Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ತೂಕ ತಗ್ಗಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು
ನಿಮಗೆ ಜಿಮ್ಮಿಗೆ ಹೋಗಿ ವ್ಯಾಯಾಮ ಮಾಡಲು ನಿಮ್ಮ ಕೆಲಸದೊತ್ತಡದ ನಡುವೆ ಸಮಯವಿಲ್ಲದಿರಬಹುದು. ಆದರೆ ನಿಮ್ಮ ಹೊಟ್ಟೆ, ಕೆನ್ನೆ ಮತ್ತು ತೊಡೆಯ ಸುತ್ತ ಬೆಳೆದಿರುವ ಕೊಬ್ಬನ್ನು ತಗ್ಗಿಸಲು ನಿಮಗೆ ಬೇರೆ ದಾರಿಗಳಿವೆ. ಹೆಂಗಸರಿಗೆ ಈ ಮೂರು ಸ್ಥಳಗಳಲ್ಲಿ ಬೇಗ ಕೊಬ್ಬು ಶೇಖರಣೆಯಾಗುತ್ತದೆ. ಕೆಲಸಕ್ಕೆ ಹೋಗುವ ಹೆಂಗಸರಿಗಂತೂ ಜಿಮ್ಮಿನ ಯೋಚನೆ ಮಾಡುವುದು ಕೂಡ ಅಸಾಧ್ಯ. ಆದ್ದರಿಂದ ಅಡುಗೆಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ತೂಕ ತಗ್ಗಿಸಬಹುದು. ಶೀಘ್ರವಾಗಿ ಮತ್ತು ಹೆಚ್ಚು ಆರೋಗ್ಯಕರವಾಗಿ ಏನು ಮಾಡಬಹುದು ಎಂದು ನಾವು ಹೇಳುತ್ತೇವೆ.
ಇವು ಅಡುಗೆ ಮನೆಯಲ್ಲಿನ ಕೆಲವು ವಸ್ತುಗಳು ಇವುಗಳನ್ನು ಬಳಸಿ ವೇಗವಾಗಿ ತೂಕ ಕಳೆದುಕೊಳ್ಳಬಹುದು. ಇವು ನಿಮ್ಮ ದೇಹದ ಆಕಾರವನ್ನು ಉಳಿಸಿಕೊಳ್ಳಲು ಕೂಡ ನೆರವಾಗುತ್ತವೆ. ಪರಿಣಿತರ ಪ್ರಕಾರ ಈ ನೈಸರ್ಗಿಕ ವಸ್ತುಗಳು ನಿಮ್ಮ ತೂಕವನ್ನು ಕಳೆಯುವುದರೊಂದಿಗೆ ತೂಕ ಹೆಚ್ಚಿಸುವ ಆಹಾರಗಳಿಗೆ ನಿಮ್ಮ ದೇಹ ಸ್ಪಂದಿಸುವುದನ್ನು ಕೂಡ ತಡೆಯುತ್ತದೆ.
ತೂಕ ತಗ್ಗಿಸಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು

ಚಿಪ್ಸ್ ಗೆ ಬದಲಾಗಿ ಹಣ್ಣು ತಿನ್ನಿ
ನಿಮಗೆ ಹಸಿವಾದಾಗ ಹಣ್ಣು ತಿನ್ನುವುದು ಒಳ್ಳೆಯದು. ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುತ್ತದೆ. ಕಲ್ಲಂಗಡಿ ಮತ್ತು ದ್ರಾಕ್ಷಿಯಂತಹ ಹಣ್ಣುಗಳು ನಿಮ್ಮ ಹೊಟ್ಟೆಯನ್ನು ಸುಲಭವಾಗಿ ತುಂಬಿಸುತ್ತದೆ. ಇದು ತೂಕ ಕಳೆದುಕೊಳ್ಳಲು ಹೆಚ್ಚು ಸುರಕ್ಷಿತ ಹಾದಿ.

ಸಲಾಡ್
ಸಲಾಡ್ ಗಳನ್ನು ಮಾಡಿ ಏರ್ ಟೈಟ್ ಕನ್ಟೈನರ್ ಗಳಲ್ಲಿಡಿ. ನಿಮಗೆ ಹಸಿವಾದಾಗ ಬೇರೆನನ್ನೋ ತಿನ್ನುವ ಬದಲು ಇವುಗಳನ್ನು ತಿನ್ನಿ.

ಅಳತೆ ಚಮಚ
ನೀವು ತೂಕ ತಗ್ಗಿಸಲು ನಿರ್ಧರಿಸಿದ್ದಲ್ಲಿ ನಿರ್ಧಿಷ್ಟ ಅಳತೆಯ ಚಮಚಗಳನ್ನು ಬಳಸಿ. ಈ ಚಮಚಗಳು ನಿಮಗೆ ಕಡಿಮೆ ತಿನ್ನಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಸ್ನಾಕ್ ಪ್ಯಾಕ್ಸ್
ನೀವು ಮನೆಯಲ್ಲಿದ್ದಾಗ ಹೆಚ್ಚು ಆರೋಗ್ಯಕರವಾದ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ಒಣಹಣ್ಣುಗಳು ಮತ್ತು ಡಾರ್ಕ್ ಚಾಕೋಲೆಟ್ ಗಳು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಚಿಕ್ಕ ತಟ್ಟೆಗಳು
ಮನೆಯಲ್ಲಿನ ದೊಡ್ಡ ತಟ್ಟೆಗಳಿಗೆ ಬದಲಾಗಿ ಸಣ್ಣ ತಟ್ಟೆಗಳನ್ನು ಬಳಸಿ. ಸಣ್ಣ ತಟ್ಟೆ ಎಂದರೆ ಕಡಿಮೆ ಪ್ರಮಾಣದ ಆಹಾರವನ್ನು ನೀವು ಸೇವಿಸುವಿರಿ.

ಜಂಕ್ ಫುಡ್ ತಿನ್ನಬೇಡಿ
ಜಂಕ್ ಫುಡ್ ನಿಂದ ದೂರವಿರುವುದರಿಂದ ಹೆಚ್ಚಿನ ಕ್ಯಾಲೊರಿಗಳು ನಿಮ್ಮ ದೇಹ ಸೇರುವುದು ತಪ್ಪುತ್ತದೆ. ನಿಮ್ಮ ಮನೆಯಲ್ಲಿ ಜಂಕ್ ಫುಡ್ ಗೆ ಬದಲಾಗಿ ಆರೋಗ್ಯಕರ ಆಹಾರಕ್ಕೆ ಹೆಚ್ಚಿನ ಸ್ಥಳ ನೀಡಿ. ಇದು ನೀವು ತೂಕ ತಗ್ಗಿಸಲು ನೆರವಾಗುತ್ತದೆ.

ಫ್ರೀಜರ್ ಬಳಸಿ
ಆರೋಗ್ಯಕರ ಆಹಾರವನ್ನು ಫ್ರೀಜರ್ ನಲ್ಲಿಡಿ. ಇದು ಆರೋಗ್ಯಕರ ಜೀವನ ಶೈಲಿಗೆ ಅತ್ಯಗತ್ಯ.

ಆರೋಗ್ಯಕರ ಆಹಾರವನ್ನು ಮೂರುಪಟ್ಟು ಹೆಚ್ಚಿಸಿ
ನೀವು ಹೆಲ್ತ್ ಡಯೆಟ್ ಪಾಲಿಸುತ್ತಿದ್ದಲ್ಲಿ ಇದನ್ನು ಮೂರು ಪಟ್ಟು ಹೆಚ್ಚಿಸಿ. ಇದನ್ನು ಅನುಸರಿಸುವುದರಿಂದ ಹೆಚ್ಚು ಆರೋಗ್ಯಕರ ರೀತಿಯಲ್ಲಿ ತೂಕ ತಗ್ಗಿಸಿ ನಿಶ್ಚಿಂತರಾಗಬಹುದು.

ತೂಕ ಹೆಚ್ಚಿಸುವ ಆಹಾರಗಳಿಂದ ದೂರವಿರಿ
ನೀವು ಮನೆಯಲ್ಲಿ ಒಬ್ಬರೇ ಇದ್ದರೆ ಇದನ್ನು ಮಾಡುವುದು ಸುಲಭ. ಆದರೆ ಕುಟುಂಬದೊಂದಿಗೆ ಇದ್ದಲ್ಲಿ ಹೆಚ್ಚು ಕ್ಯಾಲೊರಿಗಳು ಮತ್ತು ಕೊಬ್ಬಿನಂಶವಿರುವ ಆಹಾರದಿಂದ ದೂರವುಳಿಯುವುದು ಕಷ್ಟ.

ಅಳತೆಗೊಂದು ಸ್ಕೇಲ್
ನೀವು ತಿನ್ನುವ ಆಹಾರದ ಪ್ರಮಾಣವನ್ನು ಅಳೆಯುವುದು ಒಳ್ಳೆಯ ಅಭ್ಯಾಸ. ಇದರಿಂದ ಆಹಾರದಲ್ಲಿ ನಿಯಂತ್ರಣ ಸಾಧಿಸಬಹುದು.



Click it and Unblock the Notifications