Latest Updates
-
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ!
ಮಕ್ಕಳ ಕಣ್ಣಿನ ಕೆಳಗೆ ಕಪ್ಪು ಕಲೆ ಗಂಭೀರ ಸಮಸ್ಯೆಗೆ ದಾರಿ..! ಯಾಕೆ ಗೊತ್ತಾ?
ಕಣ್ಣಿನ ಸುತ್ತಲೂ ಕಪ್ಪು ಕಲೆಗಳಾದರೆ ನಾವು ಅದನ್ನು ಸಾಧಾರಣವಾಗಿ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಹೀಗಾಗಲು ನಿದ್ರೆ ಇಲ್ಲದಿರುವುದು, ಕಣ್ಣಿನ ಆಯಾಸ, ಮೊಬೈಲ್ ಹೆಚ್ಚು ನೋಡಿದ್ದರಿಂದಲೋ ಉಂಟಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ. ಮತ್ತೆ ಕೆಲವರಿಗೆ ಬಿಸಿಲಿಗೆ ಹೋದ ಬಳಿಕ ಈ ರೀತಿ ಆಗುತ್ತದೆ. ಆದ್ರೆ ಮಕ್ಕಳಲ್ಲಿ ಈ ರೀತಿ ಕಣ್ಣಿನ ಕೆಳೆಗೆ ಕಪ್ಪು ಕಲೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಹೌದು ಮಕ್ಕಳ ಕಣ್ಣಿನ ಕೆಳಗೆ ಕಲೆಗಳು ಉಂಟಾದರೆ ಅದು ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಆದ್ರೆ ಮಕ್ಕಳಲ್ಲಿ ಉಂಟಾಗುವ ಈ ಕಣ್ಣಿನ ಕೆಳಗಿನ ಕಲೆಗಳು ಅಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಈ ರೀತಿ ಕಪ್ಪು ಕಲೆ ಉಂಟಾಗಲು ನ್ಯೂರೋಬ್ಲಾಸ್ಟೊಮಾ ಅಪರೂಪದ ಸಮಸ್ಯೆ ಕಾರಣವಾಗಿರಬಹುದಂತೆ. ಹಾಗಾದ್ರೆ ಏನಿದು ಸಮಸ್ಯೆ ಎಂಬುದನ್ನು ನಾವಿಂದು ತಿಳಿಯೋಣ.

ನ್ಯೂರೋಬ್ಲಾಸ್ಟೊಮಾ ಒಂದು ಅಪಸಾಮಾನ್ಯ ಸ್ಥಿತಿಯಾಗಿದೆ. ಮೂತ್ರಜನಕಾಂಗದ ಗ್ರಂಥಿಗಳು, ಕುತ್ತಿಗೆ, ಎದೆ, ಹೊಟ್ಟೆ ಅಥವಾ ಬೆನ್ನುಮೂಳೆಯಲ್ಲಿ ಅಪಕ್ವವಾದ ನರ ಕೋಶಗಳಲ್ಲಿ ರೂಪುಗೊಳ್ಳುವ ಒಂದು ರೀತಿಯ ಕ್ಯಾನ್ಸರ್ ಇದಾಗಿದೆ. ಈ ಸ್ಥಿತಿಯಲ್ಲಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
ನ್ಯೂರೋಬ್ಲಾಸ್ಟೊಮಾ ತಲೆ ಹಾಗೂ ಕಣ್ಣುಗಳ ಸುತ್ತ ಬೆಳೆಯುವ ಮೂಳೆಗಳಿಗೆ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕಕ್ಷೆ ಎಂದು ಗುರುತಿಸಲಾದ ಈ ಜಾಗದಲ್ಲಿ ಗಡ್ಡೆ ಬೆಳೆಯುತ್ತದೆ ಕೆಲವೊಮ್ಮೆ ರಕ್ತಸ್ರಾವವಾಗುವುದರಿಂದ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆ ಮೂಡುತ್ತದೆ. ನ್ಯೂರೋಬ್ಲಾಸ್ಟೊಮಾ ಅಪರೂಪದ ಕ್ಯಾನ್ಸರ್ ಆಗಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಅದರಲ್ಲೂ ವಿಶೇಷವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಈ ಕ್ಯಾನ್ಸರ್ ಹೊಟ್ಟೆಯ ಭಾಗದಿಂದ ಆರಂಭವಾಗುತ್ತದೆ. ಆದರೆ ಹಿರಿಯರಲ್ಲಿ ಈ ಕ್ಯಾನ್ಸರ್ ಬೇರೆ ಅಂಗದ ಮೂಲಕ ಹರಡಬಹುದು. ಹಾಗೆ ಇದು ವಯಸ್ಕರಲ್ಲಿ ಅಪರೂಪದ ಕಾಯಿಲೆಯಾಗಿದೆ. ಪ್ರತಿವರ್ಷ 10 ಮಿಲಿಯನ್ ವಯಸ್ಕರ ಪೈಕಿ ಕೇವಲ ಒಬ್ಬರಲ್ಲಿ ಮಾತ್ರ ಈ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಇದೆಯಂತೆ.
