Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಟರ್ಕಿಯ ಆರೋಗ್ಯಕಾರಿ ಪ್ರಯೋಜನಗಳು
ಅಮೆರಿಕಾದ ಸುಗ್ಗಿಯ ಹಬ್ಬವು ಈ ರಸಭರಿತ ಮಾಂಸವಿಲ್ಲದೆ ಅಪೂರ್ಣ. ಥ್ಯಾಂಕ್ಸ್ ಗೀವಿಂಗ್ ದಿನದ ಹಬ್ಬದೂಟದಲ್ಲಿ ಇದೇ ಪ್ರಮುಖ ಸಾಮಗ್ರಿ. ನವೆಂಬರ್ ತಿಂಗಳಿನಲ್ಲಿ ಅಮೆರಿಕಾದಲ್ಲಿ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.
ಟರ್ಕಿಯಲ್ಲಿ ಹಲವು ಆರೋಗ್ಯಕಾರಿ ಗುಣಗಳು ಮತ್ತು ಪೌಷ್ಟಿಕಾಂಶಗಳಿವೆ. ಬನ್ನಿ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಟರ್ಕಿ ಕ್ಯಾನ್ಸರ್ ತಡೆಗಟ್ಟಬಲ್ಲ ಆಹಾರಗಳಲ್ಲಿ ಒಂದು. ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ ಗಳಿರುತ್ತವೆ. ಇದರಲ್ಲಿನ ಖನಿಜಾಂಶ ಸೆಲೆನಿಯಂ ಥೈರಾಯ್ಡ್ ಗ್ರಂಥಿ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದರಲ್ಲಿನ ಕೊಬ್ಬು ದೇಹಕ್ಕೆ ಒಳ್ಳೆಯದು.
ಟರ್ಕಿಯಲ್ಲಿ ಪ್ರೊಟಿನ್ ಹೆಚ್ಚಿರುತ್ತದೆ. ಇದು ಅಮಿನೊ ಆಸಿಡ್ ಗಳ ಮೂಲವಾಗಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ3 ಮತ್ತು ಬಿ6 ಇರುತ್ತದೆ. ಈ ಬಿ ಕಾಂಪ್ಲೆಕ್ಸ್ ವಿಟಮಿನ್ ಗಳು ಇದನ್ನು ವಿಶೇಷವಾಗಿಸಿದೆ.
ಟರ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಪ್ರೊಟಿನ್ ಹೆಚ್ಚಿರುತ್ತದೆ
ಇದರಲ್ಲಿ ಪ್ರೊಟಿನ್ ಮತ್ತು ಅಮಿನೊ ಆಸಿಡ್ ಗಳು ಹೆಚ್ಚಿರುತ್ತದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಸುಸ್ಥಿಯಲ್ಲಿಡಲು ಸಹಕಾರಿ. ಇದರೊಂದಿಗೆ ದಿನವೊಂದಕ್ಕೆ ನಮಗೆ ಅಗತ್ಯವಾದ ಪ್ರೊಟಿನ್ ಗಳನ್ನು ದೇಹಕ್ಕೆ ಒದಗಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ
ಇದರಲ್ಲಿ ಖನಿಜಾಂಶಗಳು ಹೆಚ್ಚಿದ್ದು ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ.

ಸ್ಯಾಚುರೆಟೆಡ್ ಕೊಬ್ಬು
ಇದರಲ್ಲಿನ ಕೊಬ್ಬು ಆರೋಗ್ಯಕ್ಕೆ ಒಳ್ಳೆಯದು. ಆದರೂ ಇದನ್ನು ಹೆಚ್ಚಾಗಿ ತಿನ್ನಬೇಡಿ. ಚರ್ಮದಲ್ಲಿ ಹೆಚ್ಚಿನ ಕೊಬ್ಬಿನಂಶವಿರುತ್ತದೆಯಾದ್ದರಿಂದ ಚರ್ಮ ಬಿಡಿಸಿ ತಿನ್ನುವುದು ಒಳ್ಳೆಯದು.

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ
ಇದರಲ್ಲಿ ವಿಟಮಿನ್ ಬಿ3 ಮತ್ತು ಬಿ6 ಇರುತ್ತದೆ. ಈ ಬಿ ಕಾಂಪ್ಲೆಕ್ಸ್ ವಿಟಮಿನ್ ಗಳು ಮತ್ತು ಅಮಿನೊ ಆಸಿಡ್ ಗಳು ರೋಗ ನಿರೋಧಕ ವ್ಯವಸ್ಥೆಯನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ
ಟರ್ಕಿಯನ್ನು ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.

ಮಧುಮೇಹಕ್ಕೆ ಒಳ್ಳೆಯದು
ಇದು ಮಧುಮೇಹಕ್ಕೆ ಒಳ್ಳೆಯದು. ಇದರಲ್ಲಿ ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಇದ್ದು ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.



Click it and Unblock the Notifications
