Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಆಸ್ಟ್ರಾಜೆನೆಕಾ ಲಸಿಕೆ ವಿರುದ್ಧ ಮತ್ತೊಂದು ಆರೋಪ..! ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ..!
ಕೋವಿಡ್ ಸಮಯದಲ್ಲಿ ಕೋಟಿ ಕೋಟಿ ಮಂದಿ ಪಡೆದಿದ್ದ ಲಸಿಕೆಯಾಗಿದ್ದ ಅಸ್ಟ್ರಾಜೆನೆಕಾದ ಸಂಸ್ಥೆಯ ಕೋವಿಶೀಲ್ಡ್ ಅಡ್ಡಪರಿಣಾಮಕ್ಕೆ ಕಾರಣವಾಗುತ್ತೆ ಎಂಬ ವರದಿ ಬಿಡುಗಡೆಯಾಗಿತ್ತು. ಇದಾಗಿ ಹಲವರಲ್ಲಿ ಆತಂಕಕ್ಕೂ ಕಾರಣವಾಗಿತ್ತು. ಇಂಗ್ಲೆಂಡ್‌ನ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಲಸಿಕೆ ಅಡ್ಡಪರಿಣಾಮ ದೃಢಪಟ್ಟಿತ್ತು.
ಇದಾದ ಬಳಿಕ ಸಂಸ್ಥೆ ಜಗತ್ತಿನಾದ್ಯಂತ ತನ್ನ ಕೋವಿಡ್ ಲಸಿಕೆಯನ್ನು ಹಿಂಪಡೆದಿತ್ತು. ಆದ್ರೆ ಇದಕ್ಕೆ ಕಾರಣ ಬೇರೆ ನೀಡಿತ್ತು. ಈ ಆತಂಕದ ನಡುವೆಯೇ ಈಗ ಈ ಕೋವಿಡ್ ಲಸಿಕೆ ಮೇಲೆ ಮತ್ತೊಂದು ದೊಡ್ಡ ಆರೋಪ ಕೇಳಿಬಂದಿದೆ. ಈ ಲಸಿಕೆಯ ಕಾರಣದಿಂದಾಗಿ ಮತ್ತೊಂದು ಪ್ರಮಾದ ನಡೆದಿದೆ ಎಂದು ವರದಿಯಾಗಿದೆ.

ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ. ಇದು ಲಸಿಕೆ-ಪ್ರೇರಿತ ಪ್ರತಿರಕ್ಷಣಾ ಥ್ರಂಬೋಸೈಟೋಪೆನಿಯಾ ಮತ್ತು ಥ್ರಂಬೋಸಿಸ್ (ವಿಐಟಿಟಿ) ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಇದು ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೆ ದಾರಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
2021 ರಲ್ಲಿ ಕೋವಿಡ್ ಸಾಂಕ್ರಾಮಿಕದ ಉತ್ತುಂಗದಲ್ಲಿ ಅಡೆನೊವೈರಸ್ ವೆಕ್ಟರ್ ಆಧಾರಿತ ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಯನ್ನು ಅನುಸರಿಸಿ VITT ಹೊಸ ರೋಗವಾಗಿ ಹೊರಹೊಮ್ಮಿತು - ಭಾರತದಲ್ಲಿ ಕೋವಿಶೀಲ್ಡ್ ಮತ್ತು ಯುರೋಪ್‌ನಲ್ಲಿ ವ್ಯಾಕ್ಸ್‌ಜೆವ್ರಿಯಾ ಎಂದು ಮಾರಾಟ ಮಾಡಲಾಯಿತು.
ಪ್ಲೇಟ್ಲೆಟ್ ಫ್ಯಾಕ್ಟರ್ 4 (ಅಥವಾ PF4) ಎಂದು ಕರೆಯಲ್ಪಡುವ ಪ್ರೋಟೀನ್ ವಿರುದ್ಧ ನಿರ್ದೇಶಿಸಲಾದ ಅಸಾಮಾನ್ಯವಾಗಿ ಅಪಾಯಕಾರಿ ರಕ್ತದ ಸ್ವಯಂ ಪ್ರತಿಕಾಯ" VITT ಗೆ ಕಾರಣವೆಂದು ಕಂಡುಬಂದಿದೆ. 2023 ರಲ್ಲಿ ಕೆನಡಾ, ಉತ್ತರ ಅಮೇರಿಕಾ, ಜರ್ಮನಿ ಮತ್ತು ಇಟಲಿಯ ವಿಜ್ಞಾನಿಗಳು ಅದೇ PF4 ಪ್ರತಿಕಾಯದೊಂದಿಗೆ ವಾಸ್ತವಿಕವಾಗಿ ಒಂದೇ ರೀತಿಯ ಸಮಸ್ಯೆಯನ್ನು ವಿವರಿಸಿದರು, ಇದು ನೈಸರ್ಗಿಕ ಅಡೆನೊವೈರಸ್ ಸೋಂಕಿನ ನಂತರ ಕೆಲವು ಸಂದರ್ಭಗಳಲ್ಲಿ ಮಾರಕವಾಗಿದೆ ಎಂದು ತಿಳಿದುಬಂದಿದೆ.
