Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸೆಲೆಬ್ರಿಟಿಗಳ ಇಷ್ಟದ ಕಪ್ಪು ನೀರು..! ಈ ನೀರಿನ ಪ್ರಯೋಜನವೇನು ಗೊತ್ತಾ?
ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಹಾಗೆ ನೀರು ಕೂಡ ಮುಖ್ಯ. ನೀರು ಕುಡಿಯದೆ ನಾವು ದಿನ ಕಳೆಯುವುದು ಕೂಡ ಕಷ್ಟ. ಹಾಗೆ ನೀರು ನಮ್ಮ ಆರೋಗ್ಯಕರ ಜೀವನಕ್ಕೂ ಬಹಳ ಮುಖ್ಯ, ಶುದ್ಧ ನೀರು ಕುಡಿಯುವುದು ಬಹಳ ಮುಖ್ಯ. ಈಗಂತು ನೀರಿನಿಂದ ಎಷ್ಟೊಂದು ಅನಾರೋಗ್ಯಕ್ಕೆ ನಾವು ತುತ್ತಾಗುತ್ತಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ.
ಇನ್ನ ಪ್ಯಾಕೇಜ್ ಮಾಡಲಾದ ನೀರು ಕೂಡ ಅಪಾಯಕಾರಿ ಮಟ್ಟ ತಲುಪುತ್ತದೆ ಎಂಬುದನ್ನ ಅರಿತಿದ್ದೇವೆ. ಮಿನರಲ್ ಮುಕ್ತ ನೀರು ಸೇವನೆ ಹಾಗೆ ಸೋಡಿಯಂ, ಸಲ್ಫೇಟ್ ಭರಿತ ನೀರು ಕೂಡ ಅಪಾಯಕಾರಿ ಎಂಬುದನ್ನು ನಾವು ಅರಿತಿದ್ದೇವೆ. ಹಾಗೆ ನೀರು ಕುಡಿಯಲು ಯಾವ ಬಾಟಲಿ ಬಳಸುತ್ತೇವೆ ಅನ್ನೋದು ಕೂಡ ಮುಖ್ಯವಾಗುತ್ತದೆ.

ಈಗಂತು ಸೆಲೆಬ್ರಿಟಿಗಳು, ಉದ್ಯಮಿಗಳು ದುಬಾರಿ ಬೆಲೆಯ ನೀರು ಕುಡಿಯುವುದನ್ನು ನಾವು ನೋಡಿದ್ದೇವೆ. ಹಾಗೆ ಕಪ್ಪು ನೀರು ಇತ್ತೀಚಿಗೆ ಫೇಮಸ್ ಆಗಿರುವ ಹೊಸದೊಂದು ವಿಧಾನವಾಗಿದೆ. ನಟ, ನಟಿಯರು ಫಿಟ್‌ನೆಸ್‌ಗಾಗಿ ಕಾತೊರೆಯುತ್ತಿರುವವರು ಈ ಕಪ್ಪು ನೀರು ಕುಡಿಯುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಮಲೈಕಾ ಅರೋರಾ, ವಿರಾಟ್ ಕೊಹ್ಲಿ, ಶ್ರುತಿ ಹಾಸನ್, ಗೌರಿ ಖಾನ್ ಮತ್ತು ಟೈಗರ್ ಶ್ರಾಫ್ ಹೀಗೆ ಹತ್ತಾರು ಮಂದಿ ಈ ಕಪ್ಪು ನೀರು ಕುಡಿಯುವುದನ್ನು ನಾವು ನೋಡಿದ್ದೇವೆ.
ಹಾಗಾದ್ರೆ ಏನಿದು ಕಪ್ಪು ನೀರು? ಇದನ್ನು ಹೇಗೆ ಮಾಡುತ್ತಾರೆ. ಈ ನೀರು ಕುಡಿಯುವುದರ ಪ್ರಯೋಜನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಕಪ್ಪು ನೀರನ್ನು ಸಾಮಾನ್ಯವಾಗಿ ಕ್ಷಾರೀಯ ನೀರು ಎಂದು ಕರೆಯಲಾಗುತ್ತೆ. ಇದು ಪೌಷ್ಟಿಕಾಂಶ ಭರಿತ ನೀರಾಗಿದೆ. ಈ ನೀರು ಕಪ್ಪು ಬಣ್ಣದಲ್ಲಿರುತ್ತದೆ. ಆದ್ರೆ ಇದಕ್ಕೆ ಯಾವುದೆ ಕೃತಕ ಬಣ್ಣ ಬಳಸಿ ಮಾಡಲಾಗುವುದಿಲ್ಲ. ಆದ್ರೆ ನೈಸರ್ಗಿಕವಾಗಿ ಈ ನೀರು ಕಪ್ಪು ಬಣ್ಣದಲ್ಲಿಯೇ ಇರುತ್ತದೆ.
ಮಣ್ಣು, ಸಸ್ಯಗಳು ಮತ್ತು ನೀರಿನಲ್ಲಿ ಕಂಡುಬರುವ ಸಾವಯವ ಸಂಯುಕ್ತವಾದ ಫುಲ್ವಿಕ್ ಆಮ್ಲದ ಉಪಸ್ಥಿತಿಯಿಂದ ಈ ನೀರಿಗೆ ಕಪ್ಪು ಬಣ್ಣ ಬರುತ್ತದೆ. ಫುಲ್ವಿಕ್ ಆಮ್ಲವನ್ನು ನೀರಿನನೊಂದಿಗೆ ಬೆರೆಸಿದಾಗ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ನೀಡುತ್ತದೆ. ಫುಲ್ವಿಕ್ ಆಮ್ಲವು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಖನಿಜಗಳನ್ನು ಒಳಗೊಂಡಿರುತ್ತದೆ. ಈ ಖನಿಜಾಂಶಗಳು ಮೂಳೆಯ ಆರೋಗ್ಯ, ಸ್ನಾಯು ವೃದ್ಧಿ, ಸೆಲ್ಯೂಲಾರ್ ಪ್ರಕ್ರಿಯೆಗಳಿಗೆ ಸಹಕಾರಿಯಾಗಲಿವೆ.
ಸೆಲೆಬ್ರಿಟಿಗಳು ಈಗ ಈ ಕಪ್ಪು ನೀರು ಹೆಚ್ಚಾಗಿ ಸೇವಿಸುತ್ತಾರೆ. ಇದು ತೂಕ ನಿರ್ವಹಣೆ ಮತ್ತು ಒಟ್ಟಾರೆ ಶಕ್ತಿಯ ಮಟ್ಟಗಳಿಗೆ ಸಹಾಯ ಮಾಡುತ್ತದೆ. ಹಾಗೆ ಜೀರ್ಣಕ್ರಿಯೆಗೆ ಅಗತ್ಯವಾಗಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಇದು ಕಾರಣವಾಗಲಿದೆ. ಅದರಲ್ಲೂ ಹೊಟ್ಟೆ ಉಬ್ಬುವುದು, ಜೀರ್ಣಕ್ರಿಯೆ ಸಮಸ್ಯೆ ಇದ್ದವರಿಗೆ ಈ ನೀರು ಬಹಳ ಉಪಯೋಗವಾಗಲಿದೆ.
ಕಪ್ಪು ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ಸೋಂಕುಗಳು ಮತ್ತು ಅನಾರೋಗ್ಯಗಳಿಗೆ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ. ಸಾಮಾನ್ಯ ಟ್ಯಾಪ್ ನೀರು ಮತ್ತು 7 ರ ನಡುವೆ pH ಅನ್ನು ಹೊಂದಿರುತ್ತದೆ, ಆದರೆ ಕಪ್ಪು ನೀರು 7 ಕ್ಕಿಂತ ಹೆಚ್ಚಿನ pH ಅನ್ನು ಹೊಂದಿರುತ್ತದೆ, ಇದು ಹೆಚ್ಚು ಕ್ಷಾರೀಯವಾಗಿಸುತ್ತದೆ. ಇದು ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿಯಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.
ಹಾಗೆ ಈ ನೀರು ದುಬಾರಿ ಕೂಡ ಹೌದು, ಈಗ ಅಂತಾರಾಷ್ಟ್ರೀಯ ಕಂಪನಿಗಳು ಈ ನೀರುಗಳನ್ನು ಹೊರತಂದಿವೆ. ಆನ್‌ಲೈನ್ ಮೂಲಕವೂ ನೀರು ಖರೀದಿಸಬಹುದು. ಈ ನೀರನ್ನು ಸಾಮಾನ್ಯ ನೀರಿಗಿಂತ ಹೆಚ್ಚು ದಿನಗಳ ಕಾಲ ಶೇಖರಣೆ ಮಾಡಿ ಇಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
