Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಧುಮೇಹಿ ಗರ್ಭಿಣಿಯರಿಗೆ ಕಸರತ್ತು

ನನ್ನ ಇನ್ಸುಲಿನ್ ಡೋಸ್ ಕಾಲಕಾಲಕ್ಕೆ ಬದಲಾಗುತ್ತೆ ಯಾಕೆ?
ಇದರ ಬಗ್ಗೆ ಸರಿಯಾದ ಅರಿವು ಅಗತ್ಯವಿದೆ. ಗರ್ಭಾವಸ್ಥೆ ಮುಂದುವರೆದಂತೆ, 28 ವಾರಗಳ ನಂತರ, ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕಾಗುತ್ತದೆ. ಈ ಸಮಯದಲ್ಲಿ ಮಗುವಿನ ಆರೋಗ್ಯ ವೃದ್ಧಿಗೆ ಸಹಾಯಕವಾಗುವ ಕೆಲ ಹಾರ್ಮೋನ್ ಗಳು, ಇನ್ಸುಲಿನ್ ಕಾರ್ಯ ನಿರ್ವಹಣೆಗೆ ಪ್ರತಿರೋಧ ಒಡ್ಡುತ್ತವೆ. ಈ ಪ್ರತಿರೋಧವನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದ ಇನ್ಸುಲಿನ್ ಡೋಸೆಜ್ ಬೇಕಾಗುತ್ತದೆ. ಗರ್ಭಾವಸ್ಥೆ ವಾರಗಳ ಲೆಕ್ಕದಲ್ಲಿ ಕೆಲವೊಮ್ಮೆ ದಿನಗಳ ಲೆಕ್ಕದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸಬೇಕಾಗುತ್ತದೆ.
ಆದ್ದರಿಂದ, ಗರ್ಭಾವಸ್ಥೆಯಲ್ಲಿ ಇನ್ಸುಲಿನ್ ಪ್ರಮಾಣ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಇದು ಅಗತ್ಯವಾಗಿದ್ದು, ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಇನ್ಸುಲಿನ್ ಪ್ರಮಾಣ ಹೆಚ್ಚಾಗದಿದ್ದರೆ, ಗರ್ಭವೇಷ್ಟನ(placenta)ದ ಬೆಳವಣಿಗೆ ಹಾಗೂ ಭ್ರೂಣದ ಚಟುವಟಿಕೆ ಮೇಲೆ ಅನುಮಾನಪಡುವಂತ್ತಾಗುತ್ತದೆ.
ಗರ್ಭಿಣಿಯರಿಗೆ ಯಾವ ರೀತಿ ಕಸರತ್ತು ಒಳ್ಳೆಯದು?
ರೂಢಿಯಲ್ಲಿರುವ ಪ್ರಸವ ಪೂರ್ವ ದೈಹಿಕ ಕಸರತ್ತುಗಳು ಸಕ್ಕರೆ ಅಂಶವನ್ನು ಸರಿಪ್ರಮಾಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿರುತ್ತದೆ. ದೈನಂದಿನ ಚಟುವಟಿಕೆಗಳ ಜೊತೆಗೆ ದಿನಕ್ಕೆರಡು ಬಾರಿ ನಡಿಗೆ ಮಾಡುವುದು ಉತ್ತಮ. ಈಜಾಡುವುದು ಒಳ್ಳೆ ಅಭ್ಯಾಸ. ಭಾರ ಎತ್ತುವುದು ಅಥವಾ ಹೆಚ್ಚು ಆಯಾಸವಾಗುವ ಕಸರತ್ತುಗಳನ್ನು ಮಾಡಲೇಬಾರದು.
ಪ್ರಸವದ ವೇಳೆಯಲ್ಲಿ ಯಾವ ರೀತಿ ಹೆಚ್ಚಿನ ಕಾಳಜಿ ಅಗತ್ಯ?
ಪ್ರಸವ ಸಮಯದಲ್ಲಿ ಶುಗರ್ ಲೆವೆಲ್ ಸಾಮಾನ್ಯಸ್ಥಿತಿಯಲ್ಲಿರುವುದು ತುಂಬಾ ಮುಖ್ಯ. ಪ್ರಸವ ಸಮಯದಲ್ಲಿ ಅದರಲ್ಲೂ ಸಿ ಸೆಕ್ಷನ್ ಮಾಡಿಸಿಕೊಳ್ಳುತ್ತಿದ್ದರೆ, ಆಹಾರ ಸೇವನೆಯೂ ಕಮ್ಮಿಯಾಗಿರುತ್ತದೆ. ಗ್ಲುಕೋಸ್ ಡ್ರಿಪ್ ಮೂಲಕ(ಪೌಷ್ಟಿಕತೆ ನೀಡಲು) ದೇಹಕ್ಕೆ ಇನ್ಸುಲಿನ್ ನೀಡಲಾಗುತ್ತದೆ. ಈ ಸಮಯದಲ್ಲಿ ಗಳಿಗೆಗೊಮ್ಮೆ ಬ್ಲಡ್ ಶುಗರ್ ಪರೀಕ್ಷೆ ಅಗತ್ಯ. ಬೆರಳು ತುದಿ ರಕ್ತ ಪರೀಕ್ಷೆ ಯಂತ್ರ ಬಳಸಿ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಗರ್ಭಧಾರಣೆ ಸಮಯಕ್ಕೆ ಅಂಟಿದ ಮಧುಮೇಹವಾದರೆ, ಮಗು ಜನನ ನಂತರ ಇನ್ಸುಲಿನ್ ಪೂರೈಕೆ ನಿಲ್ಲಿಸಲಾಗುತ್ತದೆ. ಮುಂಚಿತವಾಗಿ ಡಯಾಬಿಟಿಸ್ ಉಳ್ಳವರಿಗೆ ಗುಳಿಗೆ ಮೂಲಕ ಚಿಕಿತ್ಸೆ ಪಡೆಯುತ್ತಿರುವವರಿಗೆ ಮೊಲೆಯುಣಿಸುವ ತನಕ ಇನ್ಸುಲಿನ್ ಸೇವನೆ ಅಗತ್ಯವಿರುತ್ತದೆ.
ಮಗುವಿನ ಸಕ್ಕರೆ ಅಂಶದ ಸ್ಥಿತಿ ಏನಾಗುತ್ತದೆ?
ಮಗುವಿನ ಸಕ್ಕರೆ ಅಂಶ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಜನನದ ಸಂದರ್ಭದಲ್ಲಿ ತಾಯಿಯ ಸಕ್ಕರೆ ಪ್ರಮಾಣದಲ್ಲಿ ಏರುಪೇರು ಉಂಟಾಗಿದ್ದರೆ, ಮಗುವಿನ ದೇಹದ ಸಕ್ಕರೆ ಅಂಶದ ಇಳಿಮುಖ ಕಾಣುವ ಸಾಧ್ಯತೆಗಳಿವೆ. ಮಗುವಿಗೆ ಪುಷ್ಟಿ ಸಿಗಲು ಪ್ರಸವದ ನಂತರ ಮೊಲೆಯುಣಿಸುವುದು ತುಂಬಾ ಅಗತ್ಯ.
ಪ್ರಸವದ ನಂತರ ಅಗತ್ಯವಾದ ಚಿಕಿತ್ಸಾ ಕ್ರಮಗಳೇನು?
ಗರ್ಭಧಾರಣೆ ಸಮಯದ ಡಯಾಬಿಟಿಸ್ ಉಳ್ಳವರು ಪ್ರಸವದ ನಂತರ ಗ್ಲುಕೋಸ್ ಪರೀಕ್ಷೆಯನ್ನು ಪ್ರತಿ 6 ವಾರಕ್ಕೊಮ್ಮೆ ಮಾಡಿಸಿಕೊಳ್ಳಬೇಕು. ಈ ಕ್ರಮವನ್ನು ಮಧುಮೇಹ ಸಂಪೂರ್ಣ ಮಾಯವಾಗುವವರೆಗೂ ಮುಂದುವರೆಸುವ ಅಗತ್ಯವಿರುತ್ತದೆ. ಆರೋಗ್ಯಕರ ಆಹಾರ, ದೈನಂದಿನ ವ್ಯಾಯಾಮ ಜಾರಿಯಲ್ಲಿಟ್ಟುಕೊಂಡು, ಡಯಾಬಿಟಿಸ್ ವಿರುದ್ಧ ಎಚ್ಚರಿಕೆಯಿಂದ ಸಾಗಬೇಕು. ಭವಿಷ್ಯದಲ್ಲಿ ಮಧುಮೇಹ ಕಾಯಿಲೆಗೆ ತುತ್ತಾಗುವ ಅಪಾಯವಿರುವ ಕಾರಣ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ.
ಮೇಲ್ಕಂಡ ಕ್ರಮಗಳು ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವ ಮಹಿಳೆಯರಿಗೆ ಅನ್ವಯಿಸುತ್ತದೆ. ಒಂದು ವೇಳೆ ಮತ್ತೊಮ್ಮೆ ಗರ್ಭ ಧರಿಸಬೇಕಾದರೆ, ಮಧುಮೇಹ ನಿಯಂತ್ರಣದಲ್ಲಿರುವುದರನ್ನು ಖಾತ್ರಿ ಪಡಿಸಿಕೊಳ್ಳುವುದು ಉತ್ತಮ ಕೆಲಸ. ವೈದ್ಯರ ಸಲಹೆಯಂತೆ 5ಗ್ರಾಂನಷ್ಟು ಫೊಲಿಕ್ ಆಮ್ಲ ವಿಟಮಿನ್ ಸೇವನೆ ಪ್ರತಿದಿನ ಸೇವಿದುವುದು ಒಳ್ಳೆಯದು. [ಡಯಾಬಿಟಿಸ್]
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications