Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಮಧುಮೇಹಿಗಳಿಗೆ 16 ಟೇಸ್ಟಿ ಸ್ನ್ಯಾಕ್ಸ್ ಐಡಿಯಾ
ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ತಿಳಿದಿದ್ದರೆ ಯಾವುದೇ ತೊಂದರೆವಿಲ್ಲದೆ ಇತರರಂತೆ ಜೀವನ ನಡೆಸಬಹುದು. ಮಧುಮೇಹ ಬಂದರೆ ಅದನ್ನು ನಿಯಂತ್ರಣದಲ್ಲಿಟ್ಟರೆ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ, ಆದರೆ ನಿರ್ಲಕ್ಷ್ಯ ತೋರಿದರೆ ಮಾತ್ರ ತೊಂದರೆ ಖಚಿತ. ಮಧುಮೇಹ ನಿಯಂತ್ರಣದಲ್ಲಿಡಲು ಮುಖ್ಯವಾದ ದಾರಿಯೆಂದರೆ ಎರಡು. 1. ಆಹಾರಕ್ರಮ 2. ವ್ಯಾಯಾಮ
ಆಹಾರಕ್ರಮವೆಂದರೆ ಪಥ್ಯ ಮಾಡಬೇಕಾಗಿಲ್ಲ, ರುಚಿ-ರುಚಿಯಾದ ಆಹಾರಗಳನ್ನು ತಿನ್ನಬಹುದು, ಆದರೆ ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸದ ಆಹಾರಗಳಾಗಿದ್ದರೆ ಸಾಕು. ಇಲ್ಲಿ ನಾವು ಮಧುಮೇಹಿಗಳು ಕೆಲ ರುಚಿಕರವಾದ ಸ್ನ್ಯಾಕ್ಸ್ ಐಡಿಯಾ ನೀಡಿದ್ದೇವೆ ನೋಡಿ:

100 ಕ್ಯಾಲೋರಿ ಒಳಗಿನ ಸ್ನ್ಯಾಕ್ಸ್
ಮಧುಮೇಹಿಗಳು ಆಹಾರದಲ್ಲಿರುವ ಕ್ಯಾಲೋರಿ ಬಗ್ಗೆ ಹೆಚ್ಚಿನ ಗಮನಕೊಡಬೇಕು, ಏಕೆಂದರೆ ದೇಹದ ತೂಕ ಹೆಚ್ಚಾಗುವುದು ಒಳ್ಳೆಯದಲ್ಲ, 100 ಕ್ಯಾಲೋರಿಕ್ಕಿಂತ ಕಡಿಮೆ ಇರುವ ಸ್ನ್ಯಾಕ್ಸ್ ತಿನ್ನಬಹುದು.

ಸಲಾಡ್
ಹಸಿ ತರಕಾರಿಗಳಿಂದ ಸಲಾಡ್ ಮಾಡಿ ತಿನ್ನಬಹುದು. ಹಸಿ ಕ್ಯಾರೆಟ್ ಅನ್ನು ಮಿತಿಯಲ್ಲಿ ತಿನ್ನಿ, ಯಾವುದೇ ಅಪಾಯ ಉಂಟಾಗುವುದಿಲ್ಲ.

ರೋಸ್ಟ್ ಮಾಡಿದ ಬಾದಾಮಿ
ರೋಸ್ಟ್ ಮಾಡಿದ ಬಾದಾಮಿ ಬಾಯಿಗೆ ರುಚಿ, ಅಲ್ಲದೆ ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಇದರಲ್ಲಿ ವಿಟಮಿನ್ ಇ ಕೂಡ ಇದೆ. ಒಂದು ಬಾರಿಗೆ 6-8 ರೋಸ್ಟ್ ಮಾಡಿದ ಮಾಡಿದ ಬಾದಾಮಿ ತಿನ್ನಬಹುದು.

ಬೇಯಿಸಿದ ಮೊಟ್ಟೆಯ ಬಿಳಿ
ಮೊಟ್ಟೆಯ ಬಿಳಿಗೆ ಸ್ವಲ್ಪವೇ ಸ್ವಲ್ಪ ಉಪ್ಪು ಹಾಕಿ ಕರಿ ಮೆಣಸಿನ ಪುಡಿ ಉದುರಿಸಿ ಸ್ನ್ಯಾಕ್ಸ್ ಆಗಿ ತಿನ್ನಬಹುದು.

ಚೆನ್ನಾಗಿ ಜಗಿದು ತಿನ್ನಿ
ಸ್ನ್ಯಾಕ್ಸ್ ಅನ್ನು ಚೆನ್ನಾಗಿ ಜಗಿದು ತಿನ್ನಿ. ಇಲ್ಲದಿದ್ದರೆ ಮಿತಿ ಮೀರಿ ತಿನ್ನುವಿರಿ, ನಿಧಾನಕ್ಕೆ ಜಗಿದು ತಿಂದರೆ ಸ್ವಲ್ಪ ತಿಂದಾಗ ಸಾಕಾಗುವುದು.

