Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಮಧುಮೇಹಿಗಳಿಗೆ ವಿಶೇಷ ಆಹಾರದ ಅಗತ್ಯವಿಲ್ಲ!

ಆದರೆ ಮಧುಮೇಹಿಗಳಿಗೆ ವಿಶೇಷವಾದ ಆಹಾರದ ಅಗತ್ಯವೇನಿಲ್ಲ. ತನ್ನ ಕುಟುಂಬದ ಸದಸ್ಯರು ಸೇವಿಸುವ ಆಹಾರವನ್ನೇ ಅಳತೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದಷ್ಟೆ. ಮಧುಮೇಹ ಕಾಯಿಲೆಯ ಚಿಕಿತ್ಸೆಯಲ್ಲಿ ಆಹಾರ ಪ್ರಧಾನ ಪಾತ್ರವನ್ನು ವಹಿಸುತ್ತದೆ, ಔಷಧಿಗಳು ಮತ್ತು ವ್ಯಾಯಾಮ ಕಾಯಿಲೆ ಹೆಚ್ಚಾಗದಂತೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಮಧುಮೇಹಿಗಳು ಯಾವ ಆಹಾರ ತಿನ್ನಬಹುದು ಯಾವ ಬಗೆಯ ಆಹಾರವನ್ನು ತಿಂದರೆ ಅಪಾಯ ಎಂದು ತಿಳಿಯೋಣ ಬನ್ನಿ.
ಮಧುಮೇಹಿಗಳು ಪಾಲಿಸಬೇಕಾದ ಆಹಾರಕ್ರಮ:
1. ವೈದ್ಯರು ತಿಳಿಸಿರುವ ಆಹಾರಕ್ರಮವನ್ನು ಪಾಲಿಸಬೇಕು. ಒಂದು ವೇಳೆ ಆಹಾರ ಸೇವನೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಉದ್ದೇಶವಿದ್ದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
2. ಮುಖ್ಯವಾದ ಅಂಶವೆಂದರೆ ಊಟವನ್ನು ಬಿಡಬಾರದು. ಅಲ್ಲದೆ ಊಟದ ಜೊತೆ ತಿಂಡಿ ತಿನಿಸನ್ನು ಸೇವಿಸದಿರುವುದು ಉತ್ತಮ. ಬೇಕರಿ ತಿಂಡಿಗಳು ಮತ್ತು ಮದ್ಯವನ್ನು ದೂರವಿಡಬೇಕು.
3. ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರು ನಿಗದಿಪಡಿಸಿದ ವೇಳೆಯಲ್ಲಿ ಊಟವನ್ನು ಮಾಡಬೇಕು. ಈ ರೀತಿ ಮಾಡಿದರೆ ರಕ್ತದಲ್ಲಿ ಸಕ್ಕರೆಯ ಅಂಶದ ಕೊರತೆಯನ್ನು ತಡೆಗಟ್ಟಿಕೊಳ್ಳಬಹುದು.
4. ಹೊಟ್ಟೆ ತುಂಬಾ ಊಟ ಮಾಡುವ ಬದಲು, ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ಸೇವಿಸುವುದು ಒಳ್ಳೆಯದು.
5. ದ್ವಿದಳ ಧಾನ್ಯಗಳು, ಕಾಳುಗಳು, ತುಪ್ಪ ಅಥವಾ ಎಣ್ಣೆಯನ್ನು ಅಳತೆ ಪ್ರಮಾಣದಲ್ಲಿ ಸೇವಿಸಬೇಕು. ಬೇಯಿಸಿದ ನಂತರ ಆಹಾರವನ್ನು ಕಡಿಮೆ ಅಥವಾ ಪ್ರಮಾಣದಲ್ಲಿ ಸೇವಿಸಬೇಕು.
6. ಅನ್ನ, ಆಲೂಗಡ್ಡೆ , ಹಣ್ಣುಗಳನ್ನು ತಿನ್ನಬಹುದು. ಆದರೆ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಅಧಿಕ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ.
ಈ ಕೆಳಕಂಡ ಆಹಾರ ಪದಾರ್ಥಗಳನ್ನು ಮಧುಮೇಹದವರು ಸೇವಿಸಬಹುದು.
1. ನೀರು, ಸಕ್ಕರೆ ಇಲ್ಲದೆ ಕಾಫಿ, ಟೀ, ಕೊಬ್ಬು ಇಲ್ಲದ ಸೂಪನ್ನು ಸೇವಿಸಬಹುದು.
2. ನಿಂಬೆಹಣ್ಣಿನ ರಸ, ಉಪ್ಪಿನ ಸೇವಿಸಬಹುದು.
3. ಕಡಿಮೆ ಪ್ರಮಾಣದಲ್ಲಿ ಸಫೋಲದಂತಹ ಎಣ್ಣೆಯನ್ನು ಉಪಯೋಗಿಸಬಹುದು.
4. ಶೇ. 3-4 ರಷ್ಟು ಕಾರ್ಬೋಹೈಡ್ರೇಟ್ಸ್ ಇರುವ ತಾಜಾ ತರಕಾರಿಗಳನ್ನು, ಹಾಗೆಯೇ ಅಥವಾ ಅರ್ಧ ಬೇಯಿಸಿದ ಕ್ಯಾರೆಟ್ , ಆಲೂಗೆಡ್ಡೆ, ಬೀಟ್ ರೂಟ್ ತಿನ್ನಬಹುದು.
5. ದವಸ ಧಾನ್ಯಗಳಲ್ಲಿ ರಾಗಿ, ಗೋಧಿ, ಅಕ್ಕಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.
ಮಧುಮೇಹಿಗಳು ಮುಟ್ಟಬಾರದ ಆಹಾರಗಳು:
1. ಐಸ್‌ಕ್ಯಾಂಡಿ, ಐಸ್‌ಕ್ರೀಮ್, ಗ್ಲೂಕೋಸ್, ಜೇನುತುಪ್ಪ, ಬೆಲ್ಲ, ಜಾಮ್, ಸಕ್ಕರೆ, ಪಾನಕ.
2. ಕೇಕ್‌ಗಳು, ಪೇಡ, ಬಿಸ್ಕಟ್ ಗಳು, ಹಾಲಿನ ಉತ್ಪನ್ನಗಳು.
3. ಬಿಯರ್, ವೈನ್ ಸೇರಿದಂತೆ ಇತರೆ ಮದ್ಯ ಪದಾರ್ಥಗಳನ್ನು ಸೇವಿಸಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications