Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಭಾರತದಲ್ಲಿ 1 ಸಾವಿರ ಗಡಿ ದಾಟಿದ ಸಕ್ರಿಯ ಕೋವಿಡ್ ಕೇಸ್: ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚಾಯ್ತು ಸೋಂಕು!
ಕೆಲ ದಿನಗಳಿಂದಲೂ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದು ನೋಡಿರಬಹುದು. ಏಷ್ಯಾದಲ್ಲಿ ಏಕಾಏಕಿ ಏರಿಕೆಯಿಂದ ಹೊಸ ರೀತಿಯ ಆತಂಕಕ್ಕೆ ಇದು ಕಾರಣವಾಗಿದೆ. ಆದರಲ್ಲೂ ಭಾರತದಲ್ಲೂ ಕೂಡ ಈ ಏರಿಕೆ ಆತಂಕ ಹುಟ್ಟಿಸಿದೆ. ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 1,000ರ ಗಡಿ ದಾಟಿದ್ದು, ಸದ್ಯ 1009 ಪ್ರಕರಣಗಳು ವರದಿಯಾಗಿವೆ, ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ ಹಾಗೆ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿರುವುದು ಈಗ ಹೊಸ ಸವಾಲು ತಂದೊಡ್ಡಿದೆ. ಕೇರಳದಲ್ಲಿ 335 ಹೊಸ ಸೋಂಕು ವರದಿಯಾಗಿದೆ. ಹಾಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೆ ತಲುಪಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕ್ರಮವಾಗಿ 153 ಮತ್ತು 99 ಹೊಸ ಪ್ರಕರಣಗಳು ಕಂಡುಬಂದಿವೆ.

ಸರ್ಕಾರ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ ಈಗ 209 ಮತ್ತು 104 ಆಗಿದೆ ಎಂದು ವರದಿಯಾಗಿದೆ. ಇದು ದಿಢೀರ್ ಏರಿಕೆಯ ಆತಂಕ ಹುಟ್ಟಿಸಿದೆ. ಗುಜರಾತ್‌ನಲ್ಲಿ 83 ಪ್ರಕರಣಗಳಿದ್ದರೆ ಕರ್ನಾಟಕದಲ್ಲಿ ಈವರೆಗೆ 47 ಪ್ರಕರಣ ದಾಖಲಾಗಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಬೆಂಗಳೂರು ನಗರದಲ್ಲಿ ವರದಿಯಾಗಿವೆ.
ಚೀನಾ, ಏಷ್ಯಾ ಹಾಗೂ ಅಮೆರಿಕದಲ್ಲಿ ಹೊಸ ಕೋವಿಡ್ ರೂಪಾಂತರವು ಇನ್ನೂ ಹರಡುತ್ತಿದೆ. ಹೊಸ ರೂಪಾಂತರವು NB.1.8.1 ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಅದು ಅಪಾಯಕಾರಿ ಮಟ್ಟದಲ್ಲಿ ಸಮಸ್ಯೆಗಳ ತರುವುದಿಲ್ಲ ಎಂದು ಅಮೆರಿಕದಲ್ಲಿ ತಜ್ಞರು ಹೇಳಿದ್ದಾರೆ. ಈ ರೂಪಾಂತರವು ಈಗ ಹಾಂಗ್‌ಕಾಂಗ್, ಸಿಂಗಾಪುರ್ ಸೇರಿ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಹರಡಲು ಆರಂಭಿಸಿದೆ.
ಕೋವಿಡ್‌ನಿಂದ ವರದಿಯಾಗಿರುವ ಸಾವುಗಳು
ಕೋವಿಡ್‌ನಿಂದಾಗಿ ರೋಗಿಗಳು ಮೃತಪಡುತ್ತಿರುವ ಸಂಖ್ಯೆ ಕೂಡ ಅಧಿಕವಾಗಿದೆ. ಮೇ 22ರಂದು ಮಹಾರಾದ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಕಲ್ವಾ ಆಸ್ಪತ್ರೆಯಲ್ಲಿ ಮುಂಬ್ರಾದ 21 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು, ಹಾಗೆ ಬೆಂಗಳೂರಿನಲ್ಲಿ ಈ ವರ್ಷದ ಮೊದಲ ಸಾವಿನ ಪ್ರಕರಣ ಕೂಡ ವರದಿಯಾಗಿದೆ.
ಹೃದಯ ಕಾಯಿಲೆ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರಲ್ಲಿ ಕೋವಿಡ್ ವೈರಸ್ ಸಹ ದೃಢವಾಗಿತ್ತು. ಕರ್ನಾಟಕದ 47 ಕೋವಿಡ್ ಪ್ರಕರಣ ಪೈಕಿ 32 ಪ್ರಕರಣ ಬೆಂಗಳೂರಿನಲ್ಲಿ ವರದಿಯಾದರೆ ಉಳಿದಂತೆ ಬಳ್ಳಾರಿ, ದಕ್ಷಿಣ ಕನ್ನಡ, ಮೈಸೂರು ಮತ್ತು ವಿಜಯನಗರದಲ್ಲಿ ಪ್ರಕರಣ ವರದಿಯಾಗಿವೆ. ಈ ಪೈಕಿ ಓರ್ವ ಮಾತ್ರವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈಗ ಭಾರತದಲ್ಲಿ ಕಾಣಿಸಿಕೊಂಡಿರುವುದು ಒಮಿಕ್ರಾನ್ ತಳಿಯ ರೂಪಾಂತರ ಎಂದು ವರ್ಗೀಕರಿಸಲಾಗಿದೆ. ಇದರ ಹರಡುವಿಕೆ ವೇಗ ಹೆಚ್ಚಾಗಿದ್ದರು ಕೂಡ ಹಾನಿಯ ಪ್ರಮಾಣ ಕಡಿಮೆ ಎಂದು ವರದಿಗಳಾಗಿವೆ. ವೈರಸ್ ಕಂಡುಬಂದವರಲ್ಲಿ ಇದು ಅಪಾಯಕಾರಿಯಾಗಿರುವುದು ವರದಿಯಾಗಿಲ್ಲ. ಆದರೆ ಈಗಾಗಲೇ ಹಲವು ಅನಾರೋಗ್ಯ ಸಮಸ್ಯೆಗೆ ತುತ್ತಾದವರಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ಮಂದಿಯಲ್ಲಿ ಅಪಾಯ ತಂದೊಡ್ಡಲಿದೆ ಎಂದು ತಿಳಿದುಬಂದಿದೆ.
ರೂಪಾಂತರದ ಲಕ್ಷಣಗಳು
ಗಂಟಲು ನೋವು
ಕೆಮ್ಮು
ಜ್ವರ
ಮೈ ನೋವು
ಆಯಾಸ
ಮೂಗು ಸೋರುವಿಕೆ
ತಲೆನೋವು ಸಹ ಕಂಡುಬರಲಿದೆ.
ಇದಿಷ್ಟೇ ಅಲ್ಲ ಈ ಕೋವಿಡ್ ಆತಂಕ ಹೆಚ್ಚಾಗುವ ಮುನ್ನ ಅದನ್ನು ಹರಡದಂತೆ ತಡೆಲು ರಾಜ್ಯ ಸರ್ಕಾರಗಳು ಈಗಾಗಲೇ ಮಾರ್ಗಸೂಚಿಗಳು, ಎಚ್ಚರಿಕೆಗಳ ಹೊರಡಿಸಿವೆ. ಆಂಧ್ರ ಪ್ರದೇಶ ಸೇರಿ ಬಹುತೇಕ ಎಲ್ಲಾ ರಾಜ್ಯಗಳಲ್ಲು ಕೋವಿಡ್ ಹರಡುವಿಕೆ ಕುರಿತಾಗಿ ಎಚ್ಚರಿಕೆ ತೆಗೆದುಕೊಳ್ಳುವಂತೆ. ಲಸಿಕೆ, ಹಾಗೂ ಆಸ್ಪತ್ರೆಗಳಲ್ಲಿ ಅಗತ್ಯ ತಯಾರಿಗೂ ಸೂಚಿಸಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