ಸೇಬು
ಮಧುಮೇಹಿಗಳು ತಿನ್ನಬಹುದಾದ ಅತ್ಯುತ್ತವಾದ ಹಣ್ಣೆಂದರೆ ಸೇಬು. ಆಪಲ್ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ, ದೇಹಕ್ಕೆ ಅಗತ್ಯವಿರುವ ಕಬ್ಬಿಣದಂಶ ದೊರೆಯುವುದು.

ವೆಜ್ ಟೇಬಲ್ ಬ್ರೋಥ್
ಕ್ಯಾಪ್ಸಿಕಂ, ಕ್ಯಾರೆಟ್, ಬೀನ್ಸ್, ಸೋರೆಕಾಯಿ ಇವುಗಳನ್ನು ಬೇಯಿಸಿ, ಇವುಗಳ ರಸ ಹಿಂಡಿ ಅವುಗಳನ್ನು ಪ್ಲಾಸ್ಕ್ ನಲ್ಲಿ ತುಂಬಿ ಬೇಕಾದಾಗ ಕುಡಿಯಿರಿ. ಈ ಜ್ಯೂಸ್ ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸ್ಟ್ರಿಂಗ್ ಚೀಸ್
ಸ್ಟ್ರಿಂಗ್ ಚೀಸ್ ಪ್ರೊಟೀನ್ ಅಧಿಕವಾಗಿರುವ ಸ್ನ್ಯಾಕ್ಸ್ ಆಗಿರುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲಲ್ಇಡುತ್ತದೆ. 2 ಸ್ಟ್ರಿಂಗ್ ನಲ್ಲಿ 100 ಕ್ಯಾಲೋರಿ ಇರುತ್ತದೆ. ಆದ್ದರಿಂದ 2ಕ್ಕಿಂತ ಹೆಚ್ಚು ತಿನ್ನಬೇಡಿ.

ಹಣ್ಣಿನ ಸ್ಮೂತಿ

ಕ್ರೀಮ್ ಲೆಸ್ ಸೂಪ್
ಕ್ರೀಮ್ ಲೆಸ್ ಸೂಪ್ ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೂಪ್ ದೇಹದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

ಪಿಸ್ತಾ
ಮಧುಮೇಹಿಗಳು ತಿನ್ನಬಹುದಾದ ಮತ್ತೊಂದು ಸೂಪರ್ ನಟ್ಸ್ ಅಂದರೆ ಪಿಸ್ತಾ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಶುಗರ್ ಫ್ರೀ ಕೇಕ್
ಶುಗರ್ ಫ್ರೀ ಕೇಕ್ ಗಳು ದೊರೆಯುತ್ತದೆ. ಅವುಗಳನ್ನು ತಿನ್ನಬಹುದು.

ಕಾಟೇಜ್ ಚೀಸ್
ಕಾಟೇಜ್ ಚೀಸ್ ನಲ್ಲಿ ಪ್ರೊಟೀನ್ ಅಧಿಕವಿರುತ್ತದೆ, ಒಮೆಗಾ 3 ಕೂಡ ಇರುತ್ತದೆ. ಇದನ್ನು ಕೂಡ ತಿನ್ನಬಹುದು.

ಪೀನಟ್ ಬಟರ್
ಗೋಧಿ ಬ್ರೆಡ್ ಗೆ ಪೀನಟ್ ಬಟರ್ ಹಾಕಿ ಸ್ಯಾಂಡ್ ವಿಚ್ ಮಾಡಿ ತಿನ್ನಬಹುದು. ತುಂಬಾ ಬಳಸಬೇಡಿ, ಮಿತಿಯಲ್ಲಿ ತಿನ್ನಿ.

ಸ್ನ್ಯಾಕ್ಸ್ ಕೊಳ್ಳುವ ಬದಲು ಮನೆಯಿಂದಲೇ ಕೊಂಡೊಯ್ಯಿರಿ
ಹೊರಗಡೆಯಿಂದ ಸ್ನ್ಯಾಕ್ಸ್ ಕೊಂಡು ತಿನ್ನುವ ಬದಲು ನೀವೇ ಮಾಡಿ ಅದನ್ನು ಹೊರಗಡೆ ಹೋಗುವಾಗ ನಿಮ್ಮ ಕೊಂಡೊಯ್ಯಿರಿ. ಇದರಿಂದ ಕ್ಯಾಲೋರಿ ಬಗ್ಗೆ ನಿಗಾ ಇಡಬಹುದು.

ಲೆಟ್ಯೂಸೆ ರೋಲ್
ತರಕಾರಿ ಬೇಯಿಸಿ ಅದಕ್ಕೆ ಲೆಟ್ಯೂಸೆ ಎಲೆ ಸುತ್ತಿ ರೋಲ್ ಮಾಡಬಹುದು, ನಾನ್ ವೆಜ್ ತಿನ್ನುವವರಾದರೆ ಮೀನಿಂದ ರೋಲ್ ಮಾಡಿದ ಸ್ನ್ಯಾಕ್ಸ್ ತಿಂದರೆ ಬಾಯಿಗೂ ರುಚಿ, ಆರೋಗ್ಯಕ್ಕೆ ತುಂಬಾ ಒಳ್ಳೆಯದು.



Click it and Unblock the Notifications