲ್ಲಿ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಒತ್ತಡದ ಸಮಸ್ಯೆಯಿಂದಾಗಿ ವ್ಯಕ್ತಿ ವಿಶ್ರಾಂತಿ ರಹಿತ ಹಾಗೂ ಉಸಿರಾಟ ಮುಕ್ತನಾಗಿರುತ್ತಾನೆ.

ಪಾಚಿ
ಸಸ್ಯಗಳಲ್ಲಿರುವ ಹಾಗೂ ನಿಮ್ಮ ಮನೆಯಲ್ಲಿರುವ ಪಾಚಿ ಅಸ್ತಮಾದ ತೀವ್ರತೆಯನ್ನು ಹೆಚ್ಚಿಸುತ್ತದೆ. ಒಳಾಂಗಣ ಸಸ್ಯಗಳನ್ನು ನೀವು ಮನೆಯಲ್ಲಿ ಹೊಂದಿದ್ದರೆ ಬೆಳಗ್ಗಿನ ಸಮಯದಲ್ಲಿ ಕಿಟಕಿಗಳನ್ನು
ತೆರೆಯುವುದರ ಮೂಲಕ ಚೆನ್ನಾಗಿ ಗಾಳಿ ಬೆಳಕು ಆಡುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಈ ತೇವವಾಗುವಿಕೆ ಅಸ್ತಮಾ ರೋಗಿಗೆ ಒಳ್ಳೆಯದಲ್ಲ.

ಸುಗಂಧ ದ್ರವ್ಯಗಳು
ಗಾಢವಾದ ಸುಗಂಧ ದ್ರವ್ಯಗಳು ಅಸ್ತಮಾದ ತೀವ್ರತೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಇವುಗಳು ಉಸಿರಾಟ ನಾಳಗಳನ್ನು ಹಿಗ್ಗಿಸಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತವೆ.



Click it and Unblock the Notifications
