Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಮಕ್ಕಳು ಟಿವಿ, ಮೊಬೈಲ್ ವೀಕ್ಷಣೆಯಿಂದ ಯಾವ ಮಾನಸಿಕ ಸಮಸ್ಯೆಗೆ ಒಳಗಾಗ್ತಾರೆ.? ತಜ್ಞರ ಉತ್ತರ ಇಲ್ಲಿದೆ!
ಈಗಿನ ಮಕ್ಕಳು ಮೊಬೈಲ್, ಟಿವಿ, ವಿಡಿಯೋ ಗೇಮ್ ಹೀಗೆ ಒಂದಲ್ಲಾ ಒಂದು ಗ್ಯಾಜೆಟ್ ಹಿಡಿದು ಕುಳಿತಿರುತ್ತಾರೆ ಅನ್ನೋದು ಎಲ್ಲಾ ಪೋಷಕರ ದೂರಾಗಿರುತ್ತೆ. ಮಕ್ಕಳು ಯಾವಾಗಲು ಪುಸ್ತಕ ಬಿಟ್ಟು ಟಿವಿ, ಮೊಬೈಲ್ ಹಿಡಿದರುತ್ತಾರೆ ಅನ್ನೋದು ಎಲ್ಲರ ಮನೆಯ ಸಾಮಾನ್ಯ ದೂರಾಗಿದೆ. ಆದ್ರೆ ಈಗಂತು ಮಕ್ಕಳಿಗೆ ಆನ್‌ಲೈನ್ ಪಾಠ, ಆನ್‌ಲೈನ್ ನೋಟ್ಸ್, ಅಸೈನ್ ಮೆಂಟ್ ಹೀಗೆ ಒಂದಲ್ಲಾ ಒಂದು ವಿಷಯಕ್ಕೆ ಅವರಿಗೆ ಮೊಬೈಲ್ ಅವಶ್ಯಕತೆ ಬೀಳುತ್ತಿದೆ.
ಇದಿಷ್ಟೆ ಅಲ್ಲ, ಮಕ್ಕಳು ಹೆಚ್ಚು ಹೆಚ್ಚು ಸ್ಕ್ರೀನ್ ಟೈಮ್‌ನಲ್ಲಿ ಅವರ ಓದಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ನಾವು ಅರಿತ್ತಿದ್ದೇವೆ. ಆದ್ರೆ ಮಕ್ಕಳ ಈ ಅಭ್ಯಾಸ ಬಿಡಿಸಲು ನೀವು ಹತ್ತಾರು ರೀತಿಯ ಪ್ರಯತ್ನ ಮಾಡಿರಬಹುದು. ಹಾಗೆ ಈ ರೀತಿಯ ಪ್ರಯತ್ನಗಳಲ್ಲಿ ವಿಫಲರವಾಗಿ ಸುಮ್ಮನಾಗಿರಬಹುದು, ಆದ್ರೆ ಮಕ್ಕಳ ಈ ಅಭ್ಯಾಸ ಅವರ ಯಾವ ರೀತಿಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದು ನಿಮಗೆ ಗೊತ್ತಾ?

ಈ ಕುರಿತಂತೆ ನಾನು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರು ತಿಳಿಸಿರುವ ಅಂಶಗಳನ್ನು ನಾವಿಂದು ಹಂಚಿಕೊಳ್ಳಲಿದ್ದೇವೆ. ಅವರ ಪ್ರಕಾರ ಮಕ್ಕಳು ಹೆಚ್ಚು ಸಮಯ ಸ್ಕ್ರೀನ್ ಟೈಮ್ ಕಳೆಯುವುದರಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ. ಅವರಲ್ಲಿ ಯಾವ ರೀತಿಯ ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮಕ್ಕಳು ಹೆಚ್ಚು ಸಮಯ ಮೊಬೈಲ್, ಟಿವಿ ಮುಂದೆ ಕಳೆಯುವುದು ಖಂಡಿತ ಅವರ ದೃಷ್ಟಿ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಮಾನಸಿಕ ಹಾಗೂ ದೈಹಿಕವಾಗಿ ಅವರು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅದರಲ್ಲೂ ಚಟುವಟಿಕೆ ಕಡಿಮೆಯಾಗಿ ಅವರು ತಮ್ಮ ವಯಸ್ಸಿಗಿಂತ ಹೆಚ್ಚಿನ ತೂಕ, ಬೊಜ್ಜು ಹೀಗೆ ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ನ್ಯೂರೋ ಡಾಮೇಜ್
ಮಕ್ಕಳು ಹೆಚ್ಚಿನ ಸಮಯ ಮೊಬೈಲ್ ಅಥವಾ ಟಿವಿ ಮುಂದೆ ಕಳೆಯುವುದು ಅವರಲ್ಲಿ ನರಗಳ ಡ್ಯಾಮೇಜ್‌ಗೆ ಕಾರಣವಾಗಬಹುದು. ಅನಿಯಂತ್ರಿತವಾಗಿ ಸ್ಕ್ರೀನ್ ಟೈಮಿಂಗ್ ಮಕ್ಕಳ ಮೆದುಳಿನಲ್ಲಿ ಬದಲಾವಣೆಗೆ ಕಾರಣವಾಗುತ್ತೆ. ವಯಸ್ಕರಲ್ಲಿ ಮೆದುಳಿನ ನರಗಳು, ಕೋಶಗಳು ಬೆಳವಣಿಗೆ ಆಗಿರುವುದರಿಂದ ಈ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುವುದಿಲ್ಲ ಆದ್ರೆ ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚಾಗಿರುತ್ತದೆ.
ಬೆಳವಣಿಗೆ ಕುಂಠಿತ
ಹೆಚ್ಚು ಸಮಯ ಮೊಬೈಲ್ ಟಿವಿ ಮುಂದೆ ಕಳೆಯುವುದರಿಂದಾಗಿ ಅವರ ಮೆದುಳಿನ ಬೆಳವಣಿಗೆಯ ಜೊತೆಗೆ ವೋಕಲ್ ಬೆಳವಣಿಗೆ ಕುಂಠಿತವಾಗುತ್ತದೆ. ಅಂದರೆ ಮಕ್ಕಳು ಮಾತುಗಾರಿಕೆ ತಡವಾಗುತ್ತದೆ. ಮಕ್ಕಳು ಸರಿಯಾದ ವಯಸ್ಸಿನಲ್ಲಿ ಮಾತನಾಡಲು ಆರಂಭಿಸುವುದು ತಡವಾಗುತ್ತದೆ. ಇದಕ್ಕೆ ಸ್ಕ್ರೀನ್ ಟೈಮ್ ಕೂಡ ಕಾರಣವಾಗುತ್ತದೆ.
ಸಾಮಾಜಿಕವಾಗಿ ಬೆರೆಯುವಿಕೆ ಮುಂದೂಡುತ್ತಾರೆ
ಮಕ್ಕಳು ಹೆಚ್ಚು ಸಮಯ ಮೊಬೈಲ್, ಟಿವಿ ಮುಂದೆ ಕುಳಿತಿರುವುದು ಅವರ ಸಾಮಾಜಿಕ ಬೆಳವಣಿಗೆಗೆ ಅಡ್ಡಿಪಡಿಸುವಂತೆ ಮಾಡುತ್ತೆ. ಅವರು ಬೇರೆಯವರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಇದು ಮುಂದೊಂದು ದಿನ ಮಕ್ಕಳಲ್ಲಿ ಫೋಬಿಯಾಗಳಿಗೆ ಕಾರಣವಾಗಬಹುದು. ಮಕ್ಕಳಿಗೆ ಇದು ಸಂಕುಚಿತ ಮನೋಭಾವನೆ ಬೆಳೆಯಲು ಕಾರಣವಾಗಬಹುದು.
ಸಮೀಪ ದೃಷ್ಟಿ ದೋಷ
4ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಗಳಲ್ಲಿ ಈ ಸಮೀಪ ದೃಷ್ಟಿದೋಷ ಹೆಚ್ಚಾಗುತ್ತಿದೆ, ಇದಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಮೊಬೈಲ್ ಹಾಗೂ ಟಿವಿ ವೀಕ್ಷಣೆಯ ಸಮಯ. ಮಕ್ಕಳಲ್ಲಿ ಕಣ್ಣಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಮೊಬೈಲ್ ವೀಕ್ಷಣೆಯಿಂದ ಬರುತ್ತದೆ. ಸಮೀಪ ದೃಷ್ಟಿ ದೋಷ ಕೂಡ ಇದರಲ್ಲಿ ಒಂದಾಗಿದೆ.
ಇದೆಲ್ಲದರ ಜೊತೆಗೆ ಅವರ ಮನಸಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆ ಎದುರಿಸುತ್ತಾರೆ.
- ಆತಂಕ ಮತ್ತು ಖಿನ್ನತೆ
- ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ)
- ನಿದ್ರಾ ಹೀತನೆ
- ಸ್ವಾಭಿಮಾನ ಕಡಿಮೆಯಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications