Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಒಂದೂ ದಿನ ಬಿಡದೆ ನಾಲಿಗೆ ಸ್ವಚ್ಛಗೊಳಿಸಿ..! ಏಕೆ ಗೊತ್ತಾ?
ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳೋದು ನಮ್ಮ ದೈನಂದಿನ ಆರೋಗ್ಯಕ್ಕೆ ಬಹಳ ಉತ್ತಮ. ಬಾಯಿಯಿಂದ ಕೆಟ್ಟ ಉಸಿರು ಬರುತ್ತಿದ್ದರೆ ಬಹುಮುಖ್ಯ ಕಾರಣ ಆಗೋದು ನಿಮ್ಮ ಬಾಯಿಯ ಸ್ವಚ್ಛತೆ. ಅದಕ್ಕಾಗಿಯೇ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ನಾವು ಬಾಯಿಯ ನೈರ್ಮಲ್ಯಕ್ಕಿಂತ ಹಲ್ಲುಗಳು ಸ್ವಚ್ಚ ಮಾಡಲು ಹೆಚ್ಚು ಗಮನ ಹರಿಸುತ್ತೇವೆ.
ಆದರೆ ನಮ್ಮ ನಾಲಿಗೆಯ ಸ್ವಚ್ಛತೆಯೂ ಸಹ ಅಷ್ಟೇ ಮುಖ್ಯವಾಗಿದೆ. ನಾಲಿಗೆ ಸ್ವಚ್ಛ ಮಾಡದೆ ಇದ್ದರೆ ಬಾಯಿಯ ವಾಸನೆ ದುಪ್ಪಟ್ಟಾಗುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಶುದ್ಧವಾದ ನಾಲಿಗೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಬಾಯಿ ತಾಜಾ ಮತ್ತು ಆಹಾರದ ರುಚಿಯನ್ನು ಅನುಭವಿಸುವಂತೆ ಮಾಡಲಿದೆ.

ಬಾಯಿಯ ನೈರ್ಮಲ್ಯವು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ. ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು ಹಲ್ಲಿನ ಸಮಸ್ಯೆ ಬರದಂತೆ ತಡೆಯಲಿದೆ. ಆದರೆ ಕೆಲವೊಮ್ಮೆ ಅವರು ತಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವಲ್ಲಿ ಬಹಳ ಅಸಡ್ಡೆ ಮಾಡುವುದು ಹಲವು ಅನಾರೋಗ್ಯಕ್ಕೆ ಕಾರಣವಾಗಬಹುದು.
ಹಲವು ಬಾರಿ ಹಲ್ಲು ಸ್ವಚ್ಛಗೊಳಿಸುವಲ್ಲಿ ತೋರುವ ಕಾಳಜಿ ನಾಲಿಗೆಯನ್ನು ಸ್ವಚ್ಛಗೊಳಿಸುವಲ್ಲಿ ತೋರುವುದಿಲ್ಲ. ಇದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದರೆ ಆರೋಗ್ಯಕರ ಮತ್ತು ಸ್ವಚ್ಛವಾದ ನಾಲಿಗೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ತಾಜಾತನವನ್ನು ಸುಧಾರಿಸುವುದರಿಂದ ಹಿಡಿದು ಉಸಿರಾಟವನ್ನು ಒದಗಿಸುವವರೆಗೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.
1. ಪ್ರತಿದಿನ ಎರಡು ಬಾರಿ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವ ಮೂಲಕ ನಿಮ್ಮ ರುಚಿಯ ಬಡ್ಸ್‌ಗಳನ್ನು ಮತ್ತೆ ಉತ್ತೇಜಿಸಬಹುದು. ಇದರಿಂದ ನಾಲಿಗೆಯ ಮೇಲೆ ಸತ್ತಿರುವ ಕೋಶಗಳು ಹೊರಬರುತ್ತದೆ. ಹೀಗಾಗಿ ನಾಲಿಗೆಯ ಮೇಲಿನ ರುಚಿ ಮೊಗ್ಗುಗಳು ನೀವು ತಿನ್ನುವ ಆಹಾರದ ರುಚಿಯನ್ನು ಉತ್ತಮವಾಗಿ ರುಚಿ ನೋಡಬಹುದು. ಅಂತೆಯೇ, ಕಹಿ, ಸಿಹಿ, ಉಪ್ಪು ಮತ್ತು ಹುಳಿ ಸಂವೇದನೆಗಳನ್ನು ಉತ್ತಮವಾಗಿ ಗುರುತಿಸುತ್ತವೆ.
2. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಪ್ರತಿದಿನ ನಾಲಿಗೆ ಮತ್ತು ಬಾಯಿಯನ್ನು ಸ್ವಚ್ಛಗೊಳಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.
3. ಒಬ್ಬ ವ್ಯಕ್ತಿಯು ಸರಾಸರಿ 10,000 ರುಚಿ ಮೊಗ್ಗುಗಳನ್ನು ಹೊಂದಿದ್ದಾನೆ. ಪ್ರತಿ ಎರಡು ವಾರಗಳಿಗೊಮ್ಮೆ ಇವು ಸಾಯುತ್ತವೆ ಮತ್ತೆ ಹುಟ್ಟುತ್ತದೆ ಎಂದು ನಂಬಲಾಗಿದೆ. ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ.. ರುಚಿ ಮೊಗ್ಗುಗಳು ಕಪ್ಪಾಗುತ್ತವೆ. ಇದರಿಂದ ರುಚಿ ತಿಳಿಯದೆ ನೀವು ಸೇವಿಸುವ ಆಹಾರ ಸಪ್ಪೆಯಾಗಿಯೂ ಇಲ್ಲವೆ ರುಚಿ ಇಲ್ಲದಂತೆ ನಿಮಗೆ ಅನಿಸಬಹುದು.
4. ಒಸಡುಗಳ ಆರೋಗ್ಯಕ್ಕೆ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾಗಳು ಬೆಳೆದು ವಸಡುಗಳ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಹಾಗಾಗಿ ನಾಲಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ವಸಡುಗಳು ದೃಢವಾಗಿ ಮತ್ತು ಆರೋಗ್ಯಕರವಾಗಿರುತ್ತವೆ.
5. ಹಲ್ಲುಜ್ಜುವುದು ಹಲ್ಲಿನ ಮೇಲೆ ಅಂಟಿಕೊಂಡಿರುವ ಆಹಾರ ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಅಲ್ಲದೆ, ನಾಲಿಗೆ ಸೇರಿದಂತೆ ಇಡೀ ಬಾಯಿಯನ್ನು ಸ್ವಚ್ಛಗೊಳಿಸುವುದು ವಯಸ್ಸಾದಂತೆ ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
6. ಜೀರ್ಣಕ್ರಿಯೆಯು ಬಾಯಿಯಿಂದ ಪ್ರಾರಂಭವಾಗುತ್ತದೆ. ಹಾಗಾಗಿ ಬಾಯಿಯಲ್ಲಿ ಲಾವಾ ರಸ ಸುರಿಸುವುದರಿಂದ ಮಾತ್ರ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ಲಾಲಾರಸ ಉತ್ಪತ್ತಿಯಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
7. ಉಸಿರಾಟದ ಕಾಯಿಲೆಗಳನ್ನು ತಪ್ಪಿಸಿ ನಾಲಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಉಸಿರಾಟದ ತೊಂದರೆಗಳನ್ನು ತಡೆಯಬಹುದು. ಶ್ವಾಸಕೋಶದ ಸೋಂಕನ್ನು ತಡೆಯುತ್ತದೆ. ಈ ಪ್ರಕ್ರಿಯೆಯು ಆರೋಗ್ಯಕರವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಇದಿಷ್ಟೇ ಅಲ್ಲ ಬಾಯಿಯಲ್ಲಿ ಸೂಕ್ಷ್ಮ ವೈರಸ್‌ಗಳು ಬೆಳೆಯದಂತೆ ತಡೆಯಲು ಸಹಕಾರಿಯಾಗಲಿ.
8. ಇದಲ್ಲದೆ ನಾಲಿಗೆ ಸ್ವಚ್ಛ ಮಾಡಿದರೆ ತೆಳುವಾಗುತ್ತದೆ. ತೆಳುವಾದ ನಾಲಿಗೆಯೂ ಸ್ಪಷ್ಟ ಉಚ್ಛಾರಣೆ ಸೇರಿದಂತೆ ಸುಲಭವಾಗಿ ಮಾತನಾಡಲು ಸಹಾಯ ಮಾಡಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
