Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರೋಮ್‌ನಲ್ಲಿದ್ದು 8000 ಕಿ.ಮೀ ದೂರವಿದ್ದ ರೋಗಿಗೆ ರೋಬೋ ಮೂಲಕ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದು ಚೀನಾದಲ್ಲಿ 8000 ಕಿ. ಮೀ ದೂರದಿಂದಲೇ ರೋಬೋ ಬಳಸಿ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ, ಇದೀಗ ಈ ಸುದ್ದಿ ವಿಶ್ವದ ಗಮನ ಸೆಳೆದಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ರೋಬೋಗೆ ತುಂಬಾ ಚೆನ್ನಾಗಿ ಒಪ್ಪುತ್ತೆ, ಅದು ಇಲ್ಲದಿರುವ ಕ್ಷೇತ್ರವಿಲ್ಲ. ವಾರ್ತೆ ನಿರೂಪಿಕಿಯಾಗಿ, ಟೀಚರ್ ಆಗಿ, ಹೋಟೆಲ್ ಸಪ್ಲೈಯರ್ ಆಗಿ ಮನೆ ಕೆಲಸದ ಜನವಾಗಿ ಹೀಗೆ ಎಲ್ಲಾ ಪಾತ್ರದ ಕಾರ್ಯವನ್ನು ನಿರ್ವಹಿಸಲು ರೋಬೋ ಇದೆ, ಇದೀದ ವೈದ್ಯರ ಪಾತ್ರ ಕೂಡ ನಿರ್ವಹಿಸುವಂತಾಗಿದೆ.

ಏನಿದು ಘಟನೆ?
ಇದು ವೈದ್ಯಲೋಕಕ್ಕೆ ಹೊಸ ಭರವಸೆ ಮೂಡಿಸಿದೆ ಈ ರೋಬೋ ಶಸ್ತ್ರಚಿಕಿತ್ಸೆ. ಈ ಘಟನೆ ನಡೆದಿರುವುದು ಚೀನಾದ ಬೀಜಿಂಗ್‌ನಲ್ಲಿ , ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಆ ಚಿಕಿತ್ಸೆ ಮಾಡಬೇಕಾಗಿದ್ದ ವೈದ್ಯರು 8000 ಕಿ. ಮೀ ದೂರದಲ್ಲಿದ್ದರು, ರೋಗಿಗೆ ಅವರು ಬಂದು ಶಸ್ತ್ರಚಿಕಿತ್ಸೆ ಮಾಡುವಷ್ಟು ಸಯ ಕೂಡ ಇರಲಿಲ್ಲ, ಹಾಗಾಗಿ ರೋಬೋ ಮೂಲಕ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಆ ಶಸ್ತ್ರ ಚಿಕಿತ್ಸೆ ಯಶಸ್ಸು ಕೂಡ ಆಗಿದೆ.
ಭವಿಷ್ಯದ ಭರವಸೆ ಮೂಡಿಸಿರುವ ಟೆಲಿಸರ್ಜರಿ
ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಆಸ್ಪತ್ರೆಯ ಯುರೋಲಜಿ ವೈದ್ಯ ಝಾಂಗ್ ಕ್ಸು ಇಂಥ ಅದ್ಭುತ ಕಾರ್ಯಕ್ಕೆ ಮುಂದಾಗುವ ಮೂಲಕ ಗಮನ ಸೆಳೆದಿದ್ದಾರೆ. ಇವರು ರೋಮ್‌ನಲ್ಲಿದ್ದರಿ, ಇವರು ಚಿಕಿತ್ಸೆ ಮಾಡಬೇಕಾಗಿದ್ದ ರೋಗಿಯನ್ನು ಚೀನಾದ ಬೀಜಿಂಗ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇವರು ಟೆಲಿ ಸರ್ಜರಿ ಮಾಡುವ ಧೈರ್ಯ ಮಾಡಿ ಇದೀಗ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ 5ಜಿ ನೆಟ್‌ವವರ್ಕ್ ಹಾಗೂ ಆಪ್ಟಕಲ್ ಕೇಬಲ್ ನೆಟವರ್ಕ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.
ವೈದ್ಯರು ಟೆಲಿ ಸ್ಕ್ರೀನ್ ಮೂಲಕ ಕಾಣಿಸಿಕೊಂಡು ಸಲಹೆ ಸೂಚನೆ ನೀಡುತ್ತಿದ್ದರೆ ಅದನ್ನು ರೋಬೋಟಿಕ್ ಮಿಶನ್ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಮಾಡಿದೆ, ರೋಬೋ ಮಾಡಿರುವುದು ಆದರೆ ಅದರ ಹಿಂದಿನ ಸಂಪೂರ್ಣ ತಲೆ ವೈದ್ಯರದ್ದು, ರೋಬೋ ತನಗೆ ಸಿಕ್ಕ ಸಂಜ್ಞೆಗಳನ್ನು ಸ್ವೀಕರಿಸಿ ಅದರಂತೆ ಕಾರ್ಯನಿರ್ವಹಿಸಿದೆ. ತಾಂತ್ರಿಕ ದೋಷ ಉಂಟಾದರೆ ಇವರುಗಳು ಶಸ್ತ್ರ ಚಿಕಿತ್ಸೆ ಮುಂದುವರೆಸುತ್ತಿದ್ದರು, ಆ ಧೈರ್ಯದ ಮೇಲೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಈ ಹೊಸ ಪ್ರಯೋಗ ಯಶಸ್ಸು ಆಗಿರುವುದಕ್ಕೆ ವೈದ್ಯಲೋಕವು ಸಂತೋಷ ವ್ಯಕ್ತಪಡಿಸಿದೆ
ಇದು ನಿಜಕ್ಕೂ ಖುಷಿಯ ಸಂಗತಿ, ಕೆಲವೊಮ್ಮೆ ನುರಿತ ವೈದ್ಯರು ಬೇರೆ ಆಸ್ಪತ್ರೆಯಲ್ಲಿರುತ್ತಾರೆ, ತಕ್ಷಣ ಏನಾದರೂ ತುರ್ತು ಚಿಕಿತ್ಸೆ ಅವಶ್ಯಕ ಬಿದ್ದರೆ ಅವರು ಈ ರೀತಿ ಮಾರ್ಗದರ್ಶನ ನೀಡಿದರೆ ಎಷ್ಟೋ ಜೀವಗಳನ್ನು ರಕ್ಷಣೆ ಮಾಡಬಹುದು.
ಯಾವುದೇ ತಾಂತ್ರಿಕ ದೋಷ ಉಂಟಾಗಿರಲಿಲ್ಲ
ರೋಮ್‌ನಿಂದ ವೈದ್ಯರು ಟೆಲಿಸ್ಕ್ರೀನ್ ಮೂಲಕ ಕ್ಯಾನ್ಸರ್ ಭಾಗವನ್ನು ಗುರುತಿಸಿ ನಂತರ ರೋಬೋಗೆ ಸಂಜ್ಞೆ ನೀಡಿದ್ದಾರೆ, ಆ ತಾಂತ್ರಿಕ ಸಂಜ್ಞೆ ಸ್ವೀಕರಿಸಿರುವ ರೋಬೋ ಕೈಗಳು ಶಸ್ತ್ರ ಚಿಕಿತ್ಸೆ ಮಾಡಲಾರಂಭಿಸಿತು, ಎಲ್ಲವೂ ಅಂದುಕೊಂಡಂತೆ ಯಶಸ್ವಿಯಾಗಿ ಮುಗಿದಾಗ ವೈದ್ಯರ ಮುಖದಲ್ಲಿ ನಗು ಮೂಡಿತು. ಇದೀಗ ಈ ಸುದ್ದಿ ಚೀನಾ ಮಾತ್ರವಲ್ಲ ವಿಶ್ವದ ಗಮನ ಸೆಳೆದಿದೆ.
ನಮ್ಮಲ್ಲಿಯೂ ನುರಿತ ವೈದ್ಯರಿದ್ದಾರೆ, ಅವರು ಈ ತಂತ್ರಜ್ಞಾನ ಬಳಸಿದರೆ ದೂರದಲ್ಲಿರುವ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು. ದೂರದ ಊರುಗಳಿಂದ ಬೆಂಗಳೂರಿಗೆ ಬರಬೇಕಾಗಿಲ್ಲ ಅದೇ ಊರಿನಲ್ಲಿ ಒಳ್ಳೆಯ ಆಸ್ಪತ್ರೆ ಇದ್ದರೆ ಬೆಂಗಳೂರಿನಲ್ಲಿರುವ ದೊಡ್ಡ ತಜ್ಞರು ಶಸ್ತ್ರ ಚಿಕಿತ್ಸೆ ಮಾಡುವಂತಾಗುವುದು. ಈ ಅಪಘಾತ, ಸ್ಟ್ರೋಕ್ ಈ ಸಮಯದಲ್ಲಂತೂ ಒಂದೊಂದು ನಿಮಿಷವೂ ಮುಖ್ಯವಾಗಿರುತ್ತದೆ ಆ ಸಮಯದಲ್ಲಿ ತುಂಬಾನೇ ಉಪಕಾರಿಯಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
