Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯಾವ ಬಗೆಯ ಡಯಾಬಿಟಿಸ್ ಹೆಚ್ಚು ಅಪಾಯಕಾರಿ?

ಆದರೆ ಈ ಎಲ್ಲರಿಗೆ ಒಂದೇ ರೀತಿಯ ಸಕ್ಕರೆ ಕಾಯಿಲೆ ಬರುವುದಿಲ್ಲ. ಕೆಲವರಿಗೆ ಟೈಪ್ 1 ಮತ್ತೆ ಕೆಲವರಿಗೆ ಟೈಪ್ 2 ಡಯಾಬಿಟಿಸ್ ಸಮಸ್ಯೆ ಇರುತ್ತದೆ. ಅದರಲ್ಲಿ ಟೈಪ್ 1 ಡಯಾಬಿಟಿಸ್, ಟೈಪ್ 2 ಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ.
1. ಟೈಪ್ 1 ಸಕ್ಕರೆ ಕಾಯಿಲೆ(Type I Diabetes) : ಇದು ಸಾಮಾನ್ಯವಾಗಿ ಮಕ್ಕಳು ಅಥವಾ ಯುವಕರಲ್ಲಿ ಕ೦ಡು ಬರುತ್ತದೆ. ದೇಹದಲ್ಲಿ ಇನ್ಸುಲಿನ್ ಅ೦ಶವು ಸ೦ಪೂರ್ಣವಾಗಿ ಇಲ್ಲದೆಯಿರುವುದು ಅಥವಾ ಶರೀರದಲ್ಲಿ ಇನ್ಸುಲಿನ್ ಅ೦ಶವು ಉತ್ಪತ್ತಿಯಾಗದೆ ಇದ್ದರೆ ಟೈಪ್ 1 ಡಯಾಬಿಟಿಸ್ ಎಂದು ಕರೆಯುತ್ತಾರೆ. ಇದು ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಇನ್ಸೂಲಿನ್ ಚುಚ್ಚು ಮದ್ದು ನೀಡಿ ದೇಹದಲ್ಲಿ ಇನ್ಸೂಲಿನ್ ಪ್ರಮಾಣವನ್ನು ಕಾಪಾಡಲಾಗುವುದು.
2. ಟೈಪ್ 2 ಸಕ್ಕರೆ ಕಾಯಿಲೆ(Type II Diabetes): ಇದರಲ್ಲಿ ಇನ್ಸುಲಿನ್ ಅ೦ಶವು ಶರೀರದಲ್ಲಿ ಕಡಿಮೆ ಉತ್ಪತ್ತಿಯಾಗುವುದು ಅಥವಾ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದೆಯಿರುವುದು. ಇದದ ಜೊತೆಗೆ ಇತರೆ ಕಾಯಿಲೆಗಳು ಅಥವಾ ಬೊಜ್ಜು , ಅತಿ ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳು ಕೂಡ ಇರಬಹುದು. ಈ ಸಕ್ಕರೆ ಕಾಯಿಲೆ 30 ವರ್ಷದ ಬಳಿಕ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಸಕ್ಕರೆ ಕಾಯಿಲೆ ಇಲ್ಲದಿದ್ದರೂ ಕೂಡ ಇದನ್ನು ಬರದಂತೆ ಅಥವಾ ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವ ಜೀವನ ಶೈಲಿ ಅನುಸರಿಸುವುದು ಒಳ್ಳೆಯದು. ಇದು ಪ್ರಾರಂಭದ ಹಂತದಲ್ಲಿದ್ದರೆ ಚಿಕಿತ್ಸೆ ಮತ್ತು ಡಯಟ್ ನಿಂದ ನಿಯಂತ್ರಣದಲ್ಲಿಡುವುದು ಸುಲಭ.
ಸೂಚನೆ:
1. 30 ವರ್ಷದ ಬಳಿಕ ಡಯಾಬಿಟಿಸ್ ಪರೀಕ್ಷೆ ಮಾಡಿಸಬೇಕು. ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾಧ ತಕ್ಷಣ ಚಿಕಿತ್ಸೆಯನ್ನು ಎಲ್ಲರಿಗೂ ಪ್ರಾರ೦ಭಿಸುವ ಅಗತ್ಯವಿಲ್ಲ.
2.ಸಕ್ಕರೆ ಕಾಯಿಲೆಗೆ ಔಷಧ ಚಿಕಿತ್ಸೆ ಚಿಕಿತ್ಸೆ ಪ್ರಾರ೦ಭದಲ್ಲಿ ಆಹಾರ ಮತ್ತು ಶರೀರಕ್ಕೆ ಒಳ್ಳೆಯ ವ್ಯಾಯಾಮ ಬಹಳ ಮುಖ್ಯ. ನಂತರ ಔಷಧಿ ಚಿಕಿತ್ಸೆ ಪ್ರಾರಂಭಿಸಬೇಕು.
3. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಮುಖ್ಯವಾಗಿ ದೇಹದ ತೂಕ ಕಡಿಮೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
