Latest Updates
-
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ಬೀಟ್ ರೂಟಿನ ಆರೋಗ್ಯಕಾರಿ ಪ್ರಯೋಜನಗಳು
ಇದು ಬೀಟ್ ರೂಟಿನ ಕಾಲ. ಸಾಮಾನ್ಯವಾಗಿ ಈ ತರಕಾರಿಯನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಇದರಲ್ಲಿ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ. ಇದು ರಕ್ತಕಣಗಳನ್ನು ಹೆಚ್ಚಿಸುವುದರಿಂದ ಹಿಡಿದು ಚರ್ಮದ ಆರೈಕೆಯವರೆಗೆ ಹಲವು ರೀತಿಯಲ್ಲಿ ಪರಿಣಾಮಕಾರಿ.
ನಾವಿಲ್ಲಿ ಬೀಟ್ ರೂಟಿನ ಆರೋಗ್ಯಕಾರಿ ಪ್ರಯೋಜನಗಳನ್ನು ಕೊಟ್ಟಿದ್ದೇವೆ. ಇದನ್ನು ನಿಮ್ಮ ಡಯೆಟ್ ನ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಇದರಲ್ಲಿ ಕಬ್ಬಿಣದಂಶ ಹೆಚ್ಚಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಬೀಟ್ ರೂಟಿನಲ್ಲಿಕೊಬ್ಬಿನಂಶವಿಲ್ಲ ಆದ್ದರಿಂದ ಇದು ಡಯೆಟ್ ಮಾಡುವವರಿಗೆ ಉತ್ತಮ ಮತ್ತು ಮಧುಮೇಹಿಗಳಿಗೆ ಕೂಡ ಉತ್ತಮ. ಸಕ್ಕರೆಗಾಗಿ ಹಪಹಪಿಸುವ ಮಧುಮೇಹಿಗಳ ಬಾಯಿ ರುಚಿಯನ್ನು ಇದು ತಣಿಸುತ್ತದೆ.
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಬೀಟ್ ರೂಟ್ ಉತ್ತಮವಾದ ಔಷಧ. ಬೀಟ್ ರೂಟ್ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಲ್ಲಿ ಫೋಲಿಕ್ ಆಸಿಡ್ ಇದ್ದು ಇದು ಹೊಸ ರಕ್ತಕಣಗಳ ಉತ್ಪಾದನೆಗೆ ನೆರವು ನೀಡುತ್ತದೆ. ಬೀಟ್ ರೂಟ್ ತಿನ್ನುವುದರಿಂದ ಹೃದಯಸಂಬಂಧಿ ಖಾಯಿಲೆಗಳಾದ ಶ್ವಾಸ ನಾಳಗಳಲ್ಲಿ ತಡೆಯುಂಟಾಗುವಿಕೆ ಮತ್ತು ಹೃದಯಾಘಾತವನ್ನು ತಡೆಗಟ್ಟಬಹುದು. ಬೀಟ್ ರೂಟ್ ರಕ್ತವನ್ನು ಗಟ್ಟಿಗೊಳಿಸುವುದಿಲ್ಲ ಮತ್ತು ಇದು ರಕ್ತನಾಳಗಳನ್ನು ಶುದ್ಧೀಕರಿಸುತ್ತದೆ. ಇದರಿಂದ ರಕ್ತಪರಿಚಲನೆ ಸರಾಗವಾಗಿ ಹೃದಯ ಆರೋಗ್ಯಕರವಾಗಿರುತ್ತದೆ.
ಬೀಟ್ ರೂಟಿನ ಆರೋಗ್ಯಕಾರಿ ಪ್ರಯೋಜನಗಳು

ರಕ್ತಹೀನತೆ
ಇದರಲ್ಲಿ ಫೊಲಿಕ್ ಆಸಿಡ್ ಮತ್ತು ಕಬ್ಬಿಣದಂಶ ಹೆಚ್ಚಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ಬೀಟ್ ರೂಟ್ ಜ್ಯೂಸ್ ಹಿಮೊಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಗಾಯಗೊಂಡು ಗುಣಮುಖರಾಗುತ್ತಿರುವವರು ಮತ್ತು ಗರ್ಭಿಣಿಯರು ಇದನ್ನು ತಿನ್ನುವುದು ಒಳ್ಳೆಯದು.

ರಕ್ತಕಣಗಳನ್ನು ಹೆಚ್ಚಿಸುತ್ತದೆ
ಬೀಟ್ ರೂಟ್ ಮಹಿಳೆಯರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಕಬ್ಬಿಣದಂಶ, ಫೊಲಿಕ್ ಆಸಿಡ್ ಮತ್ತಿತರ ಅಗತ್ಯ ವಿಟಮಿನ್ ಗಳು ಹೆಚ್ಚಿದೆ. ಇವು ಮಹಿಳೆಯರಿಗೆ ಅತ್ಯಗತ್ಯವಾದವು. ಮುಟ್ಟಿನ ಸಂದರ್ಭದಲ್ಲಿ ಬೀಟ್ ರೂಟ್ ಜ್ಯೂಸ್ ಕುಡಿಯುವುದು ಬಹಳ ಒಳ್ಳೆಯದು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಹೃದಯ ಸಂಬಂಧಿ ಖಾಯಿಲೆಗಳನ್ನು ದೂರವಿಡುವುದರೊಂದಿಗೆ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.

ನೈಸರ್ಗಿಕ ಕಾಮೋತ್ತೇಜಕ
ರೋಮನ್ನರು ಶತಮಾನಗಳಿಂದಲೂ ಇದನ್ನು ಕಾಮೋತ್ತೇಜಕವಾಗಿ ಬಳಸುತ್ತಿದ್ದಾರೆ. ಇದರಲ್ಲಿ ಬೊರೊನ್ ಇದ್ದು ಇದು ಲೈಂಗಿಕ ಹಾರ್ಮೊನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ದೇಹವನ್ನು ಶುದ್ಧಿಕರಿಸುತ್ತದೆ
ಬೀಟ್ ರೂಟಿನ ಆರೋಗ್ಯಕಾರಿ ಪ್ರಯೋಜನಗಳಲ್ಲಿ ಒಂದೆಂದರೆ ಇದು ಯಕೃತ್ತು, ಕರುಳು ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.

ಮಲಬದ್ಧತೆ
ಒಂದು ಲೋಟ ಬೀಟ್ ರೂಟ್ ಜ್ಯೂಸನ್ನು ದಿನವೂ ಕುಡಿಯುವುದರಿಂದ ಮಲಬದ್ಧತೆ ಮತ್ತು ಚಯಾಪಚಯಗಳ ತೊಂದರೆಯಿಂದ ಹೊರಬರಬಹುದು.

ಚರ್ಮದ ಕಲೆಗಳು
ನಿಮ್ಮ ಚರ್ಮದ ಮೇಲೆ ಕೆಂಪು ಅಥವ ಕಪ್ಪು ಕಲೆಗಳಿದ್ದರೆ ಬೀಟ್ ರೂಟನ್ನು ತಿನ್ನಿ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಸಹಜವಾಗಿ ಚರ್ಮದ ಹೊಳಪನ್ನು ಗಳಿಸಿಕೊಳ್ಳಲು ನೆರವಾಗುತ್ತದೆ.



Click it and Unblock the Notifications