30ರ ಬಳಿಕ ಕೊಲೆಸ್ಟ್ರಾಲ್ ತಗ್ಗಿಸಲು ಸರಳ ವಿಧಾನಗಳು

By Hemanth P

ದೇಹದ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ಕೊಬ್ಬಿನಾಂಶವೇ ಕೊಲೆಸ್ಟ್ರಾಲ್. ಇದು ಹಾರ್ಮೋನ್ ನ ಉತ್ಪಾದನೆ ಮತ್ತು ಅಂಗಗಳ ಚಟುವಟಿಕೆಗೆ ಕಾರಣವಾಗಿದೆ. ಇದರಿಂದ ದೇಹದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಕೊಲೆಸ್ಟ್ರಾಲ್ ಬೇಕಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ 30 ಹರೆಯದ ಬಳಿಕ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ಈ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರಿಂದ ಹೃದಯಾಘಾತ, ಲಘು ಅಥವಾ ದೊಡ್ಡ ಪ್ರಮಾಣದ ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಇದರಿಂದಾಗಿ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಗತ್ಯವಾಗಿದೆ.

30ರ ಹರೆಯದ ಬಳಿಕ ವ್ಯಾಯಾಮ ಕಡಿಮೆಯಾಗಿ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಅಸಮತೋಲನದ ಜೀವನಶೈಲಿ, ಸಂಸ್ಕರಿತ ಕೊಬ್ಬಿನ ಸೇವನೆ, ಬೊಜ್ಜು ಮತ್ತು ಅನುವಂಶೀಯತೆ 30ರ ಬಳಿಕ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕೆಲವು ಕಾರಣಗಳಾಗಿವೆ. ಅತಿಯಾಗಿ ಧೂಮಪಾನ ಮಾಡುವುದು ಕೂಡ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಒಂದು ಕಾರಣವಾಗಿದೆ.

Easy ways to lower cholesterol after 30

30 ಬಳಿಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಿಸಲು ಕೆಲವೊಂದು ಮಹತ್ವದ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಈಗಲೇ ಹೆಚ್ಚಾಗಿದ್ದರೆ ನೀವು ಇದನ್ನು ನಿಯಂತ್ರಿಸಿ ಕಡಿಮೆ ಮಾಡಿಕೊಳ್ಳಬೇಕು. 30ರ ಬಳಿಕ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿಕೊಂಡು ನಿಯಂತ್ರಣದಲ್ಲಿ ಇಡಲು ಕೆಲವೊಂದು ಟಿಪ್ಸ್ ಮತ್ತು ಸುಲಭ ವಿಧಾನಗಳು ಇಲ್ಲಿದೆ.

1. ನೈಸರ್ಗಿಕ ಜ್ಯೂಸ್ ಗಳು
ಹಣ್ಣುಗಳ ಜ್ಯೂಸ್ ಗಳಾದ ಕಿತ್ತಳೆ ಮತ್ತು ಕ್ರ್ಯಾನ್ಬೆರಿಯಲ್ಲಿ ಎಲ್ ಡಿಎಲ್ ನ್ನು ಕಡಿಮೆಗೊಳಿಸುವ ಆಕ್ಸಿಡೆಂಟ್ ಗಳು, ಆಂತೋಸಿಯಾನ್ಸಿಸ್ ಮತ್ತು ಪ್ಲವೊನೈಡ್ ಗಳಿವೆ. ಈ ಪೌಷ್ಠಿಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಪ್ರತೀ ದಿನ ಒಂದು ಲೋಟ ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ಶೇ.5-7ರಷ್ಟು ಕಡಿಮೆಯಾಗುತ್ತದೆ. 30ರ ಹರೆಯದ ಬಳಿಕ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ಇದು ಒಳ್ಳೆಯ ವಿಧಾನ.

2. ಸಣ್ಣ ಪ್ರಮಾಣದ ಊಟ ಮಾಡಿ
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಮಯದ ಅಂತರದ ಅನುಗುಣವಾಗಿ ಸಣ್ಣ ಪ್ರಮಾಣದ ಊಟ ಮಾಡಬೇಕು. ಇದರಿಂದ ದೇಹದಲ್ಲಿ ಎಲ್ ಡಿಎಲ್ ಮಟ್ಟವನ್ನು ನಿರ್ವಹಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡಲು ನೆರವಾಗುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಕಡಿಮೆ ಕೊಬ್ಬು ಇರುವ ಆಹಾರಗಳನ್ನು ಸೇರಿಸಿಕೊಳ್ಳಿ. ಸಂಸ್ಕರಿತ ಕೊಬ್ಬು ಇರುವ ಆಹಾರಗಳನ್ನು ನೀವು ಕಡೆಗಣಿಸಬೇಕು.

3. ಕಡಿಮೆ ಕೊಲೆಸ್ಟ್ರಾಲ್ ಇರುವ ಧಾನ್ಯಗಳು
30ರ ಹರೆಯದ ಬಳಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಧಾನ್ಯದ ಆಹಾರ ತಿನ್ನಿ, ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನು ಕಡೆಗಣಿಸಿ. ನೀವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಮತ್ತು ನಿಮ್ಮ ಆಹಾರದಲ್ಲಿ ಕಾರ್ಬ್ ಪ್ರಮಾಣ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಬಹುದು. ಕಂದು ಬ್ರೆಡ್, ಕಂದು ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

4. ಆರೋಗ್ಯಕರ ಎಣ್ಣೆ
ಆಲಿವ್ ತೈಲ, ಅಕ್ಕಿ ತವುಡು ತೈಲ ಮತ್ತು ಸೋಯಾ ತೈಲದಂತಹ ಕೆಲವೊಂದು ಎಣ್ಣೆಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. 30ರ ಹರೆಯದ ಬಳಿಕ ನಿಮಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವ ಎಣ್ಣೆಗಳನ್ನು ಬಳಸಿ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸುಲಭ ವಿಧಾನ. ಕೊಲೆಸ್ಟ್ರಾಲ್ ಇರುವ ಎಣ್ಣೆಗಳನ್ನು ಆಯ್ಕೆ ಮಾಡುವಾಗ ಅದನ್ನು ಇತರ ಎಣ್ಣೆಗಳೊಂದಿಗೆ ಹೋಲಿಸಿ ನೋಡಿ.

5. ಆರೋಗ್ಯಕರ ಓಟ್ಸ್
ಓಟ್ಸ್ ನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 10ರಿಂದ 12ರಷ್ಟು ಕಡಿಮೆ ಮಾಡಬಹುದು ಎಂದು ಸಾಬೀತಾಗಿದೆ. ಓಟ್ ಮೀಲ್ ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಉನ್ನತ ಮಟ್ಟದ ಶಕ್ತಿ ಇರುವ ಕಾರಣ ಇದು ಅತ್ಯುತ್ತಮ ಉಪಹಾರವೆಂದು ಪರಿಗಣಿಸಲಾಗಿದೆ. 30ರ ಬಳಿಕ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಪ್ರತೀ ದಿನ ಉಪಹಾರಕ್ಕೆ ಓಟ್ ಮೀಲ್ ಸೇವಿಸುವುದು ತುಂಬಾ ಸರಳ ವಿಧಾನ

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಮತ್ತೊಂದು ಸುಲಭ ವಿಧಾನವೆಂದರೆ ನಿಯಮಿತವಾಗಿ ಕಪ್ಪು ಚಹಾ ಕುಡಿಯುವುದು. ಕಪ್ಪು ಚಹಾದಲ್ಲಿರುವ ಫ್ಲಾವೊನಾಯಿಡ್ ಗಳು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಗುಣ ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿರುವವರು ಪ್ರತೀ ದಿನ ರಾತ್ರಿ ವೈನ್ ಸೇವಿಸಿದರೆ ತುಂಬಾ ಒಳ್ಳೆಯದು.

ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲು ಕೆಲವೊಂದು ವಿಧಾನಗಳು. ಆರೋಗ್ಯಕರ ಜೀವನಶೈಲಿ, ಕೊಬ್ಬು ಕಡಿಮೆ ಇರುವ ಆಹಾರಕ್ರಮ, ಸಂಸ್ಕರಿತ ಕೊಬ್ಬು ಇಲ್ಲದ ಆಹಾರ ಮತ್ತು ನಿಯಮಿತ ವ್ಯಾಯಾಮವು ಕೊಲೆಸ್ಟ್ರಾಲ್ ಹೆಚ್ಚದಂತೆ ಮಾಡುತ್ತದೆ. 30ರ ಹರೆಯದ ಬಳಿಕ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಇದು ಕೆಲವೊಂದು ವಿಧಾನಗಳು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Friday, December 20, 2013, 22:02 [IST]
X
Desktop Bottom Promotion