Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕುತ್ತಿಗೆ ಬಳಿಯ ಕಪ್ಪು ಕಲೆ ಮಧುಮೇಹದ ಮುನ್ಸೂಚನೆ ಇರಬಹುದು..! ಹೇಗೆ ಗೊತ್ತಾ?
ಅನೇಕರಿಗೆ ಚರ್ಮದ ಮೇಲೆ ಉಂಟಾಗುವ ಹಲವು ರೀತಿಯ ಬದಲಾವಣೆ ಅನಾರೋಗ್ಯದ ಮುನ್ಸೂಚಕ ಎಂಬುದು ತಿಳಿಯುವುದೇ ಇಲ್ಲ. ಏಕೆಂದರೆ ಇದು ಸಾಮಾನ್ಯ ಪ್ರಕ್ರಿಯೆ ಎಂದುಕೊಳ್ಳುತ್ತಾರೆ. ಆದ್ರೆ ನಮ್ಮ ಅನಾರೋಗ್ಯದ ಸೂಚಕಗಳು ನಮ್ಮ ಚರ್ಮದ ಮೇಲೆ ಮೊದಲು ಮೂಡುತ್ತವೆ. ಆದ್ರೆ ನಾವು ಅದನ್ನು ನಿರ್ಲಕ್ಷ ಮಾಡುತ್ತಲೇ ಇರುತ್ತೇವೆ.
ಅದರಲ್ಲೂ ನಮ್ಮ ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆಗಳು ಉಂಟಾಗುವುದನ್ನು ನೋಡುತ್ತೇವೆ. ಹಲವರ ಕುತ್ತಿಗೆ ಭಾಗದಲ್ಲಿ ಸುತ್ತಲೂ ಕಪ್ಪು ಬಣ್ಣದ ಕಲೆಯನ್ನು ನೋಡಬಹುದು. ಬಹುಕಾಲದಿಂದ ಈ ಕಲೆಗಳು ಉಂಟಾಗುವುದರಿಂದ ಇದನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸುವವರೇ ಇಲ್ಲ ಎನ್ನಬಹುದು. ಅದರಲ್ಲೂ ಭಾರತದಲ್ಲಿ ಈ ಕಲೆಯನ್ನು ಯಾರು ಸಹ ಪರೀಕ್ಷಿಸಿಕೊಳ್ಳಲು ಮುಂದಾಗುವುದಿಲ್ಲ.

ಆಭರಣ ಹಾಕಿಕೊಳ್ಳುವುದು, ದೇವರ ಹಗ್ಗ, ಬೆವರು ಇದೆಲ್ಲಾ ಈ ಕಪ್ಪು ಕಲೆಗೆ ಕಾರಣವಾಗಿರಬಹುದು ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಈ ಕಲೆಗಳು ಚರ್ಮರೋಗವಲ್ಲ ಬದಲಿಗೆ ನಿಮ್ಮ ಅನಾರೋಗ್ಯದ ಮುನ್ಸೂಚಕವಾಗಿದೆ. ಇದು ಟೈಪ್ 2 ಮಧು ಮೇಹದ ಮುನ್ಸೂಚಕವೂ ಆಗಿರಬಹುದು ಎಂದು ಹೇಳಲಾಗಿದೆ.
ಅಕಾಂತೋಸಿಸ್ ನಿಗ್ರಿಕಾನ್ಸ್ ಎನ್ನುವುದು ಚರ್ಮದ ಹೈಪರ್ಪಿಗ್ಮೆಂಟೇಶನ್ ಮತ್ತು ದಪ್ಪವಾಗುವುದನ್ನು ಸೂಚಿಸುತ್ತದೆ, ಇದು ಸಾಮಾನ್ಯವಾಗಿ ಕುತ್ತಿಗೆ, ಆರ್ಮ್ಪಿಟ್ಗಳು, ತೊಡೆಸಂದು ಮತ್ತು ಕೆಲವೊಮ್ಮೆ ಗೆಣ್ಣುಗಳಂತಹ ದೇಹದ ಮಡಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಲೆ ಉಂಟಾಗುವುದರಿಂದ ತುರಿಕೆ, ನೋವು ಯಾವುದೂ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಕಲೆಯನ್ನ ನಿರ್ಲಕ್ಷ್ಯ ಮಾಡಲಾಗುತ್ತೆ.
ಈ ಚರ್ಮದ ಸ್ಥಿತಿಯು ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದ್ದಾಗಿದೆ. ದೇಹದ ಜೀವಕೋಶಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನ್ ಇನ್ಸುಲಿನ್‌ಗೆ ಕಡಿಮೆ ಸ್ಪಂದಿಸುವ ಸ್ಥಿತಿಯಾಗಿದೆ. ಇದು ಸಂಭವಿಸಿದಾಗ, ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುವ ಮೂಲಕ ಸರಿದೂಗಿಸುತ್ತದೆ, ಇದು ರಕ್ತ ಪ್ರಸರಣ ಹೆಚ್ಚಾಗುವಂತೆ ಮಾಡುತ್ತದೆ. ಇದು ಹೆಚ್ಚಿನ ಇನ್ಸುಲಿನ್ ಮಟ್ಟದ ಚರ್ಮದ ಕೋಶವನ್ನು ಉತ್ತೇಜಿಸಲಿದೆ. ಅಲ್ಲದೆ ಕೊಬ್ಬು ಹೆಚ್ಚಾಗಿರುವ ಚರ್ಮಚದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಆ ಜಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಕಾಂಥೋಸಿಸ್ ನಿಗ್ರಿಕಾನ್ಸ್ ಇನ್ಸುಲಿನ್ ಪ್ರತಿರೋಧಕ್ಕೆ ವಿಶ್ವಾಸಾರ್ಹ ಕ್ಲಿನಿಕಲ್ ಮಾರ್ಕರ್ ಆಗಿದೆ, ಈ ಚರ್ಮದಲ್ಲಿ ಕಪ್ಪು ಕಲೆಗಳನ್ನು ಹೊಂದಿರುವ ಜನರು ಭವಿಷ್ಯದಲ್ಲಿ ಟೈಪ್ 2 ಮಧುಮೇಹ ಹೊಂದುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ವಿವರಿಸಿದೆ.
ಕೊಲಂಬಿಯಾ ವಿಶ್ವವಿದ್ಯಾನಿಲಯದ ಎಪಿಡೆಮಿಯಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಡಾ ಆಂಡ್ರ್ಯೂ ಜಿ. ರುಂಡಲ್, ಅಕಾಂಥೋಸಿಸ್ ನಿಗ್ರಿಕನ್‌ಗಳೊಂದಿಗಿನ 80 ಪ್ರತಿಶತದಷ್ಟು ಜನರು ಇನ್ಸುಲಿನ್ ಪ್ರತಿರೋಧವನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಇನ್ಸುಲಿನ್ ಪ್ರತಿರೋಧವು ಮಧುಮೇಹಕ್ಕೆ ಮಾತ್ರವಲ್ಲ, ಬೊಜ್ಜು ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಂತಹ ಇತರ ಚಯಾಪಚಯ ಪರಿಸ್ಥಿತಿಗಳಿಗೂ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಈ ಕಾರಣಕ್ಕಾಗಿ ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆಗಳನ್ನು ಹೊಂದಿರುವ ಮಂದಿ ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಹೇಳಲಾಗಿದೆ.
ಮಧುಮೇಹದ ಲಕ್ಷಣಗಳೇನು?
ತುಂಬಾ ಹಸಿವು: ದೇಹದಲ್ಲಿ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದರಿಂದ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಶಕ್ತಿ ಸಾಕಾಗುವುದಿಲ್ಲ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ ಹೊಟ್ಟೆ ಹಸಿವು ಜಾಸ್ತಿಯಾಗುತ್ತದೆ. ಹೀಗಾಗಿ ಪದೆ ಪದೇ ನೀವು ಏನಾದರು ತಿನ್ನಲು ಮುಂದಾಗುತ್ರೀರಿ.
ತೂಕ ಕಡಿಮೆಯಾಗುವುದು: ನೀವು ಪದೇ ಪದೇ ಹಸಿವು ಆದಾಗ ಏನಾದರೂ ತಿನ್ನುತ್ತಿದ್ದರೂ ಕೂಡ ದಿಢೀರ್ ಆಗಿ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಗ್ಲೂಕೋಸ್ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಮೂತ್ರ ವಿಸರ್ಜನೆ ಜಾಸ್ತಿಯಾಗುವುದರಿಂದ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಮುಖವಾಗುವುದು.
ಪದೇ-ಪದೇ ಮೂತ್ರವಿಸರ್ಜನೆ: ಪದೇ-ಪದೇ ಮೂತ್ರ ವಿಸರ್ಜನೆ ಉಂಟಾಗುವುದು. ದೇಹದಲ್ಲಿ ನೀರಿನಲ್ಲಿ ಕಡಿಮೆಯಾಗುವುದರಿಂದ ಆಗಾಗ ಬಾಯಾರಿಕೆಯಾಗುತ್ತದೆ. ಹೀಗಾಗಿ ನೀರು ಹೆಚ್ಚು ಕುಡಿಯುತ್ತೀರಿ, ನೀರು ಹೆಚ್ಚು ಕುಡಿದಷ್ಟು ಹೆಚ್ಚು ಮೂತ್ರ ವಿಸರ್ಜನೆಗೆ ಕಾರಣವಾಗುತ್ತೆ.
ಗಾಯ ಒಣಗದಿರುವುದು: ಮಧುಮೇಹ ಕಾಯಿಲೆ ಇದ್ದರೆ ಸಣ್ಣ ಗಾಯವಾದರೆ ಒಣಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