ಅಡೆನೊವೈರಸ್ (ಸಾಮಾನ್ಯ ನೆಗಡಿ) ಸೋಂಕಿನ ನಂತರ ರಕ್ತ ಹೆಪ್ಪುಗಟ್ಟುವಿಕೆಯ ಅಪರೂಪದ ಪ್ರಕರಣಗಳಿಗೆ ಅನ್ವಯಿಸುತ್ತವೆ ಮತ್ತು ಲಸಿಕೆ ಅಭಿವೃದ್ಧಿಗೆ ಪರಿಣಾಮಗಳನ್ನು ಬೀರುತ್ತವೆ ಎಂಬ ಅಂಶ ಈ ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ. ಅದೇ ತಂಡವು 2022 ರ ಅಧ್ಯಯನದಲ್ಲಿ "PF4 ಪ್ರತಿಕಾಯದ ಆಣ್ವಿಕ ಸಂಕೇತವನ್ನು ಭೇದಿಸಿತು ಮತ್ತು ಆನುವಂಶಿಕ ಅಪಾಯಕಾರಿ ಅಂಶವನ್ನು ಗುರುತಿಸಿದೆ.
ಅಡ್ಡಪರಿಣಾಮ ಒಪ್ಪಿಕೊಂಡಿತ್ತು ಸಂಸ್ಥೆ
ದಿ ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಕೋವಿಶೀಲ್ಡ್, ವ್ಯಾಕ್ಸ್‌ಜೆವೆರಿಯಾ ಮುಂತಾದ ಬ್ರ್ಯಾಂಡ್‌ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ. ಈ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಲಾಗಿತ್ತು. ಲಸಿಕೆ ಪಡೆದ ಬಳಿಕ ಗಂಭೀರ ಅಡ್ಡಪರಿಣಾಮ ಹಾಗೂ ಸಾವು ಸಂಭವಿಸಿರುವುದರಿಂದ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಲಾಗಿತ್ತು. ಹಲವಾರು ಜನರು ಈ ಲಸಿಕೆ ವಿರುದ್ಧ ಕೇಸ್ ಹಾಕಿದ್ದರು.
ಮೊದಲಿಗೆ ಜಮೈ ಸ್ಕಾಟ್ ಎಂಬವವರು ಕೇಸ್ ಹಾಕಿದ್ದರು. 2021ರಲ್ಲಿ ಲಸಿಕೆ ಪಡೆದ ಬಳಿಕ ಅವರ ಮೆದುಳಿಗೆ ಹಾನಿಯಾಗಿತ್ತು, ಇನ್ನು ಅನೇಕರು ತಮಗಾದ ಸಮಸ್ಯೆ ಬಗ್ಗೆ ಹೇಳಿ ಕೇಸ್ ದಾಖಲಿಸಿದ್ದರು. ಇದರ ಬಗ್ಗೆ ದಾಖಲೆ ಸಂಗ್ರಹಿಸಿ ಯುಕೆ ಕೋರ್ಟ್‌ಗೆ ನೀಡಲಾಯ್ತು. ಈ ಕೇಸ್‌ನ ವಿಚಾರಣೆಯಲ್ಲಿ ಕಂಪನಿಯು ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರುವುದು ಎಂಬುವುದಾಗಿ ಒಪ್ಪಿಕೊಂಡಿತ್ತು.
ಇದಾಗಿ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ತನ್ನ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆದಿತ್ತು, ಆದರೆ ಈ ಹಿಂಪಡೆಯುವಿಕೆಗೆ ನೀಡಿದ್ದ ಕಾರಣ ಬೇರೆಯದ್ದೇ ಇತ್ತು. ಇದೀಗ ಮತ್ತೊಂದು ಆರೋಪ ಸಹ ಈ ಲಸಿಕೆ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣ ಇನ್ನು ಎಲ್ಲಿಗೆ ಹೋಗಿ ತಲುಪಲಿದೆ ಎಂಬ ಆತಂಕ ಎದುರಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
