Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
20 ರೋಗಗಳಿಗೆ ಒಂದೇ ಪರಿಹಾರ! ಈ ಒಂದು ಮಸಾಲೆ ಅಮೃತಕ್ಕೆ ಸಮ.. ಬಳಸೋದು ಹೇಗೆ?
20 ರೋಗಗಳಿಗೆ ಒಂದೇ ಪರಿಹಾರ! ಅಮೃತದಂತಿರುವ ಈ ಮಸಾಲೆ ಬಳಸಿ ನೋಡಿ. ದಾಲ್ಚಿನ್ನಿ (Dalchini) ಕೇವಲ ಊಟದ ರುಚಿ ಮತ್ತು ಸುಗಂಧ ಹೆಚ್ಚಿಸುವ ಮಸಾಲೆ ಮಾತ್ರವಲ್ಲ. ಇದು ಆರೋಗ್ಯಕ್ಕೆ ಅಮೃತ ಸಮಾನ. ಸರಿಯಾದ ರೀತಿಯಲ್ಲಿ ಸೇವಿಸಿದರೆ ಇದು 20ಕ್ಕೂ ಹೆಚ್ಚು ರೋಗಗಳನ್ನು ದೂರ ಇಡಬಹುದು. ಸರಿಯಾದ ವಿಧಾನದಲ್ಲಿ ಇದರ ಸೇವನೆಯು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ತಜ್ಞರು ಹೇಳಿದ್ದಾರೆ. ಆಯುರ್ವೇದದ ಪ್ರಕಾರ, ಇದರ ಲಾಭಗಳು ಹಾಗೂ ಇದನ್ನು ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
ಹೌದು, ಮೊದಲೇ ಹೇಳಿದಂತೆ ದಾಲ್ಚಿನ್ನಿ (Cinnamon) ಕೇವಲ ತಿನಿಸಿನ ರುಚಿ ಮತ್ತು ವಾಸನೆ ಹೆಚ್ಚಿಸುವುದಲ್ಲ, ಅದು ಆರೋಗ್ಯದ ಖಜಾನೆ ಅಥವಾ ಆರೋಗ್ಯದ ನಿಧಿ ಎಂತಲೇ ಹೇಳಬಹುದು. ಆಯುರ್ವೇದದಲ್ಲಿ ಇದನ್ನು ಜೀರ್ಣಕ್ರಿಯೆಯಿಂದ ಹಿಡಿದು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಾಯಕ ಎಂದು ಉಲ್ಲೇಖಿಸಲಾಗಿದೆ. ವಿಶೇಷವಾಗಿ, ಇದನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಇದರ ಲಾಭಗಳು ಹಲವು ಪಟ್ಟು ಹೆಚ್ಚಾಗುತ್ತವೆ. ಇದು ಹೇಗೆ ಕೆಲಸ ಮಾಡುತ್ತೆ (cinnamon benefits for health) ಗೊತ್ತಾ? ಮುಂದೆ ಓದಿ.

ದಾಲ್ಚಿನ್ನಿ ಏಕೆ ವಿಶೇಷ?
ದಾಲ್ಚಿನ್ನಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರೊಂದಿಗೆ ಅನಿಲ, ಊತ ಮತ್ತು ಅಜೀರ್ಣದಿಂದ ರಕ್ಷಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ (ಶುಗರ್ ಲೆವೆಲ್) ಮಟ್ಟವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಕೆಟ್ಟ ಕೊಲೆಸ್ಟ್ರಾಲ್ (LDL, ಟ್ರೈಗ್ಲಿಸರೈಡ್ಸ್) ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಾಯ ಮಾಡುತ್ತದೆ. ಅದರ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಮತ್ತು ಆಂಟಿ ಫಂಗಲ್ ಗುಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಯಾವ ರೋಗಗಳಲ್ಲಿ ಪರಿಣಾಮಕಾರಿ?
• ಊತ ಮತ್ತು ನೋವು ನಿವಾರಣೆ: ಆಂಟಿ ಇನ್ಫ್ಲಮೇಟರಿ ಅಂಶಗಳು ಊತವನ್ನು ಕಡಿಮೆ ಮಾಡುತ್ತವೆ.
• ಸ್ಮರಣಾಶಕ್ತಿ ಹೆಚ್ಚಿಸುವುದು: ಆಂಟಿ ಆಕ್ಸಿಡೆಂಟ್‌ಗಳು ಮೆದುಳಿನ ಕಾರ್ಯವೈಖರಿಯನ್ನು ಉತ್ತಮಗೊಳಿಸುತ್ತವೆ.
• ಮುಟ್ಟಿನ ನೋವು ಕಡಿಮೆ: ಮುಟ್ಟಿನ ನೋವು ಮತ್ತು ಮೈಕಿರಿಕಿರಿ ಕಡಿಮೆ ಮಾಡಲು ಸಹಕಾರಿ.
• ಶೀತ ಮತ್ತು ಸೋಂಕಿನಿಂದ ರಕ್ಷಣೆ: ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಸೋಂಕಿನಿಂದ ರಕ್ಷಿಸುತ್ತವೆ.
• ಶುಗರ್ ಕಂಟ್ರೋಲ್: ರಕ್ತದಲ್ಲಿನ ಸಕ್ಕರೆ (ಮಧುಮೇಹ) ಕಡಿಮೆ ಮಾಡಿ ಇನ್ಸುಲಿನ್ ಪ್ರತಿರೋಧತೆಯನ್ನು ಕಡಿಮೆ ಮಾಡುತ್ತದೆ.
• ವಾಂತಿ, ಕ್ಷಯ ನಿವಾರಣೆ: ಇತರೆ ಸಮಸ್ಯೆಗಳಾದ ಬಿಕ್ಕಳಿಕೆ (ಹಿಕ್ಕು), ವಾಂತಿ, ಹಲ್ಲಿನ ನೋವು, ಚರ್ಮರೋಗ, ಸಂಧಿವಾತ, ಕ್ಷಯರೋಗ (TB), ಸೈನಸ್, ಹೊಟ್ಟೆ ಊತ ನಿವಾರಣೆಗೆ ಸಹಕಾರಿ.
ದಾಲ್ಚಿನ್ನಿ ಸೇವಿಸುವ ವಿಧಾನ
ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ದಾಲ್ಚಿನ್ನಿಯನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ. ಕೆಲವರು ಜೇನುತುಪ್ಪದೊಂದಿಗೆ, ಕೆಲವರು ಹಾಲಿನಲ್ಲಿ ಮಿಕ್ಸ್ ಮಾಡಿ, ಇನ್ನೂ ಕೆಲವರು ನೀರಿನಲ್ಲಿ ಕುದಿಸಿ ಕಷಾಯ ರೂಪದಲ್ಲಿ ಕುಡಿಯುತ್ತಾರೆ.
ಈ ವಿಷಯಗಳನ್ನು ತಿಳಿಯಲೇಬೇಕು
ದಾಲ್ಚಿನ್ನಿಯ ತಾಸೀರ್ ಬಿಸಿ ಸ್ವಭಾವದ್ದಾಗಿದೆ. ಆದ್ದರಿಂದ, ಹೆಚ್ಚು ಸೇವಿಸಿದರೆ ಹೊಟ್ಟೆನೋವು ಅಥವಾ ಅತಿಸಾರ ಉಂಟಾಗಬಹುದು. ಗರ್ಭಿಣಿ ಮತ್ತು ಶಿಶುವಿಗೆ ಹಾಲುಣಿಸುವ ಮಹಿಳೆಯರು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ವಯಸ್ಸು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ನಿರ್ಧರಿಸಲು ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಮುಖ್ಯ.
ಔಷಧೀಯ ಗುಣಗಳಿಗೆ ಬಳಕೆ
ದಾಲ್ಚಿನ್ನಿಯನ್ನು ಸಾಮಾನ್ಯವಾಗಿ ಸಿನಮೋನಮ್ ಮರಗಳ ಒಳ ತೊಗಟೆಯಿಂದ ಪಡೆಯಲಾಗುತ್ತದೆ. ಇದನ್ನು ಅಡುಗೆಯಲ್ಲಿ ಮತ್ತು ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ. ಇದರ ಪರಿಮಳ ಮತ್ತು ಸ್ವಾದವು ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ. ಸಿಹಿ ತಿನಿಸುಗಳು, ಪಾನೀಯಗಳು ಮತ್ತು ಕೆಲವೊಂದು ಮಾಂಸಾಹಾರಿ ಖಾದ್ಯಗಳಲ್ಲಿ ಇದರ ಬಳಕೆಯು ಹೆಚ್ಚು. ದಾಲ್ಚಿನ್ನಿಯು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿಯ ಹಲವು ವಿಧಗಳನ್ನು ಕಾಣಬಹುದು. ಅವುಗಳಲ್ಲಿ ಕ್ಯಾಸಿಯಾ ದಾಲ್ಚಿನ್ನಿ ಮತ್ತು ಸಿಲೋನ್ ದಾಲ್ಚಿನ್ನಿ ಪ್ರಮುಖವಾಗಿವೆ. ಸಿಲೋನ್ ದಾಲ್ಚಿನ್ನಿ ಹೆಚ್ಚು ಸೂಕ್ಷ್ಮ ಹಾಗೂ ಸಿಹಿ ಪರಿಮಳವನ್ನು ಹೊಂದಿರುತ್ತದೆ. ಈ ಮಸಾಲೆಯು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡಬಲ್ಲದು ಎಂದು ಅಧ್ಯಯನಗಳು ತಿಳಿಸಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

