Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಡಯಾಬಿಟಿಸ್ ತಡೆಯಲು ಅದ್ಭುತ ಆಹಾರಗಳು
ಡಯಾಬಿಟಿಸ್ (ಮಧುಮೇಹ) ವ್ಯಕ್ತಿಯನ್ನು ನಿಧಾನವಾಗಿ ಕೊಲ್ಲುತ್ತದೆ. ಸಂತೋಷದಿಂದ ಜೀವನ ಸಾಗಿಸಲು ಸಮರ್ಪಕ ಆರೈಕೆ ಮತ್ತು ನಿಯಂತ್ರಣ ಕಡ್ಡಾಯ. ಡಯಾಬಿಟಿಸ್ ನಿಂದ ಬಳಲುತ್ತಿದ್ದರೆ ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರ ಕ್ರಮ, ಕೆಲವೊಂದು ದೈಹಿಕ ಚಟುವಟಿಕೆಗಳೊಂದಿಗೆ'. ಡಯಾಬಿಟಿಸ್ ನ್ನು ಸೋಲಿಸಬೇಕೆಂದರೆ ಸರಿಯಾದ ಆಹಾರ ಕ್ರಮ ತುಂಬಾ ಮುಖ್ಯ.
ಪ್ರತೀ ಆರು ಸೆಕೆಂಡುಗಳಿಗೊಮ್ಮೆ ಡಯಾಬಿಟಿಸ್ ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಕಳೆದ ಕೆಲವು ವರ್ಷಗಳಿಂದ ಹಲವಾರು ಡಯಾಬಿಟಿಸ್ ಪ್ರಕರಣಗಳು ವರದಿಯಾಗಿದೆ ಮತ್ತು ಡಯಾಬಿಟಿಸ್ ನ್ನು ಸೋಲಿಸಲು ತುರ್ತು ಪರಿಹಾರದ ಅಗತ್ಯವಿದೆ. ವಿಶ್ವ ಡಯಾಬಿಟಿಸ್ ದಿನದ ಆಚರಣೆಯಿಂದ ವಿಶ್ವ ಮಟ್ಟದಲ್ಲಿ ಜನರಲ್ಲಿ ಡಯಾಬಿಟಿಸ್ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ರೀತಿಯಿಂದ ಪ್ರಯತ್ನಿಸಲಾಗುತ್ತಿದೆ.
ಸ್ಥೂಲಕಾಯತೆ ಮತ್ತು ಜೀವನಶೈಲಿ ಡಯಾಬಿಟಿಸ್ ಬರಲು ಪ್ರಮುಖ ಕಾರಣ. ಇದರಿಂದ ಡಯಾಬಿಟಿಸ್ ಬರದಂತೆ ತಡೆಯಲು ನಾವು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಡಯಾಬಿಟಿಸ್ ನ್ನು ತಡೆಯಬಲ್ಲ ಕೆಲವೊಂದು ಅದ್ಬುತ ಆಹಾರಗಳು ಇಲ್ಲಿವೆ.

1. ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರವಿಡುತ್ತದೆ
ಇದು ತುಂಬಾ ಜನಪ್ರಿಯ ನುಡಿ ಮತ್ತು ನಿಜವೂ ಹೌದು. ಸೇಬು ಸೇವನೆಯಿಂದ ಡಯಾಬಿಟಿಸ್ ನ್ನು ತಡೆಯಬಹುದು. ಕಡಿಮೆ ಕ್ಯಾಲರಿ ಮತ್ತು ಗರಿಷ್ಠ ಮಟ್ಟದಲ್ಲಿ ನಾರಿನಾಂಶ ಹೊಂದಿರುವ ಸೇಬು ಡಯಾಬಿಟಿಸ್ ಆಹಾರ ಕ್ರಮದಲ್ಲಿ ಅದ್ಭುತ ಆಹಾರ. ಸೇಬಿನ ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

2. ಮೀನುಗಳು
ಡಯಾಬಿಟಿಸ್ ಆಹಾರ ಕ್ರಮದಲ್ಲಿ ಒಮೆಗಾ 3 ಪ್ಯಾಟಿ ಆ್ಯಸಿಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದನ್ನು ಎಲ್ಲಿ ಪಡೆಯಬಹುದು? ಸಾಲ್ಮನ್, ಸಾರ್ಡೈನ್, ಮಾರ್ಕೆಲ್ ಇತ್ಯಾದಿ ಮೀನುಗಳಿಂದ ಇದನ್ನು ಪಡೆಯಬಹುದು. ಇವುಗಳು ತುಂಬಾ ರುಚಿಯಾಗಿರುತ್ತದೆ ಮತ್ತು ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ.

3. ಹಸಿರು ತರಕಾರಿ ತಿನ್ನಿ
ಡಯಾಬಿಟಿಸ್ ತಡೆಯಲು ಒಳ್ಳೆಯ ದಾರಿಯೆಂದರೆ ಹಸಿರಾಗಿರುವ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರದಲ್ಲಿಡಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಡಯಾಬಿಟಿಸ್ ನಿಂದ ಕಣ್ಣಿಗೆ ದೃಷ್ಟಿ ದೋಷ ಉಂಟಾಗುತ್ತದೆ. ಇದರಿಂದ ವಿಟಾಮಿನ್ ಬಿ ಮತ್ತು ವಿಟಾಮಿನ್ ಸಿ ಅಧಿಕವಾಗಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

4. ಓಟ್ ಮೀಲ್ ಪ್ರಯತ್ನಿಸಿ
ಡಯಾಬಿಟಿಸ್ ನ್ನು ದೂರ ಮಾಡಲು ಪ್ರತೀದಿನ ಓಟ್ ಮೀಲ್ ಉಪಾಹಾರ ಸೇವನೆ ಮಾಡಿ. ಓಟ್ ಮೀಲ್ ನಲ್ಲಿ ಹೆಚ್ಚಿನ ನಾರಿನಾಂಶವಿದೆ ಮತ್ತು ಇದರಲ್ಲಿರುವ ಕಾರ್ಬ್ ಗಳು ರಕ್ತದ ಸಕ್ಕರೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

5. ಒಂದು ಕಪ್ ಟೀಯಿಂದ ಏನೆಲ್ಲಾ ಆಗಬಹುದು...
ನೀವು ಟೀ ಪ್ರಿಯರಾಗಿದ್ದರೆ ಇಲ್ಲೊಂದು ನಿಮಗೆ ಒಳ್ಳೆಯ ಸುದ್ದಿಯಿದೆ. ಚಹಾದಲ್ಲಿ ಟ್ಯಾನಿನ್ ಮತ್ತು ಕ್ಯಾಟ್ಚಿನ್ಸ್ ಗಳಿರುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರಿಂದ ಚಹಾ ಕುಡಿಯಿರಿ ಮತ್ತು ಡಯಾಬಿಟಿಸಿ ದೂರವಾಗಿಸಿ.

6. ಹಣ್ಣಿನ ಆಹಾರ ಕ್ರಮ
ಡಯಾಬಿಟಿಸ್ ನ್ನು ದೂರ ಮಾಡಬೇಕಾದರೆ ನೀವು ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ವಿಟಾಮಿನ್ ಸಿ ಹೆಚ್ಚಾಗಿರುವಂತಹ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ. ವಿಟಾಮಿನ್ ಸಿ ಇರುವ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುತ್ತದೆ ಮತ್ತು ಇದು ಮುಕ್ತ ಮೂಲಸ್ವರೂಪ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ನೆರವಾಗುತ್ತದೆ.

7. ಕ್ಯಾರೆಟ್
ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

8. ಆಲಿವ್ ಎಣ್ಣೆ ಪ್ರಯತ್ನಿಸಿ
ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಡಯಾಬಿಟಿಸ್ ನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

9. ಬೀಜಗಳು ಒಳ್ಳೆಯದು
ಬೀಜಗಳು ಡಯಾಬಿಟಿಸ್ ಆಹಾರ ಕ್ರಮದ ಒಂದು ಭಾಗ. ಬೀಜಗಳನ್ನು ಸೇವಿಸುವುದು ಕೇವಲ ಆರೋಗ್ಯಕರ ಮಾತ್ರವಲ್ಲದೆ, ಹೃದಯ ಸಂಬಂಧಿ ರೋಗಗಳಿಗೂ ಪ್ರತಿರೋಧವನ್ನು ಒಡ್ಡುತ್ತದೆ. ಇದು ಹೆಚ್ಚಿನ ಪ್ರೋಟೀನ್ ಮತ್ತು ನಾರಿನಾಂಶ ಹೊಂದಿದೆ.

10. ಫೈಟೋನ್ಯೂಟ್ರಿಯೆಂಟ್ಸ್ ಬಳಸಿ
ಬೀನ್ಸ್ ನಲ್ಲಿ ಫೈಟೋ ಪೋಷಕಾಂಶಗಳಿರುತ್ತದೆ. ಪ್ರೋಟೀನ್ ಅಧಿಕವಾಗಿರುವ ಬೇಯಿಸಿದ ಬೀನ್ಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದು ತುಂಬಾ ರುಚಿಕರ ಮತ್ತು ಆರೋಗ್ಯಕರ. ಇದನ್ನೊಮ್ಮೆ ಪ್ರಯತ್ನಿಸಿ.



Click it and Unblock the Notifications








