Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ಯಾಂಡಮಿಕ್‌ನಿಂದ ಎಂಡಮಿಕ್ ಆಗಿ ಬದಲಾದ ಕೋವಿಡ್..! ಹೀಗಂದ್ರೆ ಏನು ಗೊತ್ತಾ?
ಕೋವಿಡ್ -19 ಇಡೀ ಜಗತ್ತನ್ನೇ ನಡುಗಿಸಿದ್ದ ವೈರಸ್. ಈಗಲೂ ಹಲವು ದೇಶಗಲ್ಲಿ ಕೋವಿಡ್ ವೈರಸ್ ಜೀವಂತವಾಗಿದೆ. ಭಾರತದಲ್ಲೂ ಸಕ್ರೀಯ ಪ್ರಕರಣಗಳಿವೆ. ಹೀಗೆ ಇಡೀ ವಿಶ್ವಕ್ಕೆ ಒಮ್ಮೆ ದುರಂತಗಳ ಸರಮಾಲೆ ತಂದ ವೈರಸ್ ಇದು. ಹಿಂದೆಂದೂ ಕಂಡಿರದ ಆರೋಗ್ಯ ತುರ್ತು ಪರಿಸ್ಥಿತಿಗೆ ಇದು ಕಾರಣವಾಗಿತ್ತು, ಲಾಕ್‌ಡೌನ್‌ಗಳು, ಕ್ವಾರಂಟೈನ್ ಹೀಗೆ ಹತ್ತಾರು ಸಮಸ್ಯೆಗೆ ಇದು ಕಾರಣವಾಗಿತ್ತು.
ಇನ್ನು ಕೋವಿಡ್ ಲಸಿಕೆ ಸೇರಿದಂತೆ ಹತ್ತು ಹಲವು ಅಂಶಗಳ ಆರಂಭಕ್ಕೆ ಕಾರಣವಾಗಿತ್ತು. ಕೋವಿಡ್‌ಗೆ ಒಳಗಾಗಿದವರು ಹಾಗೂ ಲಸಿಕೆ ಪಡೆದವರು ಬಳಿಕ ಹಲವು ರೀತಿ ಸಮಸ್ಯೆ ಎದುರಿಸಬೇಕಾಯಿತು. ಅದ್ರಲ್ಲೂ ಕೋವಿಡ್ ಗೆ ಒಳಗಾದವರಲ್ಲಿ ಹಲವು ರೀತಿ ಸಮಸ್ಯೆಗಳು ಎದುರಾಗಿದ್ದನ್ನು ನಾವು ಸಹ ನೋಡಿದ್ದೇವೆ.

2019ರಿಂದ ಹರಡಲು ಆರಂಭಿಸಿದ್ದ ಕೋವಿಡ್ ಅನ್ನು ಪ್ಯಾಂಡಮಿಕ್ ಎಂದು ಕರೆಯಲಾಗಿತ್ತು. ಅತ್ಯಂತ ವೇಗವಾಗಿ ಖಂಡಾಂತರವಾಗಿ ಹರಡಿದ ಈ ವೈರಸ್ ಎಲ್ಲಾ ದೇಶದಲ್ಲೂ ದುರಂತಗಳ ಸೃಷ್ಟಿಸಿತ್ತು. ಆದ್ರೆ ಈಗ ಕೋವಿಡ್ ಪ್ಯಾಂಡಮಿಕ್ ಬದಲಿ ಎಂಡಮಿಕ್ ಆಗಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾದ್ರೆ ಏನಿದು ಎಂಡಮಿಕ್? ಇದರಿಂದ ಏನು ಪರಿಣಾಮ ಇರಲಿದೆ ಎಂಬುದನ್ನು ನಾವು ನೋಡೋಣ.
ಕೋವಿಡ್ ಇಂದಿಗೂ ಬಹಳ ಮಹತ್ವದ ಸಮಸ್ಯೆಯಾಗಿದೆ, ಈ ಕೋವಿಡ್‌ನಿಂದ ವಿವಿಧ ರೀತಿಯ ಹೊಸ ಸಮಸ್ಯೆಗಳು ಎದುರಾಗುತ್ತಿರುವುದು ಜನರು ಪೋಸ್ಟ್ ಕೋವಿಡ್ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ನೋಡಬಹುದು, ಹೀಗಾಗಿ ಈ ಕೋವಿಡ್ ಈಗ ಎಂಡಮಿಕ್ ಆಗಿ ಪರಿವರ್ತನೆಗೊಂಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತಜ್ಞರು ಹೇಳುವಂತೆ ಪ್ರದೇಶಗಳಿಗೆ ಅನುಗುಣವಾಗಿ ಹರಡುವ ರೋಗವಾಗಿ ಕೋವಿಡ್ ಬದಲಾಗಿದೆಯಂತೆ. ಜನಸಾಂದ್ರತೆಯ ಅನುಗುಣವಾಗಿ ಈ ವೈರಸ್ ಹರಡಲು ಆರಂಭಿಸಿರುವುದಲ್ಲದೆ, ಜನರ ನಡುವೆ ಈ ವೈರಸ್ ಉಳಿದುಬಿಡುತ್ತದೆ. ಅಂದರೆ ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಈ ಭೂಮಿ ಇರುವವರೆಗೂ ಪರಿಸರಲ್ಲಿ ನಮ್ಮೊಂದಿಗೆ ಈ ವೈರಸ್ ಇರಲಿದೆ. ಹೀಗಾಗಿ ಇದು ಎಂಡಮಿಕ್ ಆಗಿ ಪರಿವರ್ತನೆಗೊಂಡಿದೆ ಎಂದು ತಜ್ಞರು ಹೇಳಿದ್ದಾರೆ.
ಆದರೆ ಭವಿಷ್ಯದಲ್ಲಿ ಈ ರೋಗದ ಲಕ್ಷಣಗಳು ಸಹ ಬದಲಾಗಬಹುದು. ಅಲ್ಲದೆ ಅದರ ಪ್ರಭಾವಕ್ಕೆ ಒಳಗಾಗುವ ಸಮೂಹ ಹಾಗೂ ಅಂಗವು ಸಹ ವ್ಯವಸ್ಥಿತವಾಗಿ ಬದಲಾವಣೆಯಾಗಬಹುದು, ಉಸಿರಾಟದ ಕಾಯಿಲೆಯಾಗಿ ಬದಲಾಗಬಹುದು ಎಂದು ಹೇಳಲಾಗಿದೆ. 2020 ರಲ್ಲಿ ಸಾಂಕ್ರಾಮಿಕ ರೋಗವು ಹರಡಿದಾಗಿನಿಂದ ಸೋಂಕು ವಿವಿಧ ಬದಲಾವಣೆಗಳಿಗೆ ಒಳಗಾಗಿರುವುದು ಗಮನಸಿರಬಹುದು.
ಕೋವಿಡ್ ಮೊದಲು ರೂಪಾಂತರ ಹೊಂದಿದ್ದಂತೆ ಈಗ ದೊಡ್ಡ ಗುಂಪಿನ ಭಾಗವಾಗಿದೆ. ಇದು ನಮ್ಮಲ್ಲಿ ಹೆಚ್ಚಿನವರಿಗೆ ಜ್ವರ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಆದರೆ ಕೆಲವರಲ್ಲಿ ಮಾತ್ರವೇ ಇದು ಅಪಾಯಕಾರಿಯಾಗಿ ಕಾಣಬಹುದು. ಹಾಗೆ ಸಾಮಾನ್ಯ ಜ್ವರಕ್ಕೆ ಈ ವೈರಸ್ ಕಾರಣವಾಗಬಹುದು. ಆದರೆ ಹಿಂದೆ ಉಂಟು ಮಾಡಿದ ಪರಿಣಾಮಕಾರಿ ಕೆಟ್ಟ ಪರಿಸ್ಥಿತಿಯನ್ನು ಉಂಟು ಮಾಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಕೋವಿಡ್ ಪ್ರಾಣಹಾನಿ ಉಂಟುಮಾಡುವ ಕಾಯಿಲೆಯಾಗಿ ಉಳಿಯದೆ ಉಸಿರಾಟದ ಸಮಸ್ಯೆ, ಜ್ವರ ಹೀಗೆ ಪರಿವರ್ತಿತ ವೈರಸ್ ರೂಪದಲ್ಲಿ ಉಳಿದುಬಿಡಲಿದೆ ಎಂದಿದ್ದಾರೆ. ಆದರೆ ಇದು ಗಂಭೀರ ಸ್ವರೂಪದ ಕಾಯಿಲೆಗೆ ಕಾರಣವಾಗುವುದಿಲ್ಲ ಎಂದರ್ಥವಲ್ಲ. ಇದಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯ ಇದ್ದೇ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೇಸಿಗೆಯಲ್ಲೇ ಹರಡುವಿಕೆ ಹೆಚ್ಚು
ತಜ್ಞರು ಈವರೆಗೆ ನಡೆಸಿದ ಅಧ್ಯಯನದಲ್ಲಿ ಕೋವಿಡ್ ಹೆಚ್ಚಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಹರಡುತ್ತಿರುವುದು ತಿಳಿದುಬಂದಿದೆ. ಹಲವು ದೇಶದಲ್ಲಿ ಈ ವೈರಸ್ ಸ್ಥಿರವಾಗಿದೆ, ಮತ್ತೆ ಕೆಲವು ರಾಷ್ಟ್ರದಲ್ಲಿ ಮಂದಗತಿಯಲ್ಲಿ ಹರಡುತ್ತಿದೆ ಎಂದು ಹೇಳಿದ್ದಾರೆ. ಕಡಿಮೆ ರೋಗನಿರೋಧಕ ಶಕ್ತಿ ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿರುವ FLiRT - ಪ್ರಸ್ತುತ ರೂಪಾಂತರವಾಗಿದೆ. ಈಗ ಹೆಚ್ಚಿನ ಕೋವಿಡ್ ಕೇಸ್‌ಗಳು ಅಮೆರಿಕದಲ್ಲಿ ಹಾಗೂ ಚೀನಾದಲ್ಲಿ ವರದಿಯಾಗುತ್ತಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications