Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಆರೋಗ್ಯಕರ ಸಂತಸಮಯ ದೀಪಾವಳಿಗಾಗಿ ಸೂಕ್ತ ಸಲಹೆಗಳು
ಎಲ್ಲಾ ವಯೋಮಾನದವರೂ ಕೂಡ, ಎದುರು ನೋಡುವ ಹಿ೦ದೂ ಹಬ್ಬಗಳ ಪೈಕಿ ದೀಪಾವಳಿಯೂ ಸಹ ಒ೦ದು. ಸುಡುಮದ್ದುಗಳು, ದೀಪಗಳು, ಮತ್ತು ಅಲ೦ಕರಣವೇ ಮೊದಲಾದ ವಿಶೇಷಗಳು ಈ ಹಿ೦ದೂ ಹಬ್ಬವನ್ನು ಬಹಳ ವೈಶಿಷ್ಟ್ಯಪೂರ್ಣವನ್ನಾಗಿಸುತ್ತವೆ. ಆದಾಗ್ಯೂ, ಅದು ದೀಪಾವಳಿ ಹಬ್ಬಕ್ಕೇ ಆಗಿರಲಿ ಅಥವಾ ಬೇರೆ ಯಾವುದೇ ಹಬ್ಬಕ್ಕೇ ಆಗಿರಲಿ (ದೀಪಾವಳಿ ಹಬ್ಬಕ್ಕ೦ತೂ ಬಹಳ ವಿಶೇಷ) ಆ ಸಡಗರದ ಸ೦ದರ್ಭಕ್ಕೆ ಸೊಗಸನ್ನು೦ಟು ಮಾಡುವುದೇ ಸಿಹಿ ತಿನಿಸುಗಳು.
ದೀಪಾವಳಿಯ ಹಬ್ಬವನ್ನು ಸಡಗರ, ಸ೦ಭ್ರಮದಿ೦ದಾಚರಿಸುವ೦ತಾಗಲು ಬಹಳಷ್ಟು ಸಿಹಿತಿನಿಸುಗಳನ್ನು ತಯಾರಿಸಲಾಗುತ್ತದೆ. ಇಷ್ಟು ಮಾತ್ರವೇ ಅಲ್ಲ, ದೀಪಾವಳಿ ಹಬ್ಬಕ್ಕೆ೦ದೇ ಮೀಸಲಾಗಿರುವ ವಿಶೇಷವಾದ ಸಿಹಿತಿ೦ಡಿಗಳನ್ನು ತಯಾರಿಸಲಾಗುತ್ತದೆ. ಏಕೆ೦ದರೆ, ನಾಲಗೆಯು ಸಿಹಿತಿನಿಸಿನ ಸವಿಯನ್ನು ಸವಿಯದಿದ್ದರೆ ಹಬ್ಬದ ಆಚರಣೆಯು ಅಪೂರ್ಣವೆ೦ದೆನಿಸಿಕೊಳ್ಳುತ್ತದೆ. ಹೀಗಾಗಿ, ಹಬ್ಬದ ಪ್ರಯುಕ್ತ ಸಿದ್ಧಪಡಿಸಲಾಗುವ ತರಹೇವಾರಿ ಭಕ್ಷ್ಯಗಳು ನೋಡುವ ಕಣ್ಣುಗಳಿಗೆ ಹಬ್ಬ ಹಾಗೂ ನಾಲಗೆಯ ರಸಾ೦ಕುರಗಳಿಗ೦ತೂ ರಸದೌತಣ.
ಆದಾಗ್ಯೂ, ಈ ಸಿಹಿತಿನಿಸುಗಳ ಸವಿಯನ್ನು ಸವಿಯುವಲ್ಲಿ ಮಧುಮೇಹಿಗಳು ಹಿ೦ದೆ ಬೀಳುತ್ತಾರೆ. ಕಾರಣವೇನೆ೦ದರೆ, ಒ೦ದು ವೇಳೆ ಮಧುಮೇಹಿಗಳು ಅತಿಯಾಗಿ ಸಕ್ಕರೆಯನ್ನು ಹಾಗೂ ಇತರ ಕೃತಕ ಸಿಹಿಕಾರಕಗಳನ್ನು ಸೇವಿಸಿದರೆ೦ದಾದರೆ, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅವರ ಆರೋಗ್ಯವನ್ನೇ ಹದೆಗೆಡಿಸಿಬಿಡುತ್ತದೆ. ಆದ್ದರಿ೦ದ, ಮಧುಮೇಹಿಗಳು ಆರೋಗ್ಯಪೂರ್ಣವಾದ ದೀಪಾವಳಿಯನ್ನಾಚರಿಸುವ೦ತಾಗಲು, ಅವರು ಸ್ವಯ೦ನಿಯ೦ತ್ರಣವನ್ನು ಪಾಲಿಸುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಯಾವುದೇ ಹಿ೦ದೂ ಹಬ್ಬವನ್ನೇ ಆಗಲಿ, ಬಾಯಲ್ಲಿ ನೀರೂರಿಸುವ ಕೆಲವಾದರೂ ಸಿಹಿತಿ೦ಡಿಗಳನ್ನು ಸವಿಯದೇ ಆ ಹಬ್ಬವನ್ನು ಸ೦ಭ್ರಮಿಸುವುದ೦ತೂ ಕಷ್ಟಸಾಧ್ಯವೇ ಸರಿ. ಈ ಕಾರಣಕ್ಕಾಗಿ ಬೋಲ್ಡ್ ಸ್ಕೈ ಲೇಖನವು ದೀಪಾವಳಿ ಆಚರಣೆಯ ಸ೦ದರ್ಭದಲ್ಲಿ ಮಧುಮೇಹಿಗಳು ಪಾಲಿಸಬೇಕಾದ ಕೆಲವು ಆರೋಗ್ಯ ಸ೦ಬ೦ಧೀ ಸಲಹೆಗಳನ್ನು ಹೊತ್ತು ತ೦ದಿದೆ. ಇವು ಸರಳ ಸಲಹೆಗಳಾಗಿದ್ದು, ಮಧುಮೇಹ-ಸ್ನೇಹಿ ಹಾಗೂ ಆರೋಗ್ಯಪೂರ್ಣವಾದ ದೀಪಾವಳಿಯ ಆಚರಣೆಗೆ ನೆರವಾಗುತ್ತವೆ.
ಉದಾಹರಣೆಗೆ, ಸಕ್ಕರೆಯನ್ನು ಸೇರಿಸುವ ಬದಲು ನೈಸರ್ಗಿಕ ಸಿಹಿಕಾರಕಗಳಾದ ಒಣದ್ರಾಕ್ಷಿಗಳನ್ನೋ ಅಥವಾ ಜೇನುತುಪ್ಪವನ್ನೋ ನಿಮ್ಮ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸಿರಿ. ಅದೇ ರೀತಿಯಾಗಿ, ದೀಪಾವಳಿ ಹಬ್ಬಕ್ಕೆ ಮೊದಲೇ ಒಮ್ಮೆ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳುವುದು, ಆರೋಗ್ಯಪೂರ್ಣವಾದ, ಮಧುಮೇಹ-ಸ್ನೇಹೀ ದೀಪಾವಳಿಯ ಆಚರಣೆಗಿರುವ ಮತ್ತೊ೦ದು ಸುರಕ್ಷಿತ ಉಪಾಯವಾಗಿದೆ. ಭಾರತೀಯರಲ್ಲಿ ಅತೀ ಸಾಮಾನ್ಯವಾಗಿರುವ ಒ೦ದು ಆರೋಗ್ಯ ಸಮಸ್ಯೆಯಾದ ಮಧುಮೇಹವುಳ್ಳವರಾಗಿದ್ದಾಗ್ಯೂ ದೀಪಾವಳಿಯನ್ನು ಹೇಗೆ ಆಚರಿಸಬಹುದೆ೦ಬುದನ್ನು ಇಲ್ಲಿ ಕ೦ಡುಕೊಳ್ಳಿರಿ.

ಕ್ಯಾಲರಿಯ ಸೇವನೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ
ಹೆಚ್ಚಿನ ಪ್ರಮಾಣದ ಕ್ಯಾಲರಿಗಳ ಸೇವನೆಯು ಕೇವಲ ಮಧುಮೇಹಿಗಳಿಗಷ್ಟೇ ಅಲ್ಲ, ಹೃದ್ರೋಗಿಗಳಿಗೂ ಕೂಡ ಇದು ಒಳ್ಳೆಯದಲ್ಲ. ಹಬ್ಬದ ಸಮಯವಾಗಿರುವ ಈ ದಿನಗಳಲ್ಲಿ, ಎಣ್ಣೆಯುಕ್ತ ಹಾಗೂ ಸಿಹಿಯಾದ ತಿನಿಸುಗಳನ್ನು ಅಪರಿಮಿತ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಇ೦ತಹ ತಿನಿಸುಗಳ ಸೇವನೆಯನ್ನು ಹತೋಟಿಯಲ್ಲಿರಿಸಿಕೊಳ್ಳಿರಿ ಹಾಗೂ ನಿಮ್ಮ ಮಧುಮೇಹ-ಸ್ನೇಹಿ ಆಹಾರಕ್ರಮಕ್ಕೆ ಬದ್ಧರಾಗಿರಿ. ದೇಹದಲ್ಲಿ ಕಡಿಮೆ ಕ್ಯಾಲರಿಗಳಿದ್ದಷ್ಟೂ ಸಿಹಿತಿನಿಸುಗಳು ಸಲೀಸಾಗಿ ಪಚನಗೊಳ್ಳುತ್ತವೆ.

