Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಧುಮೇಹಿಗಳಿಗೆ 15 ಬೆಸ್ಟ್ ಡಯಟ್ ಟಿಪ್ಸ್
ಮಧುಮೇಹ ನಿಯಂತ್ರಣದ ಬಲ ಸರಿಯಾದ ಆಹಾರದ ಮೇಲೆ ಅವಲಂಬಿತವಾಗಿದೆ.ಏನು ತಿನ್ನಬೇಕು ಏನು ತಿನ್ನಬಾರದು ಎಂಬುದು ಮಧುಮೇಹವನ್ನು ಹಿಡಿತದಲ್ಲಿಡಲು,ಗುಣಪಡಿಸಲು ಬಹಳ ಅವಶ್ಯಕ.
ನಿಮಗೆ ಪೂರ್ವ ಮಧುಮೇಹ ಅಥವಾ ಆಂತರಿಕ ಮಧುಮೇಹವಿದ್ದಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರು ಇದ್ದಲ್ಲಿ ಸರಿಯಾದ ಆಹಾರ ಪದ್ಧತಿಯನ್ನು ಪಾಲಿಸುವುದು ಬಹಳ ಅವಶ್ಯಕ.ಭಾರತೀಯರಿಗೆ ಮಧುಮೇಹದ ಆಹಾರ ಪದ್ಧತಿಯು 60 :20 :20 ರಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್,ಕೊಬ್ಬು,ಮತ್ತು ಪ್ರೊಟೀನ್ ಪ್ರಮಾಣವಾಗಿರಬೇಕು.
ಮಧುಮೇಹಿತಜ್ಞರು ಸಲಹೆ ನೀಡುವ 15 ಅಗ್ರ ಮಧುಮೇಹ ಆಹಾರಗಳು ಇಲ್ಲಿವೆ.

ಮೆಂತೆ
100ಮಿ ಲೀ ನೀರಿನಲ್ಲಿ ಒಂದು ಟೀ ಚಮಚ ಮೆಂತೆಯನ್ನು ರಾತ್ರಿ ಇಡೀ ನೆನೆಸಿ ತಿನ್ನುವುದು ಮಧುಮೇಹ ನಿಯಂತ್ರಿಸಲು ಪರಿಣಾಮಕಾರಿ ವಿಧಾನ.

ಟೊಮೆಟೊ ಜ್ಯೂಸ್
ಪ್ರತೀದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಟೊಮೆಟೊ ಜ್ಯೂಸ್ ಅನ್ನು ಉಪ್ಪು ಮತ್ತು ಕರಿಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.

3. ಬಾದಾಮಿ
ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಕೂಡ ಮಧುಮೇಹಕ್ಕೆ ಮದ್ದು. ಮನೆಯಲ್ಲಿ ಅಥವಾ ರೆಸ್ಟೋರೆಂಟ್ ಗಳಲ್ಲೂ ಕೂಡ ತೆಗೆದುಕೊಳ್ಳಬಹುದಾದ ಪ್ರಮುಖ ಮಧುಮೇಹ ಆಹಾರಗಳು ಇಲ್ಲಿವೆ.

4. ಧಾನ್ಯಗಳು
ಧಾನ್ಯಗಳು,ಓಟ್ಸ್,ಕಡಲೆ ಹಿಟ್ಟು,ನವಣೆ ಮತ್ತು ಇತರ ನಾರಿನಂಶವಿರುವ ಪದಾರ್ಥಗಳನ್ನು ಊಟದಲ್ಲಿ ಬಳಸಿ.ಪಾಸ್ತ ಅಥವಾ ನೂಡಲ್ಸ್ ತಿನ್ನಲು ಬಯಸಿದರೆ ಅದು ತರಕಾರಿ ಮತ್ತು ಕಾಳುಗಳಿಂದ ಕೂಡಿರಲಿ.

5.ಹಾಲು
ಕಾರ್ಬೋಹೈಡ್ರೇಟ್ ಮತ್ತು ಫೈಬರ್ ನ ಸರಿಯಾದ ಸಂಯೋಜನೆಯಿದೆ ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುತ್ತದೆ. ದಿನದಲ್ಲಿ ಎರಡು ಭಾರಿ ಹಾಲು ಕುಡಿಯುವುದು ಒಳ್ಳೆಯ ಪದ್ಧತಿ.

6.ಮಧುಮೇಹ ನಿಯಂತ್ರಣ
ನಾರಿನಂಶ ಹೆಚ್ಚಿರುವ ಬಟಾಣಿ,ಬೀನ್ಸ್,ಬ್ರೋಕೊಲಿ,ಹಸಿರುಸೊಪ್ಪುಗಳನ್ನು ಆಹಾರದಲ್ಲಿ ಬಳಸಬೇಕು.ಕಾಳುಗಳು ಆಹಾರದ ಒಂದು ಭಾಗವಾಗಿರಲಿ.

7.ಕಾರ್ಬೋಹೈಡ್ರೇಟ್ಸ್
ಕಾರ್ಬೋಹೈಡ್ರೇಟ್ಸ್ ಅಂಶವಿರುವ ಬೇರೆ ಅಹಾರಗಳಿಗಿಂತ ಬೇಳೆಕಾಳುಗಳಲ್ಲಿ ಗ್ಲೂಕೋಸ್ ನ ಪ್ರಮಾಣ ಕಡಿಮೆ ಇರುವುದರಿಂದ ಇದನ್ನು ಬಳಸುವುದು ಮುಖ್ಯ. ನಾರಿನಂಶ ಹೆಚ್ಚಿರುವ ತರಕಾರಿಗಳು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತವೆ ಮತ್ತು ಆರೋಗ್ಯವನ್ನು ಕಾಪಾಡುತ್ತವೆ.

8.ಒಮೆಗಾ-3
ಒಮೆಗಾ-3 ಮತ್ತು ಏಕಪರ್ಯಾಪ್ತ ಕೊಬ್ಬುಗಳಿರುವ ಆಹಾರವನ್ನು ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದು . ಅಗಸೆ ಬೀಜದ ತೈಲ, ಮೀನಿನಎಣ್ಣೆ, ಕ್ಯಾನೋಲ ತೈಲ,ನಟ್ಸ್ ಇವುಗಳೆಲ್ಲ ಒಳ್ಳೆಯದು.ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ ಮತ್ತು ಕೊಬ್ಬು ಮುಕ್ತವಾಗಿರುತ್ತದೆ.

9.ನಾರಿನಂಶ
ನಾರಿನಂಶ ಹೆಚ್ಚಿರುವ ಹಣ್ಣುಗಳಾದ ಪಪಾಯಿ,ಸೇಬು,ಕಿತ್ತಳೆ, ಪೇರಳೆ ಹಣ್ಣುಗಳನ್ನು ತಿನ್ನಬೇಕು.ಮಾವಿನ ಹಣ್ಣು,ಬಾಳೆಹಣ್ಣು,ದ್ರಾಕ್ಷಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ ಆದ್ದರಿಂದ ಇವುಗಳ ಬಳಕೆ ಕಡಿಮೆ ಮಾಡುವುದು ಒಳ್ಳೆಯದು.

10.ಆಗಾಗ್ಗೆ ಸ್ವಲ್ಪಸ್ವಲ್ಪ ಊಟ ಮಾಡಿ
ಒಂದೇ ಸಲ ಹೆಚ್ಚು ಊಟ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ ಅದ್ದರಿಂದ ಆಗಾಗ್ಗೆ ಸ್ವಲ್ಪ ಸ್ವಲ್ಪ ಊಟ ಮಾಡುವುದು ಸೂಕ್ತ.ಇದು ದೇಹದ ಹೆಚ್ಚು ಮತ್ತು ಕೆಲವೊಮ್ಮೆ ತುಂಬಾ ಕಡಿಮೆ ಆಗುವ ಸಕ್ಕರೆ ಅಂಶವನ್ನು ಸ್ಥಿರವಾಗಿರಿಸುತ್ತದೆ.ಸ್ನಾಕ್ಸ್ ಗಳಾಗಿ ದೋಕ್ಲ,ಕುಕ್ಕೀಸ್,ಹಣ್ಣುಗಳು,ಮಜ್ಜಿಗೆ,ಮೊಸರು,ಉಪ್ಪಿಟ್ಟು ಇಂತವುಗಳನ್ನು ತಿನ್ನುತ್ತಿರಬೇಕು.

11.ಮಧುಮೇಹ ಇರುವ ವ್ಯಕ್ತಿ
ಮಧುಮೇಹ ಇರುವ ವ್ಯಕ್ತಿ ಕಾರ್ಬೋಹೈಡ್ರೇಟ್ ಕಡಿಮೆ ಇರುವ ಮತ್ತು ನಾರಿನಂಶ ಹೆಚ್ಚಿರುವ,ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್,ವಿಟಮಿನ್, ಖನಿಜಾಂಶಗಳು ಇರುವ ಆಹಾರ ಪದ್ಧತಿ ರೂಡಿಸಿಕೊಳ್ಳಬೇಕು. ಕೊಬ್ಬಿನ ಆಹಾರಗಳು ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು.ದಿನಕ್ಕೆ (5 ಭಾರಿ)ಆಗಾಗ ಸ್ವಲ್ಪಸ್ವಲ್ಪ ತಿನ್ನಬೇಕು.

12.ಕೇಕ್
ಕೇಕ್ ಮತ್ತು ಸ್ವೀಟ್ ಗಳಿಗೆ ಕೃತಕಸಿಹಿ ಬಳಸಬಾರದು.

13.ನೀರು
ಸಾಕಷ್ಟು ನೀರು ಕುಡಿಯಿರಿ,ಮದ್ಯಪಾನ ಕಡಿಮೆಮಾಡಿ.

14.ಮಾಂಸಾಹಾರ ಮಾಡಬಹುದಾ?
ಮಂಸಾಹಾರದಲ್ಲಿ ಕೆಂಪು ಮಾಂಸಕ್ಕಿಂತ ಸಮುದ್ರ ಆಹಾರ ಮತ್ತು ಕೋಳಿಯನ್ನು ಬಳಸಿ.ಕೆಂಪು ಮಾಂಸದಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ.ಹೆಚ್ಚ್ಚು ಕೊಲೆಸ್ಟ್ರಾಲ್ ಇರುವವರು ಕೂಡ ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಉಪಯೋಗಿಸಬಾರದು.

15.ಮಧುಮೇಹಿ
ಕಾರ್ಬೋಹೈಡ್ರೇಟ್ಸ್,ಪ್ರೋಟೀನ್,ಕೊಬ್ಬುಗಳು ಸೇರಿವೆ.ಯಾವಾಗಲು ಸಮತೋಲಿತ ಮತ್ತು ಯೋಜಿತ ಆಹಾರ ಪದ್ಧತಿ ರೂಡಿಸಿಕೊಂಡರೆ ವೈಯಕ್ತಿಕ ಆರೋಗ್ಯ ಸುಧಾರಿಸಬಹುದು . ಒಂದು ನಿಯಂತ್ರಿತ ಆಹಾರ ಪದ್ಧತಿ ಬೇಸರ ತರಿಸಬಹುದು ಆದರೆ ಒಂದು ಒಳ್ಳೆಯ ಅಡುಗೆ ಆಹಾರ ಆರೋಗ್ಯವನ್ನು ಸುಧಾರಿಸುತ್ತದೆ.



Click it and Unblock the Notifications