Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಚೀನಾದಲ್ಲಿ ಕೋವಿಡ್ ಹೋಲುವ ಮತ್ತೊಂದು ವೈರಸ್ ಪತ್ತೆ..! ಮಾನವರಿಗೂ ಹರಡುತ್ತಾ?
ವೈರಸ್‌ಗಳ ಹೆಸರು ಕೇಳಿದರೆ ಈಗ ಮೈ ನಡುಗುವಂತಾಗುತ್ತದೆ. ಕೋವಿಡ್‌ನ 2 ಅಲೆಗಳ ಪರಿಣಾಮವನ್ನೇ ಮಾನವ ಕುಲ ಇಂದಿಗೂ ಸುಧಾರಿಸಿಕೊಂಡಿಲ್ಲ. ಇದರ ನಡುವೆ ಹೊಸ ಹೊಸ ವೈರಸ್‌ಗಳು ಆಗಾಗ ಕಾಡುತ್ತಲೇ ಇದೆ. ಅದರಲ್ಲೂ ಇತ್ತೀಚಿಗೆ ಮಾನವರಿಗೆ ಹರಡುವಂತಹ ಹಲವು ವೈರಸ್‌ಗಳು ಇಂದು ಸಂಕ್ಟ ತರುತ್ತಿವೆ. ಹಾಗೆ ಈಗ ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದ್ದು ಆತಂಕ ಹುಟ್ಟಿಸಿದೆ.
ಚೀನಾದಲ್ಲಿ ವರದಿಯಾಗಿರುವ ಹೊಸ ವೈರಸ್, ಮಾನವರಿಗೂ ಹರಡುವಂತಹ ವೈರಸ್ ಆಗಿದ್ದು, ಕೋವಿಡ್ ಮಾದರಿಯ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕ ಕೂಡ ಎದುರಾಗಿದೆ. ಬಾವಲಿಗಳಿಂದ ಹರಡುತ್ತಿರುವ ಈ ಹೊಸ ವೈರಸ್ ಮಾನವರಿಗೂ ಹರಡುವ ಅಪಾಯ ಹೊಂದಿದೆ ಎಂದು ತಿಳಿದುಬಂದಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, HKU5-CoV-2 ಎಂಬ ಹೊಸ ವೈರಸ್ ಅನ್ನು ಬ್ಯಾಟ್‌ವುಮನ್ ಎಂದು ಕರೆಯಲಾಗುವ ವೈರಸ್ ಅನ್ನು ಪತ್ತೆ ಮಾಡಲಾಗಿದೆ. ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಈ ವೈರಸ್ ಪತ್ತೆ ಮಾಡಿದ್ದಾರೆ. ಹಾಗೆ ಕೋವಿಡ್ ಸೋರಿಕೆಯಾಗಿದ್ದ ಪ್ರದೇಶದಲ್ಲಿಯೇ ಇದು ಪತ್ತೆಯಾಗಿರುವುದು ಬಹಳ ಆತಂಕ ಹುಟ್ಟಿಸಿದೆ.
ಹೊಸ ವೈರಸ್ SARS CoV-2 ಗೆ ಹೋಲುತ್ತದೆ ಎಂದು ಚೀನಾದ ಸಂಶೋಧಕರು ವಿವರಿಸಿದ್ದಾರೆ. ಏಕೆಂದರೆ ಈ ವೈರಸ್ ಕೂಡ ಕೋವಿಡ್ ಮಾದರಿಯಲ್ಲೇ ACE2 ಎಂಬ ಮಾನವ ಜೀವಕೋಶಗಳಿಗೆ ಹಾನಿ ಮಾಡಬಹುದು. ಅಥವಾ ಜೀವಕೋಶಳಲ್ಲಿ ನೆಲೆಸಬಹುದು.
HKU5-CoV-2 ವೈರಸ್ ಎಂದರೇನು?
HKU5-CoV-2 ಎಂಬುದು ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ ಕೊರೊನಾವೈರಸ್ ಆಗಿದೆ. ಇದು ಉಸಿರಾಟ ಸಮಸ್ಯೆಗೆ ಕಾರಣವಾಗುವಂತಹ ಸಿಂಡ್ರೋಮ್ ಉಂಟು ಮಾಡುವ ವೈರಸ್ ಅನ್ನು ಕೂಡ ಹೊಂದಿದೆ. ಇದು SARS-CoV-2 ಮತ್ತು NL63 ಅಂದರೆ ಸಾಮಾನ್ಯ ಶೀತ, ಜ್ವರ ಉಂಟು ಮಾಡುವ ವೈರಸ್ ಅನ್ನು ಕೂಡ ಹೋಲುತ್ತದೆ.
ಈ ವೈರಸ್ ಬಾವಲಿಗಳಿಂದ ಹರಡುವುದು ಹಾಗೆ ಮಾನವರಿಂದ ಮಾನವರಿಗೆ ಹರಡುವ ಸಾಧ್ಯತೆಗಳಿವೆ. ಹಾಗೆ ರೂಪಾಂತರಗಳನ್ನು ಕೂಡ ನೋಡಬಹುದಂತೆ. ಉಸಿರಾಟದ ಸಮಸ್ಯೆಯಿಂದ ಹಿಡಿದು ಜ್ವರ, ಶಿತದಂತಹ ಸಮಸ್ಯೆಗಳಿಗೆ ಇದು ಕಾರಣವಾಗಲಿದೆ. ಹೀಗಾಗಿ ಇದು ಮತ್ತೊಂದು ಸಾಂಕ್ರಾಮಿಕದ ಆತಂಕ ಕೂಡ ಎದುರಾಗಿದೆ.
ಅಮೆರಿಕದಲ್ಲಿ ಹರಡಿದೆ ಮತ್ತೊಂದು ವೈರಸ್
ಅಮೆರಿಕದಲ್ಲಿ ಈ ಚಳಿಗಾಲದ ಸಮಯ ಹಲವು ವೈರಸ್‌ಗಳು ದಾಳಿ ನಡೆಸಿವೆ. ಈಗ ಕೋವಿಡ್ ರೀತಿಯಲ್ಲೇ ಅಮೆರಿಕದಲ್ಲಿ ವೈರಸ್ ಹರಡುತ್ತಿದೆ. ಕಳೆದ 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಾಲೋಚಿತ ಜ್ವರದಿಂದ ಮೃತಪಡುವವರ ಸಂಖ್ಯೆ ಕೋವಿಡ್ ಅನ್ನೇ ಮೀರಿಸಿದೆ. 29 ಮಿಲಿಯನ್‌ಗೂ ಅಧಿಕ ಮಂದಿ ಈ ವೈರಸ್‌ಗೆ ತುತ್ತಾಗಿದ್ದರು ಎಂದು ವರದಿಯಾಗಿದೆ.
ಕಳೆದ ಕೆಲವು ವಾರಗಳಲ್ಲಿ ಯುಸ್‌ನಲ್ಲಿ ಜ್ವರದ ಪ್ರಮಾಣ ಹಠಾತ್ ಆಗಿ ಏರಿಕೆ ಕಂಡಿದೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಅತ್ಯಧಿಕ ರೀತಿಯಲ್ಲಿ ಈ ಪ್ರಮಾಣ ಹರಡುತ್ತಿದೆ. ಅಮೆರಿಕದಲ್ಲಿ ಕೋವಿಡ್‌ಗಿಂತಲೂ ಈ ವೈರಲ್ ಜ್ವರಕ್ಕೆ ತುತ್ತಾಗಿರುವವರ ಸಂಖ್ಯೆ ಅಧಿಕವಾಗಿದೆ. ಈ ಜ್ವರದ ಪರಿಣಾಮ 2024ರಿಂದ ಈವರೆಗೆ ಸುಮಾರು 16 ಸಾವಿರ ಮಂದಿ ಮೃತಪಟ್ಟಿದ್ದಾರೆ. ಹಾಗೆ 370,000 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಈ ಜ್ವರದ ಪ್ರಕರಣಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಪ್ರಾಣಹಾನಿಗೆ ಕಾರಣಾಗುತ್ತಿದೆ ಎಂದು ಈ ಮೊದಲೇ ವರದಿಯಾಗಿದೆ. ಅಂದರೆ ಈ ವೈರಸ್ ಕೋವಿಡ್‌ನಂತೆಯೇ ಕೆಲಸ ಮಾಡುತ್ತದೆ. ಹಾಗೆ ಚಳಿಗಾಲದಲ್ಲಿ ಈ ಹರಡುವಿಕೆ ಪ್ರಮಾಣ ಅಧಿಕವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











