Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹವಾಮಾನ ಬದಲಾವಣೆಯಿಂದಾಗಿ ತೀವ್ರ ಹೊಟ್ಟೆ ನೋವು-ತಲೆನೋವು ಪ್ರಕರಣ ಹೆಚ್ಚಳ: ತಜ್ಞರು ಹೇಳೋದೇನು?
ಹವಾಮಾನ ಬದಲಾಗುತ್ತಿರುವಂತೆ ಹೊಸ ಹೊಸ ಅನಾರೋಗ್ಯ ಸಮಸ್ಯೆಗಳು ಕಾಡುವುದು ನೋಡಬಹುದು. ಆದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ಈ ಸಮಸ್ಯೆಗಳು ಕೂಡ ಏರಿಕೆಯಾಗುವುದು ಸಾಮಾನ್ಯ. ಅದರಲ್ಲೂ ಮಳೆ ಹಾಗೂ ಬೇಸಿಗೆ ನಡುವೆ ಮಕ್ಕಳಲ್ಲಿ ಹೆಚ್ಚಾಗಿ ಅನಾರೋಗ್ಯ ಕಂಡುಬರುವುದು ನೋಡಬಹುದು.
ಅದರಲ್ಲೂ ಇತ್ತೀಚಿಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಜಠರ ಕರುಳಿನ ಸೋಂಕು (ಅತಿಸಾರ) ವೈರಲ್ ಸೋಂಕು ಹೆಚ್ಚಾಗುತ್ತಿರುವುದು ಗಮನಿಸಬಹುದು. ಮಳೆಗಾಲದ ಆರಂಭದ ದಿನಗಳಲ್ಲಿ ಅಥವಾ ಬಿಸಿಲು ಹಾಗೂ ಮೋಡದಂತಹ ವಾತಾವರಣ ಇದ್ದಾಗ ಈ ರೀತಿಯ ಸಮಸ್ಯೆಗೆ ಒಳಗಾಗುವವರ ಪ್ರಮಾಣ ಹೆಚ್ಚಾಗುವುದು ನೋಡಬಹುದು. ಪ್ರತಿ ವರ್ಷ ಈ ಸಮಯದಲ್ಲಿ ಈ ಸೋಂಕು ಹರಡುವಿಕೆ ಪ್ರಮಾಣ ಏರಿಕೆಯಾಗುವುದು ನಾವು ನೋಡಬಹುದು.

ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯ ಕಾರಣದಿಂದಾಗಿ ತೀವ್ರ ರೀತಿಯ ಹೊಟ್ಟೆ ನೋವು ಮತ್ತು ತಲೆ ನೋವಿನ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ನೋಡಬಹುದು. ಬೆಂಗಳೂರಿನ ಹವಾಮಾನವು ಬೇಸಿಗೆಯತ್ತ ವೇಗವಾಗಿ ಪರಿವರ್ತನೆಗೊಳ್ಳುತ್ತಿದೆ, ಏಕೆಂದರೆ ಹಗಲಿನ ತಾಪಮಾನವು ಹೆಚ್ಚುತ್ತಿದೆ ಆದರೆ ರಾತ್ರಿಯ ತಾಪಮಾನವು ಇನ್ನೂ ತಂಪಾಗಿರುತ್ತದೆ. ಪ್ರಸ್ತುತ ಹಗಲಿನ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಆದರೆ ರಾತ್ರಿಯ ತಾಪಮಾನವು 16 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರಲಿದೆ. ಹಗಲು ಮತ್ತು ರಾತ್ರಿ ತಾಪಮಾನದ ನಡುವಿನ ಈ ದೊಡ್ಡ ಅಂತರವು ಕೆಲವರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ವೈರಲ್ ಅನಾರೋಗ್ಯ ಕುರಿತಂತೆ ನಾವಿಂದು ವಾಸವಿ ಆಸ್ಪತ್ರೆಯ ಪ್ರಸಿದ್ಧ ಆಹಾರ ತಜ್ಞೆ ಟಿ ರಾಮಲಕ್ಷ್ಮಿ ಅವರು ಏನೆಲ್ಲಾ ಅಂಶಗಳ ಹೇಳಿದ್ದಾರೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬದಲಾಗುತ್ತಿರುವ ಹವಾಮಾನದ ಸಮಯದಲ್ಲಿ ದೇಹದಲ್ಲಿ ಬದಲಾವಣೆಗಳು ಕಂಡುಬರುತ್ತವೆ ಮತ್ತು ಅದಕ್ಕಾಗಿಯೇ ನಾವು ಅತಿಸಾರ, ತಲೆನೋವು ಮತ್ತು ಒಣ ಕೆಮ್ಮು ಮುಂತಾದ ಪ್ರಕರಣಗಳನ್ನು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಡಿ ಹೈಡ್ರೇಷನ್, ತೀವ್ರ ಜಠರಕರುಳಿನ ಸೋಂಕು, ವಾಂತಿ, ಅತಿಸಾರ ಉಂಟಾಗುವುದು ನೋಡಬಹುದು.
ತಲೆನೋವು ಮತ್ತು ತಲೆತಿರುಗುವಿಕೆ ಮುಂತಾದ ದೂರುಗಳೊಂದಿಗೆ ಬರುವ ರೋಗಿಗಳಿದ್ದಾರೆ. ಜನರು ಮಲಬದ್ಧತೆಯ ಜೊತೆಗೆ ಅವರು ತಲೆನೋವು ಅನುಭವಿಸಬಹುದು. ಆದ್ದರಿಂದ ನನ್ನ ಸಲಹೆಯೆಂದರೆ ಜನರು ಸಾಕಷ್ಟು ದ್ರವ ಪದಾರ್ಥ ಸವಿಯಬೇಕಾಗುತ್ತದೆ. ಇದರಿಂದ ದೇಹ ಹೈಡ್ರೇಷನ್‌ಗೆ ಒಳಗಾಗುತ್ತದೆ. ಬೆಳಿಗ್ ದಾಲ್ಚಿನ್ನಿ, ಗ್ರೀನ್ ಟಿ ಅಥವಾ ಹೆಚ್ಚಿನ ಫೈಬರ್ ಅಂಶವಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ. ಹಾಗೆ ಈ ಸಮಯದಲ್ಲಿ ನೀರು ಹೆಚ್ಚು ಕುಡಿಯಬೇಕು. ಸುಮಾರು 3 ಲೀಟರ್ ನೀರು ಕುಡಿಯುವುದು ಬಹಳ ಉತ್ತಮ ಅಭ್ಯಾಸ ಆಗಲಿದೆ.
3 ಲೀಟರ್ ನೀರು ಎಂದರೆ ಕೇವಲ ನೀರು ಮಾತ್ರ ಕುಡಿಯುವುದಲ್ಲ, ದೇಹಕ್ಕೆ ಏಳನೀರು, ನಿಂಬೆ ರಸದ ಜ್ಯೂಸ್, ಹಣ್ಣಿನ ಜ್ಯೂಸ್ ಕುಡಿಯುವುದು ಕೂಡ ಉತ್ತಮ. ಎಲೆಕ್ಟ್ರೋಲೈಟ್‌ಗಳು, ವಿಟಮಿನ್ ಸಿ ಇರುವ ನಿಂಬೆ ಜ್ಯೂಸ್, ಮಜ್ಜಿಗೆಯಂತಹ ಅಂಶಗಳನ್ನು ಆದಷ್ಟು ಹೆಚ್ಚು ಸೇವಿಸಬೇಕು. ಹಾಗೆ ಸಮತೋಲಿತ ಆಹಾರವು ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸರಿಯಾದ ಮಿಶ್ರಣದಿಂದ ಕೂಡಿರಬೇಕು ಎಂದು ಅವರು ಹೇಳಿದ್ದಾರೆ.
ಹಾಗೆ ಈ ಸಮಸ್ಯೆ ಉಂಟಾಗಲು ಹಲವು ಬಾಹ್ಯ ಅಂಶಗಳು ಕಾರಣವಾಗಿವೆ. ಶುದ್ಧೀಕರಿಸದ ನೀರು, ಆಹಾರ, ಕಳಪೆ ಮಟ್ಟದ ಗಾಳಿ, ಸಂಸ್ಕರಿಸಿದ ಪ್ಯಾಕಿಂಗ್ ಆಹಾರಗಳು ಕೂಡ ಈ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವುದು ನೋಡಬಹುದು. ಬೆಂಗಳೂರು ಮಾತ್ರವಲ್ಲ ರಾಜ್ಯದ ನಾನಾ ಭಾಗದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದರೆ ಸೂಕ್ತ ಸಮಯದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


