Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಟೈಪ್ 1 ಡಯಾಬಿಟಿಸ್ ಕಾಯಿಲೆಯ ಲಕ್ಷಣಗಳು

ಈ ಕಾಯಿಲೆ ಬಂದರೆ ದೇಹವು ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಸಕ್ಕರೆ ಅಂಶ ಶೇಖರವಾಗುತ್ತಾ ಹೋಗಿ ಇದರಿಂದ ಪ್ರಾಣಕ್ಕೆ ಅಪಾಯ ಉಂಟಾಗುತ್ತದೆ. ಈ ರೀತಿ ಕಾಯಿಲೆ ಬಂದರೆ ಜೀವನ ಪೂರ್ತಿ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಡಯಾಬಿಟಿಸ್ ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲಿ ಕೂಡ ಕಂಡುಬರುತ್ತದೆ. ಈ ಕಾಯಿಲೆ ಇದ್ದಕ್ಕಿದ್ದ ಹಾಗೇ ಕೂಡ ಬರಬಹುದು.
ಟೈಪ್ 1 ಡಯಾಬಿಟಿಸ್ ಕಾಣಿಸಿಕೊಂಡರೆ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ:
1. ಬಾಯಿ ಒಣಗುವುದು ಮತ್ತು ವಿಪರೀತ ಬಾಯಾರಿಕೆ
2. ಬಾಯಿ ದುರ್ನಾತ
3. ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು
4. ಇದ್ದಕ್ಕಿದ್ದ ಹಾಗೇ ತೂಕ ಕಡಿಮೆಯಾಗುವುದು
5. ತುಂಬಾ ಸುಸ್ತು ಮತ್ತು ತಲೆಸುತ್ತು
6. ತ್ವಚೆ ಸಮಸ್ಯೆ ಅದರಲ್ಲೂ ಒಣ ತ್ವಚೆ, ತ್ವಚೆಯಲ್ಲಿ ತುರಿಕೆ ಕಂಡುಬರುತ್ತದೆ.
7. ಕೈಕಾಲುಗಳ ಬೆರಳುಗಳಿಗೆ ಜೋಮು ಹಿಡಿಯುವುದು
8. ದೃಷ್ಟಿ ಮಂಜಾಗುವುದು
9. ಏಕಾಗ್ರಕತೆ ಕಡಿಮೆಯಾಗುವುದು
ಈ ರೀತಿಯ ಕಾಯಿಲೆ ಬಂದರೆ ದೇಹದಲ್ಲಿರುವ ಸಂಪೂರ್ಣ ಶಕ್ತಿ ಕರಗುವುದರಿಂದ ಅಧಿಕ ಪೋಷಕಾಂಶವಿರುವ ಆಹಾರ ತಿಂದರೆ ಮಾತ್ರ ರಕ್ತದಲ್ಲಿ pH ಪ್ರಮಾಣ ಸರಿದೂಗಿಸಲು ಸಾಧ್ಯ. ಈ ಡಯಾಬಿಟಿಸ್ ದೇಹದಲ್ಲಿರುವ ಶಕ್ತಿಯನ್ನು ಕುಂದಿಸುವಾಗ ದೇಹದಲ್ಲಿ ketones ಎಂಬ ಆಸಿಡ್ ಹೆಚ್ಚಾಗುವುದು. ಈ ಆಸಿಡ್ ವಿಷಕಾರಿಯಾಗಿದ್ದು ದೇಹಕ್ಕೆ ಅಪಾಯವನ್ನು ತರುವ ಸಾಧ್ಯತೆ ಹೆಚ್ಚು.
ಟೈಪ್ 1 ಡಯಾಬಿಟಿಸ್ ಇರುವವರು ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುವುದರ ಜೊತೆಗೆ ಉತ್ತಮ ಡಯಟ್ ಮತ್ತು ವ್ಯಾಯಾಮ ಮಾಡಿದರೆ ಈ ಡಯಾಬಿಟಿಸ್ ನಿಂದ ಪ್ರಾಣಕ್ಕೆ ಅಪಾಯ ಉಂಟಾಗುವುದನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