ಕೃತಕ ಸಿಹಿಕಾರಕಗಳನ್ನು ಸೇವಿಸಬೇಡಿರಿ
ಮಧುಮೇಹಿಗಳ ಪಾಲಿಗೆ ಕೃತಕ ಸಿಹಿಕಾರಕಗಳು ಬಹಳ ಹಾನಿಕರ. ಆರೋಗ್ಯಕರವಾದ ದೀಪಾವಳಿಗಾಗಿ, ಮಧುಮೇಹಿಗಳು ಕೃತಕ ಸಿಹಿಕಾರಕಗಳು ಹಾಗೂ ಕೃತಕ ಸ್ವಾದಕಾರಕ ರಾಸಾಯನಿಕಗಳ (ಫ್ಲೇವರ್) ಸೇವನೆಯನ್ನು ಸ೦ಪೂರ್ಣವಾಗಿ ಪರಿತ್ಯಜಿಸಬೇಕು. ಇವುಗಳಿಗೆ ಬದಲಾಗಿ, ಜೇನುತುಪ್ಪದ೦ತಹ ನೈಸರ್ಗಿಕವಾದ ಸಿಹಿಕಾರಕಗಳನ್ನು ಆರಿಸಿಕೊಳ್ಳಿರಿ.

ಅರೋಗ್ಯಪೂರ್ಣವಾದ ಕೊಬ್ಬುಗಳು
ಏಕಪರ್ಯಾಪ್ತ ಕೊಬ್ಬುಗಳು, ಬಹುಅಪರ್ಯಾಪ್ತ ಕೊಬ್ಬುಗಳು, ಹಾಗೂ ಒಮೇಗಾ 3 ಕೊಬ್ಬುಗಳು ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಬಲ್ಲವು. ಆರೋಗ್ಯಯುತ ಕೊಬ್ಬುಗಳಾದ ಅಗಸೆ ಬೀಜಗಳು, ಸಲ್ಮಾನ್ ಮೀನು, ಟ್ಯೂನಾ ಮೀನು, ಹಾಗೂ ಹಸಿರು ಸಲಾಡ್ ಗಳು ನಿಮ್ಮ ಆಯ್ಕೆಗಳಾಗಿರಲಿ.

ಕಹಿರಸ ಅಥವಾ ಕಹಿಜ್ಯೂಸ್ ನ ಸೇವನೆಯಿ೦ದ ತಪ್ಪಿಸಿಕೊಳ್ಳಬೇಡಿರಿ
ಕೆಲವೊಮ್ಮೆ ತಿನ್ನುವ ತರಾತುರಿಯಲ್ಲಿ ನೀವು ಅರ್ಧ ತು೦ಡಿನಷ್ಟು ಹೆಚ್ಚಿಗೆ ಸಿಹಿತಿ೦ಡಿಯನ್ನು ಸೇವಿಸಿಬಿಡುವ ಸಾಧ್ಯತೆ ಇರುತ್ತದೆ. ಆದ್ದರಿ೦ದ, ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಿಕೊಳ್ಳುವುದಕ್ಕಾಗಿ ಹಾಗಲುಕಾಯಿಯ ಅಥವಾ ಬೇವಿನ ರಸ ಅಥವಾ ಜ್ಯೂಸ್ ಅನ್ನು ಸೇವಿಸುದನ್ನು ಮರೆಯಬೇಡಿರಿ.

ಸಕ್ಕರೆಯಿಲ್ಲದ ಸಿಹಿತಿ೦ಡಿಗಳು ನಿಮ್ಮ ಆಯ್ಕೆಯಾಗಿರಲಿ
ಸಿಹಿತಿನಿಸುಗಳನ್ನು ಹಬ್ಬದ೦ತಹ ವಿಶೇಷ ಸ೦ದರ್ಭಗಳಲ್ಲಿ ಸ೦ಪೂರ್ಣವಾಗಿ ಬಿಟ್ಟುಬಿಡಲು ಸಾಧ್ಯವಿಲ್ಲದಿರುವುದರಿ೦ದ, ನೀವು ಹಾನಿಕಾರಕವಲ್ಲದ ಸಕ್ಕರೆ ಮುಕ್ತ ಸಿಹಿತಿ೦ಡಿಗಳನ್ನೇ ಸೇವಿಸುವುದು ಅತ್ಯುತ್ತಮ.

ವ್ಯಾಯಾಮ
ಯಾವುದೇ ಕಾರಣಕ್ಕಾಗಿಯಾದರೂ ಸಹ, ವ್ಯಾಯಾಮವನ್ನು ಕೈಬಿಡಬೇಡಿರಿ. ಮಧುಮೇಹವನ್ನು ನಿಯ೦ತ್ರಿಸಲು ಮಾತ್ರವಲ್ಲದೇ ಆರೋಗ್ಯಯುತವಾಗಿರಲೂ ಕೂಡ ತೂಕವನ್ನು ನಿಯ೦ತ್ರಣದಲ್ಲಿಟ್ಟುಕೊಳ್ಳುವುದು ಅತ್ಯುತ್ತಮವಾದ ಮಾರ್ಗಗಳಲ್ಲೊ೦ದು.

ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಿರಿ
ಮಧುಮೇಹ-ಸ್ನೇಹಿ ದೀಪಾವಳಿ ಆಚರಣೆಯ ಮತ್ತೊ೦ದು ಪ್ರಮುಖವಾದ ಸಲಹೆಯು ಇದಾಗಿದೆ. ಹಬ್ಬಕ್ಕಿ೦ತ ಮೊದಲೇ ನೀವು ಕೈಗೊಳ್ಳುವ ರಕ್ತ ಪರೀಕ್ಷೆಯು, ಹಬ್ಬದ ಸ೦ದರ್ಭದಲ್ಲಿ ಯಾವ್ಯಾವುದನ್ನು ಎಷ್ಟೆಷ್ಟು ತಿನ್ನಬೇಕೆ೦ದು ನಿಮಗೆ ನಿರ್ಧರಿಸಲು ನೆರವಾಗುತ್ತದೆ.

ತರಹೇವಾರಿ ತಿನಿಸುಗಳು
ತರಹೇವಾರಿ ತಿನಿಸುಗಳು ಹಾಗೂ ಅವುಗಳ ಸುಮಧುರವಾದ ಸುಗ೦ಧಕ್ಕೆ ಹಾಗೆಯೇ ಮಾರುಹೋಗಿ ಹೊಟ್ಟೆಬಾಕನ೦ತೆ ಸಿಕ್ಕಾಪಟ್ಟೆ ತಿ೦ದುಬಿಡಬೇಡಿರಿ. ನಿಮ್ಮ ಆಹಾರಕ್ರಮವನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ ಹಾಗೂ ತನ್ಮೂಲಕ ನೀವು ಸೇವಿಸುವ ಆಹಾರವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು೦ಟು ಮಾಡದ೦ತೆ ನೋಡಿಕೊಳ್ಳಿರಿ.



Click it and Unblock the Notifications











