Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈಗಾಡ್! ಭಾರತದಲ್ಲಿ 100 ಮಿಲಿಯನ್ ಮಧುಮೇಹಿಗಳು: ಮಧುಮೇಹ ತಡೆಗಟ್ಟಲು ಈ 10 ಆಸನ ತುಂಬಾನೇ ಪರಿಣಾಮಕಾರಿ
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ನೋಡಿವಾಗ ಬೆಚ್ಚಿ ಬೀಳುವಂತಿದೆ. 2019-21ಕ್ಕೆ 100 ಮಿಲಿಯನ್ ತಲುಪಿದೆ ಎಂದರೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ತುಂಬಾನೇ ವೇಗವಾಗಿ ಹೆಚ್ಚಾಗುತ್ತಿದೆ. ಅದರಲ್ಲಿ ಪುದುಚೇರಿ, ಕೇರಳದಲ್ಲಿ ಮಧುಮೇಹಿಗಳ ಸಂಖ್ಯೆ ತುಂಬಾನೇ ಅಧಿಕವಿದೆ.
ಬದಲಾಗುತ್ತಿರುವ ಜೀವನಶೈಲಿ ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಕುರುಡುತನ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆ ಕಂಡು ಬರುವುದು. ಕಳೆದ ನಾಲ್ಕು ವರ್ಷಗಳಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೊಟ್ಟೆಬೊಜ್ಜು ಈ ಬಗೆಯ ಸಮಸ್ಯೆ ತುಂಬಾನೇ ಅಧಿಕವಾಗುತ್ತಿದೆ.

ನೀವು ಮಧುಮೇಹದ ಅಪಾಯದಿಂದ ಪಾರಾಗಲು ಯೋಗದ ಮೊರೆ ಹೋಗಬಹುದು. ಈ ಆಸನಗಳು ಮಧುಮೇಹ ನಿಯಂತ್ರಿಸಲು ಪರಿಣಾಮಕಾರಿ
1. ಧನುರ್‌ಸಾನ
ಈ ಆಸನ ಹೊಟ್ಟೆಯ ಮೇಲೆ ಒತ್ತಡ ಹಾಕುವುದರಿಂದ ಮೇದೋಜೀರಕ ಗ್ರಂಥಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಮಧುಮೇಹ ತಡೆಗಟ್ಟಬೇಕು ಅವಾ ಮಧುಮೇಹ ಈಗಾಗಲೇ ಬಾದಿಸಿದ್ದು ನಿಯಂತ್ರಣದಲ್ಲಿಬೇಕೆಂದು ಬಯಸುವವರು ಪ್ರತಿನಿತ್ಯ ಒಂದು ನಿಯಮಿತ ಅಭ್ಯಾಸ ಮಾಡಿ.
2. ಬಾಲಾಸನ ಕೂಡ ಮಧುಮೇಹ ನಿಯಂತ್ರಿಸುವಲ್ಲಿ ತುಂಬಾನೇ
ಪರಿಣಾಮಕಾರಿ. ಇದು ಮಾನಸಿಕ ಒತ್ತಡ ಕಡಿಮೆ ಮಾಡಲು ತುಂಬಾನೇ ಪರಿಣಾಮಕಾರಿ. ಇದನ್ನು ಅಭ್ಯಾಸ ಮಾಡಿದರೆ ಮನಸ್ಸಿಗೆ ತುಂಬಾ ರಿಲ್ಯಾಕ್ಸ್ ಅನಿಸುವುದು. ಇದರಿಂದ ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ.
3. ಭುಜಾಂಗಾಸನ
ಭುಜಾಂಗಾಸನ ಕೂಡ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಆಸನವಾಗಿದೆ. ಈ ಆಸನ ಅಭ್ಯಾಸ ಮಾಡುವುದರಿಂದ ತೋಳುಗಳು ಬಲವಾಗುವುದು ಅಲ್ಲದೆ ಮಧುಮೇಹ ತಡೆಗಟ್ಟಲು ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಪ್ರಯೋಜನಕಾರಿ.
4, ವಿಪರೀತ ಕರಣಿ
ವಿಪರೀತ ಕರಣಿ ಯೋಗಾಸನ ಕೂಡ ಮೇದೋಜೀರ ಗ್ರಂಥಿ ಇನ್ಸುಲಿನ್ ಉತ್ಪತ್ತಿ ಮಾಡಲು ತುಂಬಾ ಸಹಕಾರಿ. ನೀವು ವಿಪರೀತಕರಣಿಯನ್ನು ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು
5. ತಾಡಾಸನ
ಇದು ಕೂಡ ಮಧುಮೇಹ ನಿಯಂತ್ರಣದಲ್ಲಿದಲು ತುಂಬಾನೇ ಸಹಕಾರಿ. ಈ ಆಸನ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುವುದು. ಅಲ್ಲದೆ ದೇಹಕ್ಕೆ ತುಂಬಾನೇ ಶಕ್ತಿ ದೊರೆಯುವುದು. ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿ ನಡೆಯುತ್ತದೆ, ಇನ್ಸುಲಿನ್ ಉತ್ಪತ್ತಿಗೂ ಸಹಕಾರಿ.
6. ಮಂಡೂಕಾಸನ
ಮಧುಮೇಹಿಗಳು ಈ ಆಸನ ಅಭ್ಯಾಸ ಮಾಡಿದರೆ ತುಂಬಾನೇ ಒಳ್ಳೆಯದು. ಈ ಆಸನ ಜೀರ್ಣಕ್ರಿಯೆ ಉತ್ತಮ ಪಡಿಸುತ್ತದೆ. ಅಲ್ಲದೆ ತಲೆನೋವು, ಅಧಿಕ ರಕ್ತದೊತ್ತಡ, ಮೈಗ್ರೇನ್, ನಿದ್ರಾಹೀನತೆ ಈ ಬಗ್ಗೆ ಸಮಸ್ಯೆ ತಡೆಗಟ್ಟಲು ಸಹಕಾರಿ.
7. ಅರ್ಧ ಮತ್ಸ್ಯಾಸನ
ಮತ್ಸ್ಯಾಸನ ಹಾಗೂ ಅರ್ಧ ಮತ್ಸ್ಯಾಸನ ಕೂಡ ಮಧುಮೇಹ ತಡೆಗಟ್ಟಲು ತುಂಬಾನೇ ಸಹಕಾರಿ.
8. ಪಶ್ಚಿಮೋತ್ತಾಸನ
ಈ ಆಸನ ಕೂಡ ಮಧುಮೇಹ ನಿಯಂತ್ರಿಸಲು ತುಂಬಾನೇ ಪ್ರಯೋಜನಕಾರಿ. ಈ ಆಸನವನ್ನು ಮಾಡುವುದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೇದೋಜೀರಕ ಗ್ರಂಥಿ ಇನ್ಸುಲಿನ್ ಉತ್ಪತ್ತಿ ಮಾಡಲು ಸಹಕಾರಿ.
9. ಸುಪ್ತಬದ್ಡ ಕೋನಾಸನ
ಈ ಭಂಗಿ ಕೂಡ ತುಂಬಾ ಸುಲಭವಾದ ಭಂಗಿಯಾಗಿದ್ದು ಮಧುಮೇಹ ನಿಯಂತ್ರಿಸಲು ಪರಿಣಾಮಕಕಾರಿ. ಈ ಭಂಗಿಯಲ್ಲಿ ಪ್ರತಿದಿನ ಒಂದು ನಿಮಿಷ ಕೂರಿ.
10. ಶವಾಸನ
ಈ ಎಲ್ಲಾ ಆಸನಗಳನ್ನು ಅಭ್ಯಾಸ ಮಾಡುವಾಗ ನೀವು ಶವಾಸನ ಅಭ್ಯಾಸ ಮಾಡಲೇಬೇಕು. '
ಸೂರ್ಯ ನಮಸ್ಕಾರ
ನೀವು ಬೆಳಗ್ಗೆ 6 ಬಾರಿ ಅತವಾ 12 ಬಾರಿ ಸೂರ್ಯ ನಮಸ್ಕಾರ ಮಾಡಿ. ಇದನ್ನು ಮಾಡಲು ನಿಮಗೆ ಅರ್ಧ ಗಂಟೆ ಸಾಕು. ಪ್ರತಿನಿತ್ಯ ಅಭ್ಯಾಸ ಮಾಡಿ ಮಧುಮೇಹ ದೂರವಿಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications