Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬಾಳೆಹಣ್ಣಿನ ಹತ್ತು ಹಲವು ಉಪಯೋಗಗಳು
ನಿಮ್ಮ ರೆಫ್ರಿಜರೇಟರ್‌ನಲ್ಲಿ ಬೇರೆ ಹಣ್ಣುಗಳೊಂದಿಗೆ ಬಾಳೆಹಣ್ಣಿನ ಪ್ರಮಾಣವನ್ನೂ ಹೆಚ್ಚು ಮಾಡಿ.ಇದೊಂದು ಆಸಕ್ತಿಕರವಾದ ಅಂಶವಾಗಿದೆ, ಈಗ ನಾವು ತಿಳಿಸಲಿರುವ ಸುದ್ದಿಯನ್ನು ಓದಿದ ಮೇಲೆ ಬಾಳೆಹಣ್ಣಿನ ಮೇಲೆ ನಿಮಗಿರುವ ಭಾವನೆ ಇಮ್ಮಡಿಯಾಗಬಹುದು.
ಹೌದು, ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ. 90 - ನಿಮಿಷದ ನಮ್ಮ ದಿನದ ಕಾರ್ಯಾಚರಣೆಗೆ 2 ಬಾಳೆಹಣ್ಣು ನಮಗೆ ಶಕ್ತಿಯನ್ನು ಒದಗಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳು ಸಹ ಹಲವಾರು ಹಣ್ಣಿನ ಪೋಷಕಾಂಶ ಸತ್ವಗಳನ್ನು ಬಾಳೆಹಣ್ಣು ಹೊಂದಿದೆ ಎಂದು ನಂಬಿದ್ದಾರೆ. ಹಲವಾರು ರೋಗಗಳ ವಿರುದ್ಧ ಹೋರಾಡುವ ಪ್ರತ್ಯೌಷಧವಾಗಿ ಬಾಳೆಹಣ್ಣು ಕಾರ್ಯನಿರ್ವಹಿಸುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ನಾವು ಸೇವಿಸುವುದರಿಂದ ರೋಗಗಳಿಂದ ನಮಗೆ ಮುಕ್ತಿ ಸಿಕ್ಕಂತೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹೇಗೆ?
ಎಮ್‌ಐಎನ್‌ಡಿ ನಡೆಸಿದ ಸರ್ವೆಯ ಪ್ರಕಾರ ಹೆಚ್ಚಿನ ಜನರು ಖಿನ್ನೆತೆಗೆ ಒಳಗಾಗಿರುವುದು ಕಂಡುಬಂದಿದೆ. ಬಾಳೆಹಣ್ಣನ್ನು ತಿನ್ನುವುದರಿಂದ ಅವರ ಈ ಸಮಸ್ಯೆ ಪರಿಹಾರವಾಗಿ ಅವರು ಸಂತೋಷದಿಂದಿರುವ ವಿಷಯ ಬೆಳಕಿಗೆ ಬಂದಿದೆ. ಬಾಳೆಹಣ್ಣು ನಿಮ್ಮ ಮೂಡ್ ಅನ್ನು ಸರಿಪಡಿಸುವುದರೊಂದಿಗೆ ನಿಮ್ಮನ್ನು ಸಂತೋಷವಾಗಿರಿಸುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಿ, ನಿಮ್ಮ ಮೂಡ್ ಅನ್ನು ಸರಿಪಡಿಸುತ್ತದೆ.
ರಕ್ತದಲ್ಲಿನ ಹಿಮೋಗ್ಲೋಬೀನ್ ಉತ್ಪಾದನೆಯನ್ನು ಬಾಳೆಹಣ್ಣು ಉತ್ತೇಜಿಸುವುದರಿಂದ ನಿಮಗೆ ಅನಿಮೀಯಾ ಉಂಟಾಗುವ ಸಂಭವನೀಯತೆ ಕಡಿಮೆ ಇರುತ್ತದೆ. ಇದೊಂದು ಶೀತಲೀ ಹಣ್ಣಾಗಿದ್ದು ದೈಹಿಕ ಮಾನಸಿಕ ಒತ್ತಡವನ್ನು ಇದು ಸುಧಾರಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಬ್ಲಡ್ ಶುಗರ್ ಕಡಿಮೆ ಮಾಡುವುದು ಹೇಗೆ?
ಪೊಟ್ಯಾಶಿಯಂ ಅಧಿಕವಾಗುಳ್ಳ ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಐರನ್, ಫೋಸ್‌ಫೋರಸ್, ಕಾರ್ಬೊಹೈಡ್ರೇಟ್, ಪ್ರೋಟೀನ್ ಮಿಳಿತಗೊಂಡು ಸೇಬಿಗಿಂತಲೂ ಉನ್ನತ ಸ್ಥಾನದಲ್ಲಿದೆ.
ಬಾಳೆಹಣ್ಣು ನಮ್ಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದ್ದು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ. ಒಂದು ಸೇಬು ತಿಂದು ವೈದ್ಯರನ್ನು ದೂರವಿರಿಸಿ ಎಂಬ ಮಾತಿನಂತೆ ಬಾಳೆಹಣ್ಣೂ ಕೂಡ ಸೇಬಿನಷ್ಟೇ ಅತ್ಯುತ್ತಮ ಅಂಶಗಳನ್ನು ತನ್ನೊಂದಿಗೆ ಸೇರಿಸಿಕೊಂಡಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
