Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ: ಡೆಂಗ್ಯೂ ವೈರಸ್ ತಗುಲಿದಾಗ ದೇಹಕ್ಕೆ ಏನಾಗುತ್ತದೆ?
ರಾಜ್ಯದಲ್ಲಿ ಡೆಂಗ್ಯೂ ಕೇಸ್ ಅಧಿಕವಾಗುತ್ತಿದೆ, ಈ ಸಮಯದಲ್ಲಿ ಸೊಳ್ಳೆ ಕಚ್ಚದಂತೆ ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಚಿಕ್ಕದೊಂದು ಸೊಳ್ಳೆ ನಮ್ಮ ಪ್ರಾಣಕ್ಕೆ ಅಪಾಯ ಉಂಟು ಮಾಡಬಹುದು. ಡೆಂಗ್ಯೂ ಸೋಂಕಿತ ಸೊಳ್ಳೆ ಕಚ್ಚಿದಾಗ ದೇಹಕ್ಕೆ ಏನಾಗುತ್ತದೆ? ಡೆಂಗ್ಯೂ ಲಕ್ಷಣಗಳೇನು? ಡೆಂಗ್ಯೂ ತಗುಲಿದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಡೆಂಗ್ಯೂ ವೈರಸ್ ತಗುಲಿದಾಗ ದೇಹಕ್ಕೆ ಏನಾಗುವುದು?
ಡೆಂಗ್ಯೂ ವೈರಸ್ ಹೇಗೆ ಮನುಷ್ಯನ ದೇಹವನ್ನು ಸೇರುತ್ತದೆ, ಇದು ದೇಹಕ್ಕೆ ಸೇರಿದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ.
ಡೆಂಗ್ಯೂ ಸೋಂಕಿತ ಸೊಳ್ಳೆ ಕಚ್ಚಿದಾಗ ಇದು ಮನುಷ್ಯನ ದೇಹವನ್ನು ಸೇರುತ್ತದೆ. ಸೊಳ್ಳೆ ನಮ್ಮ ತ್ವಚೆಯ ಮೇಲೆ ಕಚ್ಚಿ ದೇಹದಿಂದ ರಕ್ತವನ್ನು ಹೀರುತ್ತದೆ, ದೇಹದ ಬಾಯಿಂದ ವೈರಸ್‌ಗಳು ಮನುಷ್ಯ ದೇಹದ ರಕ್ತವನ್ನು ಸೇರುತ್ತದೆ. ನಂತರ ಬಿಳಿ ರಕ್ತಕಣಗಳ ವಿರುದ್ಧ ಹೋರಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ನಂತರ ಈ ವೈರಸ್ ಲಿವರ್, ಶ್ವಾಸಕೋಶ, ದುಲ್ಮ, ದುಗ್ಧರಸ ಗ್ರಂಥಿಗಳ ಮೇಲೆ ಪ್ರಭಾವ ಬೀರುತ್ತದೆ. ವೈರಸ್ ತಗುಲಿದ 4ರಿಂದ 10 ದಿನದೊಳಗೆ ರೋಗ ಲಕ್ಷಣಗಖು ಕಂಡು ಬರುವುದು. ಇದನ್ನು ಇನ್‌ಕ್ಯುಬೇಶನ್ ಅವಧಿ ಎಂದು ಕರೆಯಲಾಗುವುದು.'
ಡೆಂಗ್ಯೂ ಲಕ್ಷಣಗಳು
* ಜ್ವರ ಹಾಗೂ ತುಂಬಾ ಮೈಕೈ ನೋವು
* ತಲೆನೋವು
* ಸಂಧಿನೋವು
* ತ್ವಚೆಯಲ್ಲಿ ಗುಳ್ಳೆಗಳು ಬರುವುದು
* ತಲೆಸುತ್ತು, ವಾಂತಿ
* ಸುಸ್ತು
* ಬೇಧಿ
ಅಪಾಯಕಾರಿ ರೋಗ ಲಕ್ಷಣಗಳು
ರಕ್ತಸ್ರಾವ
ಗೊಂದಲ
ಅಂಗಾಂಗ ವೈಫಲ್ಯ
ಡೆಂಗ್ಯೂ ಚಿಕಿತ್ಸೆ
ಡೆಂಗ್ಯೂವಿದೆ ಎಂದು ತಿಳಿದು ಬಂದ ಮೇಲೆ ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಏಕೆಂದರೆ ಡೆಂಗ್ಯೂ ಜ್ವರ ಬಂದಾಗ ಪ್ಲೇಟ್‌ಲೆಟ್ ತುಂಬಾನೇ ಕಡಿಮೆಯಾಗುವುದು. ಪ್ಲೇಟ್‌ಲೆಟ್ 40, 000ಕ್ಕಿಂತ ಕಡಿಮೆಯಾದರೆ ಪ್ರಾಣಕ್ಕೆ ಅಪಾಯ. ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆಯಿರಿ.
ಈ ಮನೆಮದ್ದು ಮಾಡಬಹುದು
ಪ್ಲೇಟ್‌ಲೆಟ್ ಕಡಿಮೆಯಾದರೆ ಪ್ಲೇಟ್‌ಲೆಟ್ ಹೆಚ್ಚಿಸಲು ಪಪ್ಪಾಯಿ ಎಲೆ ತುಂಬಾನೇ ಪರಿಣಾಮಕಾರಿ. ಪಪ್ಪಾಯಿ ಎಲೆಯ ರಸ ಒಂದು ಚಮಚದಂತೆ 3 ಹೊತ್ತು ಕುಡಿಯಿರಿ. ಅಧಿಕ ಕುಡಿಯಬೇಡಿ, ಅಧಿಕ ಕುಡಿದರೆ ಬೇಧಿ ಉಂಟಾಗುವುದು. ಆದ್ದರಿಂದ ಮಿತಿಯಲ್ಲಿ ಸೇವಿಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರ ಅನುಮತಿ ಪಡೆದು ಈ ಮನೆಮದ್ದು ಟ್ರೈ ಮಾಡಿ.
ಡೆಂಗ್ಯೂವಿನಿಂದ ಗುಣಮುಖರಾಗಲು ಎಷ್ಟು ಸಮಯ ಬೇಕು?
ಡೆಂಗ್ಯೂ ಬಂದರೆ ಚಿಕಿತ್ಸೆ ಪಡೆದ 4-5 ದಿನದಲ್ಲಿ ಜ್ವರ ಕಡಿಮೆಯಾಗುವುದು. ಆದರೆ ಸುಸ್ತು ಮಾತ್ರ ಬೇಗನೆ ಕಡಿಮೆಯಾಗುವುದಿಲ್ಲ. 15 ದಿನ ಕಳೆದರೂ ಸುಸ್ತು ಕಡಿಮೆಯಾಗುವುದಿಲ್ಲ. ಆದ್ದರಿಂದ ಜ್ವರ ಕಡಿಮೆಯಾದರೂ ದೇಹದ ಆರೋಗ್ಯ ಮರಳಿ ಪಡೆಯಲು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡಿ. ನೀವು ಪೋಷಕಾಂಶವಿರುವ ಆಹಾರ ಸೇವಿಸಿ. ಸುಸ್ತು ಸ್ವಲ್ಪ ಕಡಿಮೆಯಾದ ಮೇಲೆ ಯೋಗ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ಸ್ನಾಯುಗಳಿಗೆ ಶಕ್ತಿ ಬರುವುದು.
ಮನುಷ್ಯರಿಂದ ಮನುಷ್ಯರಿಗೆ ಡೆಂಗ್ಯೂ ಹರಡುವುದೇ?
ಡೆಂಗ್ಯೂ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಆದರೆ ಡೆಂಗ್ಯೂ ಸೋಂಕಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಬೇರೊಬ್ಬ ವ್ಯಕ್ತಿಗೆ ಕಚ್ಚಿದಾಗ ಡೆಂಗ್ಯೂ ಹರಡುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
