Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಫಿಗರ್ ಕಾಪಾಡುವ 7 ಅಡುಗೆ ಎಣ್ಣೆಗಳು
ಹೆಚ್ಚಿನವರು ಎಣ್ಣೆಯಂಶ ತಿಂದರೆ ದಪ್ಪಗಾಗುತ್ತಾರೆ ಎಂದು ಎಣ್ಣೆಯನ್ನು ಹಾಕದೇ ಪದಾರ್ಥಗಳನ್ನು ತಯಾರಿಸುತ್ತಾರೆ. ಆದರೆ ಸ್ವಲ್ಪ ಎಣ್ಣೆಯಂಶ ದೇಹಕ್ಕೆ ಸೇರುವುದು ಒಳ್ಳೆಯದು. ಆದ್ದರಿಂದ ಅಡುಗೆಯಲ್ಲಿ ಎಣ್ಣೆ ಹಾಕದೇ ಟೇಸ್ಟ್ ಲೆಸ್ ಆಹಾರ ತಿನ್ನುವ ಬದಲು ಎಣ್ಣೆ ಹಾಕಿ ರುಚಿಯಾದ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಆದರೆ ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕು.
ಅಡುಗೆಗೆ ಬೆಲೆ ಕಮ್ಮಿಯೆಂದು ಕಡಿಮೆ ಗುಣಮಟ್ಟದ ಎಣ್ಣೆಯನ್ನು ಬಳಸುವ ಬದಲು, ಸ್ವಲ್ಪ ಬೆಲೆ ಅಧಿಕ ಕೊಟ್ಟರೂ ಪರ್ವಾಗಿಲ್ಲ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಗುಣಮಟ್ಟದ ಎಣ್ಣೆಯನ್ನು ಬಳಸಬೇಕು. ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಅನೇಕ ಬಗೆಯ ತಿನಿಸುಗಳನ್ನು ಮಾಡಲಾಗುವುದು. ಈ ರೀತಿಯ ತಿಂಡಿ- ತಿನಿಸುಗಳನ್ನು ಮಾಡುವಾಗ ಈ ಕೆಳಗಿನ ಎಣ್ಣೆಗಳನ್ನು ಬಳಸಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ಇಲ್ಲಿ ನಾವು ಯಾವ ಎಣ್ಣೆಯನ್ನು ಯಾವ ರೀತಿಯ ಪದಾರ್ಥಗಳಿಗೆ ಬಳಸಬಹುದು ಹೇಳಲಾಗಿದೆ ನೋಡಿ:

ಸಾಸಿವೆ:
ಸಲಾಡ್ ಗಳನ್ನು ತಯಾರಿಸುವುದಾದರೆ ಸಾಸಿವೆಯೆಣ್ಣೆಯನ್ನು ಬಳಸಿ. ಇದರಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ದೇಹದ ತೂಕ ಹೆಚ್ಚಿಸುವುದಿಲ್ಲ.

ಆಲೀವ್ :
ಆಲೀವ್ ಎಣ್ಣೆಯನ್ನು ಸಲಾಡ್ ಗೆ, ಆಹಾರ ಪದಾರ್ಥಗಳನ್ನು ಫ್ರೈ ಮಾಡಲು ಬಳಸಬಹುದು. ದೇಹದ ತೂಕವನ್ನು ಕಡಿಮೆ ಮಾಡಬಯಸುವವರು ಆಲೀವ್ ಎಣ್ಣೆಯನ್ನು ಬಳಸುವುದು ಒಳ್ಳೆಯದು.

ಸನ್ ಫ್ಲವರ್:
ಸೂರ್ಯಕಾಂತಿಯೆಣ್ಣೆ ಅಥವಾ ಸನ್ ಫ್ಲವರ್ ಎಣ್ಣೆಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಎಲ್ಲಾ ರೀತಿಯ ಪದಾರ್ಥಗಳನ್ನು ತಯಾರಿಸಲು ಬಳಸಬಹುದು.

ಕಡಲೆ:
ಕಡಲೆಯೆಣ್ಣೆಯನ್ನು ಅಡುಗೆಗೆ ಬಳಸಬಹುದು ಆದರೆ ಸನ್ ಫ್ಲವರ್ ಎಣ್ಣೆ ಹಾಕಿ ಮಾಡಿದಷ್ಟು ಅಡುಗೆ ರುಚಿಕರವಾಗಿರುವುದಿಲ್ಲ.

ಅಗಸದ ಬೀಜ(flaxseed):
ಈ ಎಣ್ಣೆಯನ್ನು ಹೆಚ್ಚು ಬಿಸಿ ಮಾಡಿದರೆ ಅದರ ರುಚಿ ಕೆಡುತ್ತದೆ. ಆದ್ದರಿಂದ ಸಲಾಡ್ ನಲ್ಲಿ ಬಳಸಿ. ಇದರಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸೋಯಾ ಬೀನ್:
ಈ ಎಣ್ಣೆಯನ್ನು ಗೋಬಿ ಮಂಚೂರಿಯಂತಹ ಪದಾರ್ಥಗಳನ್ನು ಮಾಡಲು ಬಳಸಬಹುದು. ಈ ಎಣ್ಣೆ ಬಳಸುವುದರಿಂದ ದೇಹದ ತೂಕ ಹೆಚ್ಚಾಗಬಹುದು ಎಂಬ ಭಯವಿಲ್ಲದೆ ರುಚಿಕರವಾದ ಅಡುಗೆಗಳನ್ನು ತಿನ್ನಬಹುದಾಗಿದೆ.

ರೈಸ್ ಬ್ರಾನ್ :
ಇದನ್ನು ಇತ್ತೀಚಿಗೆ ಭಾರತದಲ್ಲಿ ಬಳಸಲಾಗುತ್ತಿದೆ. ಈ ಎಣ್ಣೆ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಲ್ಲಿ ತುಂಬಾ ಸಹಕಾರಿಯಾಗಿದೆ.



Click it and Unblock the Notifications
