Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ತ್ವಚೆ ಹೀಗೆ ಬದಲಾದರೆ ನಿರ್ಲಕ್ಷ್ಯಬೇಡ, ಅದು ಮಧುಮೇಹದ ಲಕ್ಷಣವಾಗಿದೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ನಮ್ಮ ದೇಹದಲ್ಲಿ ಹಲವು ಬದಲಾಣೆಗಳಾಗುತ್ತೆ, ಆದರೆ ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಅದು ತ್ವಚೆಯಲ್ಲೇ ಗೊತ್ತಾಗುತ್ತೆ.

ದೇಹದ ಸಕ್ಕರೆಯಂಶ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಾವುವು ಎಂದು ನೋಡೋಣ:

ದೇಹದ ಕೆಲವು ಭಾಗ ಕಪ್ಪಾಗುವುದು
ದೇಹದಲ್ಲಿ ಇನ್ಸುಲಿನ್ ಹೆಚ್ಚಾದರೆ ಕುತ್ತಿಗೆಯ ಹಿಂಭಾಗ, ಕಂಕುಳ , ಗುಪ್ತ ಭಾಗದಲ್ಲಿ ತುಂಬಾನೇ ಕಪ್ಪಾಗುತ್ತೆ. ಇದು ಮಧುಮೇಹದ ಆರಂಭಿಕ ಲಕ್ಷಣವಾಗಿದ್ದು ಇದನ್ನು ವೈದ್ಯಕೀಯ ಭಾಷೆಯಲ್ಲಿ acanthosis nigricans ಎಂದು ಕರೆಯಲಾಗುವುದು.

ಚರ್ಮ ದಪ್ಪಾಗುವುದು
ಕಾಲು ಹಾಗೂ ಕೈ ಬೆರಳಿನ ಹತ್ತಿರದ ತ್ವಚೆ/ ಚರ್ಮ ಮಂದವಾಗುವುದು, ಮೊದಲಿಗೆ ನಿಮ್ಮ ಕೈ ಹಿಂದುಗಡೆ ನಂತರ ಮಣಿಗಂಟು, ಮೊಣಕೈ ಭಾಗಗಳಲ್ಲಿ ಕಂಡು ಬರುವುದು ಕೆಲವರಿಗೆ ಇದು ಎದೆ, ಭುಜ, ಮುಖಕ್ಕೆ ಕೂಡ ಹರಡುವುದು.

ನರಹುಲಿ ಸ್ಕಿನ್ ಟ್ಯಾಗ್
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ತ್ವಚೆ ಬಣ್ಣದ್ದೇ ಚಿಕ್ಕ ತ್ವಚೆ ನರಗಳು ಏಳುತ್ತವೆ, ಇವುಗಳು ನಿಮ್ಮ ತ್ವಚೆಯ ಬಣ್ಣದಲ್ಲೇ ಇರುತ್ತದೆ, ಇವುಗಳು ಕ್ಯಾನ್ಸರ್ ಕಾರಕವಲ್ಲ.

ಗಾಯ ಒಣಗಲು ನಿಧಾನವಾಗುವುದು
ಒಂದು ಚಿಕ್ಕ ಗಾಯವಾದರೂ ಒಣಗಲು ತುಂಬಾ ದಿನಗಳು ತೆಗೆದುಕೊಳ್ಳುತ್ತಿವೆಯೇ?ಹಾಗಾದರೆ ನಿರ್ಲಕ್ಷ್ಯ ಮಾಡಬೇಡಿ, ಶುಗರ್ ಟೆಸ್ಟ್ ಮಾಡಿಸಿ.

ಬೆಡ್‌ಸೋರ್
ತ್ವಚೆಯ ಮೇಲೆ ಒತ್ತಡ ಬಿದ್ದಾಗ ಹಿಮ್ಮಡಿ, ಹಿಂಭಾಗ, ಬೆನ್ನು, ಮೊಣಕಾಲು ಭಾಗಗಳಲ್ಲಿಕಂಡು ಬರುತ್ತದೆ. ಈ ರೀತಿ ಕಣ್ಣಿಗೆ ಬಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಡಯಾಬಿಟಿಕ್ ಡರ್ಮಾಪತಿ
ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಕಾಲಿನ ಪಾದದ ಕೆಳಭಾಗದಲ್ಲಿ ಕೆಂಪು ಅಥವಾ ಕಂದು ಬಣ್ಣ ಉಂಟಾಗುವುದು, ಈ ರೀತಿಯಾದಾಗ ಇದಕ್ಕೆ ಯಾವುದೇ ಪ್ರತ್ಯೇಕ ಚಿಕಿತ್ಸೆಯಿಲ್ಲ.
ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ವೈದ್ಯರಿಗೆ ತೋರಿಸಿ, ಇದರಿಂದ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications
