Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆಂಗಳೂರಲ್ಲಿ ಹೆಚ್ಚುತ್ತಿದೆ ಡೆಂಗ್ಯೂ..! ಎಚ್ಚರ..ಲಕ್ಷಣಗಳೇನು ಗೊತ್ತಾ?
ಸೊಳ್ಳೆಗಳು ಅಂದ ಕೂಡಲೆ ನೆನಪಾಗೋದು ಅಪಾಯಕಾರಿ ಡೆಂಗ್ಯೂ. ಈಗ ಬೆಂಗಳೂರಲ್ಲಿ ಡೆಂಗ್ಯೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಿಸಿಲ ನಡುವೆ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿರುವುದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸಹಾಯಕವಾಗಿದ್ದು, ಸೊಳ್ಳೆಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ.
ಮೇ 13ರ ವರೆಗೆ ರಾಜ್ಯದಲ್ಲಿ ಬರೋಬ್ಬರಿ 2,877 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಲ್ಲಿಯೇ ಅತೀ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಈ ಸಂಖ್ಯೆಯ ಪ್ರಮಾಣ ಗಣನೀಯ ಏರಿಕೆಯಾಗಿದೆ. ಹವಾಮಾನದಲ್ಲಾದ ಬದಲಾವಣೆ ಡೆಂಗ್ಯೂ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಡೆಂಗ್ಯೂ ಜ್ವರವನ್ನು ಹರಡುವ ಈಡಿಸ್ ಈಜಿಪ್ಟಿ ಪ್ರಭೇದ ಸೊಳ್ಳೆಗಳಿಗೆ ಇದು ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಹವಾಮಾನವಾಗಿದೆ. ಚರಂಡಿಗಳು, ಹೊಂಡಗಳು, ಟೈರ್, ಬಾಟಲಿಗಳಲ್ಲಿ ಮಳೆ ನೀರು ತುಂಬಿಕೊಂಡು ಸೊಳ್ಳೆಗಳ ಹುಟ್ಟುವಿಕೆಗೆ ಕಾರಣವಾಗಿದೆ.
ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ನಿಂತ ನೀರಿನಲ್ಲಿ ಇಡುತ್ತವೆ ಮತ್ತು ಮೊಟ್ಟೆಗಳು ಹೊರಬಂದಾಗ, ಲಾರ್ವಾಗಳು ನೀರಿನಲ್ಲಿ ಬೆಳೆಯುತ್ತವೆ. ಮಳೆಯಿಂದಾಗಿ ಹೆಚ್ಚು ನಿಂತ ನೀರಿನಿಂದ, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಮತ್ತು ಇವುಗಳ ಸಂಖ್ಯೆ ದುಪ್ಪಟ್ಟಾಗಲು ಕಾರಣವಾಗಿದೆ. ಇದು ಡೆಂಗ್ಯೂ ಪ್ರಕರಣ ಏರಿಕೆಗೆ ಕಾರಣವಾಗಿದೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
ಜ್ವರ: ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಪ್ರಮುಖವಾಗಿ ಜ್ವರ ಕಾಣಿಸಿಕೊಳ್ಳುವುದಾಗಿದೆ. ಹಠಾತ್ ಜ್ವರ ಕಾಣಿಸಿಕೊಂಡು ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೆ ಈ ಜ್ವರ ಕಾಡುತ್ತದೆ. ಇದು ತೀವ್ರ ಬೆವರುವಿಕೆ, ಸುಸ್ತಾಗುವುದು, ತಲೆನೋವಿಗೂ ಕಾರಣವಾಗುತ್ತದೆ.
ತೀವ್ರ ತಲೆನೋವು: ಡೆಂಗ್ಯೂ ಕಾಣಿಸಿಕೊಂಡಾಗ ತೀವ್ರ ರೀತಿಯ ತಲೆನೋವು ಸಹ ಕಾಣಿಸಿಕೊಳ್ಳುತ್ತದೆ. ಈ ತಲೆನೋವುಗಳು ಮುಂಭಾಗದ ಅಥವಾ ರೆಟ್ರೊ-ಆರ್ಬಿಟಲ್ ಆಗಿರಬಹುದು. ಇದು ಜ್ವರದ ಜೊತೆ ಕಾಣಿಸಿಕೊಳ್ಳುವುದರಿಂದ ತಲೆನೋವು ಅತೀಯಾಗಿ ಕಾಡುವುದು ನೋಡಬಹುದು.
ಸ್ನಾಯು ಮತ್ತು ಕೀಲು ನೋವು: ಡೆಂಗ್ಯೂ ಜ್ವರವು ಸಾಮಾನ್ಯವಾಗಿ ತೀವ್ರವಾದ ಸ್ನಾಯು ಮತ್ತು ಕೀಲು ನೋವನ್ನು ಉಂಟುಮಾಡುತ್ತದೆ, ಇದನ್ನು ಉಂಟುಮಾಡುವ ತೀವ್ರ ಅಸ್ವಸ್ಥತೆಯಿಂದಾಗಿ "ಬ್ರೇಕ್ಬೋನ್ ಜ್ವರ" ಎಂದು ಕರೆಯಲಾಗುತ್ತದೆ.
ಡೆಂಗ್ಯೂವಿನಿಂದ ಗುಣಮುಖರಾಗಲು ಎಷ್ಟು ಸಮಯ ಬೇಕು?
ಡೆಂಗ್ಯೂ ಬಂದರೆ ಚಿಕಿತ್ಸೆ ಪಡೆದ 4-5 ದಿನದಲ್ಲಿ ಜ್ವರ ಕಡಿಮೆಯಾಗುವುದು ಆದರೆ ಅಲ್ಲಿಯವರೆಗೂ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಜ್ವರ ಕಡಿಮೆಯಾದರು ಸುಸ್ತು ಕಡಿಮೆಯಾಗಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. 15 ದಿನ ಕಳೆದರೂ ಸುಸ್ತು ಕಡಿಮೆಯಾಗುವುದಿಲ್ಲ. ಆದ್ದರಿಂದ ಜ್ವರ ಕಡಿಮೆಯಾದರೂ ದೇಹದ ಆರೋಗ್ಯ ಮರಳಿ ಪಡೆಯಲು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡಿ. ನೀವು ಪೋಷಕಾಂಶವಿರುವ ಆಹಾರ ಸೇವಿಸಿ. ಸುಸ್ತು ಸ್ವಲ್ಪ ಕಡಿಮೆಯಾದ ಮೇಲೆ ಯೋಗ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ಸ್ನಾಯುಗಳಿಗೆ ಶಕ್ತಿ ಬರುವುದು. ಚಿಕಿತ್ಸೆ ಪಡೆದ ಬಳಿಕ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವಂತಹ ಆಹಾರವನ್ನು ಸೇವಿಸಿ, ಅದರಲ್ಲೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.
ಡೆಂಗ್ಯೂ ಬರುವುದನ್ನು ತಡೆಗಟ್ಟಲು ಏನು ಮಾಡಬೇಕು?
ಡೆಂಗ್ಯೂ ಬರುವುದು ಸೊಳ್ಳೆಯಿಂದ, ಆದ್ದರಿಂದ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ
ಬೆಡ್‌ಗೆ ಸೊಳ್ಳೆ ಪರದೆ ಹಾಕಿಸಿ
ಮಕ್ಕಳಿಗೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಿ
ಬೆಳಗ್ಗೆ-ಸಂಜೆ ಮನೆ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಬೇಡಿ
ಕಿಟಕಿಗಳಿಗೆ ಸೊಳ್ಳೆಪರದೆ ಹಾಕಿಸಿದ್ದರೆ ಮಾತ್ರ ಕಿಟಕಿ ತೆರೆದಿಡಿ
ಮನೆಯೊಳಗೆ ಸೊಳ್ಳೆ ಬತ್ತಿ, ಕರ್ಪೂರ, ಊದುಬತ್ತಿ ಹಚ್ಚಿ
ಮನೆ ಸುತ್ತ ನೀರು ನಿಂತಿದ್ದರೆ ಅದನ್ನು ಸರಿಪಡಿಸಿ, ಕಸ ಕಡ್ಡಿ, ಹಳೆ ಬಾಟಲಿ, ತೆಂಗಿನ ಚಿಪ್ಪು ಹೀಗೆ ಎಲ್ಲಾದರೂ ನೀರು ನಿಂತರೆ ಅದನ್ನು ನಾಶ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
