Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಮಧುಮೇಹ: ಶುಗರ್ ಟೆಸ್ಟ್ ಮಾಡುವಾಗ 7 ತಪ್ಪುಗಳಾದರೆ ಸರಿಯಾದ ರಿಸಲ್ಟ್ ಸಿಗಲ್ಲ
ಪ್ರತೀವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುವುದು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬರು ಮಧುಮೇಹ ನಿಯಂತ್ರಣದ ಬಗ್ಗೆ ಜಾಗ್ರತೆವಹಿಸಬೇಕಾಗಿದೆ.
ಇನ್ನು ಮಧುಮೇಹ ಬಂದ ಮೇಲೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಟ್ಟರೆ ಇತರರಂತೆ ಆರೋಗ್ಯಕರ ಜೀವನ ನಡೆಸಬಹುದು. ಮಧುಮೇಹಿಗಳು ನಿಯಮಿತ ರಕ್ತಪರೀಕ್ಷೆ ಮಾಡಿಸುತ್ತಿರಬೇಕು, ಈ ರೀತಿ ರಕ್ತ ಪರೀಕ್ಷೆ ಮಾಡುವಾಗ ಸರಿಯಾದ ರಿಸಲ್ಟ್ ಬರಲು ಈ ತಪ್ಪುಗಳನ್ನು ಮಾಡದಿರಿ.

ಬೆರಳಿನ ತುದಿಯ ಮಧ್ಯದಲ್ಲಿ ಸೂಜಿ ಚುಚ್ಚಿ ರಕ್ತ ಪರೀಕ್ಷೆ ಮಾಡುವುದು
ಈ ತಪ್ಪನ್ನು ತುಂಬಾ ಜನ ಮಾಡುತ್ತಾರೆ, ಹೀಗೆ ಮಾಡುವುದರಿಂದ ತುಂಬಾನೇ ನೋವುಂಟಾಗುವುದು. ಅಲ್ಲದೆ ಇದು ತುಂಬಾ ಸೆನ್ಸಿಟಿವ್ ಜಾಗ, ಆದ್ದರಿಂದ ಭಾಗದಲ್ಲಿ ಪರೀಕ್ಷೆ ಮಾಡುವುದರಿಂದ ನೋವುಂಟಾಗುವುದು. ಅದರ ಬದಲಿಗೆ ಬೆರಳಿನ ತುದಿಯನ್ನು ಪ್ರೆಸ್ ಮಾಡಿ ತುದಿಗೆ ಚುಚ್ಚಿ ಮಧುಮೇಹ ಪರೀಕ್ಷೆ ಮಾಡಿ.
ಕೈಗಳನ್ನು ತೊಳೆಯದೆ ಪರೀಕ್ಷೆ ಮಾಡುವುದು
ಶುಗರ್ ಟೆಸ್ಟ್ ಮಾಡುವಾಗ ತುಂಬಾ ಜನರು ಕೈಗಳನ್ನು ತೊಳೆಯುವುದಿಲ್ಲ, ಆದರೆ ಪರೀಕ್ಷೆಯ ರಿಸಲ್ಟ್ ಸರಿಯಾಗಿ ಬರಲು ನೀವು ಕೈಗಳನ್ನು ಸೋಪು ಹಾಕಿ ಬಿಸಿ ನೀರಿನಲ್ಲಿ ತೊಳೆದು ನಂತರ ಒರೆಸಿ, ನಂತರ ಬ್ಲೆಡ್ ಟೆಸ್ಟ್ ಮಾಡಿ.
ಎಲ್ಲಾ ಸಮಯದಲ್ಲಿ ಒಂದೇ ಬೆರಳು ಬಳಸುವುದು
ಶುಗರ್ ಬ್ಲೆಡ್ ಟೆಸ್ಟ್ ಮಾಡುವಾಗ ಒಂದೇ ಬೆರಳು ಬಳಸಬೇಡಿ. ಒಂದೇ ಬೆರಳಿಗೆ ಚುಚ್ಚುತ್ತಿದ್ದರೆ ತುಂಬಾನೇ ನೋವು ಉಂಟಾಗುವುದು, ಆದ್ದರಿಂದ ಬೇರೆ-ಬೇರೆ ಬೆರಳಿಗೆ ಚುಚ್ಚಿ ಶುಗರ್ ಟೆಸ್ಟ್ ಮಾಡಿ.
ಸ್ಟ್ರಿಪ್ ಸರಿಯಾಗಿ ಸಂಗ್ರಹಿಸಿ ಇಡದೇ ಇರುವುದು
ಅವಧಿ ಮುಗಿದ ಅಥವಾ ಸರಿಯಾಗಿ ಸಂಗ್ರಹಿಸಿಡದ ಸ್ಟ್ರಿಪ್ಸ್ ಬಳಸಿದರೆ ಸರಿಯಾದ ರಿಸಲ್ಟ್ ಸಿಗುವುದಿಲ್ಲ. ಅಲ್ಲದೆ ಲ್ಯಾನ್ಸೆಂಟ್ ಕೂಡ ಅದರ ಶಾರ್ಪ್ ಕಳೆದುಕೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು.
ಗ್ಲುಕೋಸ್ ಮೀಟರ್ ಬಗ್ಗೆ ಸರಿಯಾಗಿ ತಿಳಿಯದಿರುವುದು
ಗ್ಲುಕೋಸ್ ಮೀಟರ್ ಅನ್ನು ಸರಿಯಾಗಿ ಬಳಸದಿದ್ದರೆ ಸರಿಯಾದ ರಿಸಲ್ಟ್ ಸಿಗುವುದಿಲ್ಲ, ನಿಮಗೆ ಅದನ್ನು ಸರಿಯಾಗ ಬಳಸುವುದು ಹೇಗೆ ಎಂದು ಗೊತ್ತಿದ್ದರೆ ಮಾತ್ರ ಸರಿಯಾದ ಫಲಿತಾಂಶ ಸಿಗುವುದು, ಇಲ್ಲದಿದ್ದರೆ ವೈದ್ಯರ ಸಹಾಯ ಪಡೆಯಿರಿ.
ತಿಂದ ತಕ್ಷಣ ಪರೀಕ್ಷೆ ಮಾಡುವುದು
ಕೆಲವರು ಊಟವಾದ ಅರ್ಧ ಗಂಟೆ ಅಥವಾ ಒಂದು ಗಂಟೆಯ ಒಳಗಾಗಿ ರಕ್ತ ಪರೀಕ್ಷೆ ಮಾಡುತ್ತಾರೆ. ಇದರಿಂದ ಸರಿಯಾದ ರಿಸಲ್ಟ್ ಸಿಗಲ್ಲ. ನೀವು ಏನಾದರೂ ಆಹಾರ ಸೇವಿಸಿದರೆ ಎರಡು ಗಂಟೆಯವರೆಗೆ ಕಾದು ನಂತರವಷ್ಟೇ ಪರೀಕ್ಷೆ ಮಾಡಿಸಿ.
ಯಾವುದೆಲ್ಲಾ ಸಮಯದಲ್ಲಿ ಬ್ಲಡ್ ಟೆಸ್ಟ್ ಮಾಡುವುದು
ಆ ರೀತಿ ಬ್ಲಡ್ ಟೆಸ್ಟ್ ಮಾಡಬೇಡಿ. ಒಂದೋ ಬೆಳಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಬ್ಲಡ್ ಟೆಸ್ಟ್ ಮಾಡಿದರೆ ಮಾತ್ರ ರಕ್ತದಲ್ಲಿ ಸಕ್ಕರೆಯಂಶ ಎಷ್ಟಿದೆಯೆಂಬುವುದು ನಿಖರವಾಗಿ ತಿಳಿಯಲು ಸಾಧ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
