Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೂಲವ್ಯಾಧಿಗೆ ತೆಂಗಿನಕಾಯಿಯಲ್ಲಿದೆ ಪರಿಹಾರ.! ಮನೆಮದ್ದು ಏನು ಗೊತ್ತಾ?
ಜನರು ವೈದ್ಯರ ಬಳಿಯೂ ತೆರಳಲಾಗದೆ ಎದುರಿಸುವ ಸಮಸ್ಯೆಯಲ್ಲಿ ಮೂಲವ್ಯಾಧಿಯೂ ಒಂದಾಗಿದೆ. ಅದೆಷ್ಟೋ ಜನ ಮುಜುಗರದಿಂದಲೇ ಈ ಕಾಯಿಲೆ ಇದ್ದರೂ ಹೇಳಿಕೊಳ್ಳದೆ ಇರುತ್ತಾರೆ. ಇಲ್ಲವೆ ಮೆಡಿಕಲ್‌ನಲ್ಲಿ ಸಿಗುವ ಔಷಧಿ ತೆಗೆದುಕೊಳ್ಳಲು ಮುಂದಾಗಿ ಅಪಾಯ ತಂದುಕೊಳ್ಳುತ್ತಾರೆ.
ಇನ್ನು ಕೆಲವರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರೂ ಆತ್ಮಸ್ಥೈರ್ಯ ಕಳೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿಗೆ ಸೂಕ್ತ ಚಿಕಿತ್ಸೆ ಇದ್ದು ಬಹುಬೇಗ ಇದರಿಂದ ಹೊರಬರಬಹುದಾಗಿದೆ. ಇದಲ್ಲದೆ ಮನೆಯಲ್ಲಿಯೂ ನೀವು ಮೂಲವ್ಯಾಧಿಗೆ ಚಿಕಿತ್ಸೆ ಕಂಡುಕೊಳ್ಳಬಹುದು.
ಹಾಗಾದರೆ ಇಂದು ಮೂಲವ್ಯಾಧಿಗೆ ಮನೆಯಲ್ಲಿಯೇ ಯಾವ ರೀತಿ ಚಿಕಿತ್ಸೆ ಪಡೆಯಬಹುದು. ಹಾಗೂ ಹೇಗೆ ಈ ಕಾಯಿಲೆಯಿಂದ ಪಾರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಮೂಲವ್ಯಾಧಿ ಎಂದರೆ ಗುದನಾಳದ ಅಭಿಧಮನಿಗಳು ದಪ್ಪವಾಗಿ ಹೊಸೆದ ಹಗ್ಗದಂತೆ ಉಡಿತುಕೊಂಡಿರುವ ಸ್ಥಿತಿ (ಪೈಲ್ಸ್; ಹಿಮೊರಾಯ್ಡ್ಸ್). ಗುದನಾಳದ ಕೆಳಭಾಗದ ಲೋಳೆಪೊರೆಯ ಅಡಿಯಲ್ಲಿರುವ ಅಭಿಧಮನಿಗಳಿಗೆ ಅನೇಕ ಸಂದರ್ಭಗಳಲ್ಲಿ ಮಲದ್ವಾರದ ಚರ್ಮದ ಅಡಿಯಲ್ಲಿರುವ ಅಭಿಧಮನಿಗಳೊಡನೆ ಸಂಪರ್ಕವಿರುತ್ತದೆ.
ಪೈಲ್ಸ್ ಚಿಕಿತ್ಸೆಗೆ ಮನೆಮದ್ದು ಏನು?
ಇಂದಿನ ಯುಗದಲ್ಲಿ ಪೈಲ್ಸ್ ಸಮಸ್ಯೆ ದೊಡ್ಡವರಷ್ಟೇ ಅಲ್ಲದೆ ಮಕ್ಕಳನ್ನೂ ಕಾಡುತ್ತಿದೆ. ಪೈಲ್ಸ್‌ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಗಂಭೀರ ಕಾಯಿಲೆಯಾಗಿ ಪರಿಣಮಿಸಬಹುದು. ಪೈಲ್ಸ್ ಬಗೆಗಳು ಮತ್ತು ಮನೆಮದ್ದುಗಳನ್ನು ತಿಳಿಯೋಣ.
ಪೈಲ್ಸ್ ವಿಧಗಳು
ಪೈಲ್ಸ್ ನಲ್ಲಿ ಎರಡು ವಿಧ. ಒಂದು ಬ್ಲಡಿ ಪೈಲ್ಸ್ ಮತ್ತು ಇನ್ನೊಂದು ಬ್ಲಡಿ ಪೈಲ್ಸ್, ಹೊರ ಮೈ ಪೈಲ್ಸ್ ಎಂದು ಕರೆಯಲಾಗಿದೆ. ರಕ್ತ ಪೈಲ್ಸ್‌ನಿಂದ ಬಳಲುತ್ತಿರುವ ವ್ಯಕ್ತಿಯು ಗುದದ್ವಾರದಲ್ಲಿ ನೋವು, ರಕ್ತಸ್ರಾವ, ಗುದದ್ವಾರದಲ್ಲಿ ತುರಿಕೆ, ಊತ ಇತ್ಯಾದಿಗಳನ್ನು ಅನುಭವಿಸುತ್ತಾನೆ.
ಪೈಲ್ಸ್‌ಗೆ ಮನೆಮದ್ದು
ಬಿಸಿನೀರಿನಲ್ಲಿ ಕುಳಿತುಕೊಳ್ಳುವುದು
ಪೈಲ್ಸ್‌ನಿಂದ ಬಳಲುತ್ತಿರುವ ವ್ಯಕ್ತಿಯು ಬಿಸಿನೀರಿನ ತೊಟ್ಟಿಯಲ್ಲಿ ಪ್ರತಿದಿನ ಸುಮಾರು ಒಂದು ಗಂಟೆಗಳ ಕುಳಿತುಕೊಳ್ಳಬೇಕು. ಇದು ಗುದದ್ವಾರದಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ ಮತ್ತು ಗುದದ್ವಾರದಿಂದ ರಕ್ತಸ್ರಾವವಾಗದಂತೆ ತಡೆಯುತ್ತದೆ.
ತೆಂಗಿನಕಾಯಿ
ಯಾರಾದರೂ ಪೈಲ್ಸ್‌ನಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ಮನೆಮದ್ದುಗಳಿಂದ ಗುಣಪಡಿಸಲು ಬಯಸಿದರೆ, ಇದಕ್ಕಾಗಿ ತೆಂಗಿನಕಾಯಿಯನ್ನು ಸುಟ್ಟು ಅದನ್ನು ಬೂದಿಯಾಗಿ ಪರಿವರ್ತಿಸಿ. ನಂತರ ಅದನ್ನು ಹಾಲಿನ ಜೊತೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಸೇವಿಸಿ. ಹೀಗೆ ಮಾಡುವುದರಿಂದ ಬೇಗನೆ ಪೈಲ್ಸ್‌ನಿಂದ ಮುಕ್ತರಾಗಬಹುದು.
ಆಪಲ್ ವಿನೆಗರ್
ಪೈಲ್ಸ್‌ಗೆ ಮನೆಮದ್ದು ಆಪಲ್ ಸೈಡರ್ ವಿನೆಗರ್. ಹೌದು, ಇದರಲ್ಲಿ ಕಂಡುಬರುವ ಗುಣಲಕ್ಷಣಗಳು ರಕ್ತನಾಳಗಳನ್ನು ಕುಗ್ಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಪೈಲ್ಸ್‌ನಿಂದ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ, ನೀವು ಪ್ರತಿದಿನ ಬೆಳಿಗ್ಗೆ ಆಪಲ್ ಸೈಡರ್ ವಿನೆಗರ್ ಅನ್ನು ಕುಡಿಯಬೇಕು, ನೀವು ಆಪಲ್ ಸೈಡರ್ ವಿನೆಗರ್ನಲ್ಲಿ ಹತ್ತಿಯನ್ನು ನೆನೆಸಿ ಗುದದ್ವಾರದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಉರಿ ಮತ್ತು ತುರಿಕೆ ನಿವಾರಣೆಯಾಗುತ್ತದೆ.
ಆಲಿವ್ ಎಣ್ಣೆಯ ಬಳಕೆ
ಪೈಲ್ಸ್ ನಿಂದ ಬಳಲುತ್ತಿರುವವರು ಆಲಿವ್ ಎಣ್ಣೆಯನ್ನು ಬಳಸಬೇಕು. ಇದು ರಕ್ತನಾಳಗಳಲ್ಲಿನ ಊತವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಪ್ರತಿದಿನ ಆಲಿವ್ ಎಣ್ಣೆಯನ್ನು ಹತ್ತಿಯಲ್ಲಿ ನೆನೆಸಿ ಅದನ್ನು ಪೈಲ್ ಆಗಿರುವ ಭಾಗದಲ್ಲಿ ಇಡಬೇಕು. ಅದರ ಸುತ್ತ ಹಚ್ಚಿದರೆ ಕೆಲವು ತಿಂಗಳಲ್ಲಿ ಊತ ಕಡಿಮೆಯಾಗುತ್ತದೆ.
ಗಮನಿಸಿ: ಪೈಲ್ಸ್‌ಗೆ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನವನ್ನು ಕಂಡುಕೊಳ್ಳಲಾಗಿದೆ. ಅಲ್ಲದೆ ಈ ಚಿಕಿತ್ಸಾ ವಿಧಾನವು ಹಲವು ರೀತಿಯ ವಿಭಾಗಗಳನ್ನು ಹೊಂದಿರುತ್ತದೆ. ಪೈಲ್ಸ್‌ಗೆ ಒಳಗಾದವರು ಮನೆಮದ್ದು ಮಾಡುವ ಜೊತೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
