Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಧುಮೇಹವನ್ನು ನಿಯಂತ್ರಣದಲ್ಲಿಡುವ ಆಹಾರಗಳು
ವಿಶ್ವದಲ್ಲಿ ಅತೀ ಹೆಚ್ಚು ಮಧುಮೇಹಿಗಳಿರುವ ದೇಶವೆಂದರೆ ಭಾರತ. ಮಧುಮೇಹಿಗಳ ಸಂಖ್ಯೆ ವರ್ಷದಿಂದ-ವರ್ಷಕ್ಕೆ ಗಣನೀಯವಾಗಿ ಏರುತ್ತಿದೆ, ಇದಕ್ಕೆ ನಮ್ಮ ಲೈಫ್ ಸ್ಟೈಲ್ ಪ್ರಮುಖ ಕಾರಣವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಒಮ್ಮೆ ಮಧುಮೇಹ ಬಂತೆಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿಡಬಹುದು. ಹೆಚ್ಚಿನವರಿಗೆ ಒಂದು ಅಭಿಪ್ರಾಯವಿರುತ್ತದೆ, ಮಧುಮೇಹ ಬಂದರೆ ಬರೀ ಪಥ್ಯದ ಊಟ ಮಾತ್ರ ತಿನ್ನಬೇಕು. ಹಾಗೇನು ಇಲ್ಲ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿಸುವ ಆಹಾರಗಳನ್ನುನ ಹೊರತು ಪಡಿಸಿ, ಉಳಿದೆಲ್ಲಾ ಆಹಾರಗಳನ್ನು ತಿನ್ನಬಹುದು. ಕೆಲವೊಂದು ಆಹಾರಗಳಂತೂ ಮಧುಮೇಹಿಗಳಲ್ಲಿ ಇನ್ಸುಲಿನ್ ಅಂಶವನ್ನು ನಿಯಂತ್ರಣದಲ್ಲಿಡುವಲ್ಲಿ ತುಂಬಾ ಸಹಕಾರಿಯಾಗಿದೆ. ಅಂತಹ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ನೋಡಿ: For more Click this video link

ಕಡಲೆ ಹಿಟ್ಟು ಮತ್ತು ಕಡಲೆ
ಕಡಲೆ ಹಿಟ್ಟು ಮತ್ತು ಕಡಲೆಯಿಂದ ಮಾಡಿದ ಪದಾರ್ಥಗಳನ್ನು ಮಧುಮೇಹಿಗಳು ತಿನ್ನಬಹುದು. ಇದರಲ್ಲಿ ನಾರಿನಂಶದ ಜೊತೆಗೆ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡಲು ಅವಶ್ಯಕವಾದ ವಿಟಮಿನ್ಸ್ ಇದೆ.

ಮೆಂತೆ ಬೀಜ
1 ಚಮಚ ಮೆಂತೆ ಬೀಜವನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕಿ ಬೆಳಗ್ಗೆ ಎದ್ದು ಬರೀ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದು ಒಳ್ಳೆಯದು.

ಟೊಮೆಟೊ ಜ್ಯೂಸ್
ಮಧುಮೇಹಿಗಳ ಟೊಮೆಟೊ ಜ್ಯೂಸ್ ಮಾಡಿ ಅದರಲ್ಲಿ ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ಬೆಳಗ್ಗೆ ತಿಂಡಿ ಮಾಡುವ ಮೊದಲು ಕುಡಿದರೆ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಬಹುದು.

ಧಾನ್ಯಗಳು
ಧಾನ್ಯಗಳನ್ನು ತಿನ್ನಬಹುದು, ಅದರಲ್ಲೂ ಮೊಳಕೆ ಬರಿಸಿದ ಧಾನ್ಯಗಳು, ಬ್ರೊಕೋಲಿಯ ಮೊಳಕೆ ಇವೆಲ್ಲಾ ತುಂಬಾ ಒಳ್ಳೆಯದು.

ಹಾಗಲಕಾಯಿ
ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರನಣದಲ್ಲಿಡಲು ಪ್ರತೀದಿನ ಹಾಗಲಕಾಯಿಯ ಪದಾರ್ಥ ಮಾಡಿ ತಿನ್ನಬೇಕು.

ಮೆಂತೆ ಸೊಪ್ಪು
ಮೆಂತೆ ಸೊಪ್ಪು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣಕ್ಕೆ ತಂದು ಇನ್ಸುಲಿನ್ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಬೆಂಡೆಕಾಯಿ
ಬೆಂಡೆಕಾಯಿ ಕೂಡ ತುಂಬಾ ಪ್ರಯೋಜನಕಾರಿಯಾದ ಆಹಾರವಾಗಿದೆ. ಬೆಂಡೆಕಾಯಿಯ ತುದಿಯನ್ನು ಮುರಿದಾಗ ಬರುವ ರಸವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಮುಚ್ಚಿಟ್ಟು ಮಲಗಬೇಕು. ಬೆಳಗ್ಗೆ ಎದ್ದ ಬಳಿಕ ಆ ನೀರು ಕುಡಿಯುವುದರಿಂದಲೂ ಇನ್ಸುಲಿನ್ ಅನ್ನು ನಿಯಂತ್ರಣದಲ್ಲಿಡಬಹುದು.

ಸೋರೆಕಾಯಿ
ಸೋರೆಕಾಯಿಯ ಪದಾರ್ಥ, ಸೋರೆಕಾಯಿಯ ಜ್ಯೂಸ್ ಕೂಡ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿದೆ.

ಬೇಳೆ
ಬೇಳೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ, ಆದ್ದರಿಂದ ಬೇಳೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನಬಹುದು.

ಕೆಂಪಕ್ಕಿ
ಅನ್ನ ತಿನ್ನಬಯಸುವುದಾದರೆ ಪಾಲಿಷ್ ಮಾಡದ ಕೆಂಪಕ್ಕಿಯಿಂದ ಮಾಡಿದ ಅನ್ನ ತಿನ್ನಬಹುದು.

ಗೋಧಿ
ಚಪಾತಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಮತ್ತೊಂದು ಅತೀ ಮುಖ್ಯವಾದ ಅಂಶವೆಂದರೆ ಈ ಆಹಾರಗಳನ್ನು ತಿನ್ನುವುದರ ಜೊತೆಗೆ ವ್ಯಾಯಾಮ ಮಾಡಿ, ಆಗ ಮಧುಮೇಹದ ಭಯವಿಲ್ಲದೆ ಜೀವನ ನಡೆಸಬಹುದು.



Click it and Unblock the Notifications
