Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಡಯಾಬಿಟಿಸ್ ಉಂಟುಮಾಡುವ ತಿನ್ನುವ ಅಭ್ಯಾಸಗಳು
ಬೆಳೆಯುತ್ತಿರುವ ನಗರಗಳೊಂದಿಗ ಜನರನ್ನು ಕೆಲವು ರೋಗಗಳು ಕೂಡ ಆವರಿಸಿಕೊಂಡು ಹೋಗುತ್ತದೆ. ನಗರ ಪ್ರದೇಶದ ಜನರಲ್ಲಿ ಅನಾರೋಗ್ಯಕರ ತಿನ್ನುವ ಅಭ್ಯಾಸದಿಂದ ಸಾಮಾನ್ಯವಾಗಿ ಡಯಾಬಿಟಿಸ್(ಮಧುಮೇಹ) ಬರುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ರೆಡಿ ಟು ಈಟ್ ನಂತಹ ಸಂಸ್ಕರಿತ ಆಹಾರಗಳನ್ನು ಪ್ರಚಾರಪಡಿಸುತ್ತಿದೆ ಮತ್ತು ಹಲವಾರು ವೈವಿಧ್ಯಮಯ ಆಹಾರಗಳನ್ನು ಈ ಕಂಪನಿಗಳು ನೀಡುತ್ತಿದ್ದು, ಜನರು ಇದನ್ನೇ ತಮ್ಮ ಜೀವನಶೈಲಿಯಾಗಿ ಮಾಡಿಕೊಂಡು ಡಯಾಬಿಟಿಸ್ ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಯುವ ಸಮುದಾಯ ಅದರಲ್ಲೂ ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಬೊಜ್ಜು ದೇಹ ಕಾಣಿಸುತ್ತಿದೆ. ಬೊಜ್ಜು ದೇಹವು ಅತೀ ದೊಡ್ಡ ಆರೋಗ್ಯ ಸಮಸ್ಯೆಯಾಗಿದ್ದು, ಇದು ಡಯಾಬಿಟಿಸ್ ಮತ್ತು ಇತರ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ. ಇದು ಅನಾರೋಗ್ಯಕರ ತಿನ್ನುವ ಅಭ್ಯಾಸದಿಂದ ಉಂಟಾಗುತ್ತದೆ.
ನಮ್ಮ ಆಹಾರ ಅಭ್ಯಾಸ ಸರಿಪಡಿಸಿಕೊಂಡರೆ ಡಯಾಬಿಟಿಸ್ ಬರುವ ಸಾಧ್ಯತೆ ತಡೆಗಟ್ಟಬಹುದು. ಹೆಚ್ಚಿನ ಗ್ಲೈಸೆಮಿಕ್ ಸೂಚಿ(ಜಿಐ) ಆಹಾರವನ್ನು ತಿನ್ನುವುದರಿಂದ ಆ ಆಹಾರವು ಕ್ಷಿಪ್ರಗತಿಯಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀವ್ರಗತಿಯಲ್ಲಿ ಏರುತ್ತದೆ. ಬಿಳಿ ಬ್ರೆಡ್, ಪಾಸ್ತಾ, ಕಾರ್ಬ್ರೋನೇಟೆಡ್ ಪಾನೀಯ, ಬೇಕರಿಯ ಕರಿದ ತಿಂಡಿಗಳು ಇತ್ಯಾದಿ. ಇಂತಹ ಆಹಾರಗಳನ್ನು ನಿಯಮಿತವಾಗಿ ತಿನ್ನುವುದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿದೆ.
ಡೈರಿ ಉತ್ಪನ್ನ ಮತ್ತು ಪ್ರಾಣಿಗಳ ಮಾಂಸದಿಂದ ಮಾಡಲ್ಪಟ್ಟ ಆಹಾರದಲ್ಲಿ ಕಂಡುಬರುವ ಸ್ಯಾಚುರೇಟೆಡ್ ಕೊಬ್ಬು ಡಯಾಬಿಟಿಸ್ ಉಂಟುಮಾಡಬಹುದು. ಇದನ್ನು ಟ್ರಾನ್ಸ್ ಕೊಬ್ಬು ಎಂದು ಕರೆಯಲಾಗುತ್ತದೆ ಮತ್ತು ಇದು ಪ್ಯಾಕ್ ಮಾಡಿದ ಆಹಾರ ಮತ್ತು ಫಾಸ್ಟ್ ಫುಡ್ ಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಂಪು ಮಾಂಸ, ಡೈರಿ ಉತ್ಪನ್ನಗಳು ಮತ್ತು ಅರೆ ಜಲಜನಕದಿಂದ ಕೂಡಿದ ಎಣ್ಣೆಯಿಂದ ಮಾಡಿರುವ ಆಹಾರ ಅನಾರೋಗ್ಯಕರ. ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ದೇಹವು ವಿಫಲವಾದಾಗ ಡಯಾಬಿಟಿಸ್ ಬರುತ್ತದೆ. ಒತ್ತಡ ಮತ್ತು ವ್ಯಸ್ತ ಜೀವನಶೈಲಿಯಿಂದ ಅನಿಯಮಿತ ತಿನ್ನುವ ಹವ್ಯಾಸದಿಂದ ಡಯಾಬಿಟಿಸ್ ನ ಅಪಾಯ ಹೆಚ್ಚುತ್ತದೆ. ಬೆಳಗ್ಗಿನ ಉಪಾಹಾರ ತಿನ್ನದೆ ಇರುವುದರಿಂದ ನಿಮ್ಮ ದೇಹದ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟಾಗಿ ಸಕ್ಕರೆ ಕಡುಬಯಕೆ ಮತ್ತು ಹಸಿರು ವೈಫಲ್ಯದ ನೋವಿಗೆ ಒಳಗಾಗಬಹುದು.

1. ಉಪಹಾರ ಮಾಡದಿರುವುದು
ಹೆಚ್ಚಿನ ಜನರು ಹಸಿವಾಗಿದ್ದರೂ ಬೆಳಗ್ಗಿನ ಉಪಹಾರ ತ್ಯಜಿಸುತ್ತಾರೆ. ಇದರಿಂದ ದೇಹದಲ್ಲಿ ಸಕ್ಕರೆ ಮಟ್ಟದ ಅಸಮತೋಲನ ಉಂಟಾಗುತ್ತದೆ. ಇದರಿಂದ ನೀವು ಸಕ್ಕರೆ ಕಡುಬಯಕೆ ಮತ್ತು ಹಸಿವು ವೈಫಲ್ಯದ ನೋವಿಗೆ ಒಳಗಾಗಬಹುದು.

2. ಅಧಿಕ ಜಿಐ ಇರುವ ಆಹಾರ ಸೇವನೆ
ಗ್ಲೈಸೆಮಿಕ್ ಸೂಚಿ(ಜಿಐ) ಇರುವಂತಹ ಆಹಾರಗಳಾದ ಬಿಳಿ ಬ್ರೆಡ್, ಪಾಸ್ತಾ, ಫಿಜ್ಜಾ, ಕಾರ್ಬ್ರೋನೇಟೆಡ್ ಪಾನೀಯ ಇತ್ಯಾದಿಗಳು ಅದರಲ್ಲಿರುವ ಅನಾರೋಗ್ಯಕರ ಶೂನ್ಯ ನಾರಿನಾಂಶವು ಜೀರ್ಣಕ್ರಿಯೆ ವೇಗವಾಗಿಸಿ ಹಸಿವು ವೈಫಲ್ಯ ನೋವು ಮತ್ತು ಹೆಚ್ಚಿನ ಗ್ಲೂಕೋಸ್ ಬಿಡುಗಡೆ ಮಾಡಿ ಡಯಾಬಿಟಿಸ್ ನ ಅಪಾಯ ಹೆಚ್ಚಿಸುತ್ತದೆ.

3. ಅನಾರೋಗ್ಯಕರ ಕೊಬ್ಬು ಸೇವನೆ
ಎಲ್ಲಾ ಕೊಬ್ಬುಗಳು ಕೆಟ್ಟದಲ್ಲ, ಆಲಿವ್ ಎಣ್ಣೆ ಮತ್ತು ಮೀನುಗಳಲ್ಲಿ ಇರುವಂತಹ ಅನ್ಸ್ಯಾಚುರೇಟೆಡ್ ಕೊಬ್ಬುಗಳು ಒಳ್ಳೆಯ ಕೊಬ್ಬುಗಳು ಮತ್ತು ಆರೋಗ್ಯಕರ. ಆದಾಗ್ಯೂ ಕರಿದ ಆಹಾರಗಳು, ಫಾಸ್ಟ್ ಫುಡ್, ಸಂಸ್ಕರಿತ ಪ್ಯಾಕ್ ಮಾಡಲ್ಪಟ್ಟ ಆಹಾರಗಳಲ್ಲಿ ಸಾಕಷ್ಟು ಟ್ರಾನ್ಸ್ ಕೊಬ್ಬು ಮತ್ತು ಉನ್ನತ ಮಟ್ಟದ ಸ್ಯಾಚುರೇಟೆಡ್ ಕೊಬ್ಬುಗಳು ತುಂಬಾ ಅನಾರೋಗ್ಯಕಾರಿ.

4. ಅನಾರೋಗ್ಯಕರ ತಿಂಡಿಗಳು
ನೀವು ಎಷ್ಟು ಆರೋಗ್ಯಕರವಾಗಿ ತಿಂದರೂ ಕೆಲವೊಂದು ಸಲ ತಿಂಡಿಗಳಿಗಳಿಗೆ ನಿಮ್ಮ ಬಯಕೆಯಾಗುತ್ತದೆ. ಇಂತಹ ಸಮಯದಲ್ಲಿ ಕೃತಕ ಸಿಹಿಯಿಂದ ಮಾಡಿರುವ ತಿಂಡಿ, ಸಮೋಸದಂತಹ ಕರಿದ ತಿಂಡಿಗಳನ್ನು ತಿನ್ನುತ್ತೀರಿ. ಇದರಿಂದ ಡಯಾಬಿಟಿಸ್ ಅಪಾಯ ಹೆಚ್ಚು. ಇದರ ಬದಲಿಗೆ ಹಣ್ಣುಗಳನ್ನು ತಿನ್ನಿ.

5. ಗಾಳಿಗೊಡ್ಡಲ್ಪಟ್ಟ ಮತ್ತು ವಿಪರೀತ ಸಿಹಿ ಪಾನೀಯ
ತಿಂಡಿ ಅಥವಾ ಊಟದ ವೇಳೆ ಗಾಳಿಗೊಡ್ಡಲ್ಪಟ್ಟಿರುವ ಮತ್ತು ವಿಪರೀತ ಸಿಹಿಯಾದ ತಿಂಡಿಯನ್ನು ತಿನ್ನು ಇಂದು ತುಂಬಾ ಸಾಮಾನ್ಯವಾಗುತ್ತಿದೆ. ಆದರೆ ಇಂತಹ ಅನಾರೋಗ್ಯಕರ ಆಹಾರ ಅಭ್ಯಾಸವು ಆರೋಗ್ಯಕ್ಕೆ ಅಪಾಯವಾದ ದೇಹದಲ್ಲಿ ಬೊಜ್ಜನ್ನು ಉಂಟು ಮಾಡುತ್ತದೆ ಮತ್ತು ಇದು ಡಯಾಬಿಟಸ್ ಗೆ ರಹದಾರಿ.

6. ಹಣ್ಣು ಮತ್ತು ತರಕಾರಿ ಕಡೆಗಣನೆ
ಹಣ್ಣು ಮತ್ತು ತರಕಾರಿಗಳು ಪೌಷ್ಠಿಕಾಂಶ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದ್ದು, ಇದು ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟದ ನಿಯಂತ್ರಣ ಮತ್ತು ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದನ್ನು ಕಡೆಗಣಿಸುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟದ ಅಸಮತೋಲನ ಉಂಟಾಗಿ ಡಯಾಬಿಟಿಸ್ ಗೆ ಕಾರಣವಾಗಬಹುದು.

7. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು
ಆರೋಗ್ಯಕರ ಆಹಾರ ತಿನ್ನುವುದು ಒಳ್ಳೆಯ ಅಭ್ಯಾಸ. ಆದರೆ ಮಧ್ಯರಾತ್ರಿ ವೇಳೆ ಪ್ಯಾಕ್ ಮಾಡಲ್ಪಟ್ಟ ಆಹಾರ ಮತ್ತು ಇತರ ಕೆಲವು ಅನಾರೋಗ್ಯಕರ ತಿಂಡಿಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಮೇಲೆ ಒತ್ತಡ ಬಿದ್ದು ಸಕ್ಕರೆ ಮಟ್ಟ ಹೆಚ್ಚಾಗಬಹುದು.

8. ಭಾವನಾತ್ಮಕವಾಗಿ ತಿನ್ನುವುದು
ಇಂದಿನ ವ್ಯಸ್ತ ಮತ್ತು ಒತ್ತಡದ ಜೀವನಶೈಲಿಯಲ್ಲಿ ಜನರು ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಕೆಲವರು ಅತಿಯಾಗಿ ತಿಂದು ತೂಕ ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಇದರಿಂದ ದೇಹದಲ್ಲಿ ಬೊಜ್ಜು ಉಂಟಾಗಿ ಸಕ್ಕರೆ ಮಟ್ಟದ ಅಸಮತೋಲನದಿಂದ ಡಯಾಬಿಟಿಸ್ ಬರುತ್ತದೆ.

9. ಊಟದ ಬಳಿಕ ಸಿಹಿ
ಇಂದಿನ ದಿನಗಳಲ್ಲಿ ಊಟ ಬಳಿಕ ಸಿಹಿ ಕೊಡುವುದು ಒಂದು ವ್ಯಾಪಾರವಾಗಿ ಹೋಗಿದೆ. ಊಟದ ವೇಳೆ ಹೆಚ್ಚಿನ ಸಕ್ಕರೆ ಅಂಶ ಸೇವಿಸಿದ ಕಾರಣ ಸಿಹಿ ತಿಂದರೆ ಮತ್ತಷ್ಟು ಸಕ್ಕರೆ ಅಂಶವು ನಿಮ್ಮ ದೇಹವನ್ನು ಸೇರಿ ಅಸಮತೋಲನ ಉಂಟಾಗುತ್ತದೆ. ರಾತ್ರಿ ಊಟದ ಬಳಿಕ ಸಿಹಿ ತಿನ್ನುವುದು ತುಂಬಾ ಅಪಾಯಕಾರಿ. ಯಾಕೆಂದರೆ ಆಗ ಕ್ಯಾಲರಿ ದಹಿಸಲು ಕಡಿಮೆ ಚಟುವಟಿಕೆ ಇರುತ್ತದೆ.



Click it and Unblock the Notifications











