Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಕ್ಕೆ ಗುಳಿಗೆ ಅಥವಾ ಇನ್ಸುಲಿನ್?

ಟೈಪ್ 2 ಡಯಾಬಿಟಿಸ್ ವುಳ್ಳವರಿಗೆ ಮಾತ್ರೆ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇನ್ಸುಲಿನ್ ತೆಗೆದುಕೊಳ್ಳಲಾಗದ ಗರ್ಭಿಣಿಯರು, ಸರ್ಜರಿಗೆ ಒಳಪಟ್ಟ ರೋಗಿಗಳು ಹಾಗೂ ಆಹಾರ ಸೇವನೆ ಸಾಧ್ಯವಾದಾಗ ಸಂದರ್ಭದಲ್ಲಿ ಮಾತ್ರ ಮಾತ್ರೆ ತೆಗೆದುಕೊಳ್ಳುವುದನ್ನು ತಡೆಯಲಾಗುತ್ತದೆ. ಆದರೆ, ಟೈಪ್ 1 ಮಧುಮೇಹ ರೋಗವುಳ್ಳವರು ಯಾವುದೇ ಸಂದರ್ಭದಲ್ಲಾದರೂ ಮಾತ್ರೆ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಮಾತ್ರೆ ಮೂಲಕ ಚಿಕಿತ್ಸೆ ಪಡೆಯಲು ಸೂಕ್ತ ಸಮಯ ಯಾವುದು?
ಟೈಪ್ 2 ಡಯಾಬಿಟಿಸ್ ಇದೆ ಎಂದು ವ್ಯಾಧಿ ನಿರ್ಣಯವಾದ ಮೇಲೆ, ಮೊದಲಿಗೆ ಸಮತೋಲನ ಆಹಾರ ಕ್ರಮವನ್ನು ಅನುಸರಿಸಿ ರೋಗವನ್ನು ತಹಬಂದಿಗೆ ತರಲು ಯತ್ನಿಸಲಾಗುತ್ತದೆ. ಸುಮಾರು ಮೂರು ತಿಂಗಳುಗಳ ಕಾಲ ಈ ಕ್ರಮವನ್ನು ಅನುಸರಿಸಲಾಗುತ್ತದೆ. ಈ ಮೂಲಕ ಮುಂಬರುವ ದಿನಗಳಲ್ಲಿ ನೀವು ಸೇವಿಸಬೇಕಾದ ಆಹಾರ ಕ್ರಮದ ಸ್ಪಷ್ಟ ಅರಿವು ನಿಮಗೆ ಸಿಗುತ್ತದೆ.
ಯಾವ ಆಹಾರ ಸೇವಿಸಬೇಕು, ಯಾವ ಆಹಾರ ನಿಷೇಧಿಸಬೇಕು ಎಂಬುದನ್ನು ಈ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಈ ಪ್ರಾಯೋಗಿಕ ಅವಧಿಯ ಡಯಟಿಂಗ್ ಗೆ ಮಾತ್ರ, ಕಾಲಕಾಲಕ್ಕೆ ಇನ್ಸುಲಿನ್ ಪ್ರಮಾಣದ ನಿಯಂತ್ರಣ ಸ್ಯೂಚಂಕವನ್ನು ಪರೀಕ್ಷಿಸುತ್ತಿರಬೇಕು. ಇನ್ಸುಲಿನ್ ಪ್ರಮಾಣದಲ್ಲಿ ತೀವ್ರ ಏರಿಳಿತ ಕಂಡು ಬಂದರೆ, ಡಯಟಿಂಗ್ ಜೊತೆಗೆ ಮಾತ್ರೆ ಮೂಲಕ ಚಿಕಿತ್ಸೆಯನ್ನು ಆರಂಭಿಸಬೇಕು.
ಎಲ್ಲಾ ಮಾತ್ರೆಗಳು ಒಂದೇ ಬಗೆಯವೇ?
ಖಂಡಿತಾ ಇಲ್ಲ. ವಿವಿಧ ಬಗೆಯ ಡಯಾಬಿಟಿಸ್ ಗುಳಿಗೆಗಳು ಲಭ್ಯವಿದೆ ಹಾಗೂ ಪ್ರತಿ ಗುಂಪಿನಲ್ಲೂ ಕೆಲವು ಉಪ ಗುಂಪಿನ ಗುಳಿಗೆಗಳಿವೆ. ಭಾರತದಲ್ಲಿ ಅನೇಕ ಕಂಪೆನಿಗಳು ಒಂದೇ ಹೆಸರಿನಲ್ಲೇ ಔಷಧವನ್ನು ತಯಾರಿಸುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಏನಿಲ್ಲವೆಂದರೂ ಮುಖ್ಯ ಗುಂಪು, ಉಪಗುಂಪು ಎಲ್ಲಾ ಸೇರಿ ಕನಿಷ್ಠ 50 ವಿವಿಧ ಹೆಸರುಗಳಲ್ಲಿ ಗುಳಿಗೆಗಳು ಲಭ್ಯವಾಗಿದೆ.
ಆದರೆ, ದಯವಿಟ್ಟು ಮಾತ್ರೆ ಕೊಳ್ಳುವ ಮುನ್ನ, ಡಾಕ್ಟರ್ ನಿಮಗೆ ಬರೆದು ಕೊಟ್ಟಿರುವ ಮಾತ್ರೆ ಹೆಸರಿಗೂ ಔಷಧಾಲಯದಲ್ಲಿ ಕೊಳ್ಳುವ ಹೆಸರಿಗೆ ಹೊಂದಾಣಿಕೆ ಯಾಗುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒರಲ್ ಇನ್ಸುಲಿನ್ ಮಾದರಿಯಲ್ಲೇ ಅನೇಕ ಬಗೆಯ ಮಾತ್ರೆಗಳು ಮಾರುಕಟ್ಟೆ ಪ್ರವೇಶಿಸುತ್ತಲೇ ಇವೆ ಅವುಗಳ ಬಗ್ಗೆ ಎಚ್ಚರವಿರಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
