Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬರೀ ನೀರು ಕುಡಿದು ತೂಕ ಇಳಿಸಬಹುದಾ..!? ಇಲ್ಲಿದೆ ಪುರಾವೆ..!
ತೂಕ ಇಳಿಸುವುದು ಇತ್ತೀಚಿಗೆ ಯುವ ಸಮುದಾಯಕ್ಕೆ ಸವಾಲಾಗಿರುವ ಕೆಲಸ. ತೂಕ ಹೆಚ್ಚಳ ಆಗಿರುವ ಯುವಕ ಯುವತಿಯರು ಈಗ ತೂಕ ಇಳಿಸಲು ಹತ್ತಾರು ರೀತಿಯ ವಿಧಾನಕ್ಕೆ ಮೊರೆ ಹೋಗುತ್ತಾರೆ. ಅದರಲ್ಲಿ ಜಿಮ್, ಕಸರತ್ತು, ರನ್ನಿಂಗ್, ಯೋಗ, ಆರ್ಯವೇದ, ನೈಸರ್ಗಿಕ ಚಿಕಿತ್ಸೆ ಹೀಗೆ ಹಲವು ವಿಧಾನ ಕಂಡುಕೊಂಡಿದ್ದಾರೆ.
ಆದ್ರೆ ಕೆಲವೊಂದು ಸರಳ ವಿಧಾನದ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂಬುದು ಈ ಮೊದಲು ಕೂಡ ಸಾಬೀತಾಗಿದೆ, ಈಗ ಇಂತಹದ್ದೆ ಇನ್ನೊಂದು ವಿಧಾನ ಭಾರಿ ಟ್ರೆಂಡಿಂಗ್‌ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಧಾನದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವ ಮಂದಿ ಕಸರತ್ತು, ಡಯೆಟ್ ಮಾಡುವ ಸಮಸ್ಯೆಯೇ ಬರುವುದಿಲ್ಲ.

ಈ ವಿಧಾನದಲ್ಲಿ ಕೇವಲ ನೀರು ಕುಡಿದುಕೊಂಡೇ ತೂಕ ಇಳಿಸಿಕೊಳ್ಳಬಹುದು. ನೀವು ಆಹಾರ ಪ್ರಿಯರಾಗಿದ್ದರೆ ಡಯೆಟ್ ಮಾಡಲು ಇಷ್ಟಪಡುವುದಿಲ್ಲ. ಹಾಗೆ ಡಯೆಟ್ ಮಾಡಿದರು ಒಂದೆರಡು ದಿನ ಮಾತ್ರ ಮಾಡಬಹುದು, ಅದಕ್ಕೂ ನೀರಿ ಮಾಡಲು ಆಗುವುದಿಲ್ಲ, ಆದ್ರೆ ಈ ನೀರು ಕುಡಿಯುವ ಮೂಲಕ ತೂಕ ಇಳಿಸುವ ಮಾರ್ಗವನ್ನು ನೀವು ಕೂಡ ಅನುಸರಿಸಿ ಫಲಿತಾಂಶ ನೋಡಬಹುದು.
ಅಲನ್ ಅರಾಗೊನ್ ಎಂಬುರವರೊಬ್ಬರು ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲ ಊಟದ ಮೊದಲು ಅವರು ಎರಡು ಲೋಟ ನೀರು ಕುಡಿಯುವುದರಿಂದ ನಿಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ವಾದಿಸುತ್ತಿದ್ದಾರೆ. ಹಾಗೆ ಈ ವಿಧಾನವನ್ನು ವಾಟರ್ ಟ್ರಿಕ್ ಎಂದು ಕರೆಯಲಾಗಿದೆ.
ವಾಟರ್ ಟ್ರಿಕ್ ಎಂದರೇನು?
ನೀರು ಕುಡಿಯುವುದು ನಿಮ್ಮ ದೇಹಕ್ಕೆ ಬಹಳ ಒಳ್ಳೆಯದು, ನಿತ್ಯ ಹೆಚ್ಚು ಹೆಚ್ಚು ನೀರು ಕುಡಿಯುವುದು ದೇಹ ಡಿಹೈಡ್ರೇಷನ್‌ಗೆ ಒಳಗಾಗುವುದರಿಂದ ತಪ್ಪಿಸುತ್ತದೆ. ಹಾಗೆ ನಮ್ಮ ದೇಹದ ಸರಿಯಾಗಿ ಕೆಲಸ ಮಾಡಬೇಕಾದರೆ ನೀರಿನ ಅಗತ್ಯ ಬಹಳ ಇರುತ್ತದೆ. ನೀರು ಹೆಚ್ಚು ಕುಡಿಯುವುದರಿಂದಾಗಿ ನಿಮ್ಮಲ್ಲಿ ಹಸಿವು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅನಗತ್ಯ ಕ್ಯಾಲೋರಿಗಳು ನಿಮ್ಮ ದೇಹ ಸೇರುವುದನ್ನು ತಪ್ಪಿಸುತ್ತದೆ ಎಂಬುದು ಅಲನ್ ಅವರ ವಾದವಾಗಿದೆ.
ಅವರ ಪ್ರಕಾರ, ನಿತ್ಯ ಊಟ ಮಾಡುವ ಮುನ್ನ ನೀರು ಕುಡಿಯುವುದು ಒಳ್ಳೆಯದು ಎಂದು ಹೇಳುತ್ತಾರೆ. ಹಾಗೆ ಊಟ ಮಾಡಿದ ಬಳಿಕ ಮತ್ತೆ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಸಾಮಾನ್ಯವಾಗಿ ನೀವು ಸೇವಿಸುವ ಆಹಾರಕ್ಕಿಮತ ಕಡಿಮೆ ಸೇವಿಸುತ್ತೀರಿ. ಬಹು ದಿನಗಳ ಕಾಲ ಈ ಅಭ್ಯಾಸ ಮುಂದುವರೆದರೆ ಕಡಿಮೆ ಆಹಾರ ಸೇವನೆಗೆ ನೀವು ಹೊಂದಿಕೊಳ್ಳುತ್ತೀರಿ.
ಊಟದ ನಡುವೆ ನೀರು ಕುಡಿಯುವುದು ಸುರಕ್ಷಿತವೇ?
ಕೆಲವರ ಪ್ರಕಾರ ಊಟದ ನಡುವೆ ನೀರು ಕುಡಿಯಬಾರದು ಎನ್ನುತ್ತಾರೆ. ಆದ್ರೆ ಅಲನ್ ಅವರ ಪ್ರಕಾರ ಇದಕ್ಕೆ ಯಾವುದೇ ಪುರಾವೆಯೂ ಇಲ್ಲ. ನೀವು ಯಾವಾಗ ಬೇಕಾದರು ನೀರು ಕುಡಿಯಬಹುದು. ಊಟದ ಜೊತೆಗೆ ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳನ್ನು ದುರ್ಬಲಗೊಳಿಸುವುದಿಲ್ಲ. ಊಟದ ನಂತರ ನೀರು ಕುಡಿಯುವುದು, ಮಧ್ಯದಲ್ಲಿ ನೀರು ಕುಡಿಯುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ.
ಅದರಲ್ಲೂ ತೂಕ ಇಳಿಕೆಯಲ್ಲಿ ಬಿಸಿ ನೀರು ಮತ್ತಷ್ಟು ಕೊಡುಗೆ ನೀಡಲಿದೆ. ಉಗುರು ಬೆಚ್ಚಗಿನ ನೀರನ್ನು ವರ್ಕ್‌ಔಟ್ ಬಳಿಕ ಇಲ್ಲವೆ ಊಟದ ಮೊದಲು, ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದು ನಿಮ್ಮ ತೂಕ ನಿಯಂತ್ರಣದಲ್ಲಿಡಲು ಹಾಗೂ ತೂಕ ಇಳಿಸಲು ಸಹಕಾರಿಯಾಗಲಿದೆ. ಬಿಸಿನೀರನ್ನು ಕುಡಿಯುವುದು ಥರ್ಮೋಜೆನೆಸಿಸ್ ಪರಿಣಾಮ ಉಂಟು ಮಾಡುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ. ಹೀಗಾಗಿ ಬಿಸಿ ನೀರು ತೂಕ ಇಳಿಸುವ ಸುಲಭದ ಮಾರ್ಗವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
