Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಮಧುಮೇಹಿಗಳು ಜೇನು ಸೇವಿಸಬಹುದೇ?
ಮಧುಮೇಹ ಬಂದ ಮೇಲೆ ಸಿಹಿ ಶತ್ರುವಾಗುತ್ತದೆ. ಸಿಹಿ ತಿಂದರೆ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಆದ್ದರಿಂದ ಸಿಹಿ ಪದಾರ್ಥಗಳನ್ನು ದೂರವಿಡುವಂತೆ ವೈದ್ಯರು ಮಧುಮೇಹಿಗಳಿಗೆ ಸೂಚಿಸುತ್ತಾರೆ. ಸಿಹಿ ಪದಾರ್ಥಗಳೆಂದರೆ ಬರೀ ಸಕ್ಕರೆ ಹಾಕಿ ತಯಾರಿಸಿರುವ ಸಿಹಿ ಪದಾರ್ಥಗಳು ಮಾತ್ರವಲ್ಲ ಕೆಲವೊಂದು ಸಿಹಿ ಹಣ್ಣುಗಳು ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ.
ಹೀಗಿರುವಾಗ ಮಧುಮೇಹಿಗಳು ಜೇನು ತಿನ್ನಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ, ಮಧುಮೇಹಿಗಳು ಜೇನು ಬಳಸಬಹುದೇ? ಬಳಸುವುದಾದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂದು ನೋಡೋಣ:

ಸಕ್ಕರೆ ಆರೋಗ್ಯಕರವಲ್ಲ, ಆದರೆ ಜೇನು ಆರೋಗ್ಯಕರ
ಸಕ್ಕರೆಗೆ ಹೋಲಿಸಿದರೆ ಜೇನು ಆರೋಗ್ಯಕರ. ಎಷ್ಟೋ ಜನರು ಸಕ್ಕರೆ ಬಳಸುವುದೇ ಇಲ್ಲ, ಅದರಲ್ಲಿ ಫಿಟ್ನೆಸ್ ಕಡೆ ತುಂಬಾ ಗಮನ ಕೊಡುವವರು ಸಕ್ಕರೆ ಬಳಸುವುದೇ ಇಲ್ಲ, ಇನ್ನು ಸಕ್ಕರೆ ತಿನ್ನದಿದ್ದರೆ ಕ್ಯಾನ್ಸರ್ ಸೇರಿ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಜೇನು ಆ ರೀತಿಯಲ್ಲ. ಇದರಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ. ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಜೇನನ್ನು ಬಳಸಲಾಗುವುದು. ಜೇನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಜೇನು ಸೇವಿಸಿದರೆ ಮಧುಮೇಹಿಗಳಲ್ಲಿ ಸಕ್ಕರೆಯಂಶ ಹೆಚ್ಚಾಗುವುದೇ?
ಜೇನು ಸಕ್ಕರೆಗಿಂಥ ಹೆಚ್ಚು ಸಿಹಿಯಾಗಿರುತ್ತದೆ. ಆದರೆ ಜೇನು ತಿಂದರೆ ಮಧುಮೇಹಿಗಳಿಗೆ ಅಪಾಯಕಾರಿಯೇ ಎಂದು ನೋಡುವುದಾದರೆ ಇದು ಇನ್ಸುಲಿನ್ ಅಧಿಕ ಮಾಡುವುದಾದರೂ ಉರಿಯೂತ ಕಡಿಮೆ ಮಾಡುತ್ತದೆ, ಆದ್ದರಿಂದ ಜೇನು ಮಧುಮೇಹಿಗಳು ಬಳಸಲೇಬಾರದು ಎಂದು ಯಾವ ಸಂಶೋಧನೆಯೂ ಹೇಳಿಲ್ಲ.
ಮಧುಮೇಹಿಗಳಿಗೆ ಜೇನು ತಿಂದರೆ ಆಗುವ ತೊಂದರೆಗಳು
* ಮಧುಮೇಹಿಗಳು ಜೇನನ್ನು ಮಿತಿಯಲ್ಲಿ ಸೇವಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾಗುವುದು.
* ಜೇನು ಸಕ್ಕರೆಗಿಂತ ತುಂಬಾನೇ ಸಿಹಿಯಾಗಿರುತ್ತದೆ, ಆದ್ದರಿಂದ ಸಕ್ಕರೆ ಒಂದು ಚಮಚ ಬಳಿಸಿದರೆ ಜೇನು 1/4 ಚಮಚ ಬಳಿಸಿದರೆ ಸಾಕು, ಆದ್ದರಿಂದ ಮಧಮೇಹಿಗಳು ಜೇನು ಬಳಸುವುದಾದರೆ ತುಂಬಾನೇ ಕಡಿಮೆ ಸೇವಿಸಬೇಕು.
* ಜೇನನ್ನು ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಬಾರದು. ಜೇನು ನೀಡಿದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗಬಹುದು.
* ನೀವು ಮರುಕಟ್ಟೆಯಿಂದ ಜೇನು ಬರಿಸಿದರೆ ಅದು ಕಲಬೆರಿಕೆಯಲ್ಲ ಎಂದು ಸಾಬೀತಾದರೆ ಮಾತ್ರ ಬಳಸಿ. ಕೆಲವರು ಜೇನು ಜೊತೆಗೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕಲಬೆರಿಕೆ ಮಾಡುತ್ತಾರೆ, ಅಂಥ ಜೇನು ಬಳಸಬೇಡಿ.
ಮಧುಮೇಹಿಗಳು ಜೇನನ್ನು ಬಳಸಿ, ಆದರೆ ಅತಿಯಾಗಿ ಬಳಸಬೇಡಿ, ಅಪರೂಪಕ್ಕೆ ಮಿತಿಯಲ್ಲಿ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications