Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆರೋಗ್ಯಕರವಾಗಿರುವ ವಸಂತ ಮಾಸದ ತರಕಾರಿಗಳು
ಮಕರ ಸಂಕ್ರಾಂತಿ ಅಥವಾ ಪೊಂಗಲ್ ವಸಂತ ಮಾಸವನ್ನು ಸ್ವಾಗತಿಸುವ ಹಬ್ಬ. ಈ ಮಾಸದಲ್ಲಿ ದಿನವು ದೀರ್ಘವಾಗಿರುವಂತೆ ತೋರುತ್ತದೆ ಮತ್ತು ಚಳಿಯು ಕಡಿಮೆಯಾಗುತ್ತಾ ಬರುತ್ತದೆ. ತಾಜಾ ಹಾಗೂ ಆರೋಗ್ಯಕರವಾಗಿರುವ ವಸಂತ ಕಾಲದ ತರಕಾರಿಗಳು ಈ ಸಮಯದಲ್ಲಿ ಸಿಗುತ್ತವೆ.
ವಸಂತ ಮಾಸಲ್ಲಿ ತಾಜಾ ಹಾಗೂ ಪರಿಶುದ್ಧ ಹೊಸದಾಗಿ ಬಂದಿರುವ ತರಕಾರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ವಸಂತನ ಆಗಮನಕ್ಕಾಗಿಯೇ ಕಾಯುತ್ತಿದ್ದವು ಎಂಬಂತೆ ಕೆಲವು ತರಕಾರಿ ಹಣ್ಣುಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಕಾಣಸಿಗುತ್ತವೆ.
ಈ ಸಮಯದಲ್ಲಿ ಸಿಗುವ ತರಕಾರಿಗಳೆಂದರೆ ಪಲ್ಲೆ ಹೂ, ಶತಾವರಿ, ಹೂಕೋಸು, ಎಲೆಕೋಸು, ಫವಾ ಬೀನ್ಸ್, ಪಾಲಾಕ್ ಅದೇ ರೀತಿ ಹಣ್ಣುಗಳಾದ ಅವೊಕಾಡೊ, ಏಪ್ರಿಕೋಟ್, ಕಿವಿ, ಪೈನಾಪಲ್, ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಟೊಮೇಟೊ ಇತ್ಯಾದಿ.
ನಿಮ್ಮ ದೈನಂದಿನ ಆಹಾರದಲ್ಲಿ ಇನ್ನೂ ಕೆಲವೊಂದು ವಸಂತ ಮಾಸದ ತರಕಾರಿಗಳನ್ನು ಸೇರಿಸಬೇಕೆಂದು ನೀವು ಬಯಸಿದ್ದರೆ ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಣ್ಣುಗಳಲ್ಲಿರುವ ಮಿಟಮಿನ್‌ನ ಸತ್ಯಾಂಶಗಳೇನು?

ಆರ್ಟಿಯೋಕ್ಸ್ (ಪಲ್ಲೆಹೂ)
ಆರ್ಟಿಯೋಕ್ಸ್‌ನಲ್ಲಿ ಫೈಬರ್ ಪೊಟ್ಯಾಶಿಯಂ, ಕಾರ್ಬನ್ ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೆಯೇ ಪಿತ್ತಜನಕಾಂಗದ ಕಾರ್ಯವೈಖರಿಯನ್ನು ಉತ್ತೇಜಿಸುತ್ತದೆ.

ಅಸ್ಪರೇಗಸ್ (ಶತಾವರಿ)
ಫೆಬ್ರವರಿ ತಿಂಗಳಿನ ಮೊದಲೇ ಅಸ್ಪರೇಗಸ್ ಮಾರುಕಟ್ಟೆಗೆ ದಾಳಿ ಮಾಡುತ್ತದೆ. ಅಸ್ಪರೇಗಸ್‌ನಲ್ಲಿರುವ ಪ್ರೋಟೀನ್‌ಗಳು ಹೃದಯ ಮತ್ತು ಮೂಳೆಗಳ ಆರೋಗ್ಯಕ್ಕೆ ಸಹಕಾರಿ.

ಕ್ಯಾಬೇಜ್ (ಎಲೆಕೋಸು)
ಹಸಿರು ತರಕಾರಿಯಾದ ಇದು ಹೇರಳವಾಗಿ ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಹೊಂದಿದೆ. ತೂಕ ಇಳಿಸುವುದಕ್ಕಾಗಿ ಕ್ಯಾಬೇಜ್ ಸೂಪ್ ಹಾಗೂ ಜೂಸ್ ಒಂದು ಸುಲಭ ಪರಿಹಾರವಾಗಿದೆ. ಅದಲ್ಲದೆ ಕ್ಯಾಬೇಜ್ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.

ಫವಾ ಬೀನ್ಸ್
ಪ್ರೋಟೀನ್ ಪೊಟಾಶಿಯಂ ಹೇರಳವಾಗಿರುವ ಹಸಿರು ತರಕಾರಿ ಫವಾ ಬೀನ್ಸ್ ಆಗಿದೆ. ವಿಟಮಿನ್ ಕೆ, ಬಿ, ಯಥೇಚ್ಛವಾಗಿದ್ದು ಯಾವುದೇ ಕೊಬ್ಬಿನಂಶವಿರುವುದಿಲ್ಲ. ಫವಾ ಬೀನ್ಸ್‌ನಲ್ಲಿ ಐರನ್ ಅಂಶ ಅಧಿಕವಾಗಿದ್ದು ಇದನ್ನೊಂದು ಉತ್ತಮ ಪೋಷಕಾಂಶವುಳ್ಳ ವಸಂತ ಮಾಸದ ತರಕಾರಿಯನ್ನಾಗಿ ರೂಪುಗೊಳಿಸಿದೆ.

ಕ್ಯಾರೇಟ್‌ಗಳು
ಕ್ಯಾರೇಟ್‌ನಿಂದ ಆರೋಗ್ಯ ಹಾಗೂ ಸೌಂದರ್ಯ ಎರಡೂ ವೃದ್ಧಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ದೇಹ ಮತ್ತು ಸೌಂದರ್ಯಕ್ಕೆ ಉತ್ತಮವಾದುದಾಗಿದೆ.

ಸ್ಪಿನಾಚ್ (ಪಾಲಾಕ್)
ಎಲೆಗಳಿರುವ ಹಸಿರು ತರಕಾರಿ ತನ್ನಲ್ಲಿರುವ ಆರೋಗ್ಯಕರ ಅಂಶಗಳಿಂದ ಯಾವಾಗಲೂ ಪ್ರಥಮ ಸ್ಥಾನದಲ್ಲಿರುತ್ತದೆ. ಕ್ಯಾಲೋರಿಯುಕ್ತವಾಗಿರುವುದು ಹೊರತುಪಡಿಸಿ, ಎಲೆಗಳಿರುವ ತರಕಾರಿ ವಿಟಮಿನ್ ಎ, ಕೆ ಹಾಗೂ ಇ ಯನ್ನು ಶ್ರೀಮಂತವಾಗಿ ಹೊಂದಿದೆ ಹಲವಾರು ಸೋಂಕುಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಮೂತ್ರ ಹಾಗೂ ಕರುಳಿನ ವ್ಯೂಹವನ್ನು ಬಲಪಡಿಸುತ್ತದೆ.

ಹೊಸ ಆಲೂಗಡ್ಡೆ
ಸಣ್ಣದಾದ ಹಾಗೂ ದೊಡ್ಡದಾದ ಆಲೂಗಡ್ಡೆಯನ್ನು ವಸಂತ ಮಾಸದಲ್ಲಿ ಬೆಳೆಯಲಾಗುತ್ತದೆ. ಅಡುಗೆ ಮಾಡಲು ಈ ಆಲೂಗಡ್ಡೆ ಸರಳವಾಗಿದ್ದು ರುಚಿಯೂ ಅಮೂಲಾಗ್ರವಾಗಿದೆ.

ಅವೊಕಾಡೊ
ಅವೊಕಾಡೊ ಫೈಬರ್ ಹಾಗೂ ಪ್ರೋಟೀನ್‌ಗಳನ್ನು ಯಥೇಚ್ಛವಾಗಿ ಹೊಂದಿದೆ. ಕೊಬ್ಬಿನಂಶವುಳ್ಳ ಹಣ್ಣು ಇದಾಗಿದ್ದು ಹೈ ಕ್ಯಾಲೊರಿಭರಿತವಾಗಿದೆ ಪ್ರಕೃತಿದತ್ತವಾದ ಪರ್ಯಾಪ್ತ ಹಣ್ಣಾಗಿರುವುದರಿಂದ ಇದರಲ್ಲಿರುವ ಕೊಬ್ಬಿನಂಶ ಆರೋಗ್ಯಯುತವಾಗಿರುತ್ತದೆ.

ಫೆನ್ನಲ್
ವಸಂತ ಮಾಸದುದ್ದಕ್ಕೂ ಈ ತರಕಾರಿ ದೊರೆಯುತ್ತದೆ ಇದರಲ್ಲಿ ಅಧಿಕವಾಗಿರುವ ರೋಗನಿರೋಧಕ, ಉತ್ಕರ್ಷಣ ಶಕ್ತಿ ಹಾಗೂ ಫೈಟೊನ್ಯೂಟ್ರಿಯೆಂಟ್ಸ್ ಉರಿಯೂತವನ್ನು ನಿಯಂತ್ರಣ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಅನ್ನು ಉಪಶಮನ ಮಾಡುತ್ತದೆ.

ಮಸ್ಟರ್ಡ್ ಗ್ರೀನ್ಸ್
ವಿಟಮಿನ್ ಕೆ, ಎ, ಸಿ ಅಧಿಕವಾಗಿದ್ದು ದೇಹವನ್ನು ಸೆಲ್ ಡ್ಯಾಮೇಜ್‌ನಿಂದ ದೇಹವನ್ನು ರಕ್ಷಿಸುತ್ತದೆ.

ಮೂಲಂಗಿ
ಕೆಂಪು ಮತ್ತು ಬಿಳಿ ಬಲ್ಬ್‌ಗಳು ವಿಟಮಿನ್ ಸಿ ಯ ಹೆಚ್ಚಿನ ಮೂಲವಾಗಿದ್ದು ಉತ್ಕರ್ಷಣ ಮತ್ತು ಉರಿಯೂತ ನಿಯಂತ್ರಕ ಅಂಶವನ್ನು ಹೊಂದಿವೆ. ಕಿಡ್ನಿಗಳಿಗೆ ಉತ್ತಮವಾಗಿರುವ ಪೊಟ್ಯಾಶಿಯಂ ಅನ್ನು ಮೂಲಂಗಿ ಹೊಂದಿದೆ.

ವಿಡಲಿಯಾ ಈರುಳ್ಳಿ
ವಸಂತ ಮಾಸದ ತರಕಾರಿಯಾಗಿದ್ದು ಅನನ್ಯ ರುಚಿಯನ್ನು ಹೊಂದಿದೆ. ಅಸ್ತಮಾ ಹಾಗೂ ಉಸಿರಾಟದ ಇತರ ರೋಗ ಚಿಹ್ನೆಗಳನ್ನು ಕಡಿಮೆ ಮಾಡುವ ಸಲ್ಫರ್ ಅನ್ನು ಹೇರಳವಾಗಿ ಹೊಂದಿರುವ ತರಕಾರಿ ವಿಡಲಿಯಾ ಈರುಳ್ಳಿ.

ಗ್ರೇಪ್‌ಫ್ರುಟ್
ಚಳಿಗಾಲದಿಂದ ವಸಂತ ಮಾಸದವರೆಗೆ ಈ ಗ್ರೇಪ್‌ಫ್ರುಟ್ ದೊರೆಯುತ್ತದೆ ಕೊಬ್ಬನ್ನು ಕರಗಿಸುವ ಸತ್ವವನ್ನು ಹೇರಳವಾಗಿ ಹೊಂದಿರುವ ಈ ಹಣ್ಣು ತೂಕ ನಿಯಂತ್ರಣಕ್ಕೆ ಸಹಕಾರಿ.

ಬೆರ್ರಿಗಳು
ರುಚಿಕರವಾದ ಬೆರ್ರಿಗಳು ವಿಟಮಿನ್‌ಗಳು ಹಾಗೂ ಉತ್ಕರ್ಷಣದ ಅಂಶವನ್ನು ಯಥೇಚ್ಛವಾಗಿ ಹೊಂದಿದ್ದು ಇದನ್ನೊಂದು ಆರೋಗ್ಯಕರವಾದ ವಸಂತ ಮಾಸದ ಹಣ್ಣಾಗಿಸಿದೆ. ಬ್ಲೂಬೆರ್ರಿ ಮತ್ತು ಸ್ಟ್ರಾಬೆರ್ರಿಗಳು ಕೊಬ್ಬನ್ನು ಕರಗಿಸುವ ಹಣ್ಣುಗಳಾಗಿದ್ದು ಪಥ್ಯವನ್ನು ಅನುಸರಿಸುವವರಿಗೆ ಹೇಳಿ ಮಾಡಿಸಿದಂತವುಗಳು.

ವಾಟರ್‌ಕ್ರೆಸ್
ಬೇಟಾ - ಕ್ಯಾರೊಟಿನ್, ಅಯೋಡಿನ್, ಐರನ್, ವಿಟಮಿನ್ ಎ, ಬಿ1 ಮತ್ತು ಬಿ6, ಸಿ, ಇ, ಹಾಗೂ ಕೆ, ಯನ್ನು ಹೊಂದಿರುವ ಹಸಿರು ಎಲೆಗಳುಳ್ಳ ತರಕಾರಿಗಳು ನ್ಯೂಟ್ರಿಶಿಯಸ್ ಅಂಶವನ್ನು ಕ್ಯಾಲ್ಶಿಯಂ ಝಿಂಕ್ ಅನ್ನು ಹೇರಳವಾಗಿ ತನ್ನಲ್ಲಿ ಇರಿಸಿಕೊಂಡಿವೆ.



Click it and Unblock the Notifications
