Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕಾಲುಗಳಲ್ಲಿ ಈ ಬದಲಾವಣೆಯಾದರೆ ಲಿವರ್‌ಗೆ ಹಾನಿಯಾಗಿದೆ ಎಂಬುವುದರ ಸೂಚನೆ
ಕೆಲವೊಮ್ಮೆ ಆರೋಗ್ಯ ಸಮಸ್ಯೆ ಉಂಟಾದಾಗ ಗೊತ್ತಾಗುವುದೇ ಇಲ್ಲ, ಆದರೆ ನಮ್ಮ ಶರೀರದಲ್ಲಿ ಅದರ ಲಕ್ಷಣಗಳು ಕಂಡು ಬರುತ್ತದೆ, ಆದರೆ ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ, ಲಿವರ್‌ಗೆ ಹಾನಿಯಾದಾಗ ಅದರ ಲಕ್ಷಣ ನಮ್ಮ ಪಾದಗಳಲ್ಲಿ ಕಂಡು ಬರುವುದು, ಆದ್ದರಿಂದ ಈ ಲಕ್ಷಣಗಳು ಕಂಡು ಬಂದಾಗ ಒಮ್ಮೆ ಚೆಕಪ್ ಮಾಡಿಸಿ:

ಕೆಂಪು, ಕಂದು ಬಣ್ಣದ ಚುಕ್ಕಿಗಳು
ಲಿವರ್ ಸಮಸ್ಯೆ ಇರುವವರಿಗೆ ಈ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದು. ಮಧುಮೇಹ ಇರುವವರಿಗೆ ಲಿವರ್ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಲಿವರ್ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ಸರಿಯಾಗಿ ರಕ್ತಸಂಚಾರವಾಗದೆ ಕಾಲುಗಳಲ್ಲಿ ರೆಡ್ ಅಂಡ್ ಬ್ರೌನ್ ಸ್ಪಾಟ್ ಕಂಡು ಬರುವುದು. ಲಿವರ್‌ನಲ್ಲಿ ಸಮಸ್ಯೆ ಉಂಟಾದಾಗ ಪಾದಗಳಲ್ಲಿ ಬಣ್ಣ ವ್ಯತ್ಯಾಸ ಕಂಡು ಬರುವುದು.
ಪಾದಗಳಲ್ಲಿ ತುರಿಕೆ
ಲಿವರ್ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ತುರಿಕೆ ಕಂಡು ಬರುವುದು. ಕೆಲವರಿಗೆ ರಾತ್ರಿಯಲ್ಲಿ ತುಂಬಾನೇ ತುರಿಕೆ ಉಂಟಾಗುವುದು, ಆದರೆ ತುರಿಕೆಗೆ ಕಾರಣವೇನು ಎಂಬುವುದು ಗೊತ್ತಿರುವುದಿಲ್ಲ, ಕಾಲುಗಳಲ್ಲಿ, ಉಗುರುಗಳಲ್ಲಿ ಫಂಗಸ್ ಸೋಂಕು ಉಂಟಾಗುವುದು. ಅದರಲ್ಲೂ ಪಾದಗಳಲ್ಲಿ ತುಂಬಾನೇ ತುರಿಕೆ ಕಂಡು ಬರುವುದು.
ನರಗಳು ಉಬ್ಬುವುದು
ಸಾಮಾನ್ಯವಾಗಿ ರೀತಿ ನರಗಳು ಉಬಬ್ಬುವುದು ಕಾಲುಗಳಲ್ಲಿ ಕಂಡು ಬಂದರೆ ಲಿವರ್‌ನ ಆರೋಗ್ಯ ಪರೀಕ್ಷೆ ಮಾಡುವುದು ಒಳ್ಳೆಯದು. ಲಿವರ್ ಆಸ್ಟ್ರೋಜಿನ್ ಅನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಈ ರೀತಿ ಕಂಡು ಬರುವುದು. ಫ್ಯಾಟಿ ಲಿವರ್‌ನಿಂದ ಗಾಲ್‌ಸ್ಟೋನ್ ಸಮಸ್ಯೆ ಕೂಡ ಉಂಟಾಗುವುದು.
ಪಾದಗಳು ಡ್ರೈಯಾಗುವುದು ಹಾಗೂ ಪಾದಗಳಲ್ಲಿ ಬಿರುಕು
ಒಮೆಗಾ 3 ಕೊಬ್ಬಿನಂಶದ ಕೊರತೆಯಾದಾಗ ಪಾದಗಳಲ್ಲಿ ಬಿರುಕು ಕಂಡು ಬರುವುದು. ಲಿವರ್ ಪಿತ್ತರಸ ಉತ್ಪತ್ತಿ ಮಾಡಿದಾಗ ಆಹಾರದಲ್ಲಿನ ಪೋಷಕಾಂಶ ಹಾಗೂ ಒಮೆಗಾ 3 ಕೊಬ್ಬಿನಂಶವನ್ನು ದೇಹವು ಹೀರಿಕೊಳ್ಳುವುದು. ದೇಹವು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಒಮೆಗಾ 3 ಕೊರತೆಯಾಗಿ ಪಾದಗಳಲ್ಲಿ ಬಿರುಕು ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications