Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
<font color="blue">ಭಾನುವಾರ ನೀಲಿಬಣ್ಣಕ್ಕೆ ತಿರುಗಲಿದೆ ತಾಜ್ ಮಹಲ್</font>

ಹೌದು. ವಿಶ್ವ ಮಧುಮೇಹ ದಿನ (ದಿ. 14.11-2011, ಸೋಮವಾರ)ದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪರಂಪರೆಯ ತಾಣ ತಾಜ್ ಮಹಲನ್ನು ನೀಲಿ ಬಣ್ಣದ ಲೈಟ್ ಗಳಿಂದ ಸಿಂಗರಿಸಿ ಇಡೀ ವಿಶ್ವಕ್ಕೇ ಸಂದೇಶ ರವಾನಿಸಲಾಗುವುದು.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಮಧುಮೇಹ ವಿರೋಧಿ ಕಾರ್ಯಕರ್ತರು ಭಾರತೀಯ ಪುರಾತತ್ವ ಇಲಾಖೆಗೆ ತಾಜ್ ಮಹಲನ್ನು ವಿಶ್ವ ಮಧುಮೇಹದ ಸಂಕೇತವಾಗಿರುವ ನೀಲಿ ಬಣ್ಣದಿಂದ ಸಿಂಗರಿಸುವುದಾಗಿ ಮನವೊಲಿಸಿದೆ.
ಈ ಪಟ್ಟಿಯಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ ಕೂಡ ಸೇರಿಕೊಂಡಿದ್ದು, ಇದೇ ಮೊದಲ ಬಾರಿಗೆ ಈ ಮೂರು ವಿಶ್ವ ಪರಂಪರೆಯ ತಾಣಗಳನ್ನು ಸಿಂಗರಿಸಲು ಎಎಸ್ ಐ ಅನುಮತಿ ನೀಡಿ.
ಭಾರತದಲ್ಲಿ ಸುಮಾರು 51 ಮಿಲಿಯನ್ ಜನರನ್ನು ಕಾಡುತ್ತಿರುವ ಈ ಮಧುಮೇಹ ಖಾಯಿಲೆ ವಿರುದ್ದ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಬೆಂಬಲ ನೀಡುವುದು ತುಂಬಾ ಅವಶ್ಯಕ ಎಂದು ಎಎಸ್ ಐ ಹಿರಿಯ ಉತ್ಖನನ ತಜ್ಞ ಇಂದೂದರ್ ದ್ವಿವೇದಿ ತಿಳಿಸಿದ್ದಾರೆ.
ತಾಜ್ ಮಹಲ್ ನೊಂದಿಗೆ ಇಡೀ ಪ್ರಪಂಚದಲ್ಲಿ 900ಕ್ಕೂ ಹೆಚ್ಚು ಸ್ಮಾರಕ ಮತ್ತು ಕಟ್ಟಡಗಳು ವಿಶ್ವ ಮಧುಮೇಹದ ದಿನ ನೀಲಿ ಬೆಳಕಿನಿಂದ ಕಂಗೊಳಿಸಲಿದೆ. ಅಷ್ಟೇ ಅಲ್ಲ, ಇದೇ ಮೊದಲಬಾರಿಗೆ ಅಮೆರಿಕ ತನ್ನ ಸದಸ್ಯ ದೇಶಗಳಿಗೆ ಮಧುಮೇಹದ ಚಿಕಿತ್ಸೆ, ನಿರ್ಮೂಲನೆ ಮತ್ತು ಜಾಗೃತಿ ಕುರಿತು ಯೋಜನೆ ರೂಪಿಸಲು ತಿಳಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
