Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಕೆಟ್ಟ ಅಭ್ಯಾಸಗಳಿದ್ದರೆ ಇಂದೇ ಬಿಟ್ಟು ಬಿಡಿ ! ಇಲ್ಲದಿದ್ದರೆ ನಿಮ್ಮ ದೇಹ ರೋಗದ ಕೂಪವಾಗಿಬಿಡಬಹುದು!
ಆರೋಗ್ಯವೇ ಭಾಗ್ಯ ಅಂತಾರೆ ಆದರೆ ಈ ಆಧುನಿಕ ಯುಗದಲ್ಲಿ ಜನ ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಮರೆತಂತಿದೆ. ಸಮಯವಲ್ಲದ ಸಮಯದಲ್ಲಿ ತಿನ್ನೋದು, ಮಲಗೋದು. ಅಷ್ಟೇ ಯಾಕೆ ಇದರ ಜೊತೆಗೆ ದುಸ್ಚಟಗಳನ್ನು ರೂಢಿಸಿಕೊಂಡಿದ್ದಾರೆ. ಹೀಗಿರಬೇಕಾದರೆ ದೇಹದ ಆರೋವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಅದ್ರಲ್ಲೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಆರೋಗ್ಯಕ್ಕೆ ಕುತ್ತು ತರುವಂತಹ ಕೆಲ ಚಟಗಳನ್ನು ರೂಢಿಸಿಕೊಂಡಿದ್ದಾರೆ. ಹಾಗಾದ್ರೆ ಆರೋಗ್ಯದ ದೃಷ್ಟಿಯಿಂದ ಗಮನಿಸೋದಾದ್ರೆ ಯಾವ ಅಭ್ಯಾಸಗಳು ಒಳ್ಳೆಯದಲ್ಲ ಅನ್ನೋದನ್ನ ತಿಳಿಯೋಣ.

1. ಬೆಳಗ್ಗಿನ ಉಪಹಾರ ಸೇವಿಸದಿರೋದು
ರಾತ್ರಿ ತಡವಾಗಿ ಮಲಗಿದರೆ ಬೆಳಗ್ಗೆ ಏಳೋದಕ್ಕೆ ಮನಸ್ಸಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಬೆಳಗ್ಗೆ ನಾವು ಅಂದುಕೊಂಡ ಜಾಗಕ್ಕೆ ಸರಿಯಾದ ಸಮಯಕ್ಕೆ ತಲುಪೋದಕ್ಕೆ ಆಗೋದಿಲ್ಲ. ಈ ವೇಳೆ ಅನೇಕ ಜನ ಏನು ಮಾಡ್ತಾರೆ ಅಂದ್ರೆ ಬೆಳಗ್ಗಿನ ಉಪಹಾರವನ್ನೇ ಮಾಡೋದಿಲ್ಲ. ಖಾಲಿ ಹೊಟ್ಟೆಯಲ್ಲಿ ಆಫಿಸ್, ಶಾಲಾ, ಕಾಲೇಜುಗಳಿಗೆ ತೆರಳುತ್ತಾರೆ. ಇದರಿಂದ ತೂಕ ಇಳಿಸಿಕೊಳ್ಳಬಹುದು ಅಂತ ತುಂಬಾ ಜನ ಅಂದುಕೊಂಡಿರ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಅಧ್ಯಯನಗಳ ಪ್ರಕಾರ ಬೆಳಗ್ಗಿನ ಉಪಹಾರ ಸೇವಿಸದೇ ಹೋದರೆ ಡಯಾಬಿಟೀಸ್ ಹಾಗೂ ಹೃದಯಾಘಾತದ ಅಪಾಯ ಹೆಚ್ಚಾಗುತ್ತಂತೆ.