ನ್ಯೂರೋಬ್ಲಾಸ್ಟೊಮಾ ಕ್ಯಾನ್ಸರ್‌ನ ಲಕ್ಷಣವೇನು?
- ವಿಪರೀತ ಆಯಾಸ ಉಂಟಾಗುವುದು
- ಹೊಟ್ಟೆ ನೋವು, ಅಥವಾ ಗಡ್ಡೆ ಬೆಳೆಯುವುದು
- ಮೂಳೆಗಳ ನೋವು
- ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸುವುದು
- ಕಣ್ಣುಗಳು ಊದಿಕೊಳ್ಳುವುದು
- ಮಲಬದ್ಧತೆ ಉಂಟಾಗುವುದು
ಕಣ್ಣಿಗೆ ಕೆಳಗೆ ಕಪ್ಪು ಕಲೆ ಬರಲು ಇತರೆ ಕಾರಣಗಳು
ಕಣ್ಣಿನ ಕೆಳಗೆ ಕಪ್ಪು ಕಲೆ ಆದರೆ ಗಂಭೀರ ಸ್ವರೂಪದ ಕಾಯಿಲೆ ಎಂದು ಪರಿಗಣಿಸಬೇಕಾಗಿಲ್ಲ. ಹಾಗಾದ್ರೆ ಕಣ್ಣಿನ ಕೆಳಗೆ ಕಪ್ಪು ಕಲೆ ಬರಲು ಕಾರಣವೇನು? ಮೊದಲನೇಯದಾಗಿ ನಿಮ್ಮ ಜೀವನ ಶೈಲಿ ಕೂಡ ಇದಕ್ಕೆ ಕಾರಣವಾಗುತ್ತದೆ. ಆರೋಗ್ಯಕರ ಆಹಾರ ಸೇವಿಸದಿರುವುದು, ನಿದ್ರೆ ಇಲ್ಲದಿರುವುದು ಅಥವಾ ಕಡಿಮೆ ನಿದ್ರೆ ಮಾಡುವುದು, ಹೆಚ್ಚು ಕಾಲ ಮೊಬೈಲ್ ಬಳಸುವುದು, ಟಿವಿ ನೋಡುವುದು, ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ಈ ಸಮಸ್ಯೆಗೆ ಕಾರಣವಾಗಲಿದೆ.
ಕಪ್ಪು ಕಲೆಗೆ ಪರಿಹಾರವೇನು?
ಕಪ್ಪು ಕಲೆಗಳಿಗೆ ಹಲವು ರೀತಿಯ ಚಿಕಿತ್ಸೆ ಇದೆ. ಸೌತೆಕಾಯಿ ಕತ್ತರಿಸಿ ಇಡುವುದರಿಂದ ಹಿಡಿದು ಅಂಡರ್ ಐ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದನ್ನು ಬಳಸುವುದರಿಂದ ಕಲೆಗಳು ನಿವಾರಣೆಯಾಗುತ್ತದೆ. ಡಾರ್ಕ್ ಸರ್ಕಲ್‌ಗಾಗಿ ಪಿಲ್ಗ್ರಿಮ್ ಅಂಡರ್ ಐ ಕ್ರೀಮ್ ಕಾಲಜನ್ ಹೆಚ್ಚಿಸುತ್ತದೆ. ಇದರಿಂದ ಕಣ್ಣಿಗೆ ಕೆಳಗಿನ ಕೋಶಗಳಿಗೆ ಜೀವ ನೀಡಲಿದೆ. ಇದರಿಂದ ಸೂಕ್ಷ್ಮವಾದ ಚರ್ಮಕ್ಕೆ ಮತ್ತೆ ಹೊಳಪು ಸಿಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications