Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಸ್ಟ್ರಾಬೆರಿಯ ಹತ್ತು ಆರೋಗ್ಯ ಪ್ರಯೋಜನಗಳು
ನೈಸರ್ಗಿವಾಗಿ ದೊರೆಯುವ ಸಂಪತ್ತುಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಣ್ಣುಗಳು ತರಕಾರಿಗಳು ನಮ್ಮ ದೇಹಕ್ಕೆ ಸ್ವಾಸ್ಥ್ಯವನ್ನು ನೀಡುವುದರೊಂದಿಗೆ ರೋಗವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಇತರ ಹಣ್ಣುಗಳಿಗೆ ಹೋಲಿಸಿದರೆ ಅಂದರೆ ಸೇಬಿನ ಹಣ್ಣು, ಕಿತ್ತಾಳೆ, ಬಾಳೆಹಣ್ಣು, ಹೀಗೆ ಬೇರೆ ಹಣ್ಣುಗಳಿಗಿಂತ, ಸ್ಟ್ರಾಬೆರಿಯಲ್ಲಿ ಅಧಿಕ ಪ್ರಮಾಣದ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತವೆ. ಪ್ರೋಟೀನ್ ವಿಟಮಿನ್ ಭರಿತವಾಗಿರುವ ಇವುಗಳು ಕೊಬ್ಬನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರುಚಿಯಲ್ಲಿ ಅಷ್ಟೇನೂ ಸಿಹಿಯಾಗಿಲ್ಲದ ಹುಳಿ ಮಿಶ್ರಿತ ಹಣ್ಣು ಸ್ಟ್ರಾಬೆರಿ ಅತ್ಯಧಿಕ ಪೋಷಕಾಂಶವನ್ನು ಸಮ್ಮಿಳಿತಕೊಂಡಿದೆ. ಇದು ಆರೋಗ್ಯಕರ ಕೊಬ್ಬನ್ನು ಒಳಗೊಂಡಿದ್ದು ಆರೋಗ್ಯಕರವಾಗಿದೆ. ಸ್ಟ್ರಾಬೆರಿಯ ಹತ್ತು ಹಲವು ಉಪಯೋಗಗಳನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ. ದಿನನಿತ್ಯದ ಆಹಾರದಲ್ಲಿ ಸ್ಟ್ರಾಬೆರಿಯನ್ನು ಸೇರಿಸುವುದರಿಂದ ಉಂಟಾಗುವ ಲಾಭಗಳನ್ನು ಇದರಿಂದ ತಿಳಿದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೊಜ್ಜು ಕರಗಿಸಲು ಸೂಪರ್ ಟಿಪ್ಸ್

1.ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ:
ಅರ್ಧ ಕಪ್ ಸ್ಟ್ರಾಬೆರಿ 51.5 ಎಮ್.ಜಿ ವಿಟಮಿನ್ ಸಿ ಯನ್ನು ಒಳಗೊಂಡಿದ್ದು ನಿಮ್ಮ ದೈನಂದಿನ ಆವಶ್ಯಕತೆಯನ್ನು ಪೂರೈಸುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಪ್ರಸಿದ್ಧವಾಗಿದ್ದು, ಶಕ್ತಿಯುತ, ವೇಗವಾಗಿ ಕಾರ್ಯನಿರ್ವಹಿಸುವ ಉತ್ಕರ್ಷಣ ನಿರೋಧಕವಾಗಿದೆ.
2.ಫೈಬರ್‌ನಿಂದ ಪೂರ್ಣಗೊಂಡಿದೆ:
ಒಂದು ಕಪ್ ಸ್ಟ್ರಾಬೆರಿ ಒಳಗೊಂಡಿದ್ದು ನಿಮ್ಮ ದೈನಂದಿನ ಜೀವನಕ್ಕೆ ಬೇಕಾದ 13% ಫೈಬರ್ ಸಮ್ಮಿಳಿತವಾಗಿದೆ. ನಿಯಮಿತವಾಗಿ ಜೀರ್ಣಕ್ರಿಯೆಯನ್ನು ವ್ಯವಸ್ಥಿತವಾಗಿಡುವಲ್ಲಿ ಸ್ಟ್ರಾಬೆರಿ ಸಹಕಾರಿಯಾಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಜವಬ್ದಾರಿಯನ್ನು ಸುಲಭವಾಗಿ ಸ್ಟ್ರಾಬೆರಿ ನಿರ್ವಹಿಸುತ್ತದೆ.
3. ಆರೋಗ್ಯಕರ ಕಣ್ಣುಗಳಿಗಾಗಿ:
ಕಣ್ಣಿಗೆ ಬರುವ ಪೊರೆಯನ್ನು ನಿವಾರಿಸುವಲ್ಲಿ ಸ್ಟ್ರಾಬೆರಿಯಲ್ಲಿನ ಉತ್ಕರ್ಷಣ ನಿರೋಧಕ ಅಂಶಗಳ ಕಾರ್ಯ ಶ್ಲಾಘನೀಯವಾದುದು. ಕಣ್ಣಿನ ಪೊರೆಯು ವೃದ್ಧಾಪ್ಯದಲ್ಲಿ ಉಂಟುಮಾಡುವ ಕುರುಡುತನ ನಿಮ್ಮಿಂದ ದೂರವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾರೆಟ್ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?
4.ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ:
ಸ್ಟ್ರಾಬೆರಿಯಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ವಿರೋಧಿ ಅಂಶಗಳ ಸಮ್ಮಿಶ್ರಣವು ಕ್ಯಾನ್ಸರ್‌ನ ವಿವಿಧ ಸ್ವರೂಪಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಸಿ, ಫೋಲೇಟ್ ಮತ್ತು ಫ್ಲೇವಿನೋಯ್ಡ್ಸ್ ಆದ ಕ್ಯುರೆಸಿಟೀನ್ ಮತ್ತು ಕೇಂಫರೋಲ್‌ಗೆ ಕ್ಯಾನ್ಸರ್ ಕೋಶಗಳನ್ನು ನಿರ್ಬಂಧಿಸುವ ಗುಣವಿದ್ದು ಅವುಗಳಿಗೆ ಧನ್ಯವಾದಗಳು.
5. ಸುಕ್ಕುಗಳನ್ನು ತಡೆಗಟ್ಟುತ್ತದೆ:
ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಸಿ ಶಕ್ತಿಯು, ಚರ್ಮದ ಸ್ಥಿತಿ ಸ್ಥಾಪಕತ್ವ ಮತ್ತು ಚೇತರಿಕೆ ಉಂಟುಮಾಡಲು ಸಹಕಾರಿಯಾದ ಕೊಲೆಗನ್‌ನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮಗೆ ವಯಸ್ಸಾದಂತೆ ಕೊಲೆಗನ್ ಮಟ್ಟ ಇಳಿಕೆಯಾಗಿ ಸುಕ್ಕುಗಳು ಮತ್ತು ಮುಪ್ಪಿನ ಗೆರೆಗಳನ್ನು ಗೋಚರಿಸುವಂತೆ ಮಾಡುತ್ತದೆ. ವಿಟಮಿನ್ ಸಿ ಅಧಿಕವಾಗಿರುವ ಸ್ಟ್ರಾಬೆರಿಯನ್ನು ತಿನ್ನುವುದರಿಂದ, ತ್ವಚೆಯ ಶುದ್ಧತೆಯನ್ನು ಸುಧಾರಿಸಿ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಬಹುದು.
6.ಉರಿಯೂತವನ್ನು ಇಳಿಕೆ ಮಾಡುತ್ತದೆ:
ಸ್ಟ್ರಾಬೆರಿಯಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಫೈಟೋಕೆಮಿಕಲ್ಸ್ ಹೃದಯ ಕಾಯಿಲೆ ಮತ್ತು ಸಂಧಿವಾತವನ್ನುಂಟು ಮಾಡುವ ಮೂಳೆಗಳ ಉರಿಯೂತವನ್ನು ಕಡಿಮೆಗೊಳಿಸಿ, ಆರಾಮ ನೀಡುತ್ತದೆ.
7. ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ:
ವಿಟಮಿನ್ - ಸಿ, ಫೈಟೋಕೆಮಿಕಲ್ಸ್, ಮತ್ತು ಅಯೋಡಿನ್ ಅಂಶವಿರುವ ಸ್ಟ್ರಾಬೆರಿಯು ವಯಸ್ಸಾಗುವಿಕೆಗೆ ಕಾರಣವಾದ ಮುಕ್ತ ಸ್ವರೂಪಗಳ ಪರಿಣಾಮವನ್ನು ತಟಸ್ಥಗೊಳಿಸಿ, ಮಿದುಳು ಮತ್ತು ನರಮಂಡಲದ ವ್ಯವಸ್ಥೆಯನ್ನು ಪುನರ್ಯೌವ್ವನಗೊಳಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು
8. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಸ್ಟ್ರಾಬೆರಿಯು 134 ಎಮ್‌ಜಿ ಪೊಟ್ಯಾಶಿಯಂ ಅನ್ನು ಒಳಗೊಂಡಿದ್ದು, ಹೃದಯ ಸ್ವಾಸ್ಥ್ಯ ಪೋಷಕಾಂಶವಾಗಿದೆ. ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಿ ಸೋಡಿಯಂನ ಋಣಾತ್ಮಕ ಪರಿಣಾಮಗಳ ಸಂಗ್ರಹದ ವಿರುದ್ಧ ಕಾರ್ಯನಿರ್ವಹಿಸಿ ಕಡಿಮೆ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ.
9. ತೂಕ ಇಳಿಕೆಯಲ್ಲಿ ಸಹಕಾರಿ:
ಸ್ಟ್ರಾಬೆರಿಗಳಲ್ಲಿ ಕ್ಯಾಲೋರಿಗಳು ನೈಸರ್ಗಿಕವಾಗಿ ಕಡಿಮೆ ಇದ್ದು, ಕೊಬ್ಬು ಮುಕ್ತ ಹಾಗೂ ಸೋಡಿಯಂ ಮತ್ತು ಸಕ್ಕರೆ ಕಡಿಮೆ ಪ್ರಮಾಣದಲ್ಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು
10. ಪ್ರಸವಪೂರ್ವ ಆರೋಗ್ಯಕ್ಕೆ ಸಹಕಾರಿ:
ಗರ್ಭಿಣಿ ಸ್ತ್ರೀಯರು ಅಥವಾ ಗರ್ಭಧರಿಸಲು ಪ್ರಯತ್ನಿಸುತ್ತಿರುವವರಿಗೆ ಸ್ಟ್ರಾಬೆರಿಯಲ್ಲಿನ ಬಿ ವಿಟಮಿನ್ ಸಹಕಾರಿ, ಮತ್ತು 21 ಎಮ್‌ಸಿಜಿ ಸ್ಟ್ರಾಬೆರಿ ಆರೋಗ್ಯಕ್ಕೆ ಒಳ್ಳೆಯದು! ಇದರಲ್ಲಿರುವ ಫೋಲಿಕ್ ಆಸಿಡ್ ಕೆಲವೊಂದು ಜನನ ದೋಷಗಳನ್ನು ತಡೆಗಟ್ಟುವಲ್ಲಿ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