2. ಒಂದೇ ಸಮನೆ ಉಗುರು ಕಡಿಯುವುದು
ಅನೇಕರು ಉಗುರು ಕಡಿಯುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಉಗುರು ಕಡಿಯುವುದಕ್ಕೆ ಇಂತಹದ್ದೇ ಸಂದರ್ಭ ಆಗಬೇಕೆಂದೇನಿಲ್ಲ. ಚಡಪಡಿಕೆ ಉಂಟಾದಾಗ, ಭಯವಾದಾಗ, ಹೀಗೆ ಹೆಚ್ಚಿನ ಸಂದರ್ಭಗಳಲ್ಲಿ ಉಗುರು ಕಡಿಯೋದನ್ನು ಅನೇಕರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಉಗುರಿನ ಸಂಧಿಯಲ್ಲಿ ಅಡಗಿರೋ ಬ್ಯಾಕ್ಟಿರಿಯಾಗಳು ನಮ್ಮ ದೇಹದ ಒಳಹೊಕ್ಕು ನಮ್ಮನ್ನು ಅನಾರೋಗ್ಯ ಪೀಡಿತರನ್ನಾಗಿ ಮಾಡಬಹುದು. ಜೊತೆಗೆ ಇದು ನಮ್ಮ ಹಲ್ಲಿನ ಆರೋಗ್ಯಕ್ಕೂ ಒಳ್ಳೆದಲ್ಲ.
3. ನೀರು ಕುಡಿಯೋದಿಲ್ಲ
ನೀರು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆರೋಗ್ಯವಂತ ಮನುಷ್ಯ ನಿತ್ಯ 3-4 ಲೀಟರ್‌ಗಳಷ್ಟು ನೀರು ಕುಡಿಯಲೇಬೇಕು. ಆದರೆ ಅನೇಕ ಜನ ನೀರು ಕುಡಿಯೋದು ಅಂದರೆ ಮೂಗು ಮುರಿಯುತ್ತಾರೆ. ನಿತ್ಯ ಒಂದೆರಡು ಲೋಟ ನೀರು ಕುಡಿದರೆನೇ ಹೆಚ್ಚು. ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ಹೆಚ್ಚಿನ ನೀರು ಕುಡಿಯೋದ್ರಿಂದ ನಮ್ಮ ದೇಹ ಹೈಡ್ರೇಟ್ ಆಗಿರುತ್ತದೆ. ಅಷ್ಟೇ ಅಲ್ಲದೇ ಕ್ಯಾನ್ಸರ್‌ನ ಅಪಾವನ್ನು ಕಡಿಮೆ ಮಾಡುತ್ತದೆ, ತೂಕ ಇಳಿಸಲು, ಸಂಧಿ ನೋವು, ತಲೆನೋವಿನಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ.
4. ಒತ್ತಡವನ್ನು ನಿಯಂತ್ರಿಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಮನುಷ್ಯ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಒತ್ತಡ. ಅತಿಯಾದ ಒತ್ತಡದಿಂದ ಖಿನ್ನತೆಗೂ ಒಳಗಾಗುತ್ತಾರೆ. ಇದೇ ಕಾರಣಕ್ಕೆ ಸಣ್ಣ ಪುಟ್ಟ ವಿಚಾರಕ್ಕೆ ಒತ್ತಡವನ್ನು ನಮ್ಮ ಮೈ ಮೇಲೆ ನಾವು ಹೇರಿ ಕೊಳ್ಳೋದು ತಪ್ಪು. ಸಾವಿರಾರು ಕೆಲಸಗಳನ್ನು ಒಂದೇ ಬಾರಿ ನಮ್ಮ ತಲೆ ಮೇಲೆ ಹಾಕಿ ಕೊಳ್ಳುವ ಬದಲು ಒಂದೇ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದರೆ ಸಾಕಲ್ಲವೇ. ಅತಿಯಾದ ಒತ್ತಡವು ಖಿನ್ನತೆ, ಮರೆಗುಳಿತನ, ಹೃದಯಾಘಾತಕ್ಕೂ ಕಾರಣವಾಗಬಹುದು.
5. ಕುಳಿತ ಜಾಗದಲ್ಲೇ ತಿನ್ನುವ ಅಭ್ಯಾಸ
ಕೆಲಸದ ಒತ್ತಡವನ್ನು ಜನ ಮೈ ಮೇಲೆ ಯಾವ ರೀತಿ ಹೇರಿಕೊಳ್ಳುತ್ತಾರೆ ಎಂದರೆ ತಿನ್ನೋದಕ್ಕೂ ಸಮಯವಿರೋದಿಲ್ಲ. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಂತೆ ಆಹಾರವನ್ನು ಕೈಗೆತ್ತಿಕೊಂಡು ತಿನ್ನೋದಕ್ಕೆ ಶುರು ಮಾಡುತ್ತೇವೆ. ಇನ್ನೂ ಮಕ್ಕಳಂತೂ ಹೊರಗಡೆಯಿಂದ ಆಟವಾಡಿ ಬಂದು ಕೈ ತೊಳೆಯದೇ ಆಹಾರ ತಿನ್ನಲು ಆರಂಭಿಸುತ್ತಾರೆ. ಇದರಿಂದ ನಿಮ್ಮ ದೇಹದೊಳಗಡೆ ಬ್ಯಾಕ್ಟೀರಿಯಾ, ಕ್ರಿಮಿ, ಕೀಟಗಳು ಸೇರಿಕೊಳ್ಳುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ.
6. ಸಿಗರೇಟ್ ಸೇವನೆ
ಇತ್ತೀಚಿನ ಕಾಲದಲ್ಲಿ ಪುರುಷರು ಮಹಿಳೆಯರೆನ್ನದೇ ಪ್ರತಿಯೊಬ್ಬರು ಸಿಗರೇಟ್‌ನ ದಾಸರಾಗಿ ಬಿಟ್ಟಿದ್ದಾರೆ. ಒಂದು ಸಾರಿ ಸಿಗರೇಟ್‌ನ ಚಟ ಹತ್ತಿಬಿಟ್ರೆ ಅದನ್ನು ಬಿಟ್ಟಿರೋದಕ್ಕೆ ಆಗದೇ ಇರುವ ಪರಿಸ್ಥಿತಿಗೆ ತಲುಪುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಜೊತೆಗೆ ಶ್ವಾಸಕೋಶದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
7. ನಿದ್ದೆ ಸರಿಯಾಗಿ ಮಾಡದೇ ಇರುವುದು
ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಕಣ್ಣು ತುಂಬಾ ನಿದ್ದೆ ಮಾಡುವುದು ಕೂಡ ತುಂಬಾನೇ ಮುಖ್ಯ. ಆದರೆ ಇತ್ತೀಚಿಗೆ ಜನ ರಾತ್ರಿಯೆಲ್ಲಾ ಎಂಜಾಯ್ ಮಾಡಿ, ಹೆಚ್ಚಿನ ಸಮಯ ಫೋನ್‌ನಲ್ಲಿ ಮುಳುಗಿ ರಾತ್ರಿ ತಡವಾಗಿ ಮಲಗುತ್ತಾರೆ. ಇನ್ನೂ ಬೆಳಗ್ಗಿನ ಸಮಯ ಸರಿಯಾದ ಸಮಯಕ್ಕೆ ಆಫಿಸ್‌ಗೆ ಹೋಗಬೇಕಾದ ಅವಶ್ಯಕತೆ ಇರೋದ್ರಿಂದ ಬೇಗ ಏಳಲೇಬೇಕು. ಹೀಗಾಗಿ ಸರಿಯಾಗಿ ನಿದ್ದೆಯೂ ಆಗದೇ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.
ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸಗಳು ಖಂಡಿತ ಒಳ್ಳೆಯದಲ್ಲ. ಇಂದೇ ಈ ಅಭ್ಯಾಸಗಳನ್ನು ಬಿಟ್ಟು ಬಿಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ನೂರು ಕಾಲ ಸಂತೋಷವಾಗಿ ಬಾಳಬೇಕೆಂದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




