Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಡರ್ಮಟೊಮಿಯೊಸಿಟಿಸ್ ಕಾಯಿಲೆಯಿಂದ ದಂಗಲ್ ನಟಿ ಸಾವು..! ಏನಿದು ಕಾಯಿಲೆ ಗೊತ್ತಾ?
ಖ್ಯಾತ ನಟ ಅಮೀರ್ ಖಾನ್ ಅಭಿನಯಿಸಿದ್ದ, ದಂಗಲ್ ಚಿತ್ರದಲ್ಲಿ ಬಬಿತಾ ಫೋಗಟ್ ಪಾತ್ರ ನಿರ್ವಹಿಸಿದ ನಟಿ ಸುಹಾನಿ ಭಟ್ನಾಗರ್ ಅವರು ಶನಿವಾರ (ಫೆಬ್ರವರಿ 17, 2024)ರ ಬೆಳಗ್ಗೆ ಮೃತಪಟ್ಟಿದ್ದರು. ಈ ಸುದ್ದಿ ಇಡೀ ಚಿತ್ರರಂಗ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜೆಗೂ ಶಾಕ್ ತಂದಿತ್ತು. ಯಾಕಂದ್ರೆ ಆಕೆಯ ವಯಸ್ಸು ಕೇವಲ 19.
ಆದ್ರೆ ಆಕೆ ಯಾವ ಕಾಯಿಲೆಗೆ ಒಳಗಾಗಿದ್ದಳು, ಆಕೆಯ ಸಾವಿಗೆ ಕಾರಣವೇನು? ಎಂಬುದು ಎಲ್ಲರಲ್ಲೂ ನಿಗೂಢತೆ ಸೃಷ್ಟಿಸಿತ್ತು. ಆಕೆಯ ಕುಟುಂಬವು ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ದೃಢಪಡಿಸಿದೆ. ಅವರನ್ನು ಫೆಬ್ರವರಿ 7 ರಂದು ದೆಹಲಿ ಏಮ್ಸ್‌ಗೆ ದಾಖಲಿಸಲಾಗಿತ್ತು.
ಹಾಗಾದರೆ ಈ ಡರ್ಮಟೊಮಿಯೊಸಿಟಿಸ್ ಅಂದರೆ ಏನು.? ಇದು ಹೇಗೆ ಹರಡುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲವೆ? ಅಥವಾ ಈ ಕಾಯಿಲೆ ಇರುವುದು ತಿಳಿಯುವುದು ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಡರ್ಮಟೊಮಿಯೊಸಿಟಿಸ್ ಎಂದರೇನು?
ಡರ್ಮಟೊಮಿಯೊಸಿಟಿಸ್ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಚರ್ಮ ಮತ್ತು ಸ್ನಾಯುಗಳ ಉರಿಯೂತವನ್ನು ಉಂಟುಮಾಡುತ್ತದೆ. ಇದು ಚರ್ಮದ ದದ್ದುಗಳು ಮತ್ತು ಸ್ನಾಯು ದೌರ್ಬಲ್ಯ ಮತ್ತು ನೋವನ್ನು ಉಂಟುಮಾಡುತ್ತದೆ. ಈ ಕಾಯಿಲೆ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದು ದೃಢವಾಗಿಲ್ಲ ಆದರೆ ಅನುವಂಶಿಕವಾಗಿ ಬರುತ್ತದೆ ಎಂದು ನಂಬಲಾಗಿದೆ.
ರೋಗದಿಂದಾಗಿ ಶ್ವಾಸಕೋಶಕ್ಕೆ ಹಾನಿ
ಎರಡು ತಿಂಗಳ ಹಿಂದೆ ಆಕೆಯ ಕೈಯಲ್ಲಿ ಕೆಂಪು ಕಲೆಗಳು ಕಾಣಿಸಿಕೊಂಡವು ಎಂದು ಆಕೆಯ ತಂದೆ ಹೇಳಿದರು. ನಾವು ಇದನ್ನು ಅಲರ್ಜಿ ಎಂದು ಭಾವಿಸಿದ್ದೆವು ಮತ್ತು ಫರಿದಾಬಾದ್‌ನ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿದ್ದೇವೆ ಆದರೆ ರೋಗನಿರ್ಣಯ ಮಾಡಲು ಸಾಧ್ಯವಾಗಲಿಲ್ಲ. ಆಕೆಯ ಸ್ಥಿತಿ ಹದಗೆಟ್ಟಾಗ, ನಾವು ಆಕೆಯನ್ನು ದೆಹಲಿ-ಏಮ್ಸ್‌ಗೆ ದಾಖಲಿಸಿದ್ದೆವು ಆದರೆ ಯಾವುದೇ ಸುಧಾರಣೆ ಇರಲಿಲ್ಲ ಮತ್ತು ಅತಿಯಾದ ದ್ರವ ಶೇಖರಣೆಯಿಂದಾಗಿ ಅವರ ಶ್ವಾಸಕೋಶಗಳು ಹಾನಿಗೊಳಗಾದವು.
ಡರ್ಮಟೊಮಿಯೊಸಿಟಿಸ್ ಹೇಗೆ ಬರುತ್ತದೆ?
ಡರ್ಮಟೊಮಿಯೊಸಿಟಿಸ್ ಯಾವುದೇ ವಯಸ್ಸಿನ ಜನರಿಗೆ ಸಂಭವಿಸಬಹುದು, ಆದರೆ ಇದು 40 ರಿಂದ 60 ವರ್ಷ ವಯಸ್ಸಿನವರಲ್ಲಿ ಮತ್ತು 5 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಇದು ಹೆಚ್ಚಾಗಬಹುದು.
ಡರ್ಮಟೊಮಿಯೊಸಿಟಿಸ್ ರೋಗನಿರ್ಣಯ ಮತ್ತು ಚಿಕಿತ್ಸೆ
ಡರ್ಮಟೊಮಿಯೊಸಿಟಿಸ್ ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ಉಲ್ಬಣಗಳನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಮುಖ್ಯವಾಗಿದೆ. ಚಿಕಿತ್ಸೆಯು ಉರಿಯೂತವನ್ನು ನಿಗ್ರಹಿಸಲು ಔಷಧಿಗಳನ್ನು ಒಳಗೊಂಡಿರುತ್ತದೆ, ಸ್ನಾಯುವಿನ ಶಕ್ತಿ ಮತ್ತು ಕಾರ್ಯವನ್ನು ನಿರ್ವಹಿಸಲು ದೈಹಿಕ ಚಿಕಿತ್ಸೆ, ಮತ್ತು ಕೆಲವೊಮ್ಮೆ ಇಮ್ಯುನೊಸಪ್ರೆಶನ್ ಥೆರಪಿ ನೆರವಿಗೆ ಬರಲಿದೆ.
ಡರ್ಮಟೊಮಿಯೊಸಿಟಿಸ್‌ನ ಲಕ್ಷಣಗಳೇನು?
ಡರ್ಮಟೊಮಿಯೊಸಿಟಿಸ್ ಚರ್ಮ ಮತ್ತು ಸ್ನಾಯುಗಳ ಮೇಲೆ ಅನೇಕ ರೋಗಲಕ್ಷಣಗಳನ್ನು ಉಂಟುಮಾಡಬಹುದು.
- ಕೆಂಪು ಬಣ್ಣದಲ್ಲಿ ದದ್ದುಗಳು ಕಾಣಿಸುವುದು
- ದದ್ದು ಸಾಮಾನ್ಯವಾಗಿ ಮುಖ, ಕಣ್ಣುರೆಪ್ಪೆಗಳು ಮತ್ತು ಮೊಣಕೈಗಳ ಮೇಲೆ ಸಂಭವಿಸಬಹುದು
- ನೇರಳೆ ಬಣ್ಣಕ್ಕೆ ತಿರುಗುವ ಚರ್ಮ
- ಬಿಸಿಲಿನಲ್ಲಿ ಓಡಾಡುವಾಗ ಚರ್ಮ ಸುಟ್ಟ ಅನುಭವವಾಗುವುದು
- ಮೇಲಿನ ಕಣ್ಣುರೆಪ್ಪೆಗಳ ಮೇಲೆ ವಿಚಿತ್ರವಾದ ರಾಶ್ ಅನ್ನು ಹೆಲಿಯೋಟ್ರೋಪ್ ರಾಶ್ ಎಂದು ಕರೆಯಲಾಗುತ್ತದೆ
- ಸ್ನಾಯು ದೌರ್ಬಲ್ಯ ಮತ್ತು ನೋವು
- ಭುಜಗಳು ಮತ್ತು ಸೊಂಟದ ಸುತ್ತಲಿನ ಸ್ನಾಯುಗಳಲ್ಲಿ ತೀವ್ರವಾದ ನೋವು
- ಸುಸ್ತು
- ಆಹಾರ ನುಂಗುವಾಗ ಗಂಟಲು ನೋವು
- ಕೀಲು ನೋವು
ಇದಕ್ಕೆ ಚಿಕಿತ್ಸೆ ಏನು?
ಡರ್ಮಟೊಮಿಯೊಸಿಟಿಸ್ ಅಪರೂಪದ ಕಾಯಿಲೆಯಾಗಿದ್ದು ಅದು ಸ್ನಾಯು ದೌರ್ಬಲ್ಯ ಮತ್ತು ಚರ್ಮದ ದದ್ದುಗೆ ಕಾರಣವಾಗುತ್ತದೆ. ಆತಂಕದ ವಿಷಯವೆಂದರೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಚಿಕಿತ್ಸೆಯನ್ನು ಮಾಡಲಾಗುತ್ತದೆ. ಆದರೆ ಆರಂಭದಿಂದಲೂ ಚಿಕಿತ್ಸೆ ನೀಡಬಹುದು. ಆದರೆ ಇದು ಶ್ವಾಸಕೋಶ ಮತ್ತು ಹೃದಯದ ಮೇಲೆ ಹಾನಿ ಮಾಡುವುದುರಿಂದ ಬಹುಬೇಗ ಸಾವು ಸಂಭವಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications