ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ಸಾಮರ್ಥ್ಯವು ಯಾವಾಗಲೂ ಮೊಟ್ಟೆ ಮತ್ತು ಮಾಂಸದೊಂದಿಗೆ ಸಂಯೋಜನೆಗೊಂಡಿರುತ್ತದೆ. ನೈಸರ್ಗಿಕವಾಗಿ, ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು ಹೆಚ್ಚಾಗಿ ಮಾಂಸಾಹಾರವಾಗಿರುತ್ತದೆ. ಆದರೂ ಸಸ್ಯಾಹಾರಿಗಳೂ ಮಾಂಸಾಹಾರಿಗಳಂತೆ ಕೂಡ ಶಕ್ತಿಯುತ ಮತ್ತು ಬಲಯುತವಾಗಿರುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಲಕ್ಷ್ಯ ಮಾಡಬಾರದಂತಹ ಕಾಯಿಲೆಗಳ ಲಕ್ಷಣಗಳಿವು

ಇದರರ್ಥ ಮಾಂಸಾಹಾರದಂತೆ ಸಸ್ಯಾಹಾರ ಕೂಡ ಸಾಮರ್ಥ್ಯ ಹಾಗೂ ಶಕ್ತಿಯನ್ನು ಒದಗಿಸುವಲ್ಲಿ ನೆರವಾಗುತ್ತದೆ. ಸಾಮರ್ಥ್ಯವನ್ನು ಒದಗಿಸುವ ಆಹಾರಗಳು ಕೇವಲ ಮಾಂಸಾಹಾರ ಮಾತ್ರವಲ್ಲ ಎಂಬುದು ಇದರಿಂದ ಖಚಿತವಾಗುತ್ತದೆ.

ಕೆಲವೊಮ್ಮೆ ಮೀನು ಮಾಂಸ ಒದಗಿಸದ ಸಹಾಯವನ್ನು ಸಸ್ಯಾಹಾರಿ ಆಹಾರಗಳು ಮಾಡುತ್ತವೆ. ನಿಮಗೆ ಅಗತ್ಯವಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಒದಗಿಸಲು ಸಸ್ಯಾಹಾರ ಸಹಕಾರಿ. ಬಾಳೆಹಣ್ಣು ಮತ್ತು ದ್ರಾಕ್ಷಿ ಶಕ್ತಿಯನ್ನು ನೀಡುವ ಒಂದು ಉತ್ತಮ ಹಣ್ಣುಗಳಾಗಿವೆ. ನಿಮಗೆ ಅಗತ್ಯವಿರುವ ಪ್ರೊಟೀನ್ ವಿಟಮಿನ್‌ಗಳ ಸಾಕಷ್ಟು ಪ್ರಮಾಣವನ್ನು ಒದಗಿಸುವಲ್ಲಿ ಇವು ಸಿದ್ಧಹಸ್ತರಾಗಿರುವುದರಿಂದ ದೈನಂದಿನ ಜೀವನದಲ್ಲಿ ನೀವು ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಬಳಸಲೇಬೇಕು.

ಮತ್ತೆ ತಡವೇಕೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಹಣ್ಣು ತರಕಾರಿಗಳು ನಿಮ್ಮ ಮನೆಯಲ್ಲೇ ಇದೆ ಅವುಗಳ ಸರಿಯಾದ ಪ್ರಮಾಣದ ಬಳಕೆ ಮತ್ತು ಸೇವನೆಯನ್ನು ನೀವು ಮಾಡಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಊಟದ ನಂತರದ ಮಾಡಬಾರದ ಅಪಾಯಕಾರಿ ಕ್ರಿಯೆಗಳು!

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಫೈಬರ್ ಮತ್ತು ಸರಳ ಫ್ರುಕ್ಟೋಸ್ ಅಥವಾ ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದೆ. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

ನೆಲಗಡಲೆ ಬೆಣ್ಣೆ

ನೆಲಗಡಲೆ ಬೆಣ್ಣೆ

ನೆಲಗಡಲೆ ಬೆಣ್ಣೆಯು ಒಮೇಗಾ - 3 ಫ್ಯಾಟಿ ಏಸಿಡ್ ಅನ್ನು ಒಳಗೊಂಡಿದೆ. ಇದು ಉತ್ತಮ ಆರೋಗ್ಯಕಾರಿ ಕೊಬ್ಬಾಗಿದೆ. ನಿಮ್ಮ ಹೃದಯವನ್ನು ರಕ್ಷಿಸುತ್ತದೆ, ನೋವಿನ ಶಮನ ಮಾಡುತ್ತದೆ ಮತ್ತು ದೀರ್ಘ ಸಮಯದವರೆಗೆ ನಿಮಗೆ ಶಕ್ತಿಯನ್ನು ಒದಗಿಸುತ್ತದೆ.

ಬೀಟ್‌ರೋಟ್ ಜ್ಯೂಸ್

ಬೀಟ್‌ರೋಟ್ ಜ್ಯೂಸ್

ಬೀಟ್‌ರೋಟ್ ಜ್ಯೂಸ್ ಅನ್ನು "ಕೊಬ್ಬು ಕೊಲ್ಲವಂಥದ್ದು" ಎಂದೂ ಸಹ ಕರೆಯಲಾಗುತ್ತದೆ. ನೀವು ವರ್ಕ್ಔಟ್ ಮಾಡುವ ಮುನ್ನ ಈ ಜ್ಯೂಸ್ ಅನ್ನು ಸೇವಿಸುವುದು ನಿಮ್ಮ ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್‌ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಇವುಗಳು ಸಾಮರ್ಥ್ಯವನ್ನು ವೃದ್ಧಿಸುತ್ತದೆ.

ನೀರು

ನೀರು

ನಿಮ್ಮ ದೇಹ ಹೈಡ್ರೇಟ್ ಆಗಿರದಿದ್ದರೆ, ನಿಮಗೆ ಸಾಮರ್ಥ್ಯವಿರುವಂತೆ ಭಾಸವಾಗುವುದಿಲ್ಲ. ನೀರು ನಿಮ್ಮ ದೇಹದಿಂದ ಎಲ್ಲಾ ವಿಷ ಅಂಶಗಳನ್ನು ಹೊರತೆಗೆಯುವಲ್ಲಿ ಸಹಕಾರಿ ಆದ್ದರಿಂದ ನಿಮಗೆ ಸಾಧ್ಯವಿರುವಷ್ಟು ನೀರು ಕುಡಿಯಲು ಪ್ರಯತ್ನಿಸಿ.

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿಯು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಇದನ್ನು ತ್ವರಿತವಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೀರ್ಘ ಕಾಲದವರೆಗೆ ಸಾಮರ್ಥ್ಯವನ್ನು ರಚಿಸುವ ರಿಸರ್ವಟೋಲ್ ರಾಸಾಯನಿಕವನ್ನು ದ್ರಾಕ್ಷಿ ಒಳಗೊಂಡಿದೆ.

ಓಟ್‌ಮೀಲ್

ಓಟ್‌ಮೀಲ್

ಓಟ್‌ಮೀಲ್‌ ಸಾಕಷ್ಟು ಕಾರ್ಬೊಹೈಡ್ರೇಟ್‌ಗಳ ವರ್ಗಗಳನ್ನು ಒಳಗೊಂಡಿದೆ. ಕೆಲವು ಗಂಟೆಗಳವರೆಗಿನ ಶಕ್ತಿ ಸಾಮರ್ಥ್ಯವನ್ನು ಇದು ನಿಮಗೆ ಒದಗಿಸುತ್ತದೆ.

ಕಾಫಿ

ಕಾಫಿ

ಕಾಫಿ ಇಲ್ಲವೇ ಕೆಫೀನ್ ಇದು ತ್ವರಿತ ಶಕ್ತಿದಾಯಕವಾಗಿದೆ. ಇದು ನಿಮ್ಮ ಮೆದುಳನ್ನು ಮರುಸಶಕ್ತೀಕರಣಗೊಳಿಸಿ ನಿಮ್ಮನ್ನು ಉತ್ಸುಕರನ್ನಾಗಿರಿಸುತ್ತದೆ. ಇದರ ಅಧಿಕ ಸೇವನೆಯೂ ಹಾನಿಕರ. ಆದರೆ ಕಾಫಿ ಮೈಗ್ರೇನ್ ಅನ್ನು ನಿವಾರಿಸಿ ಶಕ್ತಿಯನ್ನು ಒದಗಿಸುತ್ತದೆ.

ಬೀನ್ಸ್

ಬೀನ್ಸ್

ಬೀನ್ಸ್ ಸಾಕಷ್ಟು ಪ್ರಮಾಣದ ಐರನ್ ಅನ್ನು ಒಳಗೊಂಡಿದ್ದು ರಕ್ತದ ಆಮ್ಲಜನಕ ಹೊತ್ತೊಯ್ಯುವ ಪ್ರಮಾಣವನ್ನು ಹೆಚ್ಚಿಸುತ್ತದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಹಸಿರು ಎಲೆಗಳ ತರಕಾರಿಗಳು ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧಿಗೊಂಡಿದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು ನಿಮ್ಮ ಸಾಮರ್ಥ್ಯ ಮಟ್ಟಗಳನ್ನು ಏರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬ್ರೌನ್ ರೈಸ್

ಬ್ರೌನ್ ರೈಸ್

ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಬಿ ಅಂಶಗಳನ್ನು ಒಳಗೊಂಡಿರುವ ಕಾರ್ಬೊಹೈಡ್ರೇಟ್ ಅನ್ನು ಒದಗಿಸುವಲ್ಲಿ ಬ್ರೌನ್ ರೈಸ್ ಸಹಕಾರಿ. ಇದು ನಿಧಾನವಾಗಿ ಜೀರ್ಣವಾಗುತ್ತದೆ.

ಸೇಬು

ಸೇಬು

ಸೇಬಿನಲ್ಲಿ ಅಧಿಕ ಪ್ರಮಾಣದ ಐರನ್ ಅಂಶವಿದೆ. ನಿಮ್ಮ ದೇಹದ ಹಿಮೋಗ್ಲೊಬೀನ್ ಸಂಖ್ಯೆಯನ್ನು ಐರನ್ ಏರಿಸುತ್ತದೆ.

ಗ್ರೀನ್ ಟೀ

ಗ್ರೀನ್ ಟೀ

ಕೆಫೇನ್‌ನಂತೆ, ಗ್ರೀನ್ ಟೀ ಕೂಡ ಮೆದುಳಿನ ಚೇತರಿಕೆಗೆ ನೆರವು ನೀಡುತ್ತದೆ. ನಿಮ್ಮ ದೇಹದಿಂದ ಕೊಬ್ಬನ್ನು ಹೊರಹಾಕಿ ದೇಹದ ಸುಸ್ಥಿತಿಗೆ ಸಹಕಾರಿ.

ಕ್ಯೂನಾ

ಕ್ಯೂನಾ

ಕ್ರೀಡಾಪಟುಗಳಿಗೆ ಶಕ್ತಿ ವರ್ಧಕವಾಗಿ ಕ್ಯೂನಾ ಪೌಡರ್ ಅನ್ನು ನೀಡುತ್ತಾರೆ. ಇದೊಂದು ಆರೋಗ್ಯಪೂರ್ಣ ಧಾನ್ಯವಾಗಿದ್ದು ನಮಗೆ ಲಭ್ಯವಿರುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯು ವಿಟಮಿನ್ ಇ ಮತ್ತು ಒಮೇಗಾ - 3 ಕೊಬ್ಬು ಏಸಿಡ್ ಅನ್ನು ಒಳಗೊಂಡಿದೆ. ಈ ಕೊಬ್ಬು ನಿಮಗೆ ಸುಲಭವಾಗಿ ಜೀರ್ಣವಾಗುವಂತಿದ್ದು ಶಕ್ತಿಯನ್ನು ನೀಡುತ್ತದೆ.

ಸೋಯಾಬೀನ್

ಸೋಯಾಬೀನ್

ಸ್ನಾಯು ರಚನೆಯಲ್ಲಿ ಸೋಯಾಬೀನ್‌ನ ಪಾತ್ರ ಅತ್ಯಂತ ಹಿರಿದು. ದೈಹಿಕ ಕೆಲಸಗಳನ್ನು ಮಾಡಲು ಬೇಕಾದ ದೀರ್ಘ ಸಮಯ ಆರೋಗ್ಯ ಸಾಮರ್ಥ್ಯವನ್ನು ಸೋಯಾ ಒದಗಿಸುತ್ತದೆ.

ಮಕಾ

ಮಕಾ

ಇದೊಂದು ಪ್ರಾಚೀನ ಗಿಡಮೂಲಿಕೆಯಾಗಿದ್ದು ವಿಶಿಷ್ಟ ರೀತಿಯ ಶಕ್ತಿಯನ್ನು ಪೂರೈಸುವಲ್ಲಿ ಹೆಸರುವಾಸಿಯಾಗಿದೆ. ಪೆರು ಇದರ ಮೂಲ ಸ್ಥಾನವಾಗಿದೆ.

ಡ್ರೈ ಫ್ರುಟ್ಸ್

ಡ್ರೈ ಫ್ರುಟ್ಸ್

ಡ್ರೈ ಫ್ರುಟ್ಸ್ ಹೇರಳವಾದ ಪೋಷಕಾಂಶಗಳಿಂದ ಭರಿತವಾಗಿದೆ. ಇದರಲ್ಲಿರುವ ಒಮೇಗಾ - 3 ಕೊಬ್ಬು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿ ನಿಮಗೆ ಸಂಪೂರ್ಣ ಆರೋಗ್ಯವನ್ನು ಕೊಡುವ ಒಂದು ತರಕಾರಿಯಾಗಿದೆ. ಇದು ಕ್ಯಾಲೋರಿಯಿಂದ ಭರಿತವಾಗಿಲ್ಲದಿದ್ದರೂ ನಿಮ್ಮ ಹೊಟ್ಟೆಯನ್ನು ಭರ್ತಿಗೊಳಿಸುತ್ತದೆ ಮತ್ತು ನಿಮ್ಮ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ ಇದರಿಂದ ನೀವು ಸಮರ್ಥರು ಮತ್ತು ಸಾಮರ್ಥ್ಯವುಳ್ಳವರಾಗಿ ಪರಿವರ್ತಿತರಾಗುತ್ತೀರಿ.

ಕಾರ್ನ್:

ಕಾರ್ನ್:

ಕಾರ್ನ್‌‌ನಲ್ಲಿ ನಿಮ್ಮ ದೇಹ ಹೊಂದಿಕೊಳ್ಳುವಂತಹ ಕಾರ್ಬೋಹೈಡ್ರೇಟ್ಸ್ ಅಂಶ ಅಧಿಕ ಪ್ರಮಾಣದಲ್ಲಿದ್ದು, ಕೆಲವೇ ನಿಮಿಷಗಳಲ್ಲಿ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಲಿದೆ.

X
Desktop Bottom Promotion